ಪುಟ್ಟಕ್ಕನ ಮನೆಯಲ್ಲಿ ರಂಪಾಟ; ಮನೆ ಬಿಟ್ಟು ಹೋದ ಸ್ನೇಹಾಗಾಗಿ ಹುಡುಕಾಟ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಚಂದ್ರು ಹಾಗೂ ನಂಜಮ್ಮ ಪುಟ್ಟಕ್ಕನ ಮನೆಯ ಬಳಿ ಕಾರಿನಿಂದ ಇಳಿಯುತ್ತಾರೆ. ಇದನ್ನು ಕಂಡ ಸ್ನೇಹಾ ಇಬ್ಬರ ಬಳಿಯೂ ಬಹಳ ಖುಷಿಯಿಂದ ಮಾತನಾಡುತ್ತಾಳೆ. ಆದರೆ ಚಂದ್ರು ಮಾತ್ರ ಅರಶಿನ ಶಾಸ್ತ್ರಕ್ಕೆ ಹೋಗದೆ ಹೊರಗೆ ಕುಳಿತುಕೊಂಡಿರುತ್ತಾನೆ.
ಇದನ್ನು ಗಮನಿಸಿದ ಸ್ನೇಹಾ ಅಣ್ಣ ವಸು ಅತ್ತಿಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರುಗೆ ಬಹಳ ಖುಷಿ ಆಗುತ್ತದೆ. ಆದರೆ ಬಂಗಾರಮ್ಮ ಬಂದಿದ್ದಾರೆ ಹಾಗೆ ನಂಜಮ್ಮ ಸಹ ಬಂದಿದ್ದಾರೆ, ಅವರ ಕಣ್ಣು ತಪ್ಪಿಸಿ ಹೇಗೆ ವಸು ಜೊತೆ ಮಾತನಾಡಲಿ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಅಣ್ಣನಿಗೆ ಸಮಾಧಾನ ಹೇಳುತ್ತಾಳೆ. ಅಣ್ಣ ನೀನು ಬಾವಿ ಕಟ್ಟೆಯ ಬಳಿ ಇರು ನಾನು ಹೋಗಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗುತ್ತಾಳೆ.
ಇನ್ನು ಬಂಗಾರಮ್ಮ ಅವರನ್ನು ನೋಡಿದ ಸ್ನೇಹಾ ಮೆತ್ತಗೆ ಮರೆಯಲ್ಲಿ ನಿಂತುಕೊಳ್ತಾಳೆ. ಈ ವೇಳೆ ಪುಟ್ಟಕ್ಕ ಬಂಗಾರಮ್ಮ ಅವರ ಬಳಿ ಅರಶಿನ ಶಾಸ್ತ್ರ ಮಾಡಲು ಹೇಳುತ್ತಾಳೆ. ಆದರೆ ಬಂಗಾರಮ್ಮ ಅವರ ಮಗಳನ್ನು ಕಳುಹಿಸುತ್ತಾಳೆ. ಈ ವೇಳೆ ಬಂಗಾರಮ್ಮಗೆ ಕರೆ ಬರುತ್ತದೆ. ಆ ಕರೆಯನ್ನು ಸ್ವೀಕಾರ ಮಾಡಿ ಮಾತನಾಡುತ್ತಾ ಇರುವಾಗ ಹಿಂದುಗಡೆಯಿಂದ ಯಾರೋ ಕರೆದ ಹಾಗೆ ಆಗುತ್ತದೆ ಅದನ್ನು ಗಮನಿಸಿದ ಬಂಗಾರಮ್ಮ ಹಿಂದೆ ತಿರುಗಿ ನೋಡಿದಾಗ ಸ್ನೇಹಾ ಬೇರೆ ಕಡೆ ನೋಡಿಕೊಂಡು ವಸು ಅತ್ತಿಗೆ ಅಣ್ಣ ಬಾವಿ ಬಳಿ ಕಾಯುತ್ತಾ ಇದ್ದಾರೆ ಹೋಗಿ ಮಾತನಾಡಿ ಎಂದು ಹೇಳುತ್ತಾಳೆ.

ಸ್ನೇಹಾಳನ್ನು ನೋಡಿ ಕೋಪಗೊಂಡ ಬಂಗಾರಮ್ಮ
ಸ್ನೇಹ ಮಾತು ಕೇಳಿ ಕೋಪಗೊಂಡ ಬಂಗಾರಮ್ಮ ಜೋರಾಗಿ ನನ್ನ ಮಗಳ ಬಗ್ಗೆ ನನ್ನ ಬಳಿ ಹೇಳಲು ನಿನಗೆ ಎಷ್ಟು ಧೈರ್ಯ ಎಂದೆಲ್ಲ ಹೇಳುತ್ತಾಳೆ. ಆದರೆ ಬಂಗಾರಮ್ಮ ಅವರ ಧ್ವನಿ ಕೇಳಿದಾಗಲೇ ಸ್ನೇಹಾಗೆ ತಿಳಿದಿದ್ದು ತಾನು ಕರೆದಿದ್ದು ವಸು ಅತ್ತಿಗೆಯನ್ನು ಅಲ್ಲ ಬಂಗಾರಮ್ಮ ಅವರನ್ನು ಅಂತ. ಸ್ನೇಹಾಗೆ ಶಾಕ್ ಆಗುತ್ತದೆ. ಆಕೆ ಬಂಗಾರಮ್ಮ ಅವರ ಮುಖ ನೋಡುತ್ತಾ ನಿಲ್ಲುತ್ತಾಳೆ. ನಂಜಮ್ಮನ ಜೊತೆ ಇರುವಾಕೆ ಇಲ್ಲಿಗೆ ಬಂದಿದ್ದಾಳೆ ಅಲ್ವಾ ಮದುವೆ ಕೆಡಿಸಲು ಬಂದಿರಬೇಕು ಎಂದು ಜೋರಾಗೆ ಮಾತನಾಡುತ್ತಾ ಇರುವವರೆಲ್ಲ ಇದೇನು ಪುಟ್ಟಕ್ಕನ ಮನೆಗೆ ಬಂದು ಪುಟ್ಟಕ್ಕನ ಮಗಳಿಗೆ ಬಯ್ಯುತ್ತಾ ಇದ್ದಾಳೆ ಅಲ್ವಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ.

ಆತಂಕಗೊಂಡ ಪುಟ್ಟಕ್ಕ
ಇನ್ನು ಅಲ್ಲಿಗೆ ಬಂದ ನಂಜಮ್ಮ ಬಂಗಾರಮ್ಮ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಏನೇ ಹೇಳಿದೆ ನೀನು ನನ್ನ ಮಗನಿಗೆ ನಿನ್ನ ಮಗಳ ಮೇಲೆ ಪ್ರೀತಿ ಯಾವತ್ತೂ ಹೋಗಿದೆ ಅದಕ್ಕಾಗಿ ನಿನ್ನ ಮನೆಗೆ ಡೈವರ್ಸ್ ನೋಟಿಸ್ ಬೇರೆ ಕೊಟ್ಟಿದ್ದೆ ಎಂದೆಲ್ಲ ಹೇಳುತ್ತಾಳೆ. ಆದರೆ ಬಂಗಾರಮ್ಮ ಕೊಂಚ ಕೋಪ ಕಡಿಮೆ ಮಾಡಿಕೊಂಡು ಇದು ಪುಟ್ಟಕ್ಕನ ಮನೆ, ಆಕೆಯ ಮನೆಯಲ್ಲಿ ಶುಭ ಕಾರ್ಯ ಇದೆ ಅದಕ್ಕೆ ಬಂದೆ ಹಾಗೆಯೇ ಗಲಾಟೆ ಮಾಡಲು ಬಂದಿಲ್ಲ ಎಂದು ಹೇಳುತ್ತಾಳೆ.

ಬಂಗಾರಮ್ಮನ ಬಳಿಕ್ಷಮೆ ಯಾಚಿಸಿದ ಸ್ನೇಹಾ
ಈ ಸಮಯಕ್ಕೆ ಸ್ನೇಹಾ ಬಂಗಾರಮ್ಮ ಬಳಿ ಕ್ಷಮೆ ಯಾಚಿಸುತ್ತಾಳೆ. ಸ್ನೇಹಾ ಅಷ್ಟು ಗಡುಸಾಗಿ ಮಾತನಾಡುವವಳು ಈಗ ಇಷ್ಟು ಬೇಗ ಮೆತ್ತಗೆ ಮಾತನಾಡುತ್ತಾ ಇದ್ದಾಳಲ್ಲ ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ಬಳಿಕ ಅಲ್ಲಿಂದ ಬಂಗಾರಮ್ಮ ಹಾಗೂ ವಸು ಹೋಗುತ್ತಾರೆ. ಅಲ್ಲಿಂದ ಸ್ನೇಹಾನು ಹೋಗುತ್ತಾಳೆ. ಪುಟ್ಟಕ್ಕಗೆ ಗಾಬರಿ ಆಗುತ್ತದೆ. ಸ್ನೇಹಾ ಮೊಬೈಲ್‌ಗೆ ಕರೆ ಮಾಡಿದಾಗ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ಗೊತ್ತಾಗಿ ಇನ್ನೂ ಭಯಗೊಳ್ಳುತ್ತಾಳೆ.

ಪುಟ್ಟಕ್ಕಗೆ ಸಮಾಧಾನ ಮಾಡಿದ ಕಂಠಿ
ಆ ವೇಳೆ ಕಂಠಿ ಪುಟ್ಟಕ್ಕನಿಗೆ ಸಮಾಧಾನ ಮಾಡಿ ಸ್ನೇಹಾಳನ್ನು ಹುಡುಕಲು ತೆರಳುತ್ತಾರೆ. ಎಲ್ಲೇ ಹುಡುಕಿದರೂ ಸ್ನೇಹಾ ಸಿಗದಿದ್ದನ್ನು ನೋಡಿ ಬಾವಿಗೆ ಏನಾದರೂ ಬಿದ್ದಿರಬಹುದು ಎಂದುಕೊಂಡು ಕಂಠಿ ಬಾವಿಯಲ್ಲಿ ಕೂಡ ಹುಡುಕುತ್ತಾನೆ. ಇನ್ನು ಮನೆಗೆ ಬಂದ ಬಂಗಾರಮ್ಮ ನಂಜಮ್ಮ ಮಾತನಾಡಿದ ರೀತಿಯನ್ನು ನೆನಪು ಮಾಡಿಕೊಂಡು ಕಿಡಿಕಾರುತ್ತಾ ಇರುತ್ತಾಳೆ. ಇನ್ನು ಮಕ್ಕಳಿಬ್ಬರು ಇದೀಗ ನನ್ನ ಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅಲ್ಲಿಂದ ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











