Puttakkana Makkalu: ಕಂಠಿ ಪ್ರೀತಿಗೆ ಅಡ್ಡಿಯಾಗುತ್ತನಾ ಚಂದ್ರು? ಅತ್ತೆ ಮಾತು ಕೇಳದ ಸಹನಾಗೆ ಮಾರಿ ಹಬ್ಬ?

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪುಟ್ಟಕ್ಕನ ಮನೆಯಲ್ಲಿ ಯುಗಾದಿ ಸಂಭ್ರಮ ಜೋರಾಗಿ ನಡೆಯುತ್ತಿದೆ. ಹಬ್ಬದ ಕೇಂದ್ರ ಬಿಂದು ಆಗಿ ಸಹನಾ ಹಾಗೂ ಮುರಳಿ ಇದ್ದಾರೆ. ಇವರಿಬ್ಬರೂ ಬಂದಿರುವುದನ್ನು ನೋಡಿ ಎಲ್ಲರೂ ಖುಷಿ ಪಡುತ್ತಾರೆ. ಕಂಠಿ ಹಬ್ಬದ ಸಂಭ್ರಮದಲ್ಲಿ ಬಹಳ ಖುಷಿಯ ಜತೆ ಸ್ನೇಹಾಳ ಗುಂಗಿನಲ್ಲಿ ಇರುತ್ತಾನೆ. ಇದನ್ನೆಲ್ಲ ಚಂದ್ರು ಗಮನಿಸುತ್ತಿರುವುದೇ ಕಂಠಿಗೆ ದೊಡ್ಡ ಪೇಚಾಟ ಆಗುತ್ತದೆ.

ಕಾಳಿ ಸಹನಳಿಗಾಗಿ ಒಂದು ಕಟ್ಟೆಯ ಮೇಲೆ ಕುಳಿತಿರುತ್ತಾನೆ. ಇನ್ನು ಕಂಠಿಯನ್ನು ಫಾಲೋ ಮಾಡಿಕೊಂಡು ಬಂದ ಬೈರ ಬಂಗಾರಮ್ಮ ಗೆ ಕರೆ ಮಾಡಿ ಕಂಠಿ ಪುಟ್ಟಕ್ಕನ ಮೆಸ್ ಗೆ ಬಂದಿರುವ ವಿಚಾರ ಹೇಳುತ್ತಾನೆ. ಇದನ್ನು ಕೇಳಿದ ಆಕೆ ಪುಟ್ಟಕ್ಕನ ಮನೆಗೆ ಊಟಕ್ಕೆ ಬಂದಿರಬಹುದು ಎಂದು ಹೇಳಿ ಹುಡುಗಿಯ ಫೋಟೋ ಕಳುಹಿಸು ಆಕೆ ಯಾರು ಎಂದು ನನಗೆ ಗೊತ್ತಾಗಲೇ ಬಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬೈರ ಆಯಿತು ಎಂದು ಫೋನ್ ಇಡುತ್ತಾನೆ. ಆ ಬಳಿಕ ಬೈರ ಕಾಳಿ ಬಳಿ ಬಂದು ಕುಳಿತುಕೊಂಡಿರುವಾಗ ಬೈರ ಸುಮ್ಮನೆ ನಗುತ್ತಾನೆ.

Kannada serial Puttakkana Makkalu written update on 4th april

ಇನ್ನು ಪುಟ್ಟಕ್ಕನ ಮನೆಯಲ್ಲಿ ನಗುವಿನ ಹಬ್ಬ ಎಂದರೆ ತಪ್ಪಾಗದು. ಇದೀಗ ಮನೆಯ ಅಳಿಯನಿಗೆ ಎಣ್ಣೆ ಸ್ನಾನ ಮಾಡಿಸುತ್ತಾರೆ. ಸಹನಾ ಮುರಳಿ ಮೈಗೆ ಎಣ್ಣೆ ಹಚ್ಚಿದಾಗ ಸ್ನೇಹಾಗೆ ಕಂಠಿ ನೆನಪಾಗುತ್ತದೆ. ಆ ಬಳಿಕ ಎಲ್ಲರಿಗೂ ಬೇವು ಬೆಲ್ಲ ನೀಡುತ್ತಾಳೆ. ಇನ್ನು ಕಂಠಿ ಹಾಗೂ ಸ್ನೇಹಾ ವರ್ತನೆ ನೋಡಿದ ಚಂದ್ರುಗೆ ಸ್ನೇಹಾ ಮೇಲೆ ಡೌಟ್ ಬರುತ್ತದೆ.

ಸ್ನೇಹಾ ಕಂಠಿಯನ್ನು ಇಷ್ಟ ಪಡಲ್ಲ ಎಂದುಕೊಂಡಿದ್ದೆ ಆದರೆ ಸ್ನೇಹಾ ವರ್ತನೆ ನೋಡಿದರೆ ಹಾಗೆ ಅನ್ನಿಸುತ್ತಾ ಇಲ್ಲವಲ್ಲ, ಆಕೆ ಕಂಠಿ ಜೊತೆ ಲವ್‌ನಲ್ಲಿ ಬಿದ್ದಿದ್ದಾಳೆ ಅನ್ನಿಸುತ್ತದೆ ಎಂದು ಮನದಲ್ಲಿ ಹೇಳುತ್ತ ಇರುತ್ತಾನೆ. ಇನ್ನು ಸುಮಾ ಕಂಠಿ ಹಾಗೂ ಸ್ನೇಹಾಳನ್ನು ಒಂದು ಮಾಡೋ ಕೆಲಸ ಮಾಡುತ್ತಾ ಇದ್ದರೆ ಚಂದ್ರು ಮಾತ್ರ ಕಂಠಿಯನ್ನು ತಡೆಯುತ್ತಾನೆ.

Kannada serial Puttakkana Makkalu written update on 4th april

ಇನ್ನ ಪುಟ್ಟಕ್ಕನ ಮನೆಯಲ್ಲಿ ಯುಗಾದಿ ಹಬ್ಬದ ಪೂಜೆ ನಡೆಯುತ್ತದೆ. ಕೌಸಲ್ಯ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಹೋಗುತ್ತಾ ಮನೆ ಮಂದಿಗೆ ಬಯ್ಯುತ್ತಾ ಇರುತ್ತಾಳೆ. ಇದನ್ನು ನೋಡಿದ ಚಿತ್ರ ಯಾಕಮ್ಮ ಏನಾಯಿತು, ಅತ್ತಿಗೆ ಹೋದಾಗಿನಿಂದ ಈ ರೀತಿ ಮಾತನಾಡುತ್ತಾ ಇದ್ದಿಯಲ್ಲಾ ಯಾಕೆ ಇವತ್ತಿಗೆ ಊಟಕ್ಕೆ ಏನು ಮಾಡಿದೆ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಅದನ್ನು ಕೇಳಿದ ಕೌಸಲ್ಯಗೆ ಪಿತ್ತ ನೆತ್ತಿಗೇರಿತು.

ಆಕೆ ಕೋಪದಿಂದ ಮಗಳ ಮುಖ ನೋಡುತ್ತಾಳೆ. ಬಳಿಕ ಚಿತ್ರ ಅಲ್ಲಿಂದ ಹೋಗುತ್ತಾಳೆ. ಇನ್ನು ಕೌಸಲ್ಯಗೆ ರಾಜೇಶ್ವರಿ ಕರೆ ಮಾಡುತ್ತಾಳೆ. ಬಳಿಕ ಸಹನಳನ್ನು ಕಳುಹಿಸುವುದರ ಬಗ್ಗೆ ಕೇಳುತ್ತಾಳೆ. ಅದನ್ನು ಕೇಳಿದ ಕೌಸಲ್ಯ ನನ್ನನ್ನು ಇನ್ನೂ ಕೆಣಕಬೇಡಿ ದಯವಿಟ್ಟು ಫೋನ್ ಇಡಿ, ನಾನು ಬಹಳ ಕೋಪದಲ್ಲಿ ಇದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಜಿ ಕರೆ ಕಟ್ ಮಾಡಿ ಜೋರಾಗಿ ನಗುತ್ತಲೇ ಇರುತ್ತಾಳೆ. ಇನ್ನು ಅಲ್ಲಿಗೆ ಬಂದ ಗೋಪಾಲ ರಾಜಿಗೆ ಬೇವು ಬೆಲ್ಲ ಕೊಟ್ಟಾಗ ರಾಜಿ ಬೆಲ್ಲ ಮಾತ್ರ ತೆಗೆದುಕೊಳ್ಳುತ್ತಾಳೆ.

More from Filmibeat

English summary
Kannada serial puttakkana makkalu written updated on 4th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X