Puttakkana Makkalu: ಶುರು ಆಗಿದೆ ಸ್ನೇಹ - ಕಂಠಿ ಲವ್ ಸ್ಟೋರಿ; ಬಂಗಾರಮ್ಮ‌ ಒಪ್ತಾಳಾ?

By ಪೂರ್ವ

ಕಂಠಿ ಹಾಗೂ ಸ್ನೇಹಾ ಮನದಲಿ ಇದೀಗ ಪ್ರೀತಿ ಆಗಿದೆ. ಸಹನಾ ಹಾಗೂ ಮುರಳಿ ಕೂಡಾ ಪ್ರೀತಿಸಿ ಅನೇಕ ಅಡೆ ತಡೆಗಳನ್ನು ಮೀರಿ ಒಂದಾದ ಜೋಡಿ ಆದರೂ ಜನರಿಗೆ ಬಹಳ ಹತ್ತಿರವಾದ ಜೋಡಿ ಎಂದರೆ ತಪ್ಪಾಗದು. ಆದರೆ ಇದೀಗ ಕಂಠಿ ಹಾಗೂ ಸ್ನೇಹಾ ಲವ್ ಸ್ಟೋರಿ ಶುರುವಾಗುತ್ತಿದೆ. ಸುಮಾ ಸ್ನೇಹಾ ಬಳಿ ಪ್ರೀತಿ ವಿಚಾರ ಮಾತನಾಡುತ್ತಾ ಇರುತ್ತಾಳೆ. ಅಕ್ಕ ನಿನಗೆ ಶ್ರೀ ಅಂದರೆ ಇಷ್ಟಾನ ಎಂದಾಗ ನಾಚುತ್ತಾ ಸ್ನೇಹ ನನಗೆ ಶ್ರೀ ಅವರ ಮುಗ್ಧತೆ ಬಹಳ ಇಷ್ಟ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಸುಮಾ ನನಗೆ ಒಂದು ವಾಕ್ಯದಲ್ಲಿ ಉತ್ತರ ಕೊಡು ಇಷ್ಟನ ಅಥವಾ ಇಲ್ವಾ ಎನ್ನುತ್ತಾಳೆ. ಆ ಮಾತನ್ನು ಕೇಳಿ ಸುಮ ಬಳಿ ನಿಜ ಒಪ್ಪಿಕೊಳ್ಳುತ್ತಾಳೆ. ಸ್ನೇಹಾ ನನಗೆ ಶ್ರೀ ಅಂದರೆ ಇಷ್ಟ ಎಂದು ಹೇಳುತ್ತಾಳೆ. ಇತ್ತ ಕಂಠಿ ಮನದಲ್ಲೂ ಸ್ನೇಹಾಳನ್ನು ಫೂಜೆ ಮಾಡುತ್ತಾ ಇರುತ್ತಾನೆ.

Kannada serial Puttakkana makkalu written update on 8th March

ಕಂಠಿಗೆ ಯಾವ ಹೆಣ್ಣು ಇಷ್ಟ ಆಗದೇ ಇರುವುದು ಬಂಗಾರಮ್ಮಗೆ ತಲೆನೋವು ತಂದು ಇಟ್ಟಿದೆ.‌ ಹಾಗೆಯೇ ತನ್ನ ಮಗನ ಮೇಲೆ ಅನುಮಾನವೂ ಮೂಡಿದೆ. ಸುಳ್ಳಿನ ಮೇಲೆ ಗೋಪುರ ಕಟ್ಟಿರುವ ಕಂಠಿ ಅದನ್ನೇ ನಂಬಿರುವ ಸ್ನೇಹಗೆ ನಿಜ ವಿಚಾರ ತಿಳಿದರೆ ಕಂಠಿ ಮುಖವನ್ನು ನೋಡಲು ಇಷ್ಟ ಪಡುವುದೂ ಇಲ್ಲ. ಈ ವಿಚಾರ ಕಂಠಿಗೆ ತಿಳಿದಿದ್ದರೂ ಎನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ .

ಸ್ನೇಹಾ ಬಳಿ ಎಲ್ಲಾ ವಿಚಾರವನ್ನು ಹೇಳಬೇಕು ಆಕೆಗೆ ನಾನೇ ಬಂಗಾರಮ್ಮನ ಮಗ ಎಂಬ ವಿಚಾರವನ್ನು ಹೇಳಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ. ಆದರೆ ಅದೆಲ್ಲವನ್ನೂ ಸ್ನೇಹಾ ಬಳಿ ಹೇಳಲು ಕಂಠಿಗೆ ಅದ್ಯಾಕೋ ಧೈರ್ಯನೇ ಬರುತ್ತಿಲ್ಲ. ಕಂಠಿ ಗೆಳೆಯರು ಸ್ನೇಹಾ ಅತ್ತಿಗೆ ಬಳಿ ತನ್ನ ಪ್ರೀತಿಯನ್ನು ಅಣ್ಣ ಅದು ಹೇಗಾದರೂ ಹೇಳುವ ಹಾಗೆ ಮಾಡಬೇಕು ಇಲ್ಲವಾದರೆ ಅವರಿಬ್ಬರೂ ಯಾವತ್ತೂ ಒಂದಾಗಲು ಸಾಧ್ಯ ಇಲ್ಲ ಎಂದುಕೊಂಡು ಮಾತನಾಡುತ್ತಾ ಇರುತ್ತಾರೆ.

ಬಂಗಾರಮ್ಮ ಪುಟ್ಟಕ್ಕಗೆ ಕರೆ ಮಾಡಿ ನಡೆದ ವಿಚಾರಕ್ಕೆ ಬೇಸರ ವ್ಯಕ್ತ ಪಡಿಸುತ್ತಾರೆ. ಯಾವತ್ತೂ ಯಾರನ್ನು ಹತ್ತಿರ ಸೇರಿಸಿಕೊಳ್ಳದೆ ಕೊಂಚ ಗಟ್ಟಿಗಿತ್ತಿ ಆಗಬೇಕು ಎಂದು ಹೇಳಿ ಸ್ನೇಹಾನಾ ಕೇಳುತ್ತಾರೆ. ಆದರೆ ಪುಟ್ಟಕ್ಕ ಬಂಗಾರಮ್ಮ ಬಳಿ ಏನೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾರೆ. ಇತ್ತ ರಾಜೇಶ್ವರಿ ಬಂಗಾರಮ್ಮ ಹಾಗೂ ಪುಟ್ಟಕ್ಕನ ಹೇಗಾದರೂ ದೂರ ಮಾಡಲೇ ಬೇಕು ಇಲ್ಲ ದರೆ ನಮಗೆ ಉಳಿಗಾಲ ಇಲ್ಲ ಎಂಬುವುದು ತಿಳಿಯುತ್ತದೆ.

ತನ್ನ ಗಂಡ ಗೋಪಾಲನ ಬಳಿ ಈ ವಿಚಾರವಾಗಿ ಪ್ರಸ್ತಾಪ ಮಾಡುತ್ತಾಳೆ. ಆದರೆ ಗೋಪಾಲ ಮಾತ್ರ ನೀರಸ ಪ್ರತಿಕ್ರಿಯೆ ನೀಡುತ್ತಾನೆ. ಸ್ನೇಹಾ ಮೇಲೆ ಕೋಪಗೊಂಡ ರಾಜಿ ಹೇಗಾದರೂ ಆಕೆಗೆ ಬುದ್ದಿ ಕಲಿಸಬೇಕು ಎಂದು ಯೋಚನೆ ಮಾಡುತ್ತಾರೆ. ಪುಟ್ಟಕ್ಕನ ಮನೆ ಈ ಜೀವ ಮಾನದಲ್ಲಿ ನನಗೆ ಸಿಗುವುದು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.

ಬಂಗಾರಮ್ಮ ಮಲಗುವ ವೇಳೆ ತನ್ನ ಗಂಡನ ಬಳಿ ಕಂಠಿ ಯಾವ ಹುಡುಗಿಯನ್ನು ಒಪ್ಪಿಕೊಳ್ಳದೆ ಇರುವ ಬಗ್ಗೆ ಮಾತನಾಡುತ್ತಾ ಬೇಸರ ಹೊರ ಹಾಕುತ್ತ ಇರುತ್ತಾಳೆ. ಆದರೆ ಆಕೆಯ ಗಂಡ ಮಾತ್ರ ಬಂಗಾರ ನೀನು ಸುಮ್ಮನಿರು ಆಗುವ ಕಾಲಕ್ಕೆ ಎಲ್ಲ ಆಗುತ್ತದೆ ಎಂದು ಹೇಳುತ್ತಾರೆ

ಇದನ್ನು ಕೇಳಿದ ಬಂಗಾರಮ್ಮ ಏನ್ರಿ‌‌ ನಿಮಗೆ ಎಲ್ಲಾ ಗೊತ್ತಿರುವ ಹಾಗೆ ಮಾತನಾಡುತ್ತಿರುವ ಹಾಗಿದೆ ಎಂದು ಹೇಳಿದಾಗ ಕಂಠಿ ತಂದೆ ಸುಮ್ಮನೆ ಆಗುತ್ತಾರೆ. ಹಾಗೆಯೇ ಕಂಠಿ ಹೇಳಿರುವ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಂಡು ಇರುತ್ತಾರೆ. ತಾನು ಪುಟ್ಟಕ್ಕನ ಮಗಳನ್ನು ಮದುವೆ ಆಗುವುದು ಎಂದೆಲ್ಲ ತನ್ನ ತಂದೆಯೇ ಬಳಿ ಎಲ್ಲಾ ವಿಚಾರ ಹೇಳಿರುತ್ತಾನೆ. ಆದರೆ ಅದನ್ನು ಬಂಗಾರಮ್ಮ ಗೆ ಹೇಳದೆ ಸುಮ್ಮನೆ ಇರುತ್ತಾನೆ.

ಇನ್ನು ಕಂಠಿ ಮತ್ತು ಸ್ನೇಹಾ ಯಾರು ಮೊದಲು ಮೆಸೇಜ್ ಮಾಡುತ್ತಾರೆ ಎಂದು ಕಾಯುತ್ತಾ ಇರುತ್ತಾರೆ. ಸ್ನೇಹಾ ಮೆಸೇಜ್ ಮಾಡಬೇಕು ಎಂದುಕೊಂಡಾಗ ಸುಮಾ ಅಕ್ಕನಿಗೆ ಬುದ್ದಿ ವಾದ ಹೇಳುತ್ತಾಳೆ. ನಾವಾಗಿ ಮೇಲೆ ಬಿದ್ದು ಮೆಸೇಜ್ ಮಾಡಬಾರದು ಅಕ್ಕ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಸುಮ್ಮನೆ ಆಗುತ್ತಾಳೆ. ಇನ್ನು ಸ್ನೇಹಾ ಕಂಠಿ ಲವ್ ಸ್ಟೋರಿ ಎಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 8th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X