Puttakkana Makkalu: ಬಡ್ಡಿ ವಿಷಯ ತೆಗೆದು ಮಾತಿನಲ್ಲೇ ಬಂಗಾರಮ್ಮಗೆ ಏಟು ಕೊಟ್ಟ ಸ್ನೇಹಾ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ . ಇದೀಗ ಬಂಗಾರ ಮ್ಮ ಹಾಗೂ ಸ್ನೇಹಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಇದೀಗ ಡೈನಿಂಗ್ ಟೇಬಲ್ ನಲ್ಲಿ ಎಲ್ಲರೂ ಊಟ ಮಾಡಿಕೊಂಡು ಕುಳಿತಿದ್ದರು. ಆಗ ಕಂಠಿ ಯೋಚನೆ ಮಾಡುತ್ತಾ ಇರುತ್ತಾನೆ. ಸ್ನೇಹಾ ಎಷ್ಟು ಅಂತ ಹಣ್ಣುಗಳನ್ನು ತಿಂದು ಜೀವನ ನಡೆಸುತ್ತಾಳೆ
ಇಲ್ಲಿ ಊಟ ಆದರೂ ಬಂದು ಮಾಡಬಾರದ ಎಂದು ಯೋಚನೆ ಮಾಡುತ್ತಾ ಇರುತ್ತಾನೆ ಇದನ್ನು ನೋಡಿದ ಬಂಗಾರ ಮ್ಮ ಎನು ಪ್ರಶ್ನೆ ಮಾಡದೇ ಕಂಠಿ ಬಳಿ ಒಂದು ಮಾತು ಆಡದೆಸುಮ್ಮನೆ ಇರುತ್ತಾಳೆ. ಇನ್ನೂ ಬಂಗಾರ ಮ್ಮ ಅವರ ಗಂಡ ಹೇಳುತ್ತಾರೆ ಸ್ನೇಹಾ ಏನಕ್ಕೆ ಊಟಕ್ಕೆ ಬಂದೆ ಇಲ್ಲ. ಅವಳನ್ನು ಕರೆ ಎಂದು ಹೇಳಿದಾಗ ಸ್ನೇಹಾ ಮೆತ್ತಗೆ ಕೆಳಗಿಳಿದು ಬರುತ್ತಾಳೆ ಅದನ್ನು ನೋಡಿದ ಬಂಗಾರ ಮ್ಮ ಗೆ ಮಾತ್ರ ಬಹಳ ಕೋಪ ಬರುತ್ತದೆ.

ಬಂಗಾರ ಮ್ಮ ನನ್ನು ನೋಡಿದ ಸ್ನೇಹಾ ಗ ಕೋಪ ಬರುತ್ತದೆ. ಇನ್ನೂ ವಸು ಹೇಳುತ್ತಾಳೆ ಸ್ನೇಹಾ ಬಂದ್ಯಾ ಬಾ ಊಟ ಮಾಡು ಎಂದು ಹೇಳುತ್ತಾಳೆ. ಆಗ ಕಂಠಿ ಕೂಡ ಹೇಳುತ್ತಾನೆ ಏಷ್ಟು ಹೊತ್ತು ಹಣ್ಣನ್ನು ತಿನ್ನುತ್ತಾ ಇರುವುದು.. ಬನ್ನಿ ಊಟ ಮಾಡಿ ಎಂದು ಹೇಳಿದಾಗ ಬಂಗಾರ ಮ್ಮ ಕೆಕ್ಕರಿಸಿ ಕಂಠಿ ಯನ್ನೂ ನೋಡಿದಾಗ ಕಂಠಿ ಮೆತ್ತಗೆ ತಲೆ ತಗ್ಗಿಸಿ ಕುಳಿತುಕೊಂಡು ಇರುತ್ತಾನೆ .
ಇನ್ನೂ ಸ್ನೇಹಾ ವಸು ಬಳಿ ಹೇಳುತ್ತಾಳೆ ಬೇಡ ಅತ್ತಿಗೆ ನಾನೇ ಅನ್ನ ಮಾಡಿಕೊಳ್ಳುತ್ತೇನೆ ಎಂದು ಹೇಳಿದಾಗ ವಸು ಹೇಳುತ್ತಾಳೆ ಬಾ ಸ್ನೇಹಾ ಊಟ ಮಾಡು ನಿನಗೂ ಸೇರಿಸಿ ನಾನು ಊಟ ಮಾಡಿದ್ದೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಬೇಡ ಅತ್ತಿಗೆ ನಾನು ನಿಯತ್ತಾಗಿ ದುಡಿದ ದುಡ್ಡಿನಲ್ಲಿ ಊಟ ಮಾಡುತ್ತೇನೆ. ಬಡ್ಡಿ ದುಡ್ಡಲ್ಲಿ ನಾನು ಅನ್ನ ತಿನ್ನುವುದು ಇಲ್ಲ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಬಂಗಾರ ಮ್ಮ ಗೆ ಮಾತ್ರ ಕೋಪ ಉಕ್ಕಿ ಹರಿಯುತ್ತದೆ. ಇನ್ನೂ ಸಿದ್ದೇಶ್ ಹಾಗೂ ಆತನ ಗೆಳೆಯರು ಬಂಗಾರ ಮ್ಮ ನ ಪಕ್ಕ ಬಂದು ನಿಂತಿರುತ್ತಾರೆ. ಇನ್ನೂ ಬಂಗಾರ ಮ್ಮ ಜೋರಾಗಿ ಹೇಳುತ್ತಾಳೆ ನನ್ನ ಮಗ ಮಗಳು ನನ್ನ ಮಾತು ಕೇಳುವುದು ಇಲ್ಲ. ಇನ್ನೂ ನೀವು ಕೂಡ ಹಾಗೆನ.. ನನ್ನ ಮಾತಿಗೆ ಉತ್ತರ ಇಲ್ವಾ ಎಂದೆಲ್ಲ ಹೇಳುತ್ತಾಳೆ.
ನೀವು ಬಡ್ಡಿ ವಸೂಲಿ ಮಾಡದೇ ಎಷ್ಟು ದಿನ ಆಯಿತು.. ಯಾಕೆ ಎಲ್ಲಾ ಪೆಂಡಿಂಗ್ ಇದೆ. ನೀವು ಕೂಡ ನನ್ನ ಮಕ್ಕಳ ಹಾಗೆ ನನ್ನ ಮಾತು ಕೇಳುವುದು ಇಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿದ್ದೇಶ್ ಮಾತನಾಡದೆ ಮೌನ ಆಗಿ ಇರುತ್ತಾಳೆ . ಇನ್ನೂ ಜೋರಾಗಿ ಹೇಳುತ್ತಾಳೆ. ನೀವು ಬಡ್ಡಿ ವ್ಯವಹಾರ ಮಾಡಿಲ್ಲ ಅಂದರೆ ಬೇರೆ ಆಳುಗಳನ್ನು ನಾನು ಇಟ್ಟುಕೊಳ್ಳುತ್ತಾನೆ. . ಎಂದಾಗ ಕಂಠಿ ಹೇಳುತ್ತಾನೆ ಎನು ಬೇಡ ನಾಳೆಯಿಂದ ನವೆ ಬಡ್ಡಿ ವ್ಯವಹಾರ ಮಾಡುತ್ತೇವೆ ಎಂದು ಹೇಳುತ್ತಾರೆ
ಇದನ್ನು ಕೇಳಿದ ಬಂಗಾರ ಮ್ಮ ಕೊಂಚ ಮೌನವಾಗಿ ಇರುತ್ತಾರೆ ಯಾಕೆ ಎಂದರೆ ಕಂಠಿ ಎಂದರೆ ಬಂಗಾರ ಮ್ಮ ಗೆ ಇದೀಗ ಬಹಳ ಸಿಟ್ಟು. ಆದ ಕಾರಣ ಎನು ಮಾತನಾಡದೆ ಅಲ್ಲಿಂದ ಬಂಗಾರ ಮ್ಮ ಹೋಗುತ್ತಾರೆ. ಇದನ್ನೆಲ್ಲ ಮೇಲಿನಿಂದ ನಿಂತ ಸ್ನೇಹಾ ಎಲ್ಲಾ ಕೇಳಿಸಿಕೊಂಡು ಇರುತ್ತಾಳೆ. ಆಕೆಗೆ ಕಂಠಿ ಮೇಲೆ ಸಿಟ್ಟು.. ಎಷ್ಟು ಹೇಳಿದರೂ ಉಗಿದರು ಬುದ್ದಿ ಬರುವ ಹಾಗೆ ಕಾಣುತ್ತಿಲ್ಲ.. ಇದರಿಂದ ಎನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಬಂಗಾರ ಮ್ಮ ಕೆಕ್ಕರಿಸಿ ಸ್ನೇಹಾ ಮುಖ ನೋಡುತ್ತಾರೆ.


Click it and Unblock the Notifications











