Puttakkana Makkalu: ಪುಟ್ಟಕ್ಕ ವರದಕ್ಷಿಣೆ ಕೊಟ್ಟ ವಿಚಾರ ಸುಮಾಗೆ ಗೊತ್ತಾಯಿತು; ಮುಂದೇನು ಮಾಡ್ತಾಳೆ ಸುಮಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಬಳೆ ತೊಡಿಸುವ ಕಾರ್ಯಕ್ರಮ ಕೂಡ ನಡೆದು ಹೋಗಿದೆ. ಆದರೆ ಸ್ನೇಹಾನ ಕಂಡರೆ ಕಂಠಿ ತಲೆ ಕೆಡಿಸಿಕೊಳ್ಳಲಿಲ್ಲ. ಇದರಿಂದ ಸ್ನೇಹಾ ಮನಸ್ಸಿಗೆ ಕೂಡ ನೋವು ಆಗಿದೆ. ಕಂಠಿ ಕಂಡರೆ ಸ್ನೇಹಾಗೆ ಬಹಳ ಪ್ರೀತಿ ಆದರೆ ಕಂಠಿಗೆ ಮಾತ್ರ ಸ್ನೇಹಾ ಮೇಲೆ ಇದ್ದ ಗೌರವ ಹೊರಟು ಹೋಗಿದೆ .
ಸ್ನೇಹಾ ಅಳುತ್ತಲೇ ಬಳೆ ಶಸ್ತ್ರ ಮಾಡಿಸಿಕೊಳ್ಳುತ್ತ ಇರುತ್ತಾಳೆ. ಆದರೆ ಕಂಠಿಗೆ ತನ್ನ ಮದುವೆ ಹುಡುಗಿಯನ್ನು ನೋಡಿದ ಕೂಡಲೇ ಸ್ನೇಹಾ ಎದುರಿಗೆ ಬಂದ ಹಾಗೆ ಆಗುತ್ತದೆ. ಇದನ್ನು ನೋಡಿದ ವಸುಗೆ ಬಹಳ ಬೇಸರ ಆಗುತ್ತದೆ.
ತನ್ನ ಅಣ್ಣ ಹೇಗೆ ಇದ್ದ ಆದರೆ ಇದೀಗ ಹೇಗೆ ಆದ ಸ್ನೇಹಾನಾ ಮರೆಯಲು ಎಷ್ಟೆಲ್ಲ ಕಷ್ಟ ಪಡಬೇಕು ನನ್ನ ಅಣ್ಣ ಎಂದೆಲ್ಲ ಯೋಚನೆ ಮಾಡುತ್ತಾ ಇದ್ದಾಳೆ. ಸ್ನೇಹಾ ಸ್ಥಿತಿ ನೋಡಲು ಆಗದೇ ಸಹನಾ ಮುರಳಿಯನ್ನು ಕರೆದುಕೊಂಡು ಬಂದು ಕೇಳುತ್ತಾಳೆ. ಆಗ ಮುರಳಿ ನೀನು ಏನೇ ಹೇಳು ನನಗೆ ಆಕೆ ಭುವನ್ ಜೊತೆ ಮದುವೆ ಆಗುವುದೇ ಸೂಕ್ತ ಎನ್ನುತ್ತಾನೆ.

ಸಹನಾ ಇಷ್ಟರವರೆಗೆ ಕಂಠಿ ಸ್ನೇಹಾ ಒಂದಾಗಲಿ ಎಂದೆಲ್ಲ ಆಸೆ ಇಟ್ಟುಕೊಂಡಿದ್ದೀರಿ ಆದರೆ ಇದೀಗ ಬೇಡ ಎಂದು ಹೇಳುತ್ತ ಇದ್ದೀರಾ ಯಾಕೆ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಇರುತ್ತಾಳೆ. ಇದನ್ನು ಕೇಳಿದ ಮುರಳಿ ಬೇಡ ಎಂದು ಖಡಕ್ ಆಗಿ ಉತ್ತರ ನೀಡಿ ಅಲ್ಲಿಂದ ಹೋಗುತ್ತಾನೆ. ಆಗ ಅಲ್ಲಿಗೆ ಬಂದ ಸುಮಾ ತನ್ನ ಅಕ್ಕನ ಬಳಿ ಬಾವ ಕೋಪ ಮಾಡಿಕೊಂಡಿರುವ ವಿಚಾರದ ಬಗ್ಗೆ ಕೇಳಿದ ವೇಳೆ ಸ್ನೇಹಾ ಏನು ಮಾಡಲಾಗದ ಸ್ಥಿತಿಯಲ್ಲಿ ಇದ್ದಾಳೆ.
ಅವ್ವನ ಮಾತಿಗೆ ಕಟ್ಟು ಬಿದ್ದು ತನ್ನ ಜೀವನವನ್ನು ಹಾಳು ಮಾಡಲು ಹೊರಟಿದ್ದಾಳೆ . ಯಾಕೆ ಹೀಗೆ ಆಗುತ್ತಿದೆ ಎಂದೆಲ್ಲ ಅಕ್ಕನ ಬಳಿ ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ಸಹನಾ ತನ್ನ ತಂಗಿ ಬಳಿ ಇದಕ್ಕೆಲ್ಲ ಕಾರಣ ಬಂಗಾರಮ್ಮ ಎಂದಾಗ ಸುಮಾಗೆ ಶಾಕ್ ಮೇಲೆ ಶಾಕ್ ಆಗುತ್ತದೆ.
ಸಹನಾಗೆ ತನಗೆ ವರದಕ್ಷಿಣೆ ಅಮ್ಮ ಕೊಟ್ಟಿದ್ದಾರೆ ಎನ್ನುವುದು ಬಹಳ ಬೇಸರದ ಸಂಗತಿ ಆಗಿತ್ತು, ಆದರೆ ವರದಕ್ಷಿಣೆ ಕೊಡಲು 15 ಲಕ್ಷ ಸಾಲವನ್ನು ಬಂಗಾರಮ್ಮನಿಂದ ತೆಗೆದುಕೊಂಡಿರುವುದು ಸಹನಾಗೆ ಅಸಮಾಧಾನ ನೀಡಿದೆ. ಸಹನಾ ಮಾತ್ರ ಈ ಬಗ್ಗೆ ಯೋಚನೆ ಮಾಡಿ ಸಾಕಾಗಿ ಹೋಗುತ್ತದೆ. ಬಳಿಕ ಆಕೆ ಸುಮಾ ಬಳಿ ಅಮ್ಮ ವರದಕ್ಷಿಣೆ ಕೊಟ್ಟಿದ್ದಾರೆ. ಅದು ಕೂಡ ಬಂಗಾರಮ್ಮನ ಕೈಯಿಂದ ಸಾಲ ತೆಗೆದುಕೊಂಡು ಇದ್ದಾರೆ ಎಂದು ಹೇಳಿದಾಗ ಸುಮಾಳಿಗೆ ಶಾಕ್ ಆಗುತ್ತದೆ.
ಅಮ್ಮ ಹೇಗೆ ಹಣ ಕೊಟ್ಟಳು ಯಾಕೆ ಕೊಟ್ಟಳು, ಅದು ನಮ್ಮ ಕಣ್ಣು ತಪ್ಪಿಸಿ ಇಷ್ಟೆಲ್ಲ ಕೆಲಸ ಮಾಡಿದ್ದಾಳ ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಆದರೆ ಈ ಬಗ್ಗೆ ಸುಮಾ ತನ್ನ ತಾಯಿಯನ್ನು ಪ್ರಶ್ನೆ ಮಾಡದೇ ಇರಾಲಾರಳು. ಇನ್ನು ಬಂಗಾರಮ್ಮ ಹಣ ಕೊಟ್ಟ ಕಾರಣ ಇದೀಗ ತನ್ನ ತಾಯಿ ಅವರ ಮಾತು ಕೇಳಬೇಕಾಗಿ ಬಂತು ಎಂದು ಯೋಚನೆ ಮಾಡುತ್ತಾ ಇರುತ್ತಾರೆ.


Click it and Unblock the Notifications











