Puttakkana Makkalu: ಸಿದ್ದೇಶ್ ಬಳಿ ನಡೆದ ವಿಚಾರ ಹೇಳಿದ ನಂಜಮ್ಮ; ಬಂಗಾರಮ್ಮನ ಇನ್ನೊಂದು ಮುಖ ಕಂಠಿಗೆ ತಿಳಿಯುತ್ತಾ?

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಕುತೂಹಲಕಾರವಾಗಿ ಮೂಡಿ ಬಂದಿದೆ. ಇದರಿಂದ ನೋಡುಗರಿಗೆ ಕೂಡ ಬಹಳ ಖುಷಿ ಆಗುತ್ತಿದೆ. ಸ್ನೇಹಾ ಕಂಠಿ ಒಂದಾಗುತ್ತಿದ್ದಾರೆ ಎಂದು ಜನ ಅಂದುಕೊಂಡರೆ ಅಲ್ಲಿ ಆಗಿದ್ದೆ ಬೇರೆ. ಬಂಗಾರಮ್ಮ ತನ್ನ ಮಗನಿಗೆ ಸ್ನೇಹ ಜೊತೆ ಮದುವೆ ಮಾಡುವುದೇ ಇಲ್ಲ ಎಂದು ಪಣ ತೊಟ್ಟು ಇದೀಗ ರಾಧಾ ಜೊತೆ ಮದುವೆ ಮಾಡಲು ಹೊರಟಿದ್ದಾಳೆ.

ಆದರೆ ಇದೀಗ ಕಂಠಿಗೆ ತನ್ನ ಹಾಗೂ ಸ್ನೇಹಾ ಪ್ರೀತಿ ಕೊಂಡಿ ಕಳಚಲು ತನ್ನ ಅಮ್ಮನೂ ಕಾರಣ ಎಂಬ ವಿಚಾರ ಇದೀಗ ತಿಳಿದು ಹೋಗಿದೆ. ನಂಜಮ್ಮ ಕಂಠಿ ಹಾಗೂ ಸ್ನೇಹಾ ಮದುವೆ ಆಗಬೇಕು ಎಂಬ ಉದ್ದೇಶದಿಂದ ಕಂಠಿಗೆ ಕರೆ ಮಾಡುತ್ತಾಳೆ. ಆದರೆ ಆ ಕರೆಯನ್ನು ಸ್ವೀಕಾರ ಮಾಡಿದ್ದು ಸಿದ್ದೇಶ್.

 Kannada serial Puttakkana Makkalu written update on 7th June

ಸಿದ್ದೇಶ್ ಬಳಿ ನಂಜಮ್ಮ ನಡೆದ ಎಲ್ಲಾ ವಿಚಾರವನ್ನು ಇಂಚು ಇಂಚಾಗಿ ಹೇಳುತ್ತಾಳೆ. ಇದೆಲ್ಲ ಕೇಳಿದ ಸಿದ್ದೇಶ್ ಕಂಠಿ ಬಳಿ ಓಡಿ ಬರುತ್ತಾನೆ. ಅಷ್ಟರಲ್ಲಿ ಆಗಲೇ ಮದುವೆ ಕಾಗದಕ್ಕೆ ಪೂಜೆ ನಡೆಯುತ್ತಾ ಇರುತ್ತದೆ. ಕಂಠಿ ಬಳಿ ಸಿದ್ದೇಶ್ ಹೇಳುತ್ತಾನೆ. ನನಗೆ ನಿಮ್ಮ ಜೊತೆ ಮಾತನಾಡಬೇಕು ಎಂದು ಎಷ್ಟೇ ಹೇಳಿದರೂ ಕಂಠಿ ಮಾತ್ರ ಅವ್ವನ ಖುಷಿ ನೋಡಿ ಎಂದು ಹೇಳುತ್ತಾ ಇರುತ್ತಾನೆ.

ಇನ್ನು ಪುಟ್ಟಕ್ಕನ ಮೂವರು ಮಕ್ಕಳು ಹೂವು ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸುಮಾಗೆ ಮಾತ್ರ ಅಕ್ಕನ ಮೇಲೆ ಬಹಳ ಅಸಮಾಧಾನ ಮೂಡುತ್ತದೆ. ತನ್ನ ಪ್ರೀತಿಯನ್ನು ಕೈಯಾರೆ ಹೊಸಕಿ ಹಾಕುತ್ತಿದ್ದಾಳಲ್ಲ ಎಂಬ ಬೇಸರ ಕೂಡ ಮೂಡುತ್ತದೆ. ತಾಯಿಯ ಮಾತಿನ ಪ್ರಕಾರ ನಡೆಯುತ್ತಿರುವ ಸ್ನೇಹಾ ಮನದಲ್ಲಿ ಬಹಳಷ್ಟು ನೋವಿರುತ್ತದೆ.

ಆದರೆ ಕಂಠಿಯನ್ನು ಮರೆಯಲು ಹರಸಾಹಸ ಪಡುತ್ತಾ ಇರುತ್ತಾಳೆ. ಆದರೂ ಪುಟ್ಟಕ್ಕ ಯಾವುದೇ ಕಾರಣಕ್ಕೂ ಬಂಗಾರಮ್ಮನ ಮಗನ ಜೊತೆ ಮದುವೆ ಮಾಡಲು ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಆದರೆ ಈ ನಡುವೆ ಸ್ನೇಹಾ ಕಂಠಿ ಮನದೊಳಗೆ ಬಹಳ ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾರೆ.

ಇನ್ನು ಸ್ನೇಹಾ ಮಾತ್ರ ಯಾರ ಮಾತನ್ನು ಕೇಳುತ್ತಿಲ್ಲ. ಸುಮಾ ಅಕ್ಕ ಬಾವನನ್ನು ಹೇಗಾದರೂ ಮಾಡಿ ಒಂದು ಮಾಡಲೇಬೇಕು ಇಲ್ಲವಾದರೆ ಇಬ್ಬರು ಜೀವನ ಪೂರ್ತಿ ಕೊರಗುತ್ತಲೆ ಇರುತ್ತಾರೆ ಎಂದು ಸಹನಾ ಹಾಗೂ ಸುಮಾ ಮಾತನಾಡುತ್ತಾ ಇರುವಾಗ ಮುರಳಿ ಮೇಷ್ಟ್ರು ಬರುತ್ತಾರೆ. ಕೊಂಚ ಏರು ಧ್ವನಿಯಲ್ಲಿ ಅವರಿಬ್ಬರ ಜೊತೆ ಮಾತನಾಡಿ ಅಲ್ಲಿಂದ ಹೋಗುತ್ತಾನೆ. ಇನ್ನು ಕಂಠಿ ಸಿದ್ದೇಶ್ ಜೊತೆ ತೋಟದ ಮನೆಗೆ ಬರುತ್ತಾನೆ ಅಲ್ಲಿ ಸಿದ್ದೇಶ್ ಕಂಠಿಗೆ ನಿಜ ವಿಚಾರ ಹೇಳುತ್ತಾನೆ.

ಸ್ನೇಹಾ ತನ್ನಿಂದ ದೂರ ಆಗಲು ಅಮ್ಮನೇ ಕಾರಣ ಅನ್ನೋ ವಿಚಾರವನ್ನು ಸಿದ್ದೇಶ್ ಕಂಠಿ ಬಳಿ ಹೇಳುತ್ತಾನೆ. ಆದರೆ ಈ ವಿಚಾರವನ್ನು ಕಂಠಿ ಇದನ್ನು ನಂಬುತ್ತಾನ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಬಂಗಾರಮ್ಮ ಬಹಳ ಖುಷಿಯಲ್ಲಿರುತ್ತಾಳೆ. ನನ್ನ ಮಗ ನಾನು ಹೇಳಿದ ಹುಡುಗಿಯನ್ನು ಮದುವೆ ಆಗಲು ಒಪ್ಪಿಗೆ ನೀಡಿದ್ದಾನೆ ಎನ್ನುವುದೇ ಆಕೆಗೆ ಸಮಾಧಾನ. ಆದರೆ ಕಂಠಿಗೆ ನಿಜ ವಿಚಾರ ತಿಳಿದರೆ ಏನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 7th June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X