Puttakkana Makkalu: ರಾಜೇಶ್ವರಿಗೆ ಸವಾಲು ಹಾಕಿದ ಸ್ನೇಹಾ; ಆಸ್ತಿ ಕೇಳಲು ಬಂದ ರಾಜಿ ಕಕ್ಕಾಬಿಕ್ಕಿ!
ರಾಜೇಶ್ವರಿ ಮನೆಗೆ ಬಂದಿರುವುದನ್ನು ನೋಡಿ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಪುಟ್ಟಕ್ಕನನ್ನು ನೋಡಿದ ರಾಜಿ ಏನು ಪುಟ್ಟಕ್ಕ ಮದುವೆ ಆದ ಬಳಿಕ ಮನೆ ಖಾಲಿ ಮಾಡುತ್ತೀಯಾ ಅಂದರೆ ಮೆಸ್ ನಲ್ಲಿ ಎಲ್ಲಾ ಜನರನ್ನು ತುಂಬಿಸಿಕೊಂಡು ಬಿಸಿ ಬಿಸಿ ಅನ್ನ ಸಾಂಬಾರ್ ಮಾಡಿ ಹಾಕುತ್ತಿದ್ದಿಯಾ, ಇನ್ನು ಇದೆಲ್ಲ ನಡೆಯಲ್ಲ ಎಂದಾಗ ಪುಟ್ಟಕ್ಕ ರಾಜಿ ಬಳಿ ರಾಜವ್ವ ಎಷ್ಟು ಹಣ ಕೊಡಬೇಕು ಹೇಳು ಆದರೆ ಈ ಮನೆ ಮಾತ್ರ ಕೇಳಬೇಡ ನಮಗೆ ಇದೊಂದೇ ಇರುವುದು, ಮನೆ ಮೆಸ್ ಬಿಟ್ಟರೆ ನಾವು ಎಲ್ಲಿಗೆ ಹೋಗುವುದು ಎಂದು ಹೇಳುತ್ತಾಳೆ.
ನೀನು ಎಲ್ಲಿಗೆ ಆದರೂ ಹೋಗು ಆದರೆ ನಾನು ಮಾತ್ರ ನಿನ್ನ ಇಲ್ಲಿ ಇರಲು ಬಿಡುವುದಿಲ್ಲ, ಈ ಮನೆ ನನಗೆ ಬೇಕೆ ಎಂದು ರಾಜಿ ಹೇಳಿ ರೌಡಿಗಳ ಬಳಿ ಹೇಳುತ್ತಾಳೆ. ನೀವು ಬಂದಿದ್ದು ಸುಮ್ಮನೆ ಕಣ್ರೋ ಪುಟ್ಟಕ್ಕನ ಎರಡನೇ ಮಗಳು ಇದ್ದಾಳೆ ಎಂದು ನಿಮ್ಮನ್ನು ಕರೆದುಕೊಂಡು ಬಂದೆ ಆದರೆ ಅದರೆ ಕಷ್ಟ ಇಲ್ಲ ಇನ್ನು ಮೇಲೆ ಎಂದು ಹೇಳುತ್ತಾರೆ. ಇನ್ನು ಪುರುಷೋತ್ತಮ ಸುಮನಾ ಬಳಿ ಎಲ್ಲಾ ವಿಚಾರ ಹೇಳಿದಾಗ ಸುಮಾಗೆ ಶಾಕ್ ಆಗಿ ಸ್ನೇಹಾಗೆ ಕರೆ ಮಾಡುತ್ತಾಳೆ.

ಸುಮನಾ ಕರೆ ನೋಡಿ ಏನೇ ಸುಮಾ ಕಾಲೇಜಿಗೆ ಹೋಗಿಲ್ವ ಎಂದು ಕೇಳುತ್ತಾಳೆ. ಆದರೆ ಸುಮಾ ಅಕ್ಕನ ಬಳಿ ಪುರುಷೋತ್ತಮ ಹೇಳಿದ ಎಲ್ಲ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಏನು ಮಾಡಬೇಕು ಎಂದು ತಿಳಿಯದೇ ಕಂಠಿಯನ್ನು ಕರೆಯುತ್ತಾಳೆ. ನಮ್ಮ ಮನೆಯಲ್ಲಿ ನಡೆಯಬಾರದು ನಡೆಯುತ್ತಿದೆ ಬರುತ್ತೀರಾ ಎಂದು ಕೇಳುತ್ತಾಳೆ. ಕಂಠಿ ಬಡ್ಡಿ ವ್ಯವಹಾರ ಬಿಟ್ಟು ಅಲ್ಲಿಂದ ಪುಟ್ಟಕ್ಕನ ಮನೆಗೆ ಹೋಗುತ್ತಾನೆ. ಪುಟ್ಟಕ್ಕ ರಾಜೇಶ್ವರಿ ಬಳಿ ಪರಿ ಪರಿ ಆಗಿ ಕೇಳಿಕೊಳ್ಳುತ್ತಾಳೆ.
ಆದರೆ ಪುಟ್ಟಕ್ಕ ಹಾಕುತ್ತಿರುವ ಕಣ್ಣೀರನ್ನು ನೋಡಿ ರಾಜೇಶ್ವರಿ ನಗುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಸ್ನೇಹಾ ಬರುತ್ತಾಳೆ. ಜೋರಾಗಿ ನಿಲ್ಲಿಸಿ ಎಂದು ಹೇಳಿದಾಗ ಎಲ್ಲರಿಗೂ ಭಯ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಭಯ ಆಗಿದ್ದು ಕಂಚಿಯನ್ನು ನೋಡಿ. ಕಂಚಿಯನ್ನು ಕಂಡ ರೌಡಿಗಳು ಮೆತ್ತಗೆ ಹಿಂದೆ ಸರಿಯುತ್ತಾರೆ. ಇದನ್ನು ಕಂಡ ರಾಜೇಶ್ವರಿ ಯಾರನ್ನು ನೋಡಿ ಯಾರು ಹೆದರಿಕೊಳ್ಳುವ ಅಗತ್ಯ ಇಲ್ಲ, ಯಾಕೆ ಹೆದರಬೇಕು ಎಂದೆಲ್ಲ ಜೋರಾಗಿ ಮಾತನಾಡುತ್ತಾಳೆ. ಸ್ನೇಹಾ ಬಳಿ ನೀನು ಏನೇ ಮಾಡಿದರೂ ನ್ನಿನ್ನಿಂದ ಈ ಮನೆನ ಕಿತ್ತುಕೊಳ್ಳುತ್ತೇನೆ ಎಂದು ರಾಜಿ ಆಸ್ತಿ ಪತ್ರ ತೋರಿಸುತ್ತಾಳೆ. ಬಳಿಕ ಲಾಯರ್ ಗೆ ಕರೆ ಮಾಡಿ ಕೂಡ ಹೇಳುತ್ತಾಳೆ.

ಇದನ್ನು ಕಂಡ ಸ್ನೇಹಾ ನೀನು ಏನು ಬೇಕಾದರೂ ಮಾಡಿಕೋ ಈ ಗೋಪಾಲ ನನ್ನ ಅಮ್ಮನಿಗೆ ನಿನ್ನ ಮದುವೆ ಆಗೋಕೆ ಮುಂಚೆ ಡೈವರ್ಸ್ ಕೊಡಬೇಕಾಗಿ ಇತ್ತು ಆದರೆ ಕೊಟ್ಟಿಲ್ಲ, ಅದರಿಂದ ನಾವು ತಂದೆಯ ಪಾಲು ಕೇಳುತ್ತೇವೆ ನಮಗೆ ಕೂಡ ಹಕ್ಕಿದೆ ಎಂದೆಲ್ಲ ಕಾನೂನು ಬದ್ಧವಾಗಿ ಮಾತನಾಡುತ್ತಾಳೆ. ಇದನ್ನು ಕೇಳಿದ ರಾಜೀ ಬೆಚ್ಚಿ ಬೀಳುತ್ತಾಳೆ. ಗೋಪಾಲ ಮೆತ್ತಗೆ ರಾಜೀ ಬಳಿ ಬಾ ರಾಜಿ ಸುಮ್ಮನೆ ಇವರ ಸಹವಾಸ ಅಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಜಿ ಬಂದ ದಾರಿಗೆ ಸುಂಕ ಇಲ್ಲದ ಹಾಗೆ ಹೋಗುತ್ತಾಳೆ.
ಇತ್ತ ಸಹನಾ ಹಾಗೂ ಆಕೆಯ ಗಂಡನ ಮನೆಯವರು ಊಟಕ್ಕೆ ಕುಳಿತಿದ್ದಾರೆ. ತನ್ನ ಅತ್ತೆ ಮಾಡಿದ ಅಡುಗೆಯ ಊಟವನ್ನು ಮೊದಲು ಸಹನಾ ತಿನ್ನುವುದು ಕೂಡ. ಆಕೆಗೆ ಬಹಳ ಇಷ್ಟ ಆಗುತ್ತದೆ. ಇದನ್ನು ನೋಡಿದ ಚಿತ್ರ ಗಂಡ ಮಧ್ಯಾಹ್ನ ನೀನೇ ಅಡುಗೆ ಮಾಡಿ ಬಿಡು ಎಂದಾಗ ಮುರಳಿ ಇಲ್ಲ ಬಾವ ನಾವು ಹೊರಗೆ ಹೋಗಲಿದ್ದೇವೆ ಎಂದು ಹೇಳುತ್ತಾನೆ. ಆಗ ಕೌಸಲ್ಯ ಎಲ್ಲಿಗೆ ಎಂದು ಕೇಳಿಯೇ ಬಿಡುತ್ತಾಳೆ. ಬಳಿಕ ಅಮ್ಮನ ಬಳಿ ದೇವಾಲಯಕ್ಕೆ ಹೋಗುತ್ತೇನೆ ಎಂದು ಹೇಳುತ್ತಾನೆ ಮುರಳಿ. ಇದನ್ನು ಕೇಳಿ ಮನೆ ಮಂದಿ ಒಪ್ಪಿಗೆ ನೀಡುತ್ತಾರೆ


Click it and Unblock the Notifications











