Puttakkana Makkalu: ತಳ್ಳುಗಾಡಿಯಿಂದ ಮತ್ತೆ ಶುರುವಾಯಿತು ಪುಟ್ಟಕ್ಕನ ಕನಸು, ಮೆಸ್‌ಗೆ ಮರು ಜೀವ ನೀಡಿದ ಕಂಠಿ

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಸ್ಥಿತಿ ನೋಡಲು ಆಗದೆ ಕಂಠಿ ಹೊಸ ಪ್ಲಾನ್ ಮಾಡುತ್ತಾನೆ. ಹೇಗಾದರೂ ಮಾಡಿ ಪುಟ್ಟಕ್ಕನ ಕನಸನ್ನು ನನಸು ಮಾಡಬೇಕು ಎನ್ನುವ ಯೋಚನೆ ಮಾಡುತ್ತಾ ಇರುತ್ತಾನೆ. ನನ್ನ ತಾಯಿ ಯಾವತ್ತೂ ಬೇಸರ ಮಾಡಿಕೊಳ್ಳಬಾರದು ಎನ್ನುವ ಸ್ನೇಹಾ ಪಾಲಿಗೆ ಅಮ್ಮನೇ ಎಲ್ಲಾ.

ಆಕೆ ಸರ್ವಸ್ವ ಆದರೆ ಕಂಠಿಗೆ ಪುಟ್ಟಕ್ಕನನ್ನು ಕಂಡರೆ ಬಹಳ ಗೌರವ. ಪುಟ್ಟಕ್ಕನ ಮೆಸ್ ಎಂದರೆ ಎಲ್ಲರಿಗೂ ಫೇಮಸ್ ಹಾಗೆಯೇ ತನ್ನ ಅತ್ತೆ ಎಂದಿನಂತೆ ಕೆಲಸ ಮಾಡುತ್ತಾ ಹಣ ಗಳಿಸುತ್ತಾ ಇದ್ದರೆ ಅದೆಲ್ಲವನ್ನೂ ನೋಡುವುದೇ ಒಂದು ಖುಷಿ ಎಂದು ಕಂಠಿ ಪ್ಲ್ಯಾನ್ ಮಾಡಿ ತಳ್ಳುಗಾಡಿಯಲ್ಲಿ ಯಾಕೆ ಮೆಸ್ ಶುರು ಮಾಡಬಾರದು ಎಂದುಕೊಂಡು ಎಲ್ಲಾ ಅರೆಂಜ್‌ಮೆಂಟ್ ಮಾಡುತ್ತಾನೆ. ಹಾಗೆಯೇ ಬೆಳ್ಳಂಬೆಳಗ್ಗೆ ಸಹನಾ ಮನೆಯ ಎದುರು ರಂಗೋಲಿ ಹಾಕುತ್ತಾ ಇರುತ್ತಾಳೆ.

Kannada serial puttakkana makkalu written update on 4th October

ಆಗ ಕಂಠಿ ದಿನಸಿ ಸಮಾನು ಎಲ್ಲ ತೆಗೆದುಕೊಂಡು ಬಂದಿರುವುದನ್ನು ನೋಡಿದ ಸಹನಾ ಅಮ್ಮನನ್ನು ಕರೆದುಕೊಂಡು ಬರುತ್ತಾಳೆ. ಆಗ ಪುಟ್ಟಕ್ಕ ಮನೆಯ ಹೊರಗೆ ಬಂದು ನೋಡಿದಾಗ ಕಂಠಿ ತಳ್ಳು ಗಾಡಿ ಹಾಗೆಯೇ ಗ್ಯಾಸ್, ದಿನಸಿ ಹಾಗೆಯೇ ಜನರಿಗೆ ಕುಳಿತುಕೊಳ್ಳಲು ಬೆಂಚ್ ಕೂಡ ತಂದಿರುತ್ತಾನೆ. ಇದನ್ನು ಕಂಡ ಪುಟ್ಟಕ್ಕ ಓಡೋಡಿ ಕಂಠಿ ಬಳಿ ಬಂದು ಏನಪ್ಪ ಇದೆಲ್ಲ ನೀನು ಯಾಕೆ ಮಾಡುತ್ತಾ ಇದ್ದೀಯಾ ಇದೆಲ್ಲವನ್ನೂ ನೀನು ಮಾಡಬೇಡ ಎಂದೆಲ್ಲ ಹೇಳುತ್ತಾರೆ.

ಕಂಠಿ ಬಳಿ ಓಡೋಡಿ ಬಂದ ಪುಟ್ಟಕ್ಕ

ಇದನ್ನು ಕೇಳಿದ ಕಂಠಿ ತನ್ನ ಅತ್ತೆಯ ಬಳಿ ನೀವು ನನ್ನನ್ನು ನಿಮ್ಮ ಮಗ ಅಂದುಕೊಂಡಿಲ್ವಾ? ಬಾಯಿ ಮಾತಿನಲ್ಲಿ ಮಾತ್ರ ಮಗ ಅನ್ನುತ್ತೀರಾ? ಮಗ ಆದವನು ತಾಯಿಗೆ ಇದೆಲ್ಲವನ್ನೂ ಮಾಡಿ ಕೊಡುತ್ತಾನೆ. ಅದು ಆತನ ಕರ್ತವ್ಯ ಆಗಿ ಇರುತ್ತದೆ ಎಂದೆಲ್ಲ ಹೇಳುತ್ತಾರೆ.

Kannada serial puttakkana makkalu written update on 4th October

ಕಂಠಿ ಮಾತಿಗೆ ತಲೆಬಾಗಿದ ಪುಟ್ಟಕ್ಕ

ಇದೆಲ್ಲವನ್ನೂ ಕೇಳಿದ ಪುಟ್ಟಕ್ಕ ಸುಮಳನ್ನು ಕರೆಯುತ್ತಾ ಇರುತ್ತಾಳೆ ಅಳಿಯಂದಿರು ಬಂದಿದ್ದಾರೆ ಟೀ ಕೊಡು ಎಂದು ಜೋರಾಗಿ ಹೇಳಿದಾಗ ಕಂಠಿ ಅದೆಲ್ಲ ಬೇಡ ಎಂದು ಹೇಳುತ್ತಾನೆ. ಆ ಬಳಿಕ ಮುರಳಿ ಕೂಡ ಕಂಠಿಗೆ ಸಹಾಯ ಮಾಡುತ್ತಾನೆ.

ಪುಟ್ಟಕ್ಕನ ಮನೆಯಲ್ಲಿ ಮನೆ ಮಾಡಿದ ಸಂಭ್ರಮ

ಆ ಬಳಿಕ ಗ್ಯಾಸ್‌ನಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ಕೂಡ ಮಾಡಲಾಗಿದೆ. ಇದೆಲ್ಲವನ್ನೂ ನೋಡಿದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಮುರಳಿ ಕೂಡ ತನ್ನ ಅತ್ತೆಯ ಬಳಿ ನಾವು ನಿಮ್ಮ ಅಳಿಯಂದಿರು ಅಲ್ಲ, ನಾವು ನಿಮ್ಮ ಮನೆಯ ಮಕ್ಕಳು ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಪುಟ್ಟಕ್ಕಗೆ ಹಾಗೆಯೇ ಮನೆಯ ಮಂದಿಗೆ ಬಹಳ ಖುಷಿ ಆಗುತ್ತದೆ. ಇನ್ನೂ ಮಗನಂತೆ ಇರುವ ಅಳಿಯಂದಿರು ಪುಟ್ಟಕ್ಕಗೆ ಸಿಕ್ಕಿದ್ದು ಬಹಳ ಒಳ್ಳೆಯದು ಎಂದು ಊರವರೆಲ್ಲ ಮಾತನಾಡುವುದು ಪುಟ್ಟಕ್ಕಗೆ ಇನ್ನೂ ಖುಷಿ ನೀಡುತ್ತದೆ.

More from Filmibeat

English summary
Kannada serial puttakkana makkalu written update on 4th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X