Puttakkana Makkalu: ಸಹನಳನ್ನು ಮನೆಗೆ ಕರೆದುಕೊಂಡು ಬರಲು ಹೊರಟ ಸ್ನೇಹಾಗೆ ಗೆಲುವಾಗುತ್ತಾ?

By Poorva

ಸ್ನೇಹಾ ಹಾಗೂ ಕಂಠಿ ಸಹನಳನ್ನು ಕರೆದುಕೊಂಡು ಬರಲು ಮೈಸೂರಿನತ್ತ ಪಯಣ ಬೆಳೆಸುತ್ತಾರೆ. ಕಂಠಿ ಮೊದಲು ಮೆಲ್ಲಗೆ ಜೀಪಿನಲ್ಲಿ ಹೋಗುತ್ತಾ ಇರುವುದನ್ನು ಕಂಡ ಈಕೆ ಜೋರಾಗಿ ಜೀಪು ಓಡಿಸು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಕೊಂಚ ಜೋರಾಗಿಯೇ ಜೀಪು ಚಲಾಯಿಸಿಕೊಂಡು ಹೋಗುತ್ತಾನೆ. ಇನ್ನು ಮನೆಯಿಂದ ಕರೆ ಮಾಡಿರುವ ವಿಚಾರವನ್ನು ಚಿತ್ರ ಸಹನಾ ಕಿವಿಗೆ ಹಾಕುತ್ತಾಳೆ.

ಚಿತ್ರ ಸಹನಾ ಬಳಿ ಆಕೆಯ ತಾಯಿ ಕರೆ ಮಾಡಿರುವ ವಿಚಾರ ತಿಳಿಸುತ್ತಾ ಇರುವಾಗ ಅಲ್ಲಿಗೆ ಬಂದ ಕೌಸಲ್ಯ ಚಿತ್ರಗೆ ಕೊಂಚ ಜೋರಾಗಿಯೇ ಮಾತನಾಡುತ್ತಾಳೆ. ಇನ್ನು ಸಹನಾ ಅಮ್ಮ ನಿಮಗೆ ಕರೆ ಮಾಡಿದ್ರಾ ಎಂದು ಪ್ರಶ್ನೆ ಮಾಡಿದಾಗ ಕೌಸಲ್ಯ ಮುರಳಿ ಇಲ್ಲದೆ ನೀನು ತವರು ಮನೆಗೆ ಹೋಗುವುದು ಸರಿ ಎಂದು ಅನ್ನಿಸಲಿಲ್ಲ ಆ ಕಾರಣದಿಂದಾಗಿ ಇನ್ನೊಂದು ಹಬ್ಬಕ್ಕೆ ಕಳುಹಿಸುತ್ತೇನೆ ಎಂದು ಹೇಳಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾಗೆ ಕೊಂಚ ಬೇಸರ ಆಗುತ್ತದೆ.

Kannada serial Puttakkana Makkalu written update on 3rd April

ಆ ಬಳಿಕ ಆಕೆಗೆ ನೋವಾಗಲಿ ಎಂದು ಕೊಂಚ ತಿವಿದು ಮಾತನಾಡುತ್ತಾಳೆ. ಬರೀ ಫೋನ್ ನಲ್ಲಿ ಮನೆಗೆ ಕಳುಹಿಸಿಕೊಡಿ ಎಂದು ಹೇಳಿದರಷ್ಟೆ, ಮನೆಗೆ ಬಂದು ನಿನ್ನ ಮನೆಗೆ ಕರೆಯಲಿಲ್ಲ, ನೀನು ಹೋದರೆ ಸಾಕು ಎಂದು ನಿನ್ನ ಮನೆಯಲ್ಲಿ ಅಂದುಕೊಂದಿದ್ದರೋ ಏನೋ ಎಂದಾಗ ಸಹನಾಗೆ ಅಳುವೇ ಬಂದು ಬಿಡುತ್ತದೆ. ಅಷ್ಟರಲ್ಲಿ ಸ್ನೇಹಾ ಹಾಗೂ ಕಂಠಿ ಕೌಸಲ್ಯ ಮನೆ ತಲುಪುತ್ತಾರೆ.

ಮನೆಗೆ ಬಂದ ಸ್ನೇಹಾ ಅಕ್ಕ ಎಂದು ಹೇಳುತ್ತಾಳೆ. ಇದನ್ನು ಕೇಳಿ ಸಹನಾ ಖುಷಿಯಲ್ಲಿ ಓಡಿ ಬಂದು ತಬ್ಬಿಕೊಳ್ಳುತ್ತಲೇ ಇರುತ್ತಾಳೆ. ಇನ್ನು ಕೌಸಲ್ಯಗೆ ಸ್ನೇಹಾ ಬಂದ ತಕ್ಷಣ ಏನು ಮಾಡಬೇಕು ಎಂದು ತಿಳಿಯದಾಗಿತ್ತು. ಆದರೂ ಸ್ನೇಹಾ ಜೊತೆ ಇನ್ನೊಂದು ಹಬ್ಬಕ್ಕೆ ಕಳುಹಿಸುತ್ತೇನೆ ಎಂದು ಹೇಳಿದಾಗ ಸ್ನೇಹಾ ಅದಕ್ಕೆ ಒಪ್ಪದೇ ಸಹನಳನ್ನು ಕರೆದುಕೊಂಡು ಹೋಗುತ್ತಾರೆ.

ಇನ್ನು ಮುರಳಿ ಪುಟ್ಟಕ್ಕನ ಮನೆಗೆ ಬಂದಾಗ ಸುಮಾ ಅದ್ಧೂರಿಯಾಗಿ ವೆಲ್ ಕಮ್ ಮಾಡುತ್ತಾಳೆ. ಪುಟ್ಟಕ್ಕ ಸ್ನೇಹಾ ಸಹನಾಳನ್ನು ಕರೆದುಕೊಂಡು ಬರಲು ಹೋಗಿದ್ದಾಳೆ ನಾನು ಫೋನ್ ಮಾಡಿದ್ದೆ ನಿಮ್ಮ ತಾಯಿಗೆ ಈ ಬಾರಿಯ ಹಬ್ಬಕ್ಕೆ ಬೇಡ ಇನ್ನೊಂದು ಸಲ ನೋಡೋಣ ಎಂದರು ಆದರೆ ಸ್ನೇಹಾ ಅಕ್ಕನನ್ನು ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾಳೆ ನೋಡೋಣ ಏನಾಗುತ್ತೋ ಎನ್ನುತ್ತಾಳೆ. ಇದನ್ನು ಕೇಳಿದ ಮುರಳಿಗೆ ಕೂಡ ಕೊಂಚ ಟೆನ್ಶನ್ ಆಗುತ್ತದೆ. ಇನ್ನು ಮುರಳಿ ಹೋದಾಗ ಚಂದ್ರು ಇರುತ್ತಾನೆ. ಇನ್ನು ಕಾಳಿ ಹಾಗೂ ಪುರುಷೋತ್ತಮ ಬರುತ್ತಾರೆ. ಅವರಿಬ್ಬರನ್ನು ನೋಡಿದ ಸುಮಾ ಯುಗಾದಿ ಹಬ್ಬದ ಶುಭ ಕೋರುತ್ತಾ ಇರುತ್ತಾಳೆ.

Kannada serial Puttakkana Makkalu written update on 3rd April

ಆದರೆ ಕಾಳೀ ಮಾತ್ರ ಸಹನಾ ಇದ್ದಾಳ ಇಲ್ವಾ ಎಂದು ನೋಡುತ್ತಾ ಇರುವಾಗ ಸುಮಾ ಆಕೆ ಮನೆಗೆ ಬರದೇ ಇರದ ವಿಚಾರ ತಿಳಿಸುತ್ತಾಳೆ. ಇನ್ನು ಸಹನಾ ಹಾಗೂ ಸ್ನೇಹಾ ಕಂಠಿ ಮೂವರು ಬರುತ್ತಾರೆ. ಬಂಗಾರಮ್ಮ ಕಳುಹಿಸಿದ ಬೈರ ಕಂಠಿ ಎಲ್ಲಿ ಹೋಗುತ್ತಾನೆ ಅದರ ಪಿನ್ ಟು ಪಿನ್ ಮಾಹಿತಿಯನ್ನು ಕೊಡುತ್ತಾ ಇದ್ದ. ಇನ್ನು ಸಹನಾ ಮನೆಗೆ ಬರುತ್ತಿದ್ದ ಹಾಗೆಯೇ ಹಬ್ಬದ ರಂಗು ಕಳೆಗಟ್ಟುತ್ತದೆ.

ಆಕೆ ಎಲ್ಲರನ್ನೂ ನೋಡಿ ಖುಷಿ ಪಡುತ್ತಾಳೆ. ಹಾಗೆಯೇ ತನ್ನ ಗಂಡನನ್ನು ನೋಡಿ ನಾಚಿ ನೀರಾಗುತ್ತಾಳೆ. ಇದನ್ನು ಕಂಡ ಮನೆಯವರೆಲ್ಲ ನಗುತ್ತಾರೆ. ಇನ್ನು ಮುರಳಿಗೆ ಎಣ್ಣೆ ಶಾಸ್ತ್ರ ಮಾಡಲು ಎಲ್ಲರೂ ಹೇಳುತ್ತಾರೆ. ಇದನ್ನು ಕೇಳಿದ ಸಹನಾ ಹಾಗೂ ಪುಟ್ಟಕ್ಕ ಎಲ್ಲಾ ತಯಾರಿ ಮಾಡಿಕೊಳ್ಳುತ್ತಾರೆ.

More from Filmibeat

English summary
Kannada serial puttakkana makkalu written updated on 3rd April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X