Puttakkana Makkalu: ಸುಟ್ಟು ಬೂದಿಯಾದ ಮೆಸ್ ನೋಡಿ ಕಣ್ಣೀರಿಟ್ಟ ಪುಟ್ಟಕ್ಕ, ಸಮಾಧಾನ ಮಾಡಿದ ಮಕ್ಕಳು
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ ಮೆಸ್ ಬೆಂಕಿಗೆ ಆಹುತಿ ಆಗಿ ಪುಟ್ಟಕ್ಕ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಗೆ ಹೋದ ಬಂಗಾರಮ್ಮಗೆ ಪುಟ್ಟಕ್ಕನ ಮಕ್ಕಳು ಹಾಗೂ ನಂಜಮ್ಮ ಸೇರಿಕೊಂಡು ಗಲಾಟೆ ಮಾಡಿ ಚೀಮಾರಿ ಹಾಕಿದ್ದಾರೆ. ಬಂಗಾರಮ್ಮ ಮಾತ್ರ ಏನು ಮಾತನಾಡದೆ ಅಲ್ಲಿಂದ ಮಗನನ್ನು ಕರೆದಿದ್ದಾರೆ, ಆದರೆ ಆತ ಅಮ್ಮನ ಮೇಲೆಯೇ ಅನುಮಾನ ಪಡುತ್ತಿದ್ದಾನೆ.
ಮಗನ ಅನುಮಾನ ಬಂಗಾರಮ್ಮಗೆ ಬಹಳ ನೋವು ಕೊಟ್ಟಿದೆ. ಮಾರಾ ಪುಟ್ಟಕ್ಕನ ಮೆಸ್ ಬಳಿ ಇದ್ದಿದ್ದೇನೋ ನಿಜ ಆದರೆ ಆತನೇ ಬೆಂಕಿ ಕೊಟ್ಟಿದ್ದಾನೋ ಅಥವಾ ಇಲ್ಲವೇ ಎಂಬುವದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದರೆ ಬಂಗಾರಮ್ಮ ತನ್ನ ಮಗ ನನ್ನನ್ನು ನಂಬಲಿಲ್ಲ ಎನ್ನುವ ವಿಚಾರ ಮನೆಯಲ್ಲಿ ಹೇಳಿದಾಗ ಅವರ್ಯಾರೂ ನಂಬದೆ ಇರುವುದು ಬಂಗಾರಮ್ಮಗೆ ಬಹಳ ನೋವು ನೀಡಿದೆ.

ಬಂಗಾರಮ್ಮ ನೋವಿನಲ್ಲಿ ಮೆತ್ತಗೆ ತನ್ನ ರೂಮ್ ಕಡೆ ಹೋಗುತ್ತಾರೆ.. ಇನ್ನೂ ಕಂಠಿಗೆ ಪುಟ್ಟಕ್ಕನ ಮೇಲೆ ಎಷ್ಟು ಪ್ರೀತಿ ಇದೆಯೋ, ಸ್ನೇಹಾ ಮೇಲೆ ಅದೆಷ್ಟೇ ಪ್ರೀತಿ ಇದ್ದರೂ ಆತ ಕೂಡ ತನ್ನ ತಾಯಿಯ ಮಾತಿನತ್ತ ಗಮನ ಕೊಡದೆ ಬಹಳ ನೋವು ಪಡುತ್ತಿದ್ದಾನೆ.
ಮನದಲ್ಲಿ ಸಂಕಟ ಪಡುತ್ತಿರುವ ಪುಟ್ಟಕ್ಕ
ಅದೃಷ್ಟವಶಾತ್ ಪುಟ್ಟಕ್ಕ ಬದುಕಿ ಉಳಿಯುತ್ತಾಳೆ. ಆದರೆ ಇನ್ನೆಂದಿಗೂ ಪುಟ್ಟಕ್ಕಗೆ ಆಘಾತಕಾರಿ ವಿಚಾರ ಹೇಳಿದರೆ ಪುಟ್ಟಕ್ಕ ಸಾಯಲು ಬಹುದು ಎಂದು ಮಕ್ಕಳಿಗೆ ಎಚ್ಚರಿಕೆಯನ್ನು ನೀಡುತ್ತಾರೆ ವೈದ್ಯರು. ಇನ್ನೂ ಪುಟ್ಟಕ್ಕನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರುತ್ತಾರೆ.. ಆಗಲು ಪುಟ್ಟಕ್ಕ ತನ್ನ ಮೆಸ್ ನೋಡಿ ಬಹಳ ನೋವು ಪಡುತ್ತಾಳೆ..

ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡಿದ ಪುಟ್ಟಕ್ಕ
ಅಯ್ಯೋ ಇನ್ನು ನನ್ನ ಗತಿ ಏನು ಎಂದು ಅಳುತ್ತಾ ಇರುತ್ತಾಳೆ ಇದನ್ನೆಲ್ಲ ನೋಡಿದ ಮುರಳಿ ಸಹನಾ ಆಕೆಯ ಬಳಿ ಬಂದು, ಸಹನಾ ಅಮ್ಮನನ್ನು ಒಳಗೆ ಕರೆದುಕೊಂಡು ಹೋಗು ಎಂದೆಲ್ಲ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಸಹನಾ ಆಯಿತು ಎಂದು ಹೇಳುತ್ತಾಳೆ.. ಆದರೆ ಪುಟ್ಟಕ್ಕಗೆ ಮೆಸ್ ಉರಿದು ಹೋಯಿತು ಎಂದು ಬಹಳ ಬೇಸರ ಮಾಡಿಕೊಂಡಿದ್ದಾರೆ.
ಪುಟ್ಟಕ್ಕನ ಮೆಸ್ ಬಗ್ಗೆ ಬಂಗಾರಮ್ಮಗೆ ಮರುಕ
ಇತ್ತ ಬಂಗಾರಮ್ಮ ಪುಟ್ಟಕ್ಕನ ಮೆಸ್ ನಾನು ಹಾಳು ಮಾಡಿಲ್ಲ ಎಂದು ಹೇಳುತ್ತ ಬಹಳ ಬೇಸರ ಪಟ್ಟುಕೊಂಡಿದ್ದಾರೆ. ಆಕೆಯನ್ನು ಸಮಾಧಾನ ಮಾಡಲು ಯಾರು ಬಾರದೆ ಇರುವುದು ಕೂಡ ಆಕೆಗೆ ನೋವು ತರುತ್ತದೆ. ಮಗನನ್ನು ಬಹಳ ಮುದ್ದಿನಿಂದ ಬೆಳೆಸಿದ್ದ ಬಂಗಾರಮ್ಮಗೆ ಮಗನೇ ತಿರುಗಿ ನಿಂತು ಬಿಟ್ಟಿದ್ದಾನೆ ಎಂದು ತಿಳಿದರೆ ಇನ್ನೆಷ್ಟು ನೋವಾಗಬೇಡ. ಆದರೆ ಅದೆಲ್ಲವನ್ನೂ ಮನದಲ್ಲಿ ನುಂಗಿಕೊಂಡು ಸುಮ್ಮನೆ ಇರುತ್ತಾಳೆ. ಇನ್ನೂ ಪುಟ್ಟಕ್ಕನ ಮೆಸ್ ಒಳಗೆ ಕಂಠಿ ಹಾಗೂ ಆತನ ಗೆಳೆಯರು ಸ್ವಚ್ಚ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ಸ್ನೇಹಾ ಬಹಳ ಕಠೋರವಾಗಿ ಹೇಳುತ್ತಾಳೆ. ಇದೆಲ್ಲವನ್ನೂ ಯಾರು ಮಾಡಬೇಕಾಗಿ ಇಲ್ಲ ಎಂದು ಹೇಳಿದಾಗ ಕಂಠಿ ಸುಮ್ಮನಿದ್ದರೆ, ಅಲ್ಲಿಗೆ ಬಂದ ಸಹನಾ ಕಂಠಿ ಮಾಡಿದ ಸಹಾಯವನ್ನು ಮನವರಿಕೆ ಮಾಡುತ್ತಾಳೆ.


Click it and Unblock the Notifications











