Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಸಹನಾ - ಮುರಳಿ ನಿಶ್ಚಿತಾರ್ಥಕ್ಕೆ ಪುಟ್ಟಕ್ಕನ ಮನೆಯಲ್ಲಿ ತಯಾರಿ?
ಬಂಗಾರಮ್ಮ ಪುಟ್ಟಕ್ಕಗೆ ಕರೆ ಮಾಡುತ್ತಾರೆ. ಪುಟ್ಟಕ್ಕ ನನಗೆ ನಿಶ್ಚಿತಾರ್ಥಕ್ಕೆ ಬರಲು ಆಗುತ್ತಿಲ್ಲ ಅದಕ್ಕಾಗಿ ನಿಶ್ಚಿತಾರ್ಥ ತಯಾರಿಗಾಗಿ ನನ್ನ ಮಗಳು ಹಾಗೂ ಮಗನನ್ನು ಕಳುಹಿಸುತ್ತೇನೆ ಎನ್ನುತ್ತಾರೆ. ಪುಟ್ಟಕ್ಕ ಮುಜುಗರದಿಂದ ಅದೆಲ್ಲ ಬೇಡವಾಗಿತ್ತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಪುಟ್ಟಕ್ಕ ಏನಾಯಿತು ಎಂದಾಗ ಪುಟ್ಟಕ್ಕ ನಿಮ್ಮ ಮಕ್ಕಳು ಬರಲಿ ಎಂದು ಅರೆಬರೆ ಮನಸ್ಸಿನಿಂದ ಹೇಳುತ್ತಾಳೆ.
ಇದನ್ನು ಕೇಳಿದ ಬಂಗಾರಮ್ಮ ನಾನು ವಸುವನ್ನು ಕಳುಹಿಸಲು ಒಂದು ಸ್ವಾರ್ಥ ನನ್ನದಿದೆ ಯಾಕೆಂದರೆ ಅವಳ ಏನೇನೋ ಯೋಚನೆ ಮಾಡುತ್ತಾ ಇರುತ್ತಾಳೆ, ಅಲ್ಲಿ ಬಂದರೆ ಒಳ್ಳೆಯದು ಎಂದುಕೊಂಡು ಕಳುಹಿಸಿದ್ದೇನೆ ಪುಟ್ಟಕ್ಕ ಈಗ ನಿಮ್ಮ ಮನೆಗೆ ಬರುವ ಹೊತ್ತಾಯಿತು ಎಂದು ಹೇಳಿ ಫೋನ್ ಇಡುತ್ತಾರೆ. ಇದನ್ನೆಲ್ಲ ನೋಡಿದ ಸ್ನೇಹಾ ಪುಟ್ಟಕ್ಕಗೆ ಬಯ್ಯುತ್ತಾ ಇರುತ್ತಾಳೆ.
ಆ ವೇಳೆ ಹೊರಗೆ ಗಾಡಿ ಬಂದು ನಿಂತ ಶಬ್ದ ಕೇಳಿಸುತ್ತದೆ. ಬಂಗಾರಮ್ಮನವರ ಮಗ ಬಂದಿದ್ದಾನೆ ಎಂದುಕೊಂಡು ಹೊರಗಡೆ ಬರುತ್ತಾರೆ. ಈ ವೇಳೆ ಅಲ್ಲಿ ವಸು ಹಾಗೂ ಶ್ರೀಯನ್ನು ನೋಡಿ ಖುಷಿ ಪಡುತ್ತಾಳೆ. ಈ ವೇಳೆ ವಸು ಬಳಿ ನಿಮ್ಮ ಅಣ್ಣ ಬರಲಿಲ್ವ ಎಂದೆಲ್ಲ ಹೇಳಿ ಕಂಠಿ ಬಗ್ಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾಳೆ ಸ್ನೇಹಾ. ಇದನ್ನು ನೋಡಿದ ವಸು ಕೂಡ ಹೂ ನನ್ನ ಅಣ್ಣ ಹಾಗೆಯೇ ಎಂದೆಲ್ಲ ಹೇಳಿದಾಗ ಅಲ್ಲಿಯೇ ನಿಂತಿದ್ದ ಕಂಠಿಗೆ ಮಾತ್ರ ಒಂಥರಾ ಅನ್ನಿಸುತ್ತದೆ. ಬಳಿಕ ಪುಟ್ಟಕ್ಕ ಸ್ನೇಹಾಗೆ ಬಯ್ಯುತ್ತಾ ಇರುತ್ತಾರೆ.

ವಸುವನ್ನು ಮನೆಗೆ ಕರೆದ ಪುಟ್ಟಕ್ಕ
ಯಾಕೆ ಸಹನಾ ಹೀಗೆಲ್ಲ ಆಡುತ್ತಾ ಇದ್ದೀಯಾ ಎಂದು ಪುಟ್ಟಕ್ಕ ಹೇಳುತ್ತಾರೆ. ಬಳಿಕ ಪುಟ್ಟಕ್ಕ ವಸುವನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಕ್ಷೇಮ ಸಮಾಚಾರ ವಿಚಾರ ಮಾಡುತ್ತಾರೆ. ಈ ವೇಳೆ ಕಂಠಿ ಹಾಗೂ ಸಿದ್ದೇಶ್ ಮಾತ್ರ ಪಕ್ಕದಲ್ಲಿ ನಿಂತಿರುತ್ತಾರೆ. ಬಳಿಕ ಪುಟ್ಟಕ್ಕನ ಮಕ್ಕಳು ಎಲ್ಲರೂ ಕೆಲಸ ಮಾಡಲು ಹೋಗುತ್ತಾರೆ. ಈ ವೇಳೆ ವಸು ಕೂಡ ಹಠ ಮಾಡುತ್ತಾ ನಿಮ್ಮ ಜೊತೆ ಬರುತ್ತೇನೆ ನನಗೂ ಕೆಲಸ ಹೇಳಿಕೊಡಿ ಎಂದು ಹೇಳುತ್ತ ಇರುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಬೇಡಮ್ಮ ಬೇಡ, ಸುಮ್ಮನೆ ನೀವು ಕುಳಿತುಕೊಳ್ಳಿ ಎಂದು ಹೇಳಿದಾಗ ವಸು ನಾನು ಕುಳಿತುಕೊಳ್ಳುವುದು ಆದರೆ ನಮ್ಮ ಮನೆಯಲ್ಲಿ ಕುಳಿತುಕೊಳ್ಳುತ್ತಾ ಇದ್ದೆ ಆದರೆ ನಿಮ್ಮ ಮನೆಗೆ ಬರುತ್ತಾ ಇರಲಿಲ್ಲ ಎನ್ನುತ್ತಾಳೆ. ಇದನ್ನು ಕೇಳಿದ ಸ್ನೇಹಾ ಸರಿ ಹಾಗಾದರೆ ಕೆಲಸ ಮಾಡೋಣ ಎಂದು ಹೇಳುತ್ತಾಳೆ. ಸುಮಾ ಮಾತ್ರ ಸ್ನೇಹಾ ಹಾಗೂ ಕಂಠಿ ರೂಮ್ ನಲ್ಲಿ ಕಸ ಹೊಡೆಯುತ್ತಾ ಇರುತ್ತಾರೆ. ಈ ವೇಳೆ ಸ್ನೇಹಾ ಮುಖಕ್ಕೆ ಪಟ್ಟಿ ಕಟ್ಟಿಕೊಂಡು ಇದ್ದರೂ ಕೆಮ್ಮುತ್ತ ಇರುತ್ತಾಳೆ.

ಮುಖಕ್ಕೆ ಬಟ್ಟೆ ಕಟ್ಟಿ ಧೂಳು ಹೊಡೆದ ಕಂಠಿ
ಹಾಗೆಯೇ ಕಂಠಿ ಕೂಡ ಧೂಳಿನ ಏಟಿಗೆ ಸಹಿಸಲು ಆಗದೇ ಕೆಮ್ಮುತ್ತಾ ಇರುತ್ತಾನೆ. ಈ ವೇಳೆ ಸ್ನೇಹಾ ಆತನಿಗೆ ಒಂದು ಶಾಲ್ ಕೊಟ್ಟು ಅದನ್ನು ಹಾಕಿಕೊಳ್ಳುವಂತೆ ಹೇಳುತ್ತಾಳೆ. ಈ ವೇಳೆ ಕಂಠಿ ಮಾತ್ರ ಆ ಶಾಲ್ ಅನ್ನೆ ನೋಡುತ್ತಾ ಇರುತ್ತಾನೆ. ಸ್ನೇಹಾ ಮಾತ್ರ ಇದರಲ್ಲಿ ಮುಕ್ಕಾಲು ಭಾಗ ಸುಮನದ್ದೆ ಎಂದು ಹೇಳಿದಾಗ ಶ್ರೀಗೆ ಕೆಮ್ಮು ಜೋರಾಗುತ್ತದೆ.

ಖುರ್ಚಿ ಮೇಲಿಂದ ಬಿದ್ದ ಸ್ನೇಹಾ
ಈ ವೇಳೆ ಸ್ನೇಹಾ ಖುರ್ಚಿ ಮೇಲಿನಿಂದ ಬೀಳುತ್ತಾಳೆ .ಸ್ನೇಹಾಳನ್ನು ಕಂಠಿ ಹಿಡಿದುಕೊಳ್ಳುತ್ತಾನೆ. ಇದನ್ನು ನೋಡಿದ ಕಂಠಿ ಮಾತ್ರ ಸ್ನೇಹಳನ್ನೆ ನೋಡಿದಾಗ ಕಂಠಿ ನೋಟ ನೋಡಿ ಸ್ನೇಹಾ ನಾಚಿ ನೀರಾಗಿದ್ದಳು. ಸ್ನೇಹಾ ಮೆತ್ತಗೆ ಕಂಠಿ ಕೈಯಿಂದ ಬಿಡಿಸಿಕೊಂಡು ಕ್ಲೀನ್ ಮಾಡಲು ಶುರು ಮಾಡುತ್ತಾಳೆ. ಈ ವೇಳೆ ಕಂಠಿಗೆ ಒಂದು ಮಗು ಫೋಟೋ ಸಿಗುತ್ತದೆ. ಸ್ನೇಹಾ ಬಳಿ ಇದು ಯಾರು ಎಂದು ಕೇಳಿದರೂ ಆಕೆ ಮಾತ್ರ ಯಾರು ಎಂದು ಹೇಳಲೇ ಇಲ್ಲ. ಆ ವೇಳೆ ಅಲ್ಲಿಗೆ ಸುಮಾ ಬಂದು ಎಲ್ಲಾ ವಿಚಾರ ಹೇಳುತ್ತಾಳೆ. ಇದನ್ನು ಕೇಳಿ ಸ್ನೇಹಾ ಮುಖ ಕೆಂಪಗೆ ಆಗುತ್ತದೆ. ಇನ್ನು ಸುಮಾ ಮಾತ್ರ ಚೇಷ್ಟೆ ಮಾಡುತ್ತಾ ಇರುತ್ತಾಳೆ. ಸುಮಾ ಸಹನಾ ಕಬೋರ್ಡ್ ನಿಂದ ಮೇಷ್ಟ್ರು ಕೊಟ್ಟ ವಾಚ್ ತೆಗೆದುಕೊಂಡು ಎಸೆಯಲು ಹೋಗುತ್ತಾಳೆ. ಈ ವೇಳೆ ಕೋಪಗೊಂಡ ಸಹನಾ ಸುಮಾಗೆ ಬಯ್ಯುತ್ತಾಳೆ. ಸ್ನೇಹಾ ಹಾಗೂ ಕಂಠಿ ಮನೆಯಲ್ಲಿ ಗಲಾಟೆ ಕೇಳಿ ಬರುತ್ತಾರೆ. ಸುಮಾ ಚೇಷ್ಟೆ ಮಾಡುತ್ತಾ ಇರುವುದನ್ನು ನೋಡಿ ನಗುತ್ತಾರೆ. ಆ ವೇಳೆ ಮುರಳಿ ಮೇಷ್ಟ್ರು ಕೂಡ ಬರುತ್ತಾ. ಇದನ್ನು ನೋಡಿದ ಸಹನಾ ನಾಚಿ ನೀರಾಗುತ್ತ ಇರುತ್ತಾಳೆ..ಮುಂದೇನು ಕಾದು ನೋಡಬೇಕಿದೆ..