Don't Miss!
- News
ವಿಧಾನಸಭಾ ಚುನಾವಣೆ: ಹೆಬ್ಬಾಳ ಕ್ಷೇತ್ರದಲ್ಲಿ 40,000 ಸ್ಮಾರ್ಟ್ ಟಿವಿ ಉಡುಗೊರೆ ನೀಡಿದ ಕಾಂಗ್ರೆಸ್ ಶಾಸಕ
- Sports
IND vs NZ 3rd T20: ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಟೀಂ ಇಂಡಿಯಾ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೌಸಲ್ಯ ,ರಾಜಿ ಕುತಂತ್ರದಿಂದ ನಿಶ್ಚಿತಾರ್ಥ ಮುರಿದು ಬೀಳುತ್ತಾ?
ಪುಟ್ಟಕ್ಕನ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಮನೆ ಮಾಡಿದೆ. ದೇವರಿಗೆ ಕೈ ಮುಗಿಯುತ್ತಾ ಇರಬೇಕಾದರೆ ವಸು ಹಾಗೂ ಕಂಠಿ ಅಲ್ಲಿಗೆ ಬರುತ್ತಾರೆ. ನಾವು ರೆಡಿ ಆಗಿ ಬಂದೆವು ಎಂದು ವಸು ಜೋರಾಗಿ ಹೇಳುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಹಾಗೂ ಅವರ ಮಕ್ಕಳು ಅರೆರೆ ನೀವು ಇಷ್ಟು ಬೇಗ ಬಂದ್ರ ಬನ್ನಿ ಎಂದು ಖುಷಿ ಪಡುತ್ತಾರೆ. ಸ್ನೇಹಾ ಕೂಡ ಖುಷಿ ಪಡುತ್ತಾಳೆ. ಸಹನಳನ್ನು ನೋಡಿದ ವಸು ಸಹನಾ ಅವರೇ ಬನ್ನಿ ನಿಮ್ಮನ್ನು ರೆಡಿ ಮಾಡುತ್ತೇನೆ ಎಂದು ಹೇಳುತ್ತಾಳೆ. ಆ ವೇಳೆ ಸುಮಾ ಕೂಡ ನಾನು ಬರುತ್ತೇನೆ ಎಂದು ಹೋಗುತ್ತಾಳೆ .
ಅದೇನು ಬೇಗ ಬೇಗ ಮಾಡಿ, ಆಮೇಲೆ ಗಂಡಿನ ಕಡೆಯವರು ಬಂದರೆ ತಪ್ಪಾಗುತ್ತದೆ, ಬೇಗ ಹೋಗಿ ಎಂದು ಪುಟ್ಟಕ್ಕ ಹೇಳುತ್ತಾರೆ. ಆಗ ಕಂಠಿಗೆ ಅಡುಗೆ ಕಡೆ ನೋಡಿಕೊಳ್ಳಲು ಪುಟ್ಟಕ್ಕ ಹೇಳುತ್ತಾಳೆ. ಇನ್ನು ಪುಟ್ಟಕ್ಕಗೆ ಇರುವುದು ಒಂದೇ ಚಿಂತೆ ತನ್ನ ಗಂಡ ಮಗಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರುತ್ತಾನ ಅಥವಾ ಇಲ್ಲವೋ ಎಂಬುವುದು. ಇನ್ನು ಮನದಲ್ಲಿ ಇವರು ಬರುತ್ತಾರಾ ಅಥವಾ ರಾಜೀಗೆ ಕರೆ ಮಾಡಿ ಹೇಳಬೇಕಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಗಂಡಿನ ಕಡೆಯವರೆಲ್ಲ್ಲ ಬಂದು ಮಗಳ ಅಪ್ಪ ಎಲ್ಲಿ ಎಂದರೆ ಏನು ಹೇಳುವುದು ಯೋಚನೆ ಮಾಡುತ್ತಾರೆ. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಈ ವೇಳೆ ಗಂಡಿನ ಕಡೆಯವರು ಕೂಡ ಬರುತ್ತಾರೆ.. ಕೌಸಲ್ಯ ಹಾಗೂ ಆಕೆಯ ಗಂಡ ಕೊಂಚ ಗಲಿಬಿಲಿಯಿಂದ ಬಂದರು. ಮುರಳಿ ಮಾತ್ರ ಮನದಲ್ಲಿ ನಿಶ್ಚಿತಾರ್ಥ ನಿರ್ವಿಘ್ನವಾಗಿ ನಡೆಯಲಿ ಎಂದು ದೇವರ ಬಳಿ ಬೇಡಿಕೊಳ್ಳುತ್ತಾನೆ..

ಉಂಗುರದ ಬಗ್ಗೆ ಕೊಂಕು ಮಾತು ಹೇಳಿದ ಕೌಸಲ್ಯ
ಏನು ಮೇಷ್ಟ್ರೇ ನಿಶ್ಚಿತಾರ್ಥದ ಸಮಯದಲ್ಲಿ ಎನು ಯೋಚನೆ ಮಾಡುತ್ತಾ ಇದ್ದೀರಾ, ನಗುನಗುತ್ತಾ ಇರಬಾರದ ಎಂದು ಕಂಠಿ ಹೇಳುತ್ತಾನೆ. ಇದನ್ನು ಕೇಳಿದ ಮೇಷ್ಟ್ರು ಕೊಂಚ ನಗುತ್ತಾರೆ. ಪೂಜಾರಿ ಉಂಗುರ ತೆಗೆದುಕೊಂಡು ಬನ್ನಿ ಪೂಜೆಗೆ ಇಡಬೇಕು ಎಂದು ಹೇಳಿದಾಗ ಪುಟ್ಟಕ್ಕ ತರುತ್ತೇನೆ ಎಂದು ಒಳಗೆ ಹೋಗುತ್ತಾಳೆ.. ಈ ವೇಳೆ ಕೌಸಲ್ಯ ಪುಟ್ಟಕ್ಕನ ಹಿಂದೆ ಹೋಗುತ್ತಾಳೆ. ಬಳಿಕ ದೇವರ ಮನೆಯಿಂದ ಉಂಗುರ ತೆಗೆದುಕೊಳ್ಳುವುದಕ್ಕೂ ಮೊದಲೇ ಕೌಸಲ್ಯ ಬರುತ್ತಾಳೆ .

ಅಮ್ಮನ ನಡವಳಿಕೆ ಕಂಡು ಮುರಳಿ ಬೇಸರ
ಬಳಿಕ ಮುರಳಿಗೆ ತಂದಿರುವ ಉಂಗುರ ಹೇಗಿದೆ ಎಂದು ನೋಡುತ್ತಾಳೆ. ಇದನ್ನು ನೋಡಿದ ಕೌಸಲ್ಯ ಈ ಉಂಗುರ ಎಷ್ಟು ಗ್ರಾಂನದ್ದು ತೂಕವೇ ಇಲ್ಲ ಎಂದಾಗ ಭಯ ಪಟ್ಟುಕೊಂಡು ಪುಟ್ಟಕ್ಕ ಯಾಕಮ್ಮ ಉಂಗುರ ಇಷ್ಟ ಆಗಿಲ್ವ ಆಗಿಲ್ಲ ಎಂದರೆ ಬದಲಾಯಿಸಿಕೊಳ್ಳುವ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೌಸಲ್ಯ ನಿಮ್ಮ ಮೇಲೆ ನಂಬಿಕೆ ಇತ್ತು ಚೆನ್ನಾಗಿದ್ದು ತೆಗೆದುಕೊಳ್ಳುತ್ತೀರಾ ಎಂದು ಅಂದುಕೊಂಡರೆ ನೀವು ಹೀಗಾ ಮಾಡುವುದು ಎಂದು ಹೇಳುತ್ತಾಳೆ. ಇಷ್ಟು ಮಾತನಾಡುವ ವೇಳೆ ಅಲ್ಲಿಗೆ ಎಲ್ಲರೂ ಬರುತ್ತಾರೆ. ಬಳಿಕ ಉಂಗುರದ ವಿಚಾರ ಕೌಸಲ್ಯ ತಕರಾರು ಎತ್ತುತ್ತ ಇದ್ದಾರೆ ಎಂದು ತಿಳಿದು ಮುರಳಿ ಮೇಷ್ಟ್ರು ಉಂಗುರ ನೋಡಿ ಉಂಗುರ ಚೆನ್ನಾಗಿ ಇದೆಯಲ್ಲ ಎಂದಾಗ ಕೌಸಲ್ಯ ತೂಕ ಇಲ್ಲ ಅಂತ ನಾನು ಹೇಳುತ್ತಿರುವುದು ಎಂದು ಹೇಳುತ್ತಾಳೆ.

ವಸು ಮಾತಿಗೆ ಹೆದರಿದ ಮೇಷ್ಟ್ರ ತಂದೆ
ಕಂಠಿ ಬಳಿಕ ವಸು ಮಾತನಾಡುತ್ತಾಳೆ. ಉಂಗುರ ಇಷ್ಟವಿಲ್ಲ ಎಂದಾದರೆ ಯಾಕೆ ಈ ಮಾತುಕತೆ, ಉಂಗುರ ಬದಲಾಯಿಸಿದರೆ ಆಯಿತು ಅದಕ್ಕೆ ಇಷ್ಟೆಲ್ಲ ರಂಪಾಟ ಬೇಕಾ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಮೇಷ್ಟ್ರ ತಂದೆ ಮೆತ್ತಗೆ ಎದ್ದು ಬಂದು ಹೆಂಡತಿಗೆ ಬುದ್ದಿ ಹೇಳುತ್ತಾನೆ. ಅವರೆಲ್ಲರೂ ಹಾಲ್‌ಗೆ ತೆರಳಿದ ಬಳಿಕ ಪುಟ್ಟಕ್ಕನ ಬಳಿ ಕೌಸಲ್ಯ ನಾವೇ ಉಂಗುರ ಬದಲಾವಣೆ ಮಾಡಿಕೊಳ್ಳುತ್ತೇವೆ, ಕೇಳಿದಷ್ಟು ಹಣ ಕೊಟ್ಟರೆ ಸಾಕು, ನಿಮ್ಮ ಗಂಡ ಬರುತ್ತಾರೆ ಅಲ್ವಾ ಎಂದು ಅಲ್ಲಿಂದ ಹೋಗುತ್ತಾಳೆ. ಆದರೆ ಪುಟ್ಟಕ್ಕ ಮಾತು ಬಾರದ ಮೂಗಿ ತರ ಇರುತ್ತಾಳೆ. ಇನ್ನು ರಾಜೀ ಗಂಡನ ಬಳಿ ಒಂದು ಎರಡು ಎಂದು ಎಣಿಸಲು ಹೇಳುತ್ತಾಳೆ. ಪುಟ್ಟಕ್ಕ ತನ್ನ ಗಂಡ ಬರುತ್ತಾನ ಇಲ್ಲವೋ ಎಂಬುವುದನ್ನು ತಿಳಿದುಕೊಳ್ಳಲು ಕರೆ ಮಾಡುತ್ತಾ ಇರುತ್ತಾಳೆ. ಆದರೆ ರಾಜೀ ಮಾತ್ರ ನಗುತ್ತಾ ಪುಟ್ಟಕ್ಕನ ಕರೆ ರಿಸೀವ್ ಮಾಡದೇ ಸುಮ್ಮನೆ ಇರುತ್ತಾಳೆ. ಇದನ್ನು ನೋಡಿದ ಆಕೆಯ ಗಂಡನಿಗೆ ಬಹಳ ಬೇಸರ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ ..