Puttakkana Makkalu: ಸ್ನೇಹಾ ಮಾಡಿದ ಪಿತೂರಿ ವಿರುದ್ದ ಗರಂ ಆದ ರಾಜಿ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸಹನಾ ಮನೆ ಬಳಿ ಓಡಿ ಬರುತ್ತಾಳೆ. ಪುಟ್ಟಕ್ಕ ಸಹನಳನ್ನು ಸಹನಾ ಎಂದು ಕರೆಯುವಗಲೇ ಸಹನಾ ತನ್ನ ತಾಯಿಯ ಬಳಿ ನೀನು ರಾಜವ್ವಗೆ ಮನೆ ಮೆಸ್ ಬರೆದುಕೊಟ್ಟಿದ್ದೀತಂತೆ, ಯಾಕಮ್ಮ ಹೀಗೆ ಮಾಡಿದೆ ಎಂದು ಬೇಸರ ಮಾಡಿಕೊಂಡು ಕೇಳುತ್ತಾಳೆ.
ಆಗ ಸ್ನೇಹಾ ನನ್ನ ಬಳಿ ಹೇಳಲಿಲ್ಲ ನಿನ್ನ ಬಳಿ ಏನಾದರೂ ಹೇಳುತ್ತಾರ ನೋಡೋಣ ಎಂದು ಕೊಂಕು ಮಾತು ಆಡುತ್ತಾಳೆ. ಮುರಳಿ ಕೂಡ ಪುಟ್ಟಕ್ಕ ನೀವು ಮಾಡಿದ್ದು ತಪ್ಪು ಎಂದು ಹೇಳುತ್ತಾನೆ. ಇನ್ನು ಸುಮಾ ಮಾತ್ರ ಅಕ್ಕ ಬಾವ ನೀವು ಇಬ್ಬರು ಇದೇ ಮೊದಲ ಬಾರಿ ಮನೆಗೆ ಬರುವುದು ಅಲ್ವಾ, ಕುಳಿತುಕೊಳ್ಳಿ ಎಂದು ಹೇಳುತ್ತಾಳೆ. ಬಳಿಕ ಪುಟ್ಟಕ್ಕ ನಡೆದ ವಿಚಾರ ಎಲ್ಲಾ ಹೇಳುತ್ತಾಳೆ.

ಆ ಬಳಿಕ ಸಹನಾ ಅಮ್ಮ ನೀನು ಆಸ್ತಿಯಲ್ಲ ಅವರ ಹೆಸರಿಗೆ ಮಾಡುತ್ತೀಯಾ ಎಂದು ಗೊತ್ತಿದ್ದರೆ ನಾನು ಮದುವೆನೇ ಆಗುತ್ತಾ ಇರಲಿಲ್ಲ ಎಂದು ಹೇಳಿದಾಗ ಮುರಳಿ ಸಹನಳ ಪರ ವಹಿಸುತ್ತಾನೆ. ಬಳಿಕ ಇಬ್ಬರೂ ಊಟ ಮಾಡಿ ಅಲ್ಲಿಂದ ತೆರಳುತ್ತಾರೆ. ಇನ್ನು ಮುಂಗುಸಿ ಹಾಗೂ ಆತನ ಗೆಳೆಯನಿಗೆ ಪುಟ್ಟಕ್ಕನ ಮೆಸ್ ನಲ್ಲಿ ಊಟ ಮಾಡಿ ಮಾಡಿ ಇದೀಗ ಬಂಗಾರಮ್ಮ ಅವರ ಮನೆಯಲ್ಲಿ ಮಾಡುವ ಅಡುಗೆಗೆ ಕೂಡ ಕಾಮೆಂಟ್ ಮಾಡುತ್ತಿದ್ದಾರೆ .
ಇದನ್ನು ಕೇಳಿದ ವಸು ಏನ್ರೋ ತಿನ್ನೋ ಅನ್ನದ ಬಗ್ಗೆ ಕಾಮೆಂಟ್ ಮಾಡುತ್ತಾ ಇದ್ದೀರಾ ಇದೆಲ್ಲ ಪುಟ್ಟಕ್ಕನ ಮೆಸ್ ಪ್ರಭಾವ ಅಲ್ವಾ ಎಂದು ಹೇಳಿದಾಗ ಕಂಠಿ ಮನದಲ್ಲಿ ಅಯ್ಯೋ ಹೇಳಿಯೇ ಬಿಟ್ಟಿತಾ ಇದೀಗ ಅಮ್ಮ ರಾಜಿ ಬಗ್ಗೆ ಹೇಳುತ್ತಾಳೆ ಎಂದು ಅಂದುಕೊಂಡ ವೇಳೆಯೇ ಬಂಗಾರಮ್ಮ ಜೋರಾಗಿ ನಾನು ಪುಟ್ಟಕ್ಕನ ಜೊತೆ ಇದ್ದೇನೆ ಎಂಬುವುದು ತಿಳಿದುಕೊಂಡು ಇಷ್ಟೆಲ್ಲ ಹಾರಾಡಿ ಬಿಟ್ಟಳಾ ರಾಜಿ, ಆಕೆಗೆ ಹೇಗಾದರೂ ಬುದ್ದಿ ಕಲಿಸಬೇಕು ಎಂದು ಜೋರಾಗಿ ಹೇಳಿದಾಗ ಮುಂಗುಸಿ ಕೊಂಚ ಸಮಾಧಾನದ ಮಾತುಗಳನ್ನು ಹೇಳುತ್ತಾನೆ. ಮದುವೆ ಎಂದರೆ ಇದೆಲ್ಲ ಮಾಮೂಲಿ ಅದಕ್ಕಾಗಿ ನೀವು ಕಷ್ಟ ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಾನೆ.
ಬಳಿಕ ಬಂಗಾರಮ್ಮ ಕಂಠಿ ನಿನ್ನ ಬಳಿ ಮಾತನಾಡಬೇಕು. ಊಟ ಆದ ಬಳಿಕ ಬಾ ಎಂದು ಕರೆಯುತ್ತಾಳೆ. ಅದನ್ನು ಕೇಳಿದ ಕಂಠಿ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ. ಆ ಬಳಿಕ ಕಂಠಿ ತಾಯಿ ಬಳಿ ಮಾತನಾಡಲು ಹೋದಾಗ ಬಂಗಾರಮ್ಮ ಒಂದಷ್ಟು ಫೋಟೋಗಳನ್ನು ಕೊಟ್ಟು ಇದರಲ್ಲಿ ನಿನಗೆ ಯಾವ ಹುಡುಗಿ ಇಷ್ಟ ಆಗುತ್ತಾಳೆ ನನ್ನ ಬಳಿ ಹೇಳು ಎಂದೆಲ್ಲ ಹೇಳುತ್ತಾಳೆ. ಆದರೆ ಕಂಠಿಗೆ ಸ್ನೇಹಾನನ್ನು ಬಿಟ್ಟು ಯಾರು ಕಾಣಿಸುವುದು ಇಲ್ಲ. ಬಳಿಕ ಯಾವ ಫೋಟೋವನ್ನ ನೋಡದೆ ಹೊರಟು ಹೋಗುತ್ತಾನೆ.
ಇನ್ನು ತೋಟದ ಬಳಿ ಕಂಠಿ ಯೋಚನೆ ಮಾಡುತ್ತಾ ಇರುವಾಗ ಆತನ ಗೆಳೆಯರು ಬರುತ್ತಾರೆ. ತನ್ನ ಯೋಚನೆ ಏನೆಂದು ಕಂಠಿ ಹೇಳಲೇ ಇಲ್ಲ. ಕೊನೆಗೆ ಮುಂಗುಸಿ ಬಳಿ ಅಮ್ಮ ನನ್ನ ಮದುವೆ ಮಾತುಕತೆ ಆಡುತ್ತಿದ್ದಾರೆ, ಇವತ್ತು ನನ್ನ ಅದಕ್ಕೆ ಕರೆಸಿಕೊಂಡಿದ್ದರು ಎನ್ನುತ್ತಾನೆ.
ಆದರೆ ಸ್ನೇಹಾ ಹಾಗೂ ನನ್ನ ಮದುವೆ ಬಗ್ಗೆ ಮಾತುಕತೆ ಆಡುತ್ತಿಲ್ಲ. ಬದಲಾಗಿ ಬೇರೆ ಹುಡುಗಿ ಜೊತೆ ಮದುವೆ ಆಗಲು ಹೇಳುತ್ತಿದ್ದಾರೆ ಎಂದೆಲ್ಲ ಯೋಚನೆ ಮಾಡುತ್ತಾ ಅಲ್ಲಿಂದ ಹೋಗುತ್ತಾನೆ. ಇದನ್ನೆಲ್ಲ ನೋಡಿದ ಮುಂಗುಸಿ ಅಣ್ಣ ಆತನ ಪ್ರೀತಿ ವಿಚಾರವನ್ನು ಸ್ನೇಹಾ ಬಳಿ ಹೇಳುವುದಿಲ್ಲ ಇದಕ್ಕೆ ಏನಾದರೂ ಒಂದು ಕಿಡಿ ಹಚ್ಚಬೇಕು ಎಂದು ಯೋಚನೆ ಮಾಡುತ್ತ ಇರುತ್ತಾನೆ.
ಇನ್ನು ರಾಜೇಶ್ವರಿ ಮಾತ್ರ ಬಹಳ ಎಗರಾಡುತ್ತ ಇರುತ್ತಾಳೆ. ಪುಟ್ಟಕ್ಕ ಹಾಗೂ ಬಂಗಾರಮ್ಮನನ್ನು ಹೇಗಾದರೂ ಮಾಡಿ ದೂರ ಮಾಡಬೇಕು, ಬಂಗಾರಮ್ಮನ ಕುಮ್ಮಕ್ಕಿನಿಂದ ಇಷ್ಟೆಲ್ಲ ಮೆರೆಯುತ್ತಿದ್ದಾರೆ ಹೇಗಾದರೂ ಮಾಡಿ ಇವರಿಬ್ಬರನ್ನು ದೂರ ಮಾಡಿದರೆ ಮತ್ತೆ ಏನು ತೊಂದರೆ ಇಲ್ಲ ಎಂದು ಯೋಚನೆ ಮಾಡುತ್ತಾ ಇರುವಾಗ ಪುಟ್ಟಕ್ಕನ ಮಗಳ ಲಗ್ನ ಪತ್ರಿಕೆ ಕಾಲ ಬಳಿ ಇರುತ್ತದೆ ಅದನ್ನು ಎತ್ತಿ ನೋಡಿದಾಗ ಅದರಲ್ಲಿ ರಾಜಿಗೆ ಏನು ಮೋಸ ಆಗಿದೆ ಎಂಬುವುದು ತಿಳಿಯುತ್ತದೆ. ಕುಪಿತಗೊಂಡ ರಾಜಿ ಮುಂದೇನು ಮಾಡುತ್ತಾಳೆ ಕಾದು ನೋಡಬೇಕಿದೆ.


Click it and Unblock the Notifications











