Puttakkana Makkalu: ಗೋಪಾಲನ ಕೊರಳಪಟ್ಟಿ ಹಿಡಿದು ಅವಾಜ್ ಹಾಕಿದ ಕಂಠಿ!
ಪುಟ್ಟಕ್ಕ ಮಾಡಿದ ಒಂದೇ ತಪ್ಪಿಗೆ ಇದೀಗ ಸ್ನೇಹಾ ಕೈಯಲ್ಲಿ ಸರಿಯಾಗಿ ಸಿಕ್ಕಿ ಬಿದ್ದಿದ್ದಾಳೆ. ಸ್ನೇಹಾ ಈ ಮುಂಚೆಯೇ ಪುಟ್ಟಕ್ಕನ ಬಳಿ ನನ್ನ ಕೇಳದೇ ಯಾವ ನಿರ್ಧಾರ ಕೂಡ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರೂ ಪುಟ್ಟಕ್ಕ ರಾಜೇಶ್ವರಿ ಕೈಯಲ್ಲಿ ಸಿಕ್ಕಿ ಬಿದ್ದಿದ್ದು ದುರಂತವೇ ಸರಿ. ಇದೀಗ ಸ್ನೇಹಾ ರಾಜೇಶ್ವರಿ ಮೈ ಚಳಿ ಬಿಡಿಸಿದ್ದಾಳೆ. ಸ್ನೇಹಾ ರಾಜೇಶ್ವರಿಗೆ ಅವಾಜ್ ಹಾಕುತ್ತ ಇರುವ ವೇಳೆ ಆಕೆಯ ಮನೆಗೆ ಬಂದಿದ್ದ ಜನರು ರಾಜೇಶ್ವರಿ ಕಡೆ ನೋಡಿ ನಗುತ್ತಾ ಇರುತ್ತಾರೆ. ಯಾಕೆಂದರೆ ರಾಜೇಶ್ವರಿ ಪುಟ್ಟಕ್ಕನ ಮನೆಗೆ ಬಂದು ಆಕೆಯ ಮರ್ಯಾದೆಯನ್ನು ಆಕೆಯೇ ತೆಗೆದುಕೊಂಡ ಹಾಗೆಯೇ ಆಗುತ್ತದೆ. ಬಳಿಕ ಅಲ್ಲಿಂದ ಮೆತ್ತಗೆ ಕಾರಿನ ಕಡೆ ಹೆಜ್ಜೆ ಹಾಕುತ್ತಾಳೆ.
ಕಾರಿನ ಬಳಿ ನಿಂತಿದ್ದ ರಾಜೇಶ್ವರಿ ಗೋಪಾಲನ ಬಳಿಗೆ ಕಂಠಿ ಬರುತ್ತಾನೆ. ಬಳಿಕ ಗೋಪಾಲನ ಕತ್ತಿನ ಪಟ್ಟಿ ಹಿಡಿದು ನಿಮಗೆ ಒಂದು ಸಲ ಹೇಳಿದರೆ ಅರ್ಥ ಆಗುವುದೇ ಇಲ್ವಾ, ಈ ಸಲ ನಿಮಗೆ ಅವರೇ ಸರಿಯಾದ ಮರ್ಯಾದೆ ಮಾಡಿದ್ದಾರೆ ಇನ್ನೊಂದು ಸಲ ಅವರ ತಂಟೆಗೆ ಹೋದರೆ ನಾನು ಸುಮ್ಮನೆ ಬಿಡುವುದಿಲ್ಲ, ನಿನ್ನ ಹೆಂಡತಿಗೆ ನೀನೇ ಬುದ್ದಿ ಹೇಳು ಗೋಪಾಲ ನನ್ನ ಅಭಯ ಈ ಮನೆಗೆ ಯಾವತ್ತೂ ಇರುತ್ತದೆ ಯಾರಿಂದಲೂ ಕೂಡ ಏನೂ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಜಿ ಸಿಟ್ಟಾಗುತ್ತಾಳೆ.

ರಾಜಿ ಕಂಠಿ ಎದುರು ಎಗರಾಡಲು ಬಂದಾಗ ಗೋಪಾಲ ಆಕೆಯನ್ನು ತಡೆದು ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಾನೆ. ಇನ್ನು ಕಂಠಿ ತೋಟದಲ್ಲಿ ಕುಳಿತಿರಬೇಕಾದರೆ ಕೋಪಗೊಂಡ ಬಂಗಾರಮ್ಮ ಕಂಠಿಗೆ ಕರೆ ಮಾಡಿ ಬಯ್ಯುತ್ತಾ ಇರುತ್ತಾಳೆ. ಯಾಕೆ ನೀನು ಮಾರ್ಕೆಟ್ ಕಡೆ ಹೋಗಿಲ್ಲವಂತೆ ಎಂದಾಗ ಕಂಠಿ ಅಮ್ಮ ಮಾರ್ಕೆಟ್ ಬಳಿ ಹೋಗಿದ್ದೆ ಆದರೆ ಆ ವೇಳೆ ಪುಟ್ಟಕ್ಕನ ಮನೆಯಲ್ಲಿ ಸ್ವಲ್ಪ ಜಗಳ ನಡೆಯಿತು ಎಂದು ನಡೆದ ವಿಚಾರ ಎಲ್ಲಾ ಹೇಳುತ್ತಾನೆ.
ಇದನ್ನು ಕೇಳಿದ ಬಂಗಾರಮ್ಮ ಕೊಂಚ ರಾಜಿ ಮೇಲೆ ಕೋಪ ಮಾಡಿಕೊಂಡು ಕೆಲಸ ಮುಗಿಸಿ ಮನೆಗೆ ಬರುವಂತೆ ಬಂಗಾರಮ್ಮ ಕಂಠಿಗೆ ಹೇಳಿ ಫೋನ್ ಕಟ್ ಮಾಡಿ ಮನದಲ್ಲೇ ಯೋಚನೆ ಮಾಡುತ್ತಾಳೆ. ಅಯ್ಯೋ ನಾನೇ ತಪ್ಪು ತಿಳಿದುಕೊಂಡು ಬಿಟ್ಟೆ ಅಲ್ವಾ ನನ್ನ ಮಗನ ಬಗ್ಗೆ ಹೀಗೆಲ್ಲ ಯೋಚನೆ ಮಾಡಬಾರದಾಗಿತ್ತು ಎಂದು ಅಂದುಕೊಂಡು ಇರುತ್ತಾಳೆ. ಇನ್ನು ಸಹನಾ ಹಾಗೂ ಮುರಳಿ ದೇವಾಲಯಕ್ಕೆ ಬೈಕ್ ನಲ್ಲಿ ಹೋಗುತ್ತಿರುತ್ತಾರೆ.
ಮುರಳಿ ಭುಜದ ಮೇಲೆ ಕೈ ಇಟ್ಟು ಸಹನಾ ನಾಚಿ ನೀರಾಗಿರುತ್ತಾಳೆ. ಈ ವೇಳೆ ಊರ ಮಂದಿ ಎಲ್ಲಾ ಮೇಷ್ಟ್ರ ಬಳಿ ಕರೆದು ಮಾತನಾಡುತ್ತಾ ಇರುತ್ತಾರೆ. ಈ ವೇಳೆ ಸಹನಾಗೆ ಪುಟ್ಟಕ್ಕನ ನೆನಪಾಗಿ ಕರೆ ಮಾಡುತ್ತಾಳೆ. ಆದರೆ ಪುಟ್ಟಕ್ಕ ಸ್ನೇಹಾ ಫೋನ್ ರಿಸೀವ್ ಮಾಡಲೇ ಇಲ್ಲ. ಇದನ್ನು ನೋಡಿದ ಆಕೆಗೆ ಬಹಳ ಬೇಸರ ಆಗುತ್ತದೆ. ಬಳಿಕ ದೇವಾಲಯಕ್ಕೆ ಹೋಗಿ ದೇವರ ದರ್ಶನ ಎಲ್ಲಾ ಮುಗಿಸಿಕೊಂಡು ಬರುತ್ತಾರೆ. ಈ ವೇಳೆ ಪುನಃ ಶಾಂತವ್ವನಿಗೆ ಕರೆ ಮಾಡುತ್ತಾಳೆ. ಆಕೆ ಸಹನಾಗೆ ನಿಜ ವಿಚಾರ ತಿಳಿಸುತ್ತಾಳೆ. ಇದನ್ನು ಕೇಳಿದ ಸಹನಾಗೆ ಶಾಕ್ ಆಗುತ್ತದೆ. ಆಕೆ ಕೂಡಲೇ ಮನೆಯತ್ತ ತೆರಳುತ್ತಾಳೆ .

ಇನ್ನು ಪುಟ್ಟಕ್ಕನನ್ನು ಸ್ನೇಹಾ ತರಾಟೆಗೆ ತೆಗೆದುಕೊಂಡು ಬಿಡುತ್ತಾಳೆ. ಯಾಕೆ ಅಮ್ಮ ಹೀಗೆಲ್ಲ ಮಾಡಲು ಹೋದೆ ಎಂದೆಲ್ಲ ಕೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ರಾಜಿ ಮುಹೂರ್ತದ ಸಮಯದಲ್ಲಿ ನನ್ನ ಜೊತೆ ಬಹಳ ಕೆಟ್ಟದಾಗಿ ವರ್ತನೆ ಮಾಡಿದಳು. ಅದಕ್ಕೆ ಸಹಿ ಹಾಕಿ ಬಿಟ್ಟೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಅಮ್ಮ ನೀನು ಮಾಡಿದ್ದು ತಪ್ಪು ಅಮ್ಮ, ನಮ್ಮ ಬಳಿ ಒಂದು ಮಾತು ಹೇಳಿದ್ರೂ ಈ ಪರಿಸ್ಥಿತಿ ಬರುತ್ತಾ ಇರಲಿಲ್ಲ ಎಂದು ಹೇಳುತ್ತಾಳೆ. ಆ ವೇಳೆ ಸಹನಾ ಕೂಗಿದ ಹಾಗೆ ಪುಟ್ಟಕ್ಕಗೆ ಅನ್ನಿಸುತ್ತದೆ.


Click it and Unblock the Notifications











