Puttakkana Makkalu: ಸ್ನೇಹಾ ಬಳಿ ನಿಜ ಹೇಳಿಯೇಬಿಟ್ಟ ಕಂಠಿ?
ಪುಟ್ಟಕ್ಕನ ಮನೆಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಇನ್ನು ಈ ಕಾರ್ಯಕ್ರಮಕ್ಕೆ ಪುಟ್ಟಕ್ಕನ ಗಂಡ ಗೋಪಾಲ ಬರುತ್ತಾನೆ. ರಸಮಂಜರಿ ಕಾರ್ಯಕ್ರಮಕ್ಕೆ ಬಂದು ಭರ್ಜರಿ ಸ್ಟೆಪ್ ಹಾಕುತ್ತಾನೆ. ಇದನ್ನು ನೋಡಿದ ಪುಟ್ಟಕ್ಕಗೆ ಕೊಂಚ ದಿಗಿಲು ಆದರೂ ಸ್ನೇಹಾ ಮಾತ್ರ ಬಹಳ ಕೋಪದಿಂದ ಅಪ್ಪನ ಕಡೆ ನೋಡುತ್ತಾಳೆ. ಇನ್ನು ಡಾನ್ಸ್ ಮುಗಿದ ಬಳಿಕ ಒಂದೆರಡು ಮಾತು ಹೇಳಲು ಹೇಳುತ್ತಾರೆ.
ಆ ವೇಳೆ ಸಹನಳನ್ನು ಕರೆದ ಗೋಪಾಲ ನನ್ನ ಮಗಳು ಗಂಡನ ಮನೆಯಲ್ಲಿ ಖುಷಿ ಆಗಿ ಬಾಳಲಿ ಇದುವೇ ನನ್ನ ಆಸೆ ಎಂದು ಹೇಳುತ್ತಾನೆ. ಆ ಬಳಿಕ ತನ್ನ ಹೆಂಡತಿ ಬಗ್ಗೆ ಹಲವಾರು ಪ್ರಶ್ನೆ ಕೇಳುತ್ತಾರೆ. ಗೋಪಾಲ ತನ್ನ ಹೆಂಡತಿ ಕಂಡರೆ ಭಯ ಇಲ್ಲ ಆದರೆ ಹೆದರಿಕೆ ಇದೆ ಎಂದೆಲ್ಲ ಹೇಳುತ್ತ ಇರುತ್ತಾನೆ. ಇದನ್ನು ಕಂಡ ರಾಜೇಶ್ವರಿಗೆ ಬಹಳ ಕೋಪ ಬರುತ್ತದೆ. ಸ್ಟೇಜ್ ಗೆ ಬಂದ ರಾಜೇಶ್ವರಿಯನ್ನು ಕಂಡ ಗೋಪಾಲ ಬಹಳ ಭಯಗೊಂಡು ನಡುಗಿ ಹೋಗುತ್ತಾನೆ. ಇನ್ನು ವೇದಿಕೆಯಿಂದ ಗೋಪಾಲನನ್ನು ಎಳೆದುಕೊಂಡು ಹೋದ ರಾಜಿಯನ್ನು ಕಂಡ ಪುಟ್ಟಕ್ಕ ಗೆ ಕೊಂಚ ಭಯ ಆಗುತ್ತದೆ.
ಇನ್ನು ಮನೆಗೆ ಬಂದ ರಾಜಿ ಗೋಪಾಲನಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇದನ್ನು ನೋಡಿದ ಗೋಪಾಲ ನಿನ್ನ ಮೇಲಿನ ಪ್ರೀತಿಯಿಂದ ಆಗಿ ನಾನು ಅಲ್ಲಿಗೆ ಹೋಗಿ ಮಾತನಾಡಿದ್ದು, ನೀನು ಯಾರ ಕಣ್ಣಿಗೂ ವಿಲನ್ ಆಗಿ ಕಾಣಬಾರದು ಎಂದು ಅಂದುಕೊಂಡು ಅಲ್ಲಿ ಹೋಗಿದ್ದೆ ಎಂದೆಲ್ಲ ಸುಳ್ಳು ಬಿಡುತ್ತಾನೆ. ತನ್ನ ತಂದೆ ಸುಳ್ಳು ಬಿಡುತ್ತಾ ಇರುವುದನ್ನು ಕಂಡ ಪುರುಷೋತ್ತಮ ಮನದಲ್ಲಿ ಅಪ್ಪ ಬಹಳ ಚಾಲಾಕಿ ಇದ್ದಾರೆ ಎಂದುಕೊಳ್ತಾನೆ. ಇನ್ನು ಇದನ್ನೆಲ್ಲ ಕೇಳಿ ರಾಜಿ ಕೊಂಚ ಸಮಾಧಾನಗೊಳ್ತಾಳೆ.

ಗೋಪಾಲನ ಮಾತಿಗೆ ಮಣಿದ ರಾಜಿ
ಈ ವೇಳೆ ಕಾಳಿಯು ಒಂದೆರಡು ಪ್ರಶ್ನೆಯನ್ನು ಹಾಕುತ್ತಾನೆ. ಹಾಗಾದರೆ ಯಾಕೆ ನನ್ನ ಕುಡಿಸಿದ್ದು ಎಂದಾಗ ಗೋಪಾಲ ನಿಮ್ಮ ಎದುರೇ ನಾನು ಕುದಿದಿದ್ದಿನಿ ಅಲ್ವಾ ಎಂದಾಗ ಕಾಳಿ ಮಾತನಾಡದೆ ಸುಮ್ಮನೆ ಇರುತ್ತಾನೆ. ಹೀಗೆ ಗೋಪಾಲ ಸುಳ್ಳು ಮೇಲೆ ಸುಳ್ಳು ಹೇಳಿ ಹೆಂಡತಿ ಮೈದುನನ ಬಾಯಿ ಮುಚ್ಚಿಸಿ ಬಿಡುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಕೌಸಲ್ಯ ರಾಜೇಶ್ವರಿ ಅವರೇ ನಿಮ್ಮ ಬಳಿ ಮಾತನಾಡಬೇಕು ಹೊರಗೆ ಬನ್ನಿ ಎಂದಾಗ ರಾಜಿಗೆ ಕೌಸಲ್ಯ ನೋಡಿ ಆಶ್ಚರ್ಯ ಆಗುತ್ತದೆ.

ಮನೆಗೆ ಬಂದ ಕೌಸಲ್ಯ
ಅದೇನು ಎತ್ತ ಎಂದು ತಿಳಿದುಕೊಂಡು ರಾಜಿ ಮದುವೆ ಯಾವುದೇ ಕಾರಣಕ್ಕೂ ನಡೆಯಲು ಬಿಡುವುದು ಇಲ್ಲ ಎಂದು ಹೇಳುತ್ತ ಇರುತ್ತಾಳೆ. ಕೌಸಲ್ಯ ಅಲ್ಲಿಂದ ಹೊರಟು ಹೋದ ಬಳಿಕ ರಾಜಿ ಮಾತ್ರ ಕುಹಕ ನಗುವಿನಿಂದ ಒಳ ಬಂದಾಗ ಕಾಳಿ ಹಲವಾರು ಪ್ರಶ್ನೆ ಮಾಡುತ್ತಾನೆ. ಅದಕ್ಕೆಲ್ಕೇಳಿಕೊಳ್ಳುತ್ತಾರ ಜಿ ಮಲಗಲು ಹೋಗುತ್ತಾಳೆ. ಇತ್ತ ಕಂಠಿ ತನ್ನ ಅಮ್ಮನಿಗೆ ಕರೆ ಮಾಡಿ ನಾನು ಇಂದು ಬರುವುದಿಲ್ಲ ಪುಟ್ಟಕ್ಕ ಮನೆಯಲ್ಲಿ ಉಳಿಯುತ್ತೇನೆ ಎಂದು ತಿಳಿಸಿದ ಬಳಿಕ ಪುಟ್ಟಕ್ಕ ಬಂಗಾರಮ್ಮಗೆ ಕರೆ ಮಾಡಿ ಅರಶಿನ ಶಾಸ್ತ್ರಕ್ಕೇ ಬರಬೇಕು ಎಂದು ಪರಿ ಪರಿ ಆಗಿ ಕೇಳಿಕೊಳ್ಳುತ್ತಾಳೆ.

ಬಂಗಾರಮ್ಮನನ್ನು ಅರಶಿನ ಶಾಸ್ತ್ರಕ್ಕೆ ಬರ ಹೇಳಿದ ಪುಟ್ಟಕ್ಕ
ಬಂಗಾರಮ್ಮ ನನ್ನ ಮಗನೂ ಅಲ್ಲಿಯೇ ಇದ್ದಾನೆ ಎಂದಾಗ ಪುಟ್ಟಕ್ಕ ನಿಮ್ಮ ಮಗ ಇಲ್ಲಿಗೆ ಬಂದಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಬಂಗಾರಮ್ಮ ಮನದಲ್ಲಿ ಪುಟ್ಟಕ್ಕ ಸುಳ್ಳು ಹೇಳುವುದಿಲ್ಲ ಏನೋ ಇರಬೇಕು ಎಂದುಕೊಂಡು ಸುಮ್ಮನೆ ಆಗುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಮೌನವಾಗಿ ಇರುತ್ತಾನೆ. ಇನ್ನು ಸಹನಾ ಹೂ ಕಟ್ಟುತ್ತಾ ಇರಬೇಕಾದರೆ ಮಲಗಲು ಹೇಳುತ್ತಾರೆ. ನೀನು ಇವತ್ತು ನಿದ್ದೆ ಮಾಡದೆ ಹೋದರೆ ನಾಳೆ ನಿದ್ದೆಗೆಡಬೇಕಾಗುತ್ತದೆ ಎಂದಾಗ ಎಲ್ಲರೂ ನಗುತ್ತಾರೆ. ಆದರೆ ಸುಮಾಗೆ ಇದೆಲ್ಲ ಅರ್ಥ ಆಗಲೇ ಇಲ್ಲ. ಈ ವೇಳೆ ಸಹನಾ ಮಾತ್ರ ನಾಚಿ ನೀರಾಗಿದ್ದಳು.

ಸ್ನೇಹಾ ಬಳಿ ನಿಜ ಹೇಳಲು ಬಂದ ಕಂಠಿ
ಈ ವೇಳೆ ಅಲ್ಲಿಗೆ ಬಂದ ಕಂಠಿ ಸ್ನೇಹಾ ಬಳಿ ನಿಮ್ಮ ಹತ್ರ ಮಾತನಾಡಬೇಕು ಎಂದಾಗ ಸ್ನೇಹಾ ಬರುವುದಿಲ್ಲ ಎಂದು ಹೇಳಿದರೂ ಕೊನೆಗೆ ಒಪ್ಪಿಕೊಳ್ಳುತ್ತಾನೆ. ಕಂಠಿಗೆ ನಾನೇ ದೊರೆ ಎಂದು ಹೇಳಲು ಬಹಳ ಭಯ ಆಗುತ್ತದೆ. ಆದರೂ ಧೈರ್ಯ ಮಾಡಿ ಸ್ನೇಹಾ ಮುಂದೆ ಒಪ್ಪಿಕೊಳ್ಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











