Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಅದ್ಧೂರಿಯಾಗಿ ನಡೆದ ಪುಟ್ಟಕ್ಕನ ಮಗಳ ನಿಶ್ಚಿತಾರ್ಥ
ಸ್ನೇಹಾ ಹಾಗೂ ಸುಮಾಳಿಗೆ ಮುರಳಿ ಸರ್ ಸುಳ್ಳು ಹೇಳಿದ್ದಾರೆ ಎಂದು ತಿಳಿದು ಹೋಗುತ್ತದೆ. ಈ ವೇಳೆ ಸ್ನೇಹಾ ಬಳಿ ಸುಮಾ ಅಕ್ಕ ನನಗೆ ಎಲ್ಲಾ ತಿಳಿದು ಹೋಗಿದೆ ಎನ್ನುತ್ತಾಳೆ. ಈ ಸಮಯದಲ್ಲಿ ಸ್ನೇಹಾ ನಾನೇ ಅವರ ಬಳಿ ಮಾತನಾಡುತ್ತೇನೆ ಎಂದು ಹೇಳಿದಾಗ ಸುಮಾ ತಡೆಯುತ್ತ ಇರುತ್ತಾಳೆ. ಬಳಿಕ ಸುಮಾ ಈಗ ಅದೆಲ್ಲ ಕೇಳಲು ಟೈಮ್ ಇಲ್ಲ, ಈಗ ನಾವೇನಾದರೂ ಮಾತನಾಡಲು ಹೋದರೆ ನಾವು ಮಾತನಾಡುವುದನ್ನು ಕದ್ದು ಕೇಳಿಸಿಕೊಂಡೆವು ಎಂಬ ಅಪವಾದ ಬರುತ್ತದೆ ಎನ್ನುತ್ತಾಳೆ.
ಈಗ ಗೋಪಾಲನನ್ನು ಕರಿಯೋದು ಒಂದೇ ದಾರಿ ಎಂದಾಗ ಸ್ನೇಹಾ ಮಾತ್ರ ಇದನ್ನು ಯಾವುದನ್ನು ಕೇಳದೆ ಸುಮ್ಮನೆ ಇರುತ್ತಾಳೆ ಬಳಿಕ ಗೋಪಾಲ ಎಂಬ ಮಾತು ಕೇಳಿದ ಕೂಡಲೇ ಸಿಡಿದೆದ್ದ ಸಹನಾ ಎಂದಿಗೂ ಅವರನ್ನು ನಾನು ಕರೆದುಕೊಳ್ಳುವುದು ಇಲ್ಲ, ಅವನನ್ನು ಕರೆಯಿಸಬೇಕು ಎಂದು ನಿನ್ನ ಮನದಲ್ಲಿ ಇದ್ದರೆ ಅದನ್ನು ಈಗಲೇ ಕಿತ್ತು ಹಾಕು ಎಂದು ತಾಕೀತು ಮಾಡುತ್ತಾಳೆ.
ಈ ವೇಳೆ ಸ್ನೇಹಾ ಸುಮಾ ಇಬ್ಬರು ಮಾತನಾಡುತ್ತಾಇರುವುದನ್ನು ನೋಡಿದ ಪುಟ್ಟಕ್ಕ ಏನಾಯಿತು ಎಂದು ಕೇಳುತ್ತಾಳೆ. ಅಮ್ಮ ನಿನ್ನ ಗಂಡ ಬಂದರೆ ಮಾತ್ರ ಈ ಎಂಗೇಜ್ಮೆಂಟ್ ನಡೆಯೋದು ಇಲ್ಲ ಅಂದ್ರೆ ಇಲ್ಲ ಎಂದು ಮುರಳಿ ಸರ್ ಅಮ್ಮ ಹೇಳುವುದನ್ನು ಕೇಳಿಸಿಕೊಂಡೆ, ಮುರಳಿ ಸರ್ ನಮ್ಮ ಬಳಿ ಸುಳ್ಳು ಹೇಳಿದ್ದಾರೆ ಅಮ್ಮ ಎಂದು ಸುಮಾ ಬೇಸರದಿಂದ ಹೇಳುತ್ತಾಳೆ.

ಪುಟ್ಟಕ್ಕನಿಗೆ ಎಲ್ಲಾ ತಿಳಿದಿದೆ ಎಂಬುದನ್ನು ಅರಿತ ಸ್ನೇಹಾ
ಪುಟ್ಟಕ್ಕ ಇದರ ಬಗ್ಗೆ ಯಾರ ಬಳಿ ಮಾತನಾಡಬೇಡಿ ಎಂದು ಹೇಳಿ ಒಳಗೆ ಹೋಗಲು ಹೇಳುತ್ತಾಳೆ. ಇದನ್ನೆಲ್ಲ ನೋಡಿದ ಸ್ನೇಹಾಗೆ ಒಂದು ಅರ್ಥ ಆಗುತ್ತದೆ. ಇದೆಲ್ಲ ಅಮ್ಮನಿಗೆ ಮೊದಲೇ ತಿಳಿದಿದೆ ಎಂದು ಆದರೆ ಮುರಳಿ ಸರ್ ಮಾಡಿದ ತಪ್ಪು ಕೆಲಸಕ್ಕೆ ಎಲ್ಲರೂ ಬೆಲೆ ತೆರಬೇಕಾದ ಅನಿವಾರ್ಯತೆ ಬಂದು ಒದಗಿದೆ. ಇನ್ನು ಸ್ನೇಹಾ ರೂಮಿನ ಒಳಗೆ ಬಂದು ಕೋಪದಿಂದ ಕುಳಿತುಕೊಳ್ಳುತ್ತ ಇರುತ್ತಾಳೆ.

ಪುಟ್ಟಕ್ಕನ ಪರದಾಟ ನೋಡಿದ ರಾಜಿಗೆ ಖುಷಿಯೋ ಖುಷಿ
ಅಲ್ಲಿಗೆ ಬಂದ ಕಂಠಿ ಸ್ನೇಹಾ ಬಳಿ.ಕೇಳುತ್ತಾನೆ ಯಾಕೆ ಏನಾಯಿತು ಎಂದೆಲ್ಲ ಕೇಳಿ ಸ್ನೇಹಾನಾ ಸಮಾಧಾನ ಮಾಡಲು ಬರುತ್ತಾನೆ. ಆದರೆ ಸ್ನೇಹಾ ಮಾತ್ರ ಕೋಪದಲ್ಲಿ ಕುದಿಯುತ್ತಾ ಇರುತ್ತಾಳೆ. ಕಂಠಿಯನ್ನು ನೋಡಿದ ಸ್ನೇಹಾ ಶ್ರೀ ನೀವು ಹೀಗೆಲ್ಲ ಮಾತನಾಡುತ್ತಾ ಇದ್ದೀರಿ ಎಂದರೆ ನೀವು ಅವರ ಕಡೆ ಇರಬೇಕು ಅದಕ್ಕೆ ಹೀಗೆ ಮಾತನಾಡುತ್ತಾ ಇದ್ದೀರಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಪ್ರಾಣ ಇರುವವರೆಗೂ ನಿಮ್ಮ ಕಡೆಗೆ ಎಂದು ಹೇಳುತ್ತಾನೆ ಸ್ನೇಹಾಗೆ ಏನು ಹೇಳಬೇಕೋ ತಿಳಿಯದೇ ಕಂಠಿ ಮುಖ ನೋಡುತ್ತ ಇರುತ್ತಾಳೆ. ರಾಜೀ ಮಂಜಮ್ಮನಿಗೆ ಕರೆ ಮಾಡಿ ಅಲ್ಲಿ ಏನು ನಡೆಯುತ್ತಿದೆ ಎಂದು ಕೇಳುತ್ತಾ ಇರುತ್ತಾಳೆ. ಪುಟ್ಟಕ್ಕ ಆತಂಕದಲ್ಲಿ ಇರುವ ವಿಡಿಯೋವನ್ನು ಮಂಜಮ್ಮ ಕಳುಹಿಸುತ್ತಾಳೆ. ಇದನ್ನು ನೋಡಿ ರಾಜಿ ಬಹಳ ಖುಷಿ ಪಡುತ್ತಾಳೆ. ಪುಟ್ಟಕ್ಕ ಇರುವೆ ಬಿಟ್ಟವರ ಹಾಗೆ ಅತ್ತಿಂದ ಇತ್ತ ಓಡಾಡುತ್ತಾ ಇರುತ್ತಾಳೆ. ಇದನ್ನು ರಾಜಿ ಗಂಡನಿಗೆ ತೋರಿಸುತ್ತಾ ಇರುತ್ತಾಳೆ. ಇನ್ನು ಪುಟ್ಟಕ್ಕನ ಬಳಿ ಪುರೋಹಿತರು ಅಮ್ಮ ನಿಶ್ಚಿತಾರ್ಥದ ಮುಹೂರ್ತ ಹತ್ತಿರ ಬರುತ್ತಿದೆ ಗಂಡ ಹೆಣ್ಣು ಉಂಗುರ ಬದಲಿಸುವ ಶಾಸ್ತ್ರ ತಾಂಬೂಲ ಶಾಸ್ತ್ರ ನಡೆಸುವ ಎಂದು ಹೇಳುತ್ತಾರೆ.

ನಿಶ್ಚಿತಾರ್ಥಕ್ಕೆ ಬಂದ ರಾಜಿ - ಗೋಪಾಲ
ಇದೇ ಸಮಯಕ್ಕೆ ಕೌಸಲ್ಯ ಸ್ವಲ್ಪ ಇರಿ ಪುರೋಹಿತರೆ ಪುಟ್ಟಕ್ಕ ಅವರ ಗಂಡ ಬರುತ್ತಾರೆ ಎಂದು ಹೇಳುತ್ತಾಳೆ. ಇದಕ್ಕೆ ಸಹನಾ ಅವರು ಬರುವುದಿಲ್ಲ ಎಂದು ನಾವು ಹೇಳಿದೆವು ಅಲ್ವಾ ಎಂದು ಹೇಳುತ್ತಾಳೆ. ಕೌಸಲ್ಯ ಯಾರ ಬಳಿ ಹೇಳಿದ್ರಿ ಎಂದಾಗ ಸಹನಾ ಮೇಷ್ಟ್ರ ಮುಖ ನೋಡುತ್ತಾಳೆ. ಆಗ ಕೌಸಲ್ಯ ಅವನನ್ನು ಯಾಕೆ ನೋಡುತ್ತಾ ಇದ್ದೀಯಾ, ಅವನ ಬಳಿ ಹೇಳಿದಿಯಾ, ಅವನು ನಿಮಗೆ ಎನು ಹೇಳಿದ್ದಾನೆ ನನಗೆ ಗೊತ್ತಿಲ್ಲ, ಆದರೆ ನಾನು ಖಡಾ ಖಂಡಿತ ಹೇಳಿದ್ದೇನೆ, ನಿಮ್ಮ ಅಪ್ಪ ಬಾರದೇ ನಿಶ್ಚಿತಾರ್ಥ ನಡೆಯೋದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾಳೆ. ಸಹನ ಮೇಷ್ಟ್ರೇ ನೀವು ಈ ವಿಚಾರದಲ್ಲಿ ನನ್ನ ಬಳಿ ಸುಳ್ಳು ಹೇಳಿದಿರಾ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ಆಗ ಮೇಷ್ಟ್ರ ತಂದೆ ನೀವು ಅವರನ್ನು ಕರೆದಿದ್ರಾ ಇಲ್ವಾ ಎಂದುನ ಕೇಳುತ್ತಾರೆ. ಪುಟ್ಟಕ್ಕ ಕರೆದಿದ್ದೇನೆ, ಆದರೆ... ಎಂದು ತೊದಲುತ್ತಾ ಇರುವಾಗ ಕಂಠಿ ಇರುವ ವಿಚಾರವನ್ನು ತಿಳಿಸುತ್ತಾನೆ. ಆದರೆ ಕೌಸಲ್ಯ ಕಂಠಿ ಮಾತಿಗೆ ಕೋಪಗೊಳ್ಳುತ್ತಾಳೆ. ಸ್ನೇಹಾ ಕಠೋರವಾಗಿ ಮಾತನಾಡುತ್ತಾಳೆ. ಕೌಸಲ್ಯಗೆ ಕೋಪ ಬಂದು ಎದ್ದು ನಿಲ್ಲುತ್ತಾಳೆ. ಈ ನಿಶ್ಚಿತಾರ್ಥ ನಡೆಯೋದಿಲ್ಲ ಎಂದು ಹೇಳುತ್ತಾಳೆ. ಈ ಸಮಯಕ್ಕೆ ಒಳಗೆ ಬಂದ ರಾಜೀ ಹಾಗೂ ಗೋಪಾಲ ಯಾಕೆ ಈ ನಿಶ್ಚಿತಾರ್ಥ ನಡೆಯೋದಿಲ್ಲ ನಡೆಯುತ್ತದೆ ಎಂದು ಹೇಳಿದಾಗ ಕೌಸಲ್ಯಗೆ ಶಾಕ್ ಆಗುತ್ತದೆ ..