Puttakkana Makkalu:ಸ್ನೇಹಾ ಮಾತಿಗೆ ಚಂದ್ರು ಅಸಮಾಧಾನ; ಸ್ನೇಹಾ ಪ್ರೀತಿ ವಿಚಾರ ಚಂದ್ರುಗೆ ತಿಳಿಯಿತಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನಸೂರೆಗೊಳ್ಳುತ್ತಾ ಇದೆ. ಇದೀಗ ಮುರಳಿ ಹಾಗೂ ಸಹನಾ ಪುಟ್ಟಕ್ಕನ ಆಶೀರ್ವಾದ ಪಡೆದುಕೊಂಡುಕೊಂಡಿದ್ದಾರೆ. ಸಹನಾ ತನ್ನ ಅಮ್ಮನ ಆಶಿರ್ವಾದ ಪಡೆದು ಬಹಳ ಖುಷಿ ಪಡುತ್ತಾಳೆ
ಬಳಿಕ ಎಲ್ಲರೂ ಊಟಕ್ಕೆ ಕುಳಿತಾಗ ಸಹನಾ ಮಾತ್ರ ತನ್ನ ತಾಯಿಯ ಜೊತೆ ಊಟಕ್ಕೆ ಕೂರುತ್ತೇನೆ ಎಂದು ಹೇಳುತ್ತಾಳೆ. ಆಗ ಪುಟ್ಟಕ್ಕ ಬೇಡ ಬೇಡ, ನೀನು ನನ್ನೊಂದಿಗೆ ಊಟಕ್ಕೆ ಕೂರುವುದು ಬೇಡ ನೀನು ಅಳಿಯಂದಿರ ಜೊತೆ ಊಟಕ್ಕೆ ಕುಳಿತುಕೋ ಎಂದು ಹೇಳಿ ಕುಳಿತುಕೊಳ್ಳಲು ಹೇಳುತ್ತಾಳೆ. ಬಳಿಕ ಸಹನಾ ನಾಚುತ್ತಾ ಮೇಷ್ಟ್ರ ಹತ್ತಿರ ಕೂರುತ್ತಾಳೆ.

ಆ ಬಳಿಕ ಊಟ ಮಾಡುತ್ತಾರೆ. ಇನ್ನು ಸ್ನೇಹಾ ಎಲ್ಲರಿಗೂ ಬಡಿಸಿ ಆದ ಬಳಿಕ ಕಂಠಿ ಹತ್ತಿರ ಬಂದು ಊಟಕ್ಕೆ ಕೂರುತ್ತಾಳೆ. ಆಗ ಚಂದ್ರುಗೆ ಒಂಥರಾ ಮುಜುಗರ ಆಗುತ್ತದೆ. ಇನ್ನು ಎಲ್ಲರೂ ಊಟ ಮಾಡಿ ಕೈ ತೊಳೆಯುತ್ತಾ ಇರುತ್ತಾರೆ. ಇನ್ನು ಸ್ನೇಹಾ ಕೈ ತೊಳೆಯಲು ಬರುತ್ತಾಳೆ. ಆಗ ಕಂಠಿ ನಿಮ್ಮನ್ನು ಒಂದು ಸರ್ಪ್ರೈಸ್ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ ಬರುತ್ತೀರಾ ಎಂದೆಲ್ಲ ಹೇಳಿದಾಗ ಸ್ನೇಹಾ ಮಾತ್ರ ಅಕ್ಕ ಇದ್ದಾಳೆ ಅದು ಹೇಗೆ ಬರಲು ಸಾಧ್ಯ ಎಂದೆಲ್ಲ ಹೇಳುತ್ತಾಳೆ.
ಆದರೂ ಕಂಠಿ ಮಾತ್ರ ಬಹಳ ಒತ್ತಾಯ ಮಾಡಿದ್ದಕ್ಕೆ ಸ್ನೇಹಾ ಒಪ್ಪಿಕೊಳ್ಳುತ್ತಾಳೆ. ಇನ್ನೂ ಚಂದ್ರು ಬಳಿಗೆ ಬಂದ ಸ್ನೇಹಾ ಅಣ್ಣ ನಾನು ಹೊರಗೆ ಹೋಗಿ ಬರುತ್ತೇನೆ ನೀನು ಈಗಲೇ ಹೊರಡುತ್ತಿಯಾ ಅಥವಾ ನಂತರ ಹೊರಡುತ್ತಿಯಾ ಎಂದಾಗ ಚಂದ್ರುಗೆ ಒಂಥರಾ ಅನ್ನಿಸಿ ಬಿಡುತ್ತದೆ. ಇದೇನು ಅಂತ ನೀನು ಒಂದು ವಿಚಾರ ಹೇಳಬೇಕು ಎಂದು ಹೇಳಿದ್ದೆ ಅಲ್ವಾ ಏನದು ಎಂದು ಕೇಳಿದಾಗ ಸ್ನೇಹಾ ಮಾತ್ರ ಇನ್ನೊಂದು ದಿನ ಹೇಳುತ್ತೇನೆ ಅಣ್ಣಯ್ಯ ಎಂದು ಹೇಳಿ ತರಾತುರಿಯಲ್ಲಿ ಹೊರಡುತ್ತಾಳೆ.

ಇನ್ನು ಕಂಠಿ ಮಾತ್ರ ಬಹಳ ಖುಷಿ ಪಟ್ಟುಕೊಂಡು ಪಯಣ ಮುಂದುವರೆಸುತ್ತಾನೆ. ಸಹನಾ ಊಟ ಮಾಡಿ ಕೈ ತೊಳೆಯುತ್ತಾ ಇರುವಾಗ ಅಲ್ಲಿಗೆ ಬಂದ ಕಾಳಿಯನ್ನು ನೋಡಿ ಏನು ಕಾಳಿ ಹೇಗಿದ್ದೀಯಾ ಎಂದು ಕೇಳಿದಾಗ ಕಾಳೀಗೆ ಬಹಳ ಖುಷಿ ಆಗುತ್ತದೆ. ಕಾಳಿ ಆಕೆಯ ಮಾತನ್ನು ಕೇಳಿ ಅದೇ ನೆನಪಲ್ಲಿ ಇರುತ್ತಾನೆ.
ಇನ್ನು ರಾಜೇಶ್ವರಿ ಮಾತ್ರ ಕೌಸಲ್ಯ ಬಳಿ ಮಾತನಾಡುತ್ತಾ ಇರುತ್ತಾಳೆ. ಸಹನಳನ್ನು ಪುಟ್ಟಕ್ಕನ ಮನೆಗೆ ಕಳುಹಿಸುವುದಿಲ್ಲ ಎಂದು ಹೇಳುತ್ತ ಇದ್ದೀಯಾ ಅಲ್ವಾ ಅದು ಯಾಕೆ ಹೀಗೆ ಆಡುತ್ತಾ ಇದ್ದೀರಾ ಎಂದೆಲ್ಲ ಕೇಳುತ್ತಾಳೆ. ಇದನ್ನು ಕೇಳಿದ ಕೌಸಲ್ಯ ಮಾತ್ರ ಕೊಂಚ ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ರಾಜೇಶ್ವರಿ ಅವರೇ ಎನಿದೆಲ್ಲ ನೀವು ಅದೆಲ್ಲ ಕೇಳುವ ಅಗತ್ಯ ಇಲ್ಲ, ನೀವು ಆಸ್ತಿ ಆಸೆಗಾಗಿ ಎಲ್ಲವನ್ನೂ ಹಾಳು ಮಾಡಿದಿರಿ ಇದೀಗ ಕರೆ ಮಾಡು ನಮಗೆ ಮಾತನಾಡುತ್ತಿರ ಎಂದೆಲ್ಲ ಹೇಳಿದಾಗ ರಾಜೇಶ್ವರಿ ಮುಖದ ಮೇಲೆ ರಪ್ ಎಂದು ಏಟು ಬಿದ್ದ ಹಾಗೆ ಅನ್ನಿಸುತ್ತದೆ. ಬಳಿಕ ಸುಮ್ಮನೆ ಆಗುತ್ತಾಳೆ. ಆ ಬಳಿಕ ರಾಜಿ ತಾನು ಮಾಡಿದ ಕೆಲಸಕ್ಕೆ ಬೇಸರ ವ್ಯಕ್ತಪಡಿಸುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











