Puttakkana Makkalu: ಸ್ನೇಹಳನ್ನು ಭೇಟಿ ಆಗಲು ಬಂದ ಸುಮಾ; ತಂಗಿಯ ಮಾತು ಕೇಳಿ ಸ್ನೇಹಾ ಫುಲ್ ಖುಷ್
ಪುಟ್ಟಕ್ಕ ನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನವೇಳೆಯುವ ಹಾಗೆ ಮಾಡುತ್ತಿದೆ. ಇದೀಗ ಸ್ನೇಹಾ ಗೆ ಇನ್ನೂ ಕಂಠಿ ಮೇಲಿನ ಕೋಪ ತಣ್ಣಗಾದ ಹಾಗೆ ಕಾಣುತ್ತಿಲ್ಲ.. ಸ್ನೇಹಾ ಓದಿಕೊಂಡು ಇರುವ ವೇಳೆ ಕಂಠಿ ಸ್ನಾನ ಮಾಡಿಕೊಂಡು ಬಚ್ಚಲು ಮನೆಯಿಂದ ಬರುವಾಗ ಸ್ನೇಹಾ ಗೆ ಒಂಥರಾ ಮುಜುಗರ ಆಗಿ ಹೋಗುತ್ತದೆ
ಆದರೆ ಕಂಠಿ ಇದನ್ನು ಅರ್ಥ ಮಾಡಿಕೊಂಡು ಮರೆಯಲ್ಲಿ ನಿಂತು ಬಟ್ಟೆ ಹಾಕಿಕೊಂಡು ಇರುತ್ತಾನೆ.. ಇನ್ನೂ ವಸು ಬಂದು ಅಣ್ಣನ ಬಳಿ ಅಣ್ಣ ತಿಂಡಿ ರೆಡಿ ಇದೆ ಬನ್ನಿ ಎಂದು ಹೇಳುತ್ತಾಳೆ. ಇದನ್ನು ಸ್ನೇಹಾ ಕೇಳಿಸಿದರು ಕೇಳಿಸಿಕೊಳ್ಳದ ಹಾಗೆ ಇರುತ್ತಾಳೆ.. ಇದನ್ನು ನೋಡಿದ ಕಂಠಿ ವಸು ಗೆ ಸನ್ನೆ ಮಾಡುತ್ತಾನೆ. ಇದನ್ನು ನೋಡಿದ ವಸು ಮಾತ್ರ ಮೆತ್ತಗೆ ನಾನು ಸ್ನೇಹಾ ನ ಕರೆಯಲ್ಲ ನೀನೇ ಕರೆದುಕೊಂಡು ಬಾ ಎಂದು ಸನ್ನೆಯ ಮೂಲಕ ಹೇಳಿದರೆ ಕಂಠಿ ಮಾತ್ರ ವಾಡು ಬಳಿ ಬಲವಂತ ಮಾಡುತ್ತಾ ಇದ್ದ

ಆ ಬಳಿಕ ವಸು ಸ್ನೇಹಾ ಜೊತೆ ಹೇಳುತ್ತಾಳೆ... ಸ್ನೇಹಾ ಬಾ ತಿಂಡಿ ಮಾಡೋಣ ಎಂದಾಗ ಸ್ನೇಹಾ ಹೇಳುತ್ತಾಳೆ ಅತ್ತಿಗೆ ನಾನು ಹಣ್ಣುಗಳನ್ನು ತಿನ್ನುತ್ತೇನೆ ಏಷ್ಟು ಸಾಕು ನನಗೆ ಎಂದು ಹೇಳುತ್ತಾಳೆ ಇದನ್ನು ಕೇಳಿಸಿಕೊಂಡ ಕಂಠಿ ಮೆತ್ತಗೆ ಹೇಳುತ್ತಾನೆ ನನ್ನ ಮೇಲೆ ಇರುವ ಕೋಪವನ್ನು ಊಟದ ಮೇಲೆ ತೋರಿಸುವುದು ಬೇಡ ಎಂದು ಹೇಳಿದಾಗಲೂ ಸ್ನೇಹಾ ಮಾತ್ರ ಕಂಠಿ ಮಾತನ್ನು ಕೇಳಿಸಿಕೊಳ್ಳಲು ಇಲ್ಲ.
ಇನ್ನೂ ಕಂಠಿ ಗೆಳೆಯರು ಕರೆ ಮಾಡಿದಾಗ ಲೌಡ್ ಸ್ಪೀಕರ್ ಇಟ್ಟು ಮಾತನಾಡುತ್ತಾನೆ. ಆಗ ಅವರು ಪ್ರಸ್ತದ ವಿಚಾರ ಮಾತನಾಡಿದಾಗ ಕಂಠಿ ಕೊಂಚ ಮುಜುಗರಕ್ಕೆ ಒಳಗಾಗುತ್ತಾನೆ. ಕಂಠಿ ಮಾತ್ರ ಮೆತ್ತಗೆ ಏನೇನೋ.ಮಾತನಾಡಿ ಫೋನ್ ಕಟ್ ಮಾಡುತ್ತಾನೆ. ಇನ್ನೂ ಸುಮಾ ಅಕ್ಕನ ಮನೆಗೆ ಬರುತ್ತಾಳೆ. ಬಂಗಾರಮ್ಮ ನವರ ಬಗ್ಗೆ ಭಯಗೊಂಡ ಸುಮಾ ಮನೆಯ ಒಳಗೆ ಕಾಲಿಡಲು ಭಯ ಪಡುತ್ತಾಳೆ ಸ ಮೇಲೆ ಹೇಗಾದರೂ ಧೈರ್ಯ ಮಾಡಿ ಮನೆಗೆ ಬರುತ್ತಾಳೆ ..
ಇನ್ನೂ ಎದುರಲ್ಲಿ ಬಂಗಾರ ಮ್ಮ ನವರನ್ನು ನೋಡಿ ಕೊಂಚ ಹೆದರಿಕೊಂಡು ಸುಮಾ .. ಅಕ್ಕನ ಮಾತನಾಡಿಸಲು ಬಂದೆ .. ನನ್ನ ರಿಸಲ್ಟ್ ಬಂತು .. ನಾನೇ ಟಾಪರ್.. ಅಕ್ಕನಿಗೆ ಹೇಳೋಣ ಅಂತ ಬಂದೆ ಎಂದು ಹೇಳಿದಾಗ ಬಂಗಾರ ಮ್ಮ ಸುಮ್ಮನೆ ಇರುತ್ತಾರೆ. ಬಳಿಕ ಅಕ್ಕನ ರೂಮ್ ಎಲ್ಲಿ ಎಂದು ಸುಮಾ ಕೇಳಿದಾಗ ಲೆಕ್ಕಾಚಾರ ಮಹಡಿ ಮೇಲೆ ಎಂದು ಕೈ ತೋರಿಸುತ್ತಾರೆ.
ಆಗ ಅಲ್ಲಿಗೆ ಬಂದ ವಸು ಜೊತೆ ಚೆನ್ನಾಗಿ ಮಾತನಾಡಿದ ಸುಮಾ ಹೇಳುತ್ತಾಳೆ ನನ್ನ ರಿಸಲ್ಟ್ ಬಂತು ಅತ್ತಿಗೆ ನಾನೇ ಟಾಪರ್ ಅಕ್ಕ ಗೆ ಹೇಳಿದರೆ ಬಹಳ ಖುಷಿ ಪಡುತ್ತಾರೆ ಎಂದು ಬಂದೆ ಎಂದು ಹೇಳುತ್ತಾಳೆ. ಇನ್ನೂ ಕಂಠಿ ರೂಮ್ ಕಡೆ ಬಂದ ಸುಮಾ ಸ್ನೇಹಾ ನ ಕರೆಯುತ್ತಾಳೆ.
ಆಗ ಸುಮನಾ ನೋಡಿದ ಸ್ನೇಹಾ ಗೆ ಮಾತೇ ಬಾರದಷ್ಟು ಖುಷಿ ಆಗುತ್ತದೆ.. ಇನ್ನೂ ಸುಮಾ ರಿಸಲ್ಟ್ ಬಂತು ನಾನೇ ಟಾಪರ್ ಎಲ್ಲರೂ ಅಕ್ಕ ನ ಹಾಗೆ ತಂಗಿ ಎಂದು ಹೇಳುತ್ತಿದ್ದಾರೆ ಎಂದು ಖುಷಿ ಪಡುತ್ತ ಇರುತ್ತಾಳೆ ಸುಮಾ..ಅಕ್ಕನಿಗೆ ಸ್ವೀಟ್ ಕೊಟ್ಟ ಸುಮಾ ಆ ಬಳಿಕ ಆಗ ಅಲ್ಲಿಗೆ ಬಂದ ಕಂಠಿ ಗೆ ಕೂಡ ಸಸ್ವೀಟ್ಸ್ ಕೊಡಲು ಮುಂದಾಗುತ್ತಾಳೆ ಆಗ ಸ್ನೇಹಾ ಹೇಳುತ್ತಾಳೆ. ಬೇರೆಯವರ ಕೆರಿಯರ್ ಹಾಳು ಮಾಡಿದವರಿಗೆ ಸ್ವೀಟ್ಸ್ ಕೂಡಲೇ ಬೇಕು ಎಂದು ಕೊಂಕು ಮಾತನಾಡುತ್ತಾಳೆ.. ಕಂಠಿ ಆಗಷ್ಟೇ ಸ್ವೀಟ್ ಗೆ ಕೈ ಹಾಕಲು ಬಂದಿದ್ದ.. ಸ್ನೇಹಾ ಮಾತು ಕೇಳಿ ಸ್ವೀಟ್ ತೆಗೆದುಕೊಳ್ಳದೆ ಅಲ್ಲಿಂದ ಹೊರಟು ಹೋಗುತ್ತಾನೆ.


Click it and Unblock the Notifications











