Puttakkana Makkalu: ರಾಜೇಶ್ವರಿ ಮಾತಿಗೆ ಬೇಸರಗೊಂಡ ಸ್ನೇಹಾ; ನಂಜಮ್ಮನ ಮಾತು ಕೇಳಿ ಪಂಚಾಯಿತಿ ಕರೆಯುತ್ತಾಳಾ ಪುಟ್ಟಕ್ಕ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬಂದಿದೆ ಇದೀಗ ರಾಜೇಶ್ವರಿ ಪುಟ್ಟಕ್ಕನ ಮನೆ ಮುಂದೆ ಬಂದು ಸ್ನೇಹಾ ಬಗ್ಗೆ ವಿಚಾರಣೆ ಮಾಡುತ್ತಾ ಇದ್ದಾಳೆ. ಪುಟ್ಟಕ್ಕ ನಿನ್ನ ಎರಡನೇ ಮಗಳು ಹೇಗಿದ್ದಾಳೆ. ಚೆನ್ನಾಗಿ ಇದ್ದಾಳ ಯಾವತ್ತೂ ನಿನ್ನ ಮನೆಗೆ ಬಂದರೆ ನಿನಗೆ ಬೈದರೆ ಅವಳೇ ಮುಂದೆ ಇರುತ್ತಿದ್ದಳು ಆದರೆ ಇವತ್ತು ಯಾಕೆ ಮನೆ ಹೊರಗೆಬರುತ್ತಿಲ್ಲ ಎಂದು ಜೋರಾಗಿ ನಗುತ್ತಾ ಇರಬೇಕಾದರೆ ಸ್ನೇಹಾ ಮನೆಯ ಹೊರಗೆ ಬಂದು ರಾಜೇಶ್ವರಿ ಬಳಿ ಜಗಳ ಮಾಡುತ್ತಾ ನಿಂತುಕೊಂಡು ಇರುತ್ತಾಳೆ.
ಇದನ್ನು ನೋಡಿದ ಪುಟ್ಟಕ್ಕ ಗೆ ಮಾತ್ರ ಎನು ಹೇಳಬೇಕು ಎಂದು ತಿಳಿಯದೇ ಅಳುತ್ತಾ ಇರುತ್ತಾಳೆ. ಇನ್ನೂ ಸ್ನೇಹಾ ರಾಜೀ ಬಳಿ ತನ್ನನು ತಾನು ಎಷ್ಟು ಸಮರ್ಥನೆ ಮಾಡಿಕೊಳ್ಳಬೇಕು ಅಷ್ಟರ ಮಟ್ಟಿಗೆ ಸಮರ್ಥನೆ ಮಾಡಿಕೊಂಡು ಇರುತ್ತಾಳೆ. ಆದರೆ ರಾಜೀ ಮಾತ್ರ ಕೊಂಕು ಮಾತುಗಳಿಂದ ನಿಂದಿಸಿದ್ದನ್ನು ಕಂಡ ಪುಟ್ಟಕ್ಕ ರಾಜೀ ಎಂದು ಎಷ್ಟೇ ಜೋರಾಗಿ ಕರೆದರು ಆಕೆ ಮಾತ್ರ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಇರುವುದನ್ನು ಕಂಡು ರಾಜೀ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ.

ಸ್ನೇಹಾ ಅದ್ಯಾವುದನ್ನೂ ಕೇಳಿಸಿಕೊಳ್ಳದೆ ಹೊರಟು ಹೋಗುತ್ತಾಳೆ. ಸ್ನೇಹಾ ಹೊರಟು ಹೋಗುವುದನ್ನು ನೋಡಿದ ರಾಜೀ ಹೇಳುತ್ತಾಳೆ. ಸ್ನೇಹಾ ಇದೆ ಮೊದಲ ಬಾರಿಗೆ ನನ್ನ ಜೊತೆ ಮಾತನಾಡಲು ಆಗದೆ ಹೋಗುತ್ತಿದ್ದಾಳೆ ಎಂದು ನಗುತ್ತಾಳೆ.
ಇದನ್ನು ನೋಡಿದ ಪುಟ್ಟಕ್ಕ ಗೆ ಬಹಳ ಬೇಸರ ಆಗುತ್ತದೆ. ಇನ್ನೂ ರಾಜೀ ಅಲ್ಲಿಂದ ಹೋದ ಬಳಿಕ ನಂಜಮ್ಮ ಸ್ನೇಹಾ ಗೆ ಸಮಾಧಾನ ಮಾಡಲು ಬಂದಾಗ ಪುಟ್ಟಕ್ಕ ಅದನ್ನು ತಡೆಯುತ್ತಾರೆ. ಯಾಕೆ ಪುಟ್ಟಕ್ಕ ನಾನು ಮಾತನಾಡ ಬಾರದ ಎಂದು ನಂಜಮ್ಮ ಕೇಳಿದಾಗ ಸ್ನೇಹಾ ನೇರವಾಗಿ ನಂಜಮ್ಮ ನ ಬಳಿ ಒಂದು ಪ್ರಶ್ನೆ ಕೇಳುತ್ತಾಳೆ.
ನಂಜಮ್ಮ ನಿಮಗೆ ನನ್ನ ಮೇಲೆ ಪ್ರೀತಿ ಇದ್ದರೆ ನೀವೇ ನಾನು ಪ್ರೀತಿ ಮಾಡುತ್ತಿರುವ ಹುಡುಗ ಕಂಠಿ ಎಂದು ಹೇಳುತ್ತಿದ್ದೀರಿ. ನಿಮ್ಮಿಬ್ಬರ ದ್ವೇಷದ ನಡುವೆ ನಾನು ಸಿಕ್ಕಿ ಹಾಕಿಕೊಂಡು ಇದ್ದೇನೆ ಎಂದು ಅಳುತ್ತಾ ಒಳಗೆ ಹೋಗುತ್ತಾಳೆ. ಪುಟ್ಟಕ್ಕ ನಂಜಮ್ಮ ನ ಬಳಿ ಮಾತನಾಡುತ್ತಾ ಇರಬೇಕಾದರೆ ನಂಜಮ್ಮ ಹೇಳುತ್ತಾಳೆ ಕಂಠಿ ಸ್ನೇಹಾ ಗೆ ತಾಳಿ ಕಟ್ಟಿಬಿಟ್ಟಿದ್ದಾನೆ.
ಇನ್ನೂ ಆ ಮನೆಯ ಸೊಸೆ ಆಕೆ ಎಂದು ಹೇಳಿದಾಗ ಪುಟ್ಟಕ್ಕ ಮಾತ್ರ ಹಾಗೆಯೇ ಅಂದುಕೊಂಡು ಇರುವುದನ್ನು ಕಂಡ ನಂಜಮ್ಮ ಗೆ ಖುಷಿ ಆಗುತ್ತದೆ ಆಗ ನಂಜಮ್ಮ ಹೇಳುತ್ತಾಳೆ. ಹಾಗಾದರೆ ಪುಟ್ಟಕ್ಕ ನೀನು ಪಂಚಾಯಿತಿ ಕರೆ ಎಂದು ಹೇಳಿದಾಗ ಮನೆಯವರಿಗೆಲ್ಲ ಭಯ ಆಗುತ್ತದೆ. ಇನ್ನೂ ಕಂಠಿ ಮಾತ್ರ ಸ್ನೇಹಾ ಬೈದಿದ್ದನ್ನೆ ನೆನಪು ಮಾಡಿಕೊಂಡು ಬಹಳ ಬೇಸರ ಮಾಡಿಕೊಂಡು ತೋಟದ ಬಳಿ ಒಬ್ಬನೇ ಕುಳಿತು ಇರಬೇಕಾದರೆ ಬಹಳ ಬೇಸರ ಆಗುತ್ತದೆ
ಆಗ ಅಲ್ಲಿಗೆ ಬಂದ ಸಿದ್ದೇಶ್ ಗೆ ಕಂಠಿಯನ್ನು ಸಮಾಧಾನ ಮಾಡಲು ಆಗುವುದಿಲ್ಲ. ಕೊನೆಗೆ ಕಂಠಿ ತಂಗಿ ಹಾಗೂ ಅವನ ತಂದೆ ಬರುತ್ತಾರೆ. ಮುಂದೇನು ಕಾದು ನೀಡಬೇಕಿದೆ


Click it and Unblock the Notifications











