Puttakkana Makkalu: ಹೊರ ಬಂತು ಗೋಪಾಲನ ಸತ್ಯ: ಕೊರಳಪಟ್ಟಿ ಹಿಡಿದು ಹೊರದಬ್ಬಿದ ಪುಟ್ಟಕ್ಕ!?

By Poorva

ಪುಟ್ಟಕ್ಕ ತನ್ನ ಗಂಡನಿಗಾಗಿ ತನ್ನ ಮಗಳನ್ನು ಎದುರು ಹಾಕಿಕೊಂಡು ಬಿಡುತ್ತಾಳೆ. ತನ್ನ ಮಗಳನ್ನು ಬಹಳ ಮುದ್ದಿನಿಂದ ಬೆಳೆಸಿದ್ದಾಳೆ ಆದರೆ ಗೋಪಾಲನಿಗೆ ಪುಟ್ಟಕ್ಕನ ಜೊತೆಗೆ ಇರಬೇಕು ಎನ್ನುವ ಬಯಕೆ. ರಾಜಿಯ ಸಹವಾಸದಿಂದ ಕೆಟ್ಟಿರುವ ಗೋಪಾಲನ ತಲೆ ಇದೀಗ ಸರಿ ಹೋಗಿದೆ. ನಾನು ಹೇಗಾದರೂ ಮಾಡಿ ಪುಟ್ಟಕ್ಕಗೆ ಸಹಾಯ ಮಾಡಬೇಕು. ಆಕೆಗೆ ಹೆಗಲಾಗಿ ಇರಬೇಕು ಎನ್ನುವ ಮನದ ಆಸೆಯನ್ನು ವ್ಯಕ್ತಪಡಿಸುತ್ತಾ ಇರುತ್ತಾನೆ.

ಗೋಪಾಲ, ತನ್ನ ಮಗಳ ಜೀವನ ನನ್ನ ಕಣ್ಣಾರೆ ಹಾಳು ಆಗುತ್ತಿದೆ ಅದನ್ನು ನಾನು ಹೇಗಾದರೂ ಮಾಡಿ ಸರಿ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ . ಇನ್ನು ಪುಟ್ಟಕ್ಕ ಬಗ್ಗೆ ಸಹನಾ, ಸುಮಾ, ಪುರುಷೋತ್ತಮ, ಸ್ನೇಹಾ ಕೋಪದಿಮದ ಮಾತನಾಡುತ್ತಾ ಇರುತ್ತಾರೆ. ಆದಷ್ಟು ಬೇಗ ಗೋಪಾಲ ಸರಿ ಹೋಗಬೇಕು. ಆತ ಎಲ್ಲರ ಹಾಗೆ ಆಗಬೇಕು ಎಂದು ಮನದಲ್ಲಿಯೇ ಯೋಚನೆ ಮಾಡುತ್ತಾ ಇರುತ್ತಾಳೆ ಪುಟ್ಟಕ್ಕ.

Kannada serial Puttakkana Makkalu written update on 7th january

ಇನ್ನು ಸಹನಾ ಮುರಳಿಯನ್ನು ತಪ್ಪು ತಿಳಿದುಕೊಂಡಿರುವುದು ಗೋಪಾಲನಿಗೆ ತಿಳಿದಿದೆ. ಆದರೆ ಅದನ್ನು ಪುಟ್ಟಕ್ಕ ಜೊತೆ ಹೇಳಲೇ ಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಆತ ಎನು ಯೋಚನೆ ಮಾಡದೆ ಪುಟ್ಟಕ್ಕನ ಬಳಿ ನೇರವಾಗಿ ನಿಜ ವಿಚಾರ ಹೇಳುತ್ತಾನೆ. ಪುಟ್ಟಮ್ಮಿ ನಾನು ನಿನ್ನ ಜೊತೆ ಸುಳ್ಳು ಹೇಳಿ ಬಿಟ್ಟೆ.. ನಾನು ಸರಿಯಾಗಿಯೇ ಇದ್ದೇನೆ ಎಂದಾಗ ಪುಟ್ಟಕ್ಕಗೆ ಶಾಕ್ ಆಗುತ್ತದೆ.

ಗೋಪಾಲನ ಸ್ಥಿತಿ ಕಂಡು ಮರುಗಿದ ಪುಟ್ಟಕ್ಕ

ಆಸ್ಪತ್ರೆಯಲ್ಲಿ ಕೂಡ ಎನು ಗುರುತು ಪರಿಚಯ ಇಲ್ಲದ ಹಾಗೆ ಇದ್ದ, ಆದರೆ ಇದೀಗ ಇದ್ದಕ್ಕಿದ್ದಂತೆ ನಾನು ಸರಿ ಹೋಗಿದ್ದೇನೆ ಎಂದು ಹೇಳುತ್ತಾ ಇದ್ದಾನಲ್ಲ ಎಂದು ಗೋಪಾಲನನ್ನು ನೋಡುತ್ತಿರುತ್ತಾರೆ. ತಂದೆಯ ಮಾತು ಕೇಳಿ ಸುಮಾ ಹಾಗೂ ಸಹನಾಗೆ ಬಹಳ ಕೋಪ ಬರುತ್ತದೆ . ಸಹನಾ ಜೋರಾಗಿ ತನ್ನ ತಂದೆಯ ಬಳಿ ಹೇಳುತ್ತಾಳೆ .

Kannada serial Puttakkana Makkalu written update on 7th january

ತಂದೆಯ ಮೇಲೆ ಕೂಗಾಡಿದ ಸಹನಾ

ನಿನ್ನಿಂದ ಆಗಿ ನನ್ನ ಸಂಸಾರ ಹಾಳಾಗಿ ಹೋಯಿತು ಎಂದು ಜೋರಾಗಿ ಅಳುತ್ತಾಳೆ. ಪುಟ್ಟಕ್ಕ ಮಾತ್ರ, ನಿನಗಾಗಿ ನನ್ನ ಮಕ್ಕಳನ್ನು ದೂರ ಮಾಡಿಕೊಂಡೆ.. ಆದರೆ ನೀನು ನಿನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಅಲ್ವಾ ಎಂದು ಹೇಳಿ ಆತನ ಕೆನ್ನೆಗೆ ಬಲವಾಗಿ ಹೊಡಿಯುತ್ತಾಳೆ. ಬಳಿಕ ಇನ್ನು ನನಗೂ ನಿಮಗೂ ಯಾವ ಸಂಬಂಧ ಇಲ್ಲ . ನೀವು ಮನೆಯಿಂದ ಹೊರಗೆ ಹೋಗಿ ಎಂದು ಜೋರಾಗಿ ಹೇಳುತ್ತಾಳೆ.

ಪುಟ್ಟಕ್ಕಗೆ ನಿಜ ವಿಚಾರ ಹೇಳುತ್ತಾನ ಗೋಪಾಲ?

ಪುಟ್ಟಕ್ಕನ ಮಾತಿಗೆ ಗೋಪಾಲನಿಗೆ ಎನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರ ಪಡುತ್ತಾನೆ. ಪುಟ್ಟಕ್ಕನ ಮಕ್ಕಳು ಸೋಮವಾರ ಒಂದು ಗಂಟೆ ಮಹಾಸಂಚಿಕೆ ಪ್ರಸಾರ ಆಗಲಿದೆ .

More from Filmibeat

English summary
Puttakkana Makkalu serial january 7th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X