Don't Miss!
- Finance
ರೆಪೋ ದರ ಮತ್ತೆ 25 ಬಿಪಿಎಸ್ ಏರಿಕೆ ಸಾಧ್ಯತೆ, ಇಎಂಐ ಮತ್ತಷ್ಟು ಹೆಚ್ಚಾಗುತ್ತಾ?
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- News
ಹಿಂಡೆನ್ಬರ್ಗ್ ವರದಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ ಇಲ್ಲಿದೆ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಪುಟ್ಟಕ್ಕನನ್ನು ಮಗಳ ಮದುವೆಯಿಂದ ಹಿಂದೆ ಸರಿಯುವ ಹಾಗೆ ಮಾಡುತ್ತಾಳ ಕೌಸಲ್ಯ?
ಸುಮಾ ಸ್ನೇಹಾಳನ್ನು ಊಟಕ್ಕೆ ಕರೆಯುತ್ತಾಳೆ. ಆದರೆ ಸ್ನೇಹಾ ಯಾರಿಗೋ ಕಾಯುತ್ತಾ ಇರುವ ಹಾಗೆ ಕಾಣಿಸುತ್ತದೆ. ಎಲ್ಲರೂ ಊಟಕ್ಕೆ ಹೋದರೂ ಸ್ನೇಹಾ ಮಾತ್ರ ಮನೆಯ ಹೊರಗೆ ನೋಡುತ್ತಾ ಇರುತ್ತಾಳೆ. ಈ ವೇಳೆ ಪುಟ್ಟಕ್ಕ ಸ್ನೇಹಾ ಯಾರಿಗೆ ಕಾಯುತ್ತಾ ಇದ್ದೀಯಾ, ಬಾ ಕುಳಿತುಕೋ ಊಟ ಮಾಡುವ ಎಂದು ಹೇಳುತ್ತಾಳೆ . ಇನ್ನು ಕಾರ್ ಹಾರ್ನ್ ಕೇಳಿ ಸ್ನೇಹಾಗೆ ಖುಷಿ ಆಗುತ್ತದೆ ಬಂದ್ರು ಎಂದು ಹೇಳುತ್ತಾಳೆ...
ಆಕೆ ವಸು ಗಂಡ ಚಂದ್ರುವನ್ನು ಯಾರಿಗೂ ತಿಳಿಯದ ಹಾಗೆ ಬರಲು ಹೇಳುತ್ತಾಳೆ. ಇದರಿಂದ ಮನೆಯವರಿಗೆ ಯಾರಿಗೂ ಚಂದ್ರು ಬರುತ್ತಾರೆ ಎಂಬ ಮಾಹಿತಿ ಇರುವುದಿಲ್ಲ. ಇನ್ನು ಯಾರು ಬಂದಿರಬಹುದು ಎಂದು ಯೋಚನೆ ಮಾಡುತ್ತಾ ಇರುವಾಗ ಚಂದ್ರು ಬರುತ್ತಾರೆ.. ಚಂದ್ರುವನ್ನು ನೋಡಿದ ವಸುಗೆ ಬಹಳ ಖುಷಿ ಆಗುತ್ತದೆ. ಇನ್ನು ಪುಟ್ಟಕ್ಕನ ಮನೆಗೆ ಬಂದ ಚಂದ್ರು ಹಾಯ್ ವಸು ಎಂದು ಹೇಳುತ್ತಾನೆ. ಈ ವೇಳೆ ಸುಮಾ ಅದೇನೋ ಮಿಸ್ಸಿಂಗ್ ಎಂದು ಅನ್ನಿಸುತ್ತಾ ಇತ್ತು ಆದರೆ ಇದೀಗ ಸೂಪರ್ ಎಂದು ಹೇಳುತ್ತಾಳೆ.
ಆದರೂ ಸ್ನೇಹಾ ಅಕ್ಕ ನೀನು ನನ್ನ ಐಡಿಯಾವನ್ನು ಕದ್ದು ಬಿಟ್ಟೆ ಅಲ್ವಾ ಎಂದು ಸುಮಾ ಹೇಳುತ್ತಾಳೆ. ನಾನು ಮುರಳಿ ಸರ್ ನ ಕರೆದ ಬಳಿಕ ನಿನಗೂ ಅಣ್ಣಯ್ಯನ ಕರೆಯಬೇಕು ಅನ್ನಿಸಿದ್ದು ಎಂದಾಗ ಸ್ನೇಹಾ ಹೋಗೆ ಸುಮ್ಮನೆ ಎಂದು ಹೇಳುತ್ತಾಳೆ. ಇನ್ನು ಎಲ್ಲರೂ ಊಟಕ್ಕೆ ಕೂರುತ್ತಾರೆ. ಈ ವೇಳೆ ಪುಟ್ಟಕ್ಕ ಚಂದ್ರುಗೆ ಅವ್ವ ಹೇಗಿದ್ದಾರೆ ಎಂದು ಕೇಳಿದಾಗ ಚೆನ್ನಾಗಿ ಇದ್ದಾರೆ, ನೀವು ಹೇಗಿದ್ದೀರಾ ಎಂದು ಕೇಳುತ್ತಾನೆ. ಪುಟ್ಟಕ್ಕ ನಾನು ಬಹಳ ಚೆನ್ನಾಗಿ ಇದ್ದೇನೆ ಎಂದು ಹೇಳುತ್ತಾರೆ. ಇನ್ನು ಕಂಠಿ ಚಂದ್ರು ಬಳಿ ಸರಿ ಕುಳಿತುಕೊಳ್ಳಿ ಬಾವ ಎಂದು ಕರೆದಾಗ ಸುಮಾಗೆ ಶಾಕ್ ಆಗುತ್ತದೆ.

ಸುಮಾ ಪ್ರಶ್ನೆಗೆ ಶಾಕ್ ಆದ ಕಂಠಿ
ಈ ವೇಳೆ ಸುಮಾ ಏನು ಬಾನಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಕಂಠಿಗೆ ಮಾತೇ ಬಾರದ ಹಾಗೆ ಆಗುತ್ತದೆ. ಈ ವೇಳೆ ಸ್ನೇಹಾ ನಮಗೆ ವಸು ಅಕ್ಕ ಅಲ್ವಾ ಅದಕ್ಕೆ ಅವರು ಬಾವ ಎಂದು ಕರೆಯುತ್ತಾ ಇದ್ದಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಸುಮ್ಮನೆ ಆಗುತ್ತಾಳೆ. ಸಿದ್ದೇಶ್ ಕಂಠಿ ಬಳಿ ಬಂದು ನೀವಿನ್ನೂ ಸಮಾಜಾಯಿಸಿ ಕೊಡಬೇಕೆಂದೆನು ಇಲ್ಲ ಇವರೇ ಎಲ್ಲರಿಗೂ ಸಮಜಾಯಿಷಿ ನೀಡುತ್ತಾರೆ ಎಂದು ಹೇಳಿದಾಗ ಕಂಠಿ ಮುಖ ಕೆಂಪಗೆ ಆಗುತ್ತದೆ. ಈ ವೇಳೆ ಸ್ನೇಹಾ ಚಂದ್ರು ಬಳಿ ನೀವು ಇಬ್ಬರು ಇವತ್ತು ಒಟ್ಟಿಗೆ ಕುಳಿತುಕೊಳ್ಳಿ ಎಂದು ಇಬ್ಬರನ್ನೂ ಒಟ್ಟಿಗೆ ಕೂರಿಸುತ್ತಾಳೆ.

ಎಲ್ಲರ ಜೊತೆ ಊಟಕ್ಕೆ ಕುಳಿತ ಸ್ನೇಹಾ
ಎಲ್ಲರೂ ಊಟ ಮಾಡುತ್ತಾ ಇರುವಾಗ ಸುಮಾ ಕಂಠಿ ಸ್ನೇಹಾನನ್ನು ನೋಡಿ ಕೊಂಚ ಗಡಿಬಿಡಿಗೊಳ್ಳುತ್ತ ಇರುತ್ತಾಳೆ. ಸಹನಾ ಮುರಳಿ ಜೋಡಿ ಒಂದು.. ಚಂದ್ರು ಅತ್ತಿಗೆ ಜೋಡಿ ಎರಡು.. ಕಂಠಿ ಸ್ನೇಹಾ ಮೂರು ಆಗಿರಬಹುದಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಕ್ಕನ ಮದುವೆ ಮುಗಿಯುವ ವೇಳೆ ಇವರಿಬ್ಬರೂ ಜೋಡಿ ಕ್ಲೋಸ್ ಆಗುತ್ತಾರೆ ಅನ್ನಿಸುತ್ತದೆ.. ನಿಧಾನವಾಗಿ ಇವರಿಬ್ಬರ ಮಧ್ಯೆ ಏನಿದೆ ಎಂದು ತಿಳಿಯಬೇಕು ಎಂದು ನಗುತ್ತಾ ಹೇಳುತ್ತಾಳೆ.

ನಿಶ್ಚಿತಾರ್ಥಕ್ಕೆ ಭರದ ಸಿದ್ಧತೆ
ಇನ್ನು ಸೀರೆ ಸೆಲೆಕ್ಷನ್ ಮಾಡಲು ಮುರಳಿ ಮೇಷ್ಟ್ರ ತಾಯಿ ಕೌಸಲ್ಯ ಬರುತ್ತಾರೆ. ಹೆಂಗಸರು ಸುತ್ತ ಕುಳಿತು ಸೀರೆ ನೋಡುತ್ತಾ ಇರುತ್ತಾರೆ. ಈ ವೇಳೆ ಅಲ್ಲಿಗೆ ಕಂಠಿ ಬರುತ್ತಾನೆ. ಕಂಠಿಯನ್ನು ನೋಡಿದ ಕೌಸಲ್ಯ ಹೊರಗೆ ಹೋಗಿ ಎನ್ನುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಹೊರಗೆ ಹೋಗುತ್ತಾನೆ. ಇದನ್ನೆಲ್ಲ ನೋಡಿದ ಸ್ನೇಹಾ ಕೂಡ ಕಂಠಿ ಬಳಿ ಬರುತ್ತಾಳೆ. ಕಂಠಿ ಬಳಿ ಬೇಸರ ಆಯಿತಾ ಎಂದು ಕೇಳುತ್ತಾಳೆ. ಕಂಠಿ ನನಗೆ ಎನು ಬೇಸರ ಇಲ್ಲ ಎನ್ನುತ್ತಾನೆ.

ಕೌಸಲ್ಯ ವಿರುದ್ದ ಕಿಡಿಕಾರಿದ ಸ್ನೇಹಾ
ಅಪ್ಪಿತಪ್ಪಿ ಮನೆಯಲಿ ಮುರಳಿ ಸರ್ ಹುಟ್ಟಿದ್ದಾರೆ ಬಂಗಾರಮ್ಮ ಮನೆಯಲ್ಲಿ ವಸು ಅತ್ತಿಗೆ ಹುಟ್ಟಿದ್ದಾರೆ ಎಂದು ಹೇಳುತ್ತಾರೆ ಇದನ್ನ ಕೇಳಿದ ಕಂಠಿಗೆ ಕೊಂಚ ಬೇಸರ ಆಗುತ್ತದೆ. ಅಮ್ಮ ಬಹಳ ಸೈಲೆಂಟ್ ಇನ್ನೂ ಒಂದು ಸಮಾಧಾನ ಅಂದರೆ ಅಕ್ಕ ಮದುವೆ ಆದ ಬಳಿಕವು ಈ ಊರಿಗೆ ಬರುತ್ತಾಳ, ಮುರಳಿ ಮೇಷ್ಟ್ರು ಕೆಲಸ ಮಾಡುವ ಕಾಲೇಜ್ ಇದೆ ಊರು ಅಲ್ವಾ ಎಂದು ಖುಷಿ ಪಡುತ್ತಾರೆ.. ಇನ್ನು ಸೀರೆ ಮನೆಗೆ ತರಿಸಿಕೊಂಡು ಎಲ್ಲರೂ ನೋಡುತ್ತಾ ಇರುತ್ತಾರೆ.. ಈ ವೇಳೆ ಚೈತ್ರ ಖುಷಿ ಪಡುತ್ತಾ ಇರುತ್ತಾಳೆ.. ನಿಮಗೆ ಯಾವ ತರದ ಸೀರೆ ಬೇಕು ಎಂದು ಕೇಳಿದಾಗ ಪುಟ್ಟಕ್ಕ ಅವರನ್ನೇ ಕೇಳಿ ಎಂದು ಹೇಳುತ್ತಾಳೆ. ಇನ್ನು ಕೌಸಲ್ಯ ದರ್ಪದಿಂದ ಹೊಸದಾಗಿ ಬಂದ ಸೀರೆ ತೋರಿಸಿ ಎಂದು ಹೇಳುತ್ತಾಳೆ.. ಪುಟ್ಟಕ್ಕ ಒಂದು ಸೀರೆ ತೋರಿಸಿ ಈ ಸೀರೆ ಚೆನ್ನಾಗಿ ಕಾಣಿಸುತ್ತದೆ ಎಂದು ಹೇಳುತ್ತಾಳೆ. ಆದರೆ ಕೌಸಲ್ಯ ಮಾತ್ರ ಜೋರಾಗಿ ಈ ಸೀರೆನಾ ನಮ್ಮಕಡೆ ಕೆಲಸದವರು ಇಂಥ ಸೀರೆ ಉಟ್ಟುಕೊಳ್ಳುವುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಚೈತ್ರಗೆ ಸಿಟ್ಟು ಬರುತ್ತದೆ.