Puttakkana Makkalu: ಅತ್ತಿಗೆ-ಅಣ್ಣನನ್ನು ಒಂದು ಮಾಡಲು ಹೊರಟ ಸ್ನೇಹಾ, ರಾಜಿ ಕುತಂತ್ರಕ್ಕೆ ಬಲಿಯಾಗುತ್ತಾಳಾ?

By Poorva

ಸ್ನೇಹಾ ಹಾಗೂ ಬಂಗಾರಮ್ಮ ಪಾರ್ಟಿ ಆಫೀಸ್ ಮೀಟಿಂಗ್‌ಗೆ ಹೋಗುತ್ತಾರೆ. ಸ್ನೇಹಾಳನ್ನು ಕಂಡ ಕೂಡಲೇ ನೆರದಿದ್ದಂತಹ ಎಲ್ಲರಿಗೂ ಬಹಳ ಶಾಕ್ ಆಗುತ್ತದೆ, ಅರರೇ ಬಂಗಾರಮ್ಮ ಹಾಗೂ ಸ್ನೇಹಾ ಯಾವಾಗ ಒಂದಾದರೂ ಎಂದು ಎಲ್ಲರೂ ಮಾತಾಡುತ್ತಿರುತ್ತಾರೆ. ಆದರೆ ಬಂಗಾರಮ್ಮ ಮಾತ್ರ ಅದ್ಯಾವುದನ್ನು ಲೆಕ್ಕಿಸದೆ ತಾನಾಯಿತು ತನ್ನ ಕೆಲಸವಾಯಿತು ಎಂದು ಸುಮ್ಮನೆ ಇರುತ್ತಾರೆ . ಸ್ನೇಹಾನ ಒಳಗೆ ಕರೆಯಿಸಿ ಕುಳಿತುಕೊಳ್ಳಿ ಎಂದು ಹೇಳುತ್ತಾನೆ .

ಸ್ನೇಹಾ ಕುಳಿತುಕೊಂಡು ರಾಜಕಾರಣಿ ಹೇಳುವ ಎಲ್ಲ ಮಾತುಗಳನ್ನು ಕೇಳುತ್ತಿರುತ್ತಾಳೆ. ನಿಮ್ಮ ಸಂಸಾರ ಬಹಳ ಒಗ್ಗಟ್ಟಿನಲ್ಲಿದೆ ತುಂಬಾ ಚೆನ್ನಾಗಿದೆ ಯಾಕೆ ನೀವು ಸೋಶಿಯಲ್ ಮೀಡಿಯಾಗಳಲ್ಲಿ ಇದನ್ನ ಹಂಚಿಕೊಳ್ಳಬಾರದು. ನಿಮ್ಮ ಫ್ಯಾಮಿಲಿಯ ಫೋಟೋ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ. ಇದರಿಂದ ಬಂಗಾರಮ್ಮ ಅವರ ರಾಜಕೀಯ ಜೀವನಕ್ಕೆ ಲಾಭವಾಗುತ್ತದೆ ಎಂದು ಅಧ್ಯಕ್ಷ ಹೇಳುತ್ತಿರುತ್ತಾನೆ.

Kannada serial Puttakkana Makkalu written update on 3rd November

ಇದನ್ನೆಲ್ಲ ಕೇಳಿಸಿಕೊಂಡ ಸ್ನೇಹಾಗೂ ಹೌದೆನಿಸುತ್ತದೆ. ನನ್ನಿಂದಾಗಿ ತನ್ನ ಅತ್ತೆಯ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಿದೆ ಅದನ್ನು ಹೇಗಾದರೂ ಅಳಿಸಲೇಬೇಕೆಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ. ಇನ್ನು ಆಫೀಸ್‌ನಿಂದ ಹೊರಟ ಸ್ನೇಹಾ ನೇರವಾಗಿ ಹುಟ್ಟು ಆಚರಣೆ ಮಾಡಲು ಹೋಗುತ್ತಾಳೆ. ವಸು ಗಂಡ ಚಂದ್ರುನ ಹುಟ್ಟು ಹಬ್ಬವನ್ನು ಆಚರಣೆ ಮಾಡಲೇಬೇಕೆಂದು ಯೋಚನೆ ಮಾಡುತ್ತಾಳೆ. ಚಂದ್ರು ತನ್ನ ಹೆಂಡತಿ ವಸುವನ್ನು ದೇವಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ.

ವಸು ಮಾತನಾಡಿಸಲು ಕಾತರದಿಂದ ಕಾಯುತ್ತಿದ್ದ ಚಂದ್ರು

ತನ್ನ ಅತ್ತೆಯಿಂದಾಗಿ ತನ್ನ ಹೆಂಡತಿಯ ಜೊತೆ ಸಂಸಾರ ಮಾಡಲಾಗದೆ ಚಂದ್ರು ಪಡಬಾರದ ಪಾಡು ಪಡುತ್ತಿರುತ್ತಾನೆ. ತನ್ನ ತಾಯಿಯ ವರ್ತನೆ ಹಾಗೂ ಆಕೆಯ ಕೆಟ್ಟ ಸ್ವಭಾವದಿಂದ ಚಂದ್ರು ತಲೆತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ಹೇಗಾದರೂ ಮಾಡಿ ಚಂದ್ರುವನ್ನು ಹಾಗೂ ವಸ್ತುವನ್ನು ಒಂದು ಮಾಡಲೇಬೇಕೆಂದು ಸ್ನೇಹಾ ಪ್ರಯತ್ನ ಪಡುತ್ತಿರುತ್ತಾಳೆ.

ಸ್ನೇಹನಾ ಮಾತಿಗೆ ಸಮಾಧಾನಗೊಂಡ ಕಂಠಿ

ಇನ್ನು ವಸು ಹಾಗೂ ಚಂದ್ರು ದೇವಸ್ಥಾನದಲ್ಲಿರುವಾಗ ಸ್ನೇಹಾ ಅಣ್ಣಯ್ಯನ ಬಳಿ ಬಹಳ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತ್ತಾಳೆ. ಹಾಗೆಯೇ ಅಣ್ಣನಿಗೆ ಏನು ಆಗುವುದಿಲ್ಲ ನೀವು ಯೋಚನೆ ಮಾಡುವುದನ್ನು ಬಿಟ್ಟು ಬಿಡು ಎಂದು ಧೈರ್ಯ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಣ್ಣಯ್ಯ ಇಲ್ಲಮ್ಮ ನಮ್ಮ ಜೀವನ ಇಷ್ಟೇ ಅನಿಸುತ್ತದೆ. ಕದ್ದು ಮುಚ್ಚಿ ಬೇಟಿಯಾಗುವ ಪರಿಸ್ಥಿತಿ ನಮ್ಮದಾಗಿದೆ ಎಂದು ಬೇಸರ ಹಂಚಿಕೊಳ್ಳುತ್ತಾನೆ.

ಚಂದ್ರು ವಸು ಭೇಟಿಯನ್ನು ವಿಡಿಯೋ ಮಾಡಿಕೊಂಡ ರಾಜಿ

ಇನ್ನು ಇದನ್ನೆಲ್ಲಾ ನೋಡಿದ ರಾಜಿ, ದೂರದಿಂದ ವಿಡಿಯೋ ಮಾಡ್ತಿರುತ್ತಾಳೆ. ಈ ವಿಚಾರವನ್ನು ಬಂಗಾರಮ್ಮ ಅವರ ಕಿವಿಗೆ ಹೇಗಾದರೂ ಹಾಕಲೇಬೇಕೆಂದು ಯೋಚನೆ ಮಾಡುತ್ತಿರುತ್ತಾಳೆ. ಸ್ನೇಹಾ ಹಾಗೂ ಬಂಗಾರಮ್ಮ ನಡುವೆ ಇನ್ನು ತಂದಿಡಬೇಕು ಎಂದು ಯೋಚಿಸುತ್ತಿರುತ್ತಾರೆ. ಆದ್ದರಿಂದಾಗಿ ಆಕೆ ವಸು, ಚಂದ್ರು ಮತ್ತು ಸ್ನೇಹಾ ಈ ಮೂರು ಜನ ಮಾತನಾಡುತ್ತಾ ಇರುವುದನ್ನು ವಿಡಿಯೋ ಮಾಡಿ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಇನ್ನು ಸ್ನೇಹಾ ಅಣ್ಣನ ಹುಟ್ಟುಹಬ್ಬ ಆಚರಣೆ ಮಾಡಲು ಕೇಕ್ ತರುತ್ತಾಳೆ .ಆ ಬಳಿಕ ವಸು ಹಾಗೂ ಚಂದ್ರು ಆ ಕೇಕನ್ನ ಕಟ್ ಮಾಡಿ ಹುಟ್ಟುಹಬ್ಬವನ ಆಚರಣೆ ಮಾಡುತ್ತಾರೆ. ಬಳಿಕ ವಸು ಚಂದ್ರುಗೆ ಬಂಗಾರದ ಉಂಗುರವನ್ನು ಗಿಫ್ಟ್ ಕೊಡುತ್ತಾಳೆ. ಗಿಫ್ಟ್ ನೋಡಿ ಚಂದ್ರು ಬಹಳ ಖುಷಿಪಡುತ್ತಾನೆ.

More from Filmibeat

English summary
Puttakkana Makkalu serial November 3rd written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X