Puttakkana Makkalu: ಸ್ನೇಹಾಳಿಗಾಗಿ ಅಮ್ಮನ ಮಾತನ್ನೇ ಧಿಕ್ಕಸುತ್ತಾನಾ ಕಂಠಿ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಬಂಗಾರಮ್ಮ, ಪುಟ್ಟಕ್ಕನ ಮಾತು ಕೇಳಿ ಸರಿಯಾಗಿ ಬೈಯ್ಯುತ್ತಿದ್ದಾಳೆ. ಪುಟ್ಟಕ್ಕ ನನ್ನ ಎದುರು ಹಾಕಿಕೊಂಡು ಇದ್ದಾಳೆ ಎಂದು ಕೋಪ ಮಾಡಿಕೊಂಡಿದ್ದಾಳೆ. ಆದರೆ ಪುಟ್ಟಕ್ಕ ಸತ್ಯದ ಪರವಾಗಿಯೇ ಇರುತ್ತಾಳೆ.

ಕಂಠಿ ಮಾಡಿದ ತಪ್ಪಿನಿಂದ ಸ್ನೇಹಾಗೆ ಬಹಳ ಅನ್ಯಾಯ ಆಗಿದೆ. ಆಕೆಗೆ ಇದರಿಂದ ಬಹಳ ನೋವಾಗಿದ್ದರೂ ಬಂಗಾರಮ್ಮ ಮಾತ್ರ ನನ್ನ ಮಗನದ್ದು ಏನು ತಪ್ಪು ಇಲ್ಲ. ತಪ್ಪಿರುವುದು ಮಾತ್ರ ಸ್ನೇಹಾಳದ್ದೇ ಎಂದು ಹೇಳಿದಾಗ ಸ್ನೇಹಾಗೆ ಮಾತ್ರ ಅದೆಲ್ಲವನ್ನೂ ತೆಗೆದುಕೊಳ್ಳಲು ಬಹಳ ಕಷ್ಟ ಆಗುತ್ತದೆ. ಹಾಗೆಯೇ ಪುಟ್ಟಕ್ಕ ಮಾತ್ರ ಬಂಗಾರಮ್ಮಗೆ ಸಮಾಧಾನದಿಂದ ಕಂಠಿ ಮಾಡಿದ ತಪ್ಪಿನ ಬಗ್ಗೆ ಹೇಳಿದರು ಬಂಗಾರಮ್ಮ ಅದ್ಯಾವುದನ್ನೂ ಕೇಳುವುದಿಲ್ಲ.

Kannada serial puttakkana makkalu written update on 4th july

ರಾಧಾಗೆ ನೋವಾಗಿದೆ. ನಾನು ಆಕೆಯನ್ನು ಸೊಸೆ ಮಾಡಿಕೊಳ್ಳುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಕಂಠಿ ನೀನು ಒಂದು ನಿರ್ಧಾರ ಮಾಡು ನಿನಗೆ ನಾನು ಬೇಕೋ ಸ್ನೇಹಾ ಬೇಕೋ ಎಂಬುವುದನ್ನು ನಿರ್ಧಾರ ಮಾಡಿ ಆಮೇಲೆ ಹೇಳು ಎಂದು ಹೇಳಿದಾಗ ಕಂಠಿ ಮೌನವಾಗಿ ಇರುತ್ತಾನೆ. ಬಂಗಾರಮ್ಮ ಮನೆಯೊಳಗೆ ಹೋಗುತ್ತಾಳೆ, ಇನ್ನೂ ಪುಟ್ಟಕ್ಕ ಮಾತ್ರ ಅಳುತ್ತಾಳೆ. ಕಂಠಿ ಬಳಿ ಕೈ ಮುಗಿದು ಬಿಡುತ್ತಾಳೆ.

ಕಂಠಿ ಬಳಿ ಬೇಡಿದ ಪುಟ್ಟಕ್ಕ

ಸ್ನೇಹಾ ನಿಮಗೆ ಅಷ್ಟೊಂದು ಇಷ್ಟ ಆಗಿದ್ದರೆ, ಮನೆಯವರ ಬಳಿ ಒಪ್ಪಿ ಮದುವೆ ಆಗಬೇಕಿತ್ತು. ಆದರೆ ನೀವು ಈ ತರ ಮದುವೆ ಆಗಿದ್ದರಿಂದ ಎಲ್ಲರಿಗೂ ಬಹಳ ಕಷ್ಟ ಆಗುತ್ತಿದೆ ಎಂದಾಗ ಕಂಠಿ ಪುಟ್ಟಕ್ಕನ ಬಳಿ ನನ್ನ ಕ್ಷಮಿಸು ಅವ್ವ.. ನಾನು ಇನ್ನೂ ತಡ ಮಾಡಿದರೆ ಸ್ನೇಹಾ ನನಗೆ ಯಾವತ್ತೂ ಸಿಗುವುದು ಇಲ್ಲ ಎಂದು ಅಂದುಕೊಂಡು ನಾನು ಮದುವೆ ಆದೆ. ಆಕೆಯನ್ನು ನಾನು ಬಹಳ ಪ್ರೀತಿ ಮಾಡುತ್ತೇನೆ ಕ್ಷಮಿಸಿ ಬಿಡಿ, ಎಂದು ಹೇಳಿತ್ತಾನೆ. ಆಗ ಪುಟ್ಟಕ್ಕ ಹೇಳುತ್ತಾಳೆ ಕಂಠಿ ನೀನು ಮಾಡಿದ ತಪ್ಪು ಕ್ಷಮಿಸಲು ಆಗುತ್ತಾ? ಎಂದಾಗ ಕಂಠಿಗೆ ಮಾತೇ ಹೊರಡದ ಹಾಗೆ ಆಗುತ್ತದೆ.

Kannada serial puttakkana makkalu written update on 4th july

ಪುಟ್ಟಕ್ಕನ ಬಳಿ ಕ್ಷಮೆ ಕೇಳಿದ ಕಂಠಿ

ಇನ್ನೂ ಪುಟ್ಟಕ್ಕ, ಸ್ನೇಹಾ ಬಗ್ಗೆ ಹೇಳುತ್ತಾಳೆ. ನಿಮ್ಮನ್ನು ಸ್ನೇಹಾ ಬಹಳ ಪ್ರೀತಿಸುತ್ತಿದ್ದಾಳೆ. ಆಕೆಗೆ ನೀವು ಸುಳ್ಳು ಹೇಳಿದ್ದೀರಿ ಎನ್ನುವುದು ಬಹಳ ಕೋಪ ಬಂದಿದೆ. ಆದರೆ ಆಕೆಗೆ ನಿಮ್ಮ ಮೇಲೆ ಬಹಳ ಪ್ರೀತಿ ಇದೆ. ಇದೀಗ ಕೋಪದಿಂದ ಆಕೆಯ ಜೀವನ ಹಾಳು ಮಾಡಿಕೊಳ್ಳಲು ಬಹುದು, ನೀವು ಆಕೆಯನ್ನು ಸಮಾಧಾನ ಪಡಿಸಬೇಕು. ದಯವಿಟ್ಟು ಹೇಗಾದರೂ ಮಾಡಿ ನನ್ನ ಬಳಿ ಕ್ಷಮೆ ಕೇಳುವುದು ಬಿಟ್ಟು ಆಕೆಯ ಬಳಿ ಕ್ಷಮೆ ಕೇಳಿ. ಆಕೆ ಕ್ಷಮಿಸುವುದು ಇಲ್ಲ.. ಆದರೆ ನೀವು ಮಾತ್ರ ಆಕೆಯ ಬಳಿ ಕ್ಷಮೆ ಕೇಳುತ್ತಾ ಇರಿ ಆಕೆ ಒಪ್ಪಿಗೆ ಒಪ್ಪುತ್ತಾಳೆ ಎಂದು ಹೇಳಿ ಅಲ್ಲಿಂದ ಅಳುತ್ತಾ ಹೋಗುತ್ತಾಳೆ ಪುಟ್ಟಕ್ಕ.

More from Filmibeat

English summary
Kannada serial puttakkana makkalu written updated on 4th july. here is detials about Bangaramma fire on Puttakka. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X