Puttakkana Makkalu: ಜೋಗಿತಿಯವ್ವನ ಮಾತು ಕೇಳಿ ಪುಟ್ಟಕ್ಕಗೆ ಆತಂಕ, ಅತ್ತೆಯ ಮಾತಿಗೆ ಸಹನಾ ಬೇಸರ
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡುತ್ತಿದೆ .ಇದೀಗ ಸ್ನೇಹಾ ಹಾಗೂ ಕಂಠಿ ಬೈಕಿನಲ್ಲಿ ಹೋಗುತ್ತಿರುತ್ತಾರೆ. ಸ್ನೇಹಾ ಇನ್‌ಸ್ಟಿಟ್ಯೂಟ್‌ಗೆ ಹೋಗಲಿದ್ದ ಕಾರಣ ಕಂಠಿ ಜೊತೆಗೆ ಬೈಕಿನಲ್ಲಿ ಹೋಗುತ್ತಾರೆ.
ಆ ವೇಳೆ ಮರದ ಕೆಳಗೆ ಕೆಲವು ಜನ ಬೆಟ್ಟಿಂಗ್ ಆಟ ಆಡುತ್ತಿರುತ್ತಾರೆ. ಇದನ್ನು ಕಂಡ ಸ್ನೇಹಾಗೆ ಬಹಳ ಸಿಟ್ಟು ಬರುತ್ತದೆ ಕೆಲಸ ಮಾಡುವಾಗ ತೋರಿಸಬೇಕು ರೈತರು ತಮ್ಮ ಇಲ್ಲ ಶಕ್ತಿಮೀರಿ ಶ್ರಮಿಸಿ ಕೃಷಿಯನ್ನು ಮಾಡುತ್ತಾರೆ. ಆದರೆ ಇವರು ಬಿಟ್ಟಿಯಾಗಿ ಶಕ್ತಿಯನ್ನೆಲ್ಲ ಹಾಕುತ್ತಾರೆ. ಆದರೆ ಒಂದು ವೇಳೆ ಗೆದ್ದರೆ ಸರಿ. ಆದರೆ ಸೋತರೆ ಅವರಿಗೆ ಏನು ಆಗುವುದಿಲ್ಲ ಅವರ ಮನೆ ಮಂದಿಗೆಲ್ಲ ಬಹಳ ಕಷ್ಟವಾಗುತ್ತೆ ಎಂದು ಹೇಳುತ್ತಾಳೆ.

ಆಗ ಕಂಠಿ ನಿಜವಾದ ಕುಸ್ತಿ ಪಂದ್ಯದಲ್ಲಿ ಹಾಗೆಲ್ಲ ಏನು ಆಗುವುದಿಲ್ಲ ಎಂದು ಹೇಳುತ್ತಾನೆ. ಸ್ನೇಹಾ ಬೆಟ್ಟಿಂಗ್ ಆಟದಿಂದ ಅದೆಷ್ಟು ಜನರ ಬದುಕು ಬೀದಿಗೆ ಬಂದಿದೆ. ಆದರೆ ಜನರಿಗೆ ಸ್ವಲ್ಪ ಅದರ ಬಗ್ಗೆ ಯೋಚನೆಯ ಇಲ್ಲ ಎಂದು ಸ್ನೇಹಾ ಕಿಡಿಕಾರುತ್ತಾಳೆ. .
ಸ್ನೇಹ ಮಾತಿಗೆ ಸುಮ್ಮನಾದ ಕಂಠಿ
ಸ್ನೇಹಾ ಮಾತು ಕೇಳಿ ಕಂಠಿ ಸುಮ್ಮನೆ ಬಳಿಕ ಯೋಚನೆ ಮಾಡುತ್ತಾನೆ ನಾನು ಎಲ್ಲಾದರೂ ಕುಸ್ತಿಯಲ್ಲಿ ಆಟ ಆಡುತ್ತೇನೆ ಎಂದು ಕೋಪ ಮಾಡಿಕೊಳ್ಳುತ್ತಾಳೆ ಎಂದು ಯೋಚನೆ ಮಾಡುತ್ತಿರುತ್ತಾನೆ. ಇನ್ನು ಸ್ನೇಹಾ ಇಲ್ಲಿಂದ ಹೋಗೋಣ ಶ್ರೀ ಎಂದು ಮೆತ್ತಗೆ ಹೇಳುತ್ತಾಳೆ. ಇನ್ನು ಕಂಠಿ ಅಲ್ಲಿಂದ ಹೋಗುತ್ತಾನೆ. ಬಳಿಕ ದಾರಿಯುವುದಕ್ಕೂ ಕುಸ್ತಿ ಪಂದ್ಯದ ಬಗ್ಗೆ ಮಾತನಾಡುತ್ತಿರುತ್ತಾನೆ.

ಕುಸ್ತಿ ಬಂದಿದ ಬಗ್ಗೆ ಗೌರವದಿಂದ ಮಾತನಾಡಿದ ಸ್ನೇಹ
ಸ್ನೇಹಾ ನನಗೂ ಕೂಡ ಕುಸ್ತಿ ಪಂದ್ಯದ ಬಗ್ಗೆ ಬಹಳ ಗೌರವವಿದೆ .ಮುಂಚೆಲ್ಲ ರಾಜರುಗಳ ಕಾಲದಲ್ಲಿ ಕುಸ್ತಿಪಟುಗಳು ಇರುತ್ತಿದ್ದರು ಅವರೆಲ್ಲ ರಕ್ಷಣೆಗಾಗಿ ಎದುರು ಬರುತ್ತಿದ್ದರು ಎಂದು ಹೇಳುತ್ತಾಳೆ. ಇನ್ನು ಕುಸ್ತಿಯ ಬಗ್ಗೆ ಮಾತನಾಡಿಕೊಂಡು ಸ್ನೇಹಾ ಲೈಬ್ರರಿಗೆ ಬಿಡುತ್ತಾನೆ.
ಗೆಳತಿಯೊಂದಿಗೆ ಮನೆಗೆ ಬಂದ ಮುರಳಿ
ಇನ್ನು ಮುರಳಿ ಮನೆಗೆ ಆತನ ಜೊತೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಯನ್ನು ಕರೆದುಕೊಂಡು ಬರುತ್ತಾನೆ. ಆ ವೇಳೆ ಸಹನಾ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಮುರಳಿ ಅವರ ಗೆಳತಿಯನ್ನು ಕರೆದುಕೊಂಡು ಬಂದು ಎಲ್ಲರಿಗೂ ಪರಿಚಯ ಮಾಡಿಕೊಡುತ್ತಾನೆ. ಹಾಗೆಯೇ ಸಹನಳನ್ನು ನೋಡಿದ ಮುರಳಿ ಗೆಳತಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾಳೆ. ಹೆಂಡತಿಯನ್ನು ಗೆಳತಿಗೆ ಪರಿಚಯ ಮಾಡಿಕೊಟ್ಟಾಗ ಅಯ್ಯೋ ಸಹನಾ ಅವರೇ, ನಾನು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡುಬಿಟ್ಟೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕೌಸಲ್ಯ ಈಕೆಯನ್ನು ಕೆಲಸದಾಕೆ ಎಂದು ಅಂದುಕೊಂಡಿರಾ ಎಂದು ಹೇಳಿದಾಗ ಸಹನಾಗೆ ಬಹಳ ಬೇಸರವಾಗುತ್ತದೆ. ಇತ್ತ, ನಿಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಸಂಸಾರದಿಂದ ದೂರವಾಗುವ ಭಾಗ್ಯ ಸಿಗುತ್ತದೆ ಜೋಗತಿ ಪುಟ್ಟಕ್ಕನಿಗೆ ಹೇಳಿದ್ದಾರೆ. ಪುಟ್ಟಕ್ಕಗೆ ಬಹಳ ಭಯವಾಗಿ, ಏನಪ್ಪಾ ಮಾಡುವುದು ಎಂದು ಕಣ್ಣೀರು ಹಾಕುತ್ತಾಳೆ.


Click it and Unblock the Notifications