Puttakkana Makkalu: ಸ್ನೇಹಾ ನೋಡಿ ನಕ್ಕ ರಾಜೇಶ್ವರಿ ಮಾತಿಗೆ ಕೋಪಗೊಂಡ ಸ್ನೇಹಾ ಮಾಡಿದ್ದಾದರೂ ಏನು?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಕುತೂಹಲಕರವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪುಟ್ಟಕ್ಕನ ಮನೆಗೆ ಕಂಠಿ ಬರುತ್ತಾನೆ. ಕಂಠಿಯನ್ನು ನೋಡಿದ ಕೂಡಲೇ ಸ್ನೇಹಾ ಕೂಗಾಡಿದರೂ ಇಲ್ಲಿಂದ ಖಾಲಿ ಮಾಡುವಂತೆ ಸೂಚನೆ ನೀಡಿದರೂ ಕಂಠಿ ಮಾತ್ರ ಅಲ್ಲಿಂದ ಹೋಗದೆ ಇರುವುದನ್ನು ಕಂಡ ಸ್ನೇಹಾ ಸಾಯುವ ಮಾತು ಆಡುತ್ತಾಳೆ.

ಇದೆಲ್ಲವನ್ನೂ ಕೇಳಿದ ಕಂಠಿ ಅಲ್ಲಿಂದ ಹೊರಡಲು ಅನುವಾಗುತ್ತನೆ. ಕಂಠಿ ಅದೆಷ್ಟೇ ಬಾರಿ ಸ್ನೇಹಾ ಬಳಿ ಮಾತನಾಡಲು ಪ್ರಯತ್ನ ಪಟ್ಟರೂ ಆಕೆ ಮಾತ್ರ ಇನ್ನು ಮೇಲೆ ಈ ಮನೆ ಬಳಿ ಹಾಗೆಯೇ ಮೆಸ್ ಬಳಿ ಇನ್ನೆಲ್ಲೂ ಸುಳಿದಾಡಬೇಡಿ ಎಂದು ಹೇಳುತ್ತಾಳೆ.

Kannada serial Puttakkana Makkalu written update on 5th july

ಇನ್ನು ಕಂಠಿ ಅಲ್ಲಿಂದ ಹೊರಟು ಹೋದ ಬಳಿಕ ಅಲ್ಲಿಯೇ ಮರೆಯಲ್ಲಿ ನಂಜಮ್ಮ ಇದೆಲ್ಲವನ್ನೂ ನೋಡುತ್ತಾ ಇರುತ್ತಾಳೆ. ಕಂಠಿ ಹೋದ ಬಳಿಕ ನಂಜಮ್ಮ ಪುಟ್ಟಕ್ಕನ ಮನೆಗೆ ಬಂದಾಗ ಆಕೆಗೆ ಏ.ನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ ಸ್ನೇಹಾ ಬಳಿ ಮಾತನಾಡಿದಾಗ ಪುಟ್ಟಕ್ಕ ನಂಜಮ್ಮ ಬಳಿ ಹೇಳುತ್ತಾಳೆ . ನಂಜಮ್ಮ ನೀನೇನು ಇದರ ಬಗ್ಗೆ ಮಾತನಾಡಲು ಹೋಗಬೇಡ ಸುಮ್ಮನಿರು ಎಂದು ಹೇಳಿದಾಗ ಪುಟ್ಟಕ್ಕನ ಬಾಯಿ ಮುಚ್ಚಿಸುತ್ತಾರೆ.

ಪುಟ್ಟಕ್ಕ ನೀನು ಬಂಗಾರಮ್ಮ ಸೇರಿಕೊಂಡು ಇದೆಲ್ಲ ಆಟ ಆಡಿದಿರಿ ಇದೆಲ್ಲ ಬೇಕಾ ಎಂದು ಯೋಚನೆ ಮಾಡಬೇಕಿತ್ತು. ಇಲ್ಲವಾದರೆ ಇನ್ನೂ ಅದ್ದೂರಿಯಾಗಿ ಸ್ನೇಹಾ ಮದುವೆ ಆಗುತ್ತಿತ್ತು ಎಂದು ಹೇಳಿದಾಗ ಸ್ನೇಹಾ ಹೇಳುತ್ತಾಳೆ ನಾನು ಈ ಮದುವೆ ಆಗುತ್ತಾ ಇರಲಿಲ್ಲ, ಆತ ಯಾರು ಎಂದು ನನಗೆ ತಿಳಿದಿಲ್ಲ ಎಂದು ಜೋರಾಗಿ ಹೇಳಿದಾಗ ನಂಜಮ್ಮ ಹೇಳುತ್ತಾಳೆ.

ಆತ ಯಾರು ಗೊತ್ತಿಲ್ಲ ಮದುವೆ ಆಗಲ್ಲ ಆಂತಿಯ ಇದೀಗ ಅವನು ಕಟ್ಟಿದ ತಾಳಿ ನಿನ್ನ ಕತ್ತಲ್ಲಿ ಇರುವುದು ಎಂದು ಹೇಳಿದಾಗ ಸ್ನೇಹಾಗೆ ಮಾತೇ ಹೊರಡದ ಹಾಗೆ ಆಗುತ್ತದೆ. ಇನ್ನೂ ನಂಜಮ್ಮ ಅಲ್ಲಿಂದ ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ರಾಜೇಶ್ವರಿ ಬರುತ್ತಾಳೆ. ಇನ್ನೂ ಪುಟ್ಟಕ್ಕನ ಮನೆಗೆ ಹೋಗುವ ಮೊದಲು ನಂಜಮ್ಮ ಬಂಗಾರಮ್ಮ ಗೆ ಕರೆ ಮಾಡುತ್ತಾಳೆ ಕರೆ ಸ್ವೀಕಾರ ಮಾತನಾಡಿದ ಬಂಗಾರಮ್ಮ ಗೆ ಮಾತ್ರ ನಂಜಮ್ಮ ಕರೆ ಮಾಡಿದ್ದಾಳೆ ಎಂದು ಮೊದಲಿಗೆ ತಿಳಿಯುವುದು ಇಲ್ಲ. ಆ ಬಳಿಕ ಧ್ವನಿಯಲ್ಲಿ ಗುರುತು ಹಿಡಿಯುತ್ತಾಳೆ.

ಬಂಗಾರಮ್ಮ ಕೋಪದಲ್ಲಿ ಇರುವಾಗಲೇ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗುತ್ತದೆ . ಬಂಗಾರಮ್ಮ ಗೆ ನಂಜಮ್ಮ ಅಂದರೆ ಮೊದಲಿನಿಂದಲೂ ಅಷ್ಟಕಷ್ಟೆ . ಆದರೆ ಇದೀಗ ಕೋಪ ಇನ್ನಷ್ಟು ಹೆಚ್ಚಾಗಿದೆ. ಇನ್ನೂ ರಾಜೇಶ್ವರಿ ಪುಟ್ಟಕ್ಕನ ಮನೆಗೆ ಬಂದು ಗಲಾಟೆ ಮಾಡುತ್ತಾಳೆ. ಸ್ನೇಹಾ ಅವಸ್ಥೆ ಕಂಡು ಜೋರಾಗಿ ನಗುತ್ತಾ ಇದ್ದಾಳೆ. ಆಕೆಗೆ ಆಶಿರ್ವಾದ ಮಾಡಲು ಬಂದಿದ್ದೀನಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಮಾತ್ರ ಬಹಳ ಬೇಸರಗೊಂಡು ಇರುತ್ತಾಳೆ. ಇನ್ನೂ ಒಳಗೆ ಇರುವ ಸ್ನೇಹಾ ಮನಸ್ಸನ್ನು ಇನ್ನಷ್ಟು ಕೆರಳಿಸಿದೆ ರಾಜೇಶ್ವರಿ ಮಾತುಗಳು. ಮುಂದೇನು ಕಾದು ನೊಡಬೇಕಿದೆ.

More from Filmibeat

English summary
Kannada serial puttakkana makkalu written updated on 5th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X