Puttakkana Makkalu: ಅಣ್ಣನ ಬಳಿ ತನ್ನ ಪ್ರೀತಿ ವಿಚಾರ ಹಂಚಿಕೊಂಡ ಸ್ನೇಹಾಗೆ ಸಿಕ್ಕಿದ್ದು ಬೇಸರ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಇನ್ನೂ ಕುತೂಹಲ ಹೆಚ್ಚು ಮಾಡುತ್ತಿದೆ. ಇದೀಗ ಬಂಗಾರಮ್ಮ ಜೊತೆ ಜಗಳ ಮಾಡಿಕೊಂಡ ಸ್ನೇಹಾ ಕಂಠಿ ಜೊತೆ ಜೀಪ್ ನಲ್ಲಿ ಪುನಃ ಮನೆಗೆ ಹೋಗುತ್ತಾ ಇದ್ದಳು. ಈ ವೇಳೆ ಕಂಠಿ ಜೊತೆ ಸ್ನೇಹ ಬಂಗಾರಮ್ಮ ಇಲ್ಲ ಸಲ್ಲದನ್ನು ಹೇಳುವ ವೇಳೆ ನನಗೆ ಸುಮ್ಮನೆ ಇರಲು ಸಾಧ್ಯ ಆಗಲೇ ಇಲ್ಲ. ನಾವು ಯಾಕೆ ಸುಮ್ಮನೆ ಇರಬೇಕು ಎಂದು ಮಾತನಾಡಿದೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕಂಠಿ ಮನದಲ್ಲಿ ಅಂದುಕೊಂಡು ನಾನು ಅಂದುಕೊಂಡದ್ದು ಒಂದು ಆದರೆ ಇಲ್ಲಿ ಆದದ್ದೇ ಇನ್ನೊಂದು ಎಂದು ಸುಮ್ಮನೆ ಇರುತ್ತಾನೆ. ಇದನ್ನು ನೋಡಿದ ಸ್ನೇಹಾ ಸುಮ್ಮನೆ ಆಗುತ್ತಾಳೆ. ಕಂಠಿ ಪುಟ್ಟಕ್ಕನ ಮನೆ ಬಳಿ ಬಂದಾಗ ಸ್ನೇಹಾ ಬನ್ನಿ ಶ್ರೀ ಅಣ್ಣಯ್ಯನ ಬಳಿ ಮಾತನಾಡೋಣ ಅವನನ್ನು ಆಗಲೇ ಮಾತನಾಡದೇ ಹಾಗೆ ಬಂದೆ, ಆತನಿಗೆ ಎಷ್ಟು ಬೇಸರ ಆಯಿತೋ ಏನೋ ಎಂದುಕೊಂಡಿರುತ್ತಾಳೆ.

ಇನ್ನು ಕಂಠಿ ಏನೇನೋ ಸಬೂಬು ಹೇಳಿದರು ಸ್ನೇಹಾ ಮಾತ್ರ ಬಿಡುವ ಹಾಗೆ ಕಾಣುತ್ತಾ ಇರಲಿಲ್ಲ. ಸ್ನೇಹಾ ಕಂಠಿ ಜೊತೆ ಮಾತನಾಡುವ ವೇಳೆ ನಂಜಮ್ಮ ಬರುತ್ತಾಳೆ. ಆಕೆಯನ್ನು ನೋಡಿದ ಕಂಠಿ ಹೇಗಾದರೂ ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು ಇಲ್ಲವಾದರೆ ಇನ್ನೂ ಬಹಳ ಕಷ್ಟ ಆಗುತ್ತದೆ ಎಂದುಕೊಂಡು ಸ್ನೇಹಾ ಬಳಿ ಏನೋ ಮುಖ್ಯವಾದ ಕೆಲಸ ಇದೆ ಎಂದು ಹೇಳಿ ಹೋಗುತ್ತಾನೆ. ಇನ್ನು ಸ್ನೇಹಾ ಏನು ಮಾತನಾಡದೆ ಮನೆ ಒಳಗೆ ಬರುತ್ತಾಳೆ. ಆಗ ನಂಜಮ್ಮನನ್ನು ನೋಡಿ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ.
ನಂಜಮ್ಮ ಹೇಗಿದ್ದಿಯ ಹುಷಾರ್ ಇದ್ದೀಯಾ ಎಂದೆಲ್ಲ ಪುಟ್ಟಕ್ಕ ಕೇಳುತ್ತಾಳೆ. ಬಳಿಕ ಪುಟ್ಟಕ್ಕ ಮಾತ್ರ ಯುಗಾದಿ ಹಬ್ಬದಂದು ನಂಜಮ್ಮ ಬಂದಿರುವುದನ್ನು ಕಂಡು ಇನ್ನೂ ಖುಷಿ ಪಡುತ್ತಾ ಇರುತ್ತಾಳೆ. ಇನ್ನು ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಇರುತ್ತಾಳೆ. ಅಷ್ಟರಲ್ಲಿ ಸ್ನೇಹಾ ಚಂದ್ರು ಬಳಿ ಅಣ್ಣಯ್ಯ ನಿನ್ನ ಜೊತೆ ಸ್ವಲ್ಪ ಮಾತನಾಡುವುದಿದೆ ಎಂದು ಹೇಳುತ್ತಾಳೆ. ಬಳಿಕ ಸ್ನೇಹಾ ಕಂಠಿಯನ್ನು ಪ್ರೀತಿ ಮಾಡುತ್ತಾ ಇರುವ ವಿಚಾರವನ್ನು ಹೇಳುತ್ತಾಳೆ
ಇದನ್ನು ಕೇಳಿದ ಚಂದ್ರುಗೆ ಮಾತ್ರ ಶಾಕ್ ಆಯಿತು, ಕೋಪನು ಬರುತ್ತದೆ. ಆಕೆಗೆ ನಿಜ ವಿಚಾರ ತಿಳಿಸಲು ಚಂದ್ರು ವಸು ಜೊತೆ ಮಾತು ತೆಗೆದುಕೊಂಡಿರುತ್ತಾನೆ. ಆ ಕಾರಣ ನಿಜ ಹೇಳಲು ಆಗದೆ ಪರದಾಡುತ್ತ ಇರುತ್ತಾನೆ. ಇನ್ನು ಚಂದ್ರು ಸ್ನೇಹಾ ಬಳಿ ಪ್ರೀತಿ ಗೀತಿಯನ್ನು ಪಕ್ಕಕ್ಕೆ ಇಟ್ಟು ಓದಿನ ಕಡೆ ಗಮನ ಕೊಡಬೇಕು ಸ್ನೇಹಾ ನೀನು ಏನೇ ಮಾಡು ಮೊದಲು ಕಲೆಕ್ಟರ್ ಆಗುವ ಕನಸನ್ನು ನನಸು ಮಾಡಿಕೋ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಅಣ್ಣನ ಮಾತಿಗೆ ಹೂ ಎಂದು ಉತ್ತರ ನೀಡುತ್ತಾ ಇರುತ್ತಾಳೆ.

ಇನ್ನು ಚಂದ್ರು ಅಲ್ಲಿಂದ ನೇರವಾಗಿ ಮನೆಯ ಒಳಗೆ ಹೋಗಿ ಅಮ್ಮ ನಾವು ಇನ್ನು ಹೊರಡೋಣ ಎಂದು ನಂಜಮ್ಮನ ಬಳಿ ಹೇಳುತ್ತಾನೆ. ಬಳಿಕ ಎಲ್ಲರೂ ಹೊರಟು ಹೋಗುತ್ತಾರೆ. ಆದರೆ ಚಂದ್ರು ಮಾತ್ರ ಸ್ನೇಹಾ ಬಳಿ ಒಂದು ಮಾತು ಹೇಳದೆ ಹಾಗೆಯೇ ಎದ್ದು ಬರುತ್ತಾನೆ. ಇದನ್ನು ನೋಡಿದ ಸ್ನೇಹಾಗೆ ಕೊಂಚ ಬೇಸರ ಆಗುತ್ತದೆ. ಇನ್ನು ಸಹನಾ ತನ್ನ ಗಂಡನ ಮನೆಗೆ ಹೊರಟು ನಿಂತಿರಬೇಕಾದರೆ ಸ್ನೇಹಾ ಹಾಗೂ ಸುಮಾ ತಡೆಯುತ್ತಾರೆ. ಆ ಬಳಿಕ ಕೌಸಲ್ಯಗೆ ಕರೆ ಮಾಡಿದ ಸ್ನೇಹಾ ಅಕ್ಕ ಇಂದು ನಮ್ಮ ಮನೆಯಲ್ಲಿ ಉಳಿಯುತ್ತಾಳೆ ಹಾಗೂ ನಾಳೆ ಬರುತ್ತಾಳೆ ಎಂದು ಹೇಳಿ ಅವರ ಒಪ್ಪಿಗೆಗೂ ಕಾಯದೆ ಫೋನ್ ಇಟ್ಟು ಬಿಡುತ್ತಾಳೆ.
ಇದನ್ನು ನೋಡಿದ ಕೌಸಲ್ಯಗೆ ಇನ್ನೂ ಸಿಟ್ಟು ಬರುತ್ತದೆ. ಇನ್ನು ಆಕೆಯ ಗಂಡ ಯುಗಾದಿ ಹಬ್ಬದ ಶುಭಾಯ ಹೇಳಲು ಕಾಶಿಯಿಂದ ಕರೆ ಮಾಡುತ್ತಾನೆ. ಇದನ್ನು ನೋಡಿ ಕೌಸಲ್ಯ ಖುಷಿಯಿಂದ ಮಾತನಾಡಿಸಿದರೆ ಆತ ಮಾತ್ರ ಹಣದ ಬಗ್ಗೆಯೇ ಮಾತನಾಡುತ್ತಾ ಇರುತ್ತಾನೆ.


Click it and Unblock the Notifications











