Puttakkana Makkalu: ಬಂಗಾರಮ್ಮನ ಮನಸ್ಸು ಗೆಲ್ಲಲು ರಾಧಾ ಹರಸಾಹಸ, ಸ್ನೇಹಾ-ಕಂಠಿ ಬಾಳಲ್ಲಿ ಬಿರುಗಾಳಿ!?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಬುತವಾಗಿ ಮೂಡಿ ಬರುತ್ತಿದ್ದು, ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ರಾಧಾ ಬಂಗಾರಮ್ಮ ಅವರ ಮನೆಯ ಸೊಸೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಬಂಗಾರಮ್ಮ ಅವರ ಮನಸ್ಸನ್ನು ಗೆಲ್ಲಲು ರಾಧಾ ಪಣತೊಟ್ಟಿದ್ದಾಳೆ. ಆದರೆ ಕಂಠಿಗೆ ರಾಧನನ್ನು ಕಂಡರೆ ಸ್ವಲ್ಪವೂ ಇಷ್ಟ ಇರೋದಿಲ್ಲ. ಆದರೂ ಕೂಡ ಹತ್ತಿರ ಬರುತ್ತಿರುತ್ತಾಳೆ.
ಇನ್ನು ಕಂಠಿ ಹಾಗೂ ಸ್ನೇಹಾಳನ್ನು ಬಿಟ್ಟು ಮಿಕ್ಕವರೆಲ್ಲ ಊಟಕ್ಕೆ ಡೈನಿಂಗ್ ಹಾಲ್‌ನಲ್ಲಿ ಕುಳಿತುಕೊಂಡಿರುತ್ತಾರೆ. ಆಗ ರಾಧಾ ನಾನೇ ಎಲ್ಲರಿಗೂ ಊಟ ಬಡಿಸುತ್ತೇನೆ ಎಂದು ಹೇಳಿದಾಗ ಎಲ್ಲರಿಗೂ ಖುಷಿಯಾಗುತ್ತದೆ. ರಾಧಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎಂದೆಲ್ಲ ಮನೆಯವರು ನಂಬಿದ್ದರು ಆದರೆ ಇದೀಗ ರಾಧಾ ಲವಲವಿಕೆಯಿಂದ ನುಡಿ ಬಹಳ ಖುಷಿಪಟ್ಟಿದ್ದಾರೆ.

ಡೈನಿಂಗ್ ಹಾಲ್‌ನಲ್ಲಿ ಎಲ್ಲರೂ ಇದ್ದು ಕಂಠಿ ಹಾಗೂ ಸ್ನೇಹಾ ಇಲ್ಲದೆ ಇರುವುದನ್ನು ಕಂಡು ರಾಧಾ ನಾನು ಕಂಠಿ ಮಾವನನ್ನು ಹಾಗೂ ಸ್ನೇಹಾನನ್ನು ಊಟಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದಾಗ ಬಂಗಾರಮ್ಮ ಬೇಡ ಎಂದು ತಡೆಯುತ್ತಾರೆ. ಆದರೆ ಬಂಗಾರಮ್ಮ ಅವರ ಮಾತನ್ನು ಕೇಳದೆ ಅವರ ಮನವೊಲಿಸುತ್ತಾಳೆ. ರಾಧಾ ಮಾತಿಗೆ ಬಂಗಾರಮ್ಮ ಸುಮ್ಮನಾಗುತ್ತಾರೆ. ಬಳಿಕ ಮೆತ್ತಗೆ ಬಂಗಾರಮ್ಮನವರ ಬಳಿ ಕಂಠಿ ಭಾವ ಊಟ ಮಾಡದೇ ಇದ್ದರೆ ನನಗೂ ಗಂಟಲಲ್ಲಿ ಊಟ ಸೇರುವುದಿಲ್ಲ. ಅದಕ್ಕಾಗಿ ನಾನು ಕೂಡ ಅವರನ್ನ ಊಟಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹೋಗುತ್ತಾಳೆ.
ರಾಧಾ ಗುಣಗಾನ ಮಾಡಿದ ಬಂಗಾರಮ್ಮ!
ಆಗ ಬಂಗಾರಮ್ಮ ಎಲ್ಲರ ಜೊತೆಗೆ ರಾಧಾ ನನ್ನ ಸೊಸೆಯಾಗಬೇಕು ಅಂದುಕೊಂಡಿದ್ದೆ. ಆದರೆ, ನನ್ನ ಹಣೆಯ ಬರಹವೇ ಬೇರೆ ಇದೆ. ರಾಧಾ ನನಗೆ ಈ ಜನ್ಮದಲ್ಲಿ ಸೊಸೆಯಾಗಿ ಬರಲಿಲ್ಲ ಎಂದು ಬೇಸರದ ಮಾತುಗಳನ್ನು ಆಡುತ್ತಿರಬೇಕಾದರೆ ಇದನ್ನ ಕದ್ದು ರಾಧಾ ಕೇಳಿಸಿಕೊಳ್ಳುತ್ತಾಳೆ. ಬಳಿಕ ಮನಸಲ್ಲಿಯೇ ಮಂಡಿಗೆ ತಿನ್ನುತ್ತಾ ಬಹಳ ಖುಷಿ ಪಡುತ್ತಿರುತ್ತಾಳೆ.
ಕಂಠಿ ರೂಮ್ ಬಳಿ ಬಂದ ರಾಧಾ
ಇನ್ನು ಕಂಠಿ ಹಾಗೂ ಸ್ನೇಹಾ ರೂಮಿನಲ್ಲಿ ಮಾತನಾಡುತ್ತಿರುತ್ತಾರೆ. ಆವೇಳೆ ಅಲ್ಲಿಗೆ ರಾಧಾ ಬರುತ್ತಾಳೆ. ರಾಧಾನನ್ನು ನೋಡಿದ ಕಂಠಿಗೆ ಸ್ವಲ್ಪ ಕೋಪ ಬರುತ್ತದೆ. ರಾಧಾನಿಂದಾಗಿ ನನ್ನ ಹಾಗೂ ಸ್ನೇಹಾ ನಡುವೆ ಏನಾದರೂ ಬಿರುಕು ಬಿದ್ದರೆ ಎನ್ನುವ ಭಯ ಕಂಠಿಗೆ. ಇನ್ನು ರಾಧಾ ಉದ್ದೇಶ ಕೂಡ ಅದೇ ಆಗಿರುತ್ತದೆ. ಹೇಗಾದರೂ ಮಾಡಿ ಸ್ನೇಹಾಳನ್ನು ಈ ಮನೆಯಿಂದ ಓಡಿಸಿ ನಾನು ಹಾಗೂ ಭಾವ ಒಂದಾಗಿ ಜೀವನ ಸಾಗಿಸಬೇಕು ಎನ್ನುವುದೇ ರಾಧಾ ಪ್ಲಾನ್.

ರಾಧಾ ಬಳಿ ಒಂದು ಮಾತನಾಡದ ಕಂಠಿ
ಇನ್ನು ಸ್ನೇಹಾ ಬಳಿ ಮಾತನಾಡಿದ ರಾಧಾ, 'ಸ್ನೇಹಾ ನಿನ್ನನ್ನು ನಾನು ಇನ್ನೂ ಸ್ನೇಹಾ ಎಂದೆ ಕರೆಯುತ್ತೇನೆ. ಇದಕ್ಕೆ ನಿನ್ನ ಅಭ್ಯಂತರ ಇಲ್ಲ ಎಂದುಕೊಂಡು ಇದ್ದೇನೆ' ಎನ್ನುತ್ತಾಳೆ. ಇದಕ್ಕೆ ರಾಧಾ ನೀನು ನನ್ನ ತಂಗಿ, ನಿನ್ನನ್ನೇ ನಾನು ಏಕವಚನದಲ್ಲಿ ಮಾತನಾಡಿಸುತ್ತಾ ಇದ್ದೇನೆ ಆದರೆ ನೀನು ನನ್ನ ಜೊತೆ ಇದಕ್ಕೆಲ್ಲ ಪರ್ಮಿಷನ್ ಕೇಳುವ ಅಗತ್ಯವಿಲ್ಲ ಎಂದು ಸ್ನೇಹಾ ಹೇಳುತ್ತಾಳೆ. ಇನ್ನು ರಾಧಾ ಇಬ್ಬರನ್ನೂ ಊಟಕ್ಕೆ ಬರಲು ಹೇಳಿದಾಗ ನನಗೆ ಹಸಿವಿಲ್ಲ ಎಂದು ಸ್ನೇಹಾ ಹೇಳುತ್ತಾಳೆ. ಕಂಠಿ ಕೂಡ ನನಗೆ ಕೂಡ ಸ್ವಲ್ಪವೂ ಹಸಿವಿಲ್ಲ ನೀವು ಊಟ ಮಾಡಿ ನಾವು ಹಸಿವಾದರೆ ಮಾಡುತ್ತೇವೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಧಾ ಮಾತ್ರ ಇಬ್ಬರ ಕೈ ಹಿಡಿದು ನೀವು ಇಬ್ಬರು ಬರಲೇ ಬೇಕು ಎಂದು ಕರೆದುಕೊಂಡು ಬರುತ್ತಾಳೆ.
ಡೈನಿಂಗ್ ಹಾಲ್ ಬಳಿಗೆ ಬಂದ ಸ್ನೇಹಾ, ಕಂಠಿ
ಇಬ್ಬರನ್ನೂ ಕರೆದುಕೊಂಡು ಡೈನಿಂಗ್ ರೂಮ್ ಬಳಿ ಕರೆದುಕೊಂಡು ಬಂದ ರಾಧಾ ಊಟಕ್ಕೆ ಬಡಿಸುತ್ತಾಳೆ. ಕಂಠಿ ಊಟಕ್ಕೆ ಬಂದಿರುವುದನ್ನು ನೋಡಿದ ವಸು, 'ಅಣ್ಣಯ್ಯ ಊಟಕ್ಕೆ ಬರುತ್ತಾನೆ ಎಂದು ನಾನು ಅಂದುಕೊಂಡು ಇರಲಿಲ್ಲ' ಎಂದು ಕೊಂಚ ಆಶ್ಚರ್ಯ ಪಡುತ್ತಾಳೆ. ಇದನ್ನು ಕೇಳಿಸಿಕೊಂಡ ರಾಧಾ ಅವರನ್ನು ಊಟಕ್ಕೆ ಕರೆದುಕೊಂಡು ಬಂದಿರುವುದು ನಾನು ಯಾರು ಬಂಗಾರಮ್ಮ ಅವರ ಸೊಸೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಹಾಗೂ ಸ್ನೇಹಾ ಮುಖ ಮುಖ ನೋಡಿಕೊಂಡು ಇರುತ್ತಾರೆ . ಇತ್ತ ಸಹನಾ ಹಾಗೂ ಮುರಳಿ ಜೀವನದಲ್ಲಿ ಕೂಡ ಅಲ್ಲೋಲ ಕಲ್ಲೋಲವಾಗುತ್ತಿದೆ.


Click it and Unblock the Notifications











