Puttakkana Makkalu: ಗೋಪಾಲನ ಮೇಲಿನ ಸಿಟ್ಟಿಗೆ ಪುಟ್ಟಕ್ಕನ ಮನೆ ಬಿಟ್ಟು ಹೋದ ಸ್ನೇಹಾ!

By Poorva

ರಾಜೇಶ್ವರಿ ಬಗ್ಗೆ ಗೋಪಾಲನ ಮಾತು ಕೇಳಿದ ಊರವರು ಎಲ್ಲರೂ ನಗುತ್ತಾರೆ. ಗೋಪಾಲನಿಗೆ ಇಲ್ಲವೋ ನೆನಪಿರುತ್ತದೆ. ಎಲ್ಲವೂ ಮರೆತು ಹೋದಂತೆ ನಾಟಕ ಆಡುತ್ತಿದ್ದಾನೆ. ಆತನಿಗೆ ಆ ರಾಜಿ ಸಹವಾಸಕ್ಕಿಂತ ಪುಟ್ಟಕ್ಕನ ಜೊತೆ ಇರುವುದೇ ಅದೆಷ್ಟೋ ಮೇಲೂ ಎಂದು ಯೋಚನೆ.. ಆದರೆ, ಇದೆಲ್ಲವೂ ಪುಟ್ಟಕ್ಕಗೆ ತಿಳಿದಿಲ್ಲ. ಗೋಪಾಲನ ಸುಳ್ಳು ಮಾತುಗಳನ್ನು ನಂಬಿ ಪುಟ್ಟಕ್ಕ ಮೋಸ ಹೋಗಿದ್ದಾಳೆ.

ಇತ್ತ, ಸ್ನೇಹಾ ಮಾತ್ರ ಅಮ್ಮನ ಬಳಿ ಆಗಾಗ್ಗೆ, ಈ ಗೋಪಾಲ ಸುಳ್ಳು ಹೇಳುತ್ತಾ ಇದ್ದಾನೆ ಆತನಿಗೆ ಎಲ್ಲವೂ ತಿಳಿದಿದೆ ಎಂದರು ಪುಟ್ಟಕ್ಕ ನಂಬದೆ ಹೋಗುತ್ತಾರೆ. ಇನ್ನು ಮುರಳಿ ಸಹನಾ ಬಳಿ ಮಾತನಾಡುವುದನ್ನು ಕಡಿಮೆ ಮಾಡಿದ್ದಾನೆ . ಆತ ಆತನ ಕಲಿಗ್ ಜೊತೆ ಹೆಚ್ಚು ಸಲುಗೆಯಿಂದ ನೋಡಿದ ಸಹನಾ ಮಾತ್ರ ಬಹಳ ಕೋಪ ಮಾಡಿಕೊಂಡಿಕೊಂಡಿದ್ದಾಳೆ.

kannada serial Puttakkana Makkalu Written Update on january 5th episode

ಮುರಳಿ ಸಹನಾ ಬಳಿ ಬಂದು ಸಹನಾ ಬೇಗ ಬೇಗ ಊಟ ಮಾಡು .. ಇವತ್ತು ಮನೆಗೆ ಹೋಗೋಣ, ನನಗೆ ನಿನ್ನನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಸಾಧ್ಯ ಆಗುವುದಿಲ್ಲ ಎಂದಾಗ ಸಹನಾ ಖಡಾ ಖಂಡಿತವಾಗಿ ನಾನು ನಿಮ್ಮ ಮನೆಗೆ ಬರುವುದು ಇಲ್ಲ ಎಂದೆಲ್ಲ ಆಕೆಯ ಮನದಲ್ಲಿ ಇರುವ ವೇದನೆಯನ್ನು ಹೊರ ಹಾಕುತ್ತಾಳೆ. ಜೊತೆಗೆ ಕೌಸಲ್ಯ ಮುಖಕ್ಕೂ ಮಂಗಳಾರತಿ ಮಾಡಿ ನೇರವಾಗಿ ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡು ಅಳುತ್ತಾಳೆ .

ಗೋಪಾಲನ ಮೇಲೆ ಮುನಿಸಿಕೊಂಡ ಸ್ನೇಹಾ

ಪುಟ್ಟಕ್ಕ ಏನೇ ಹೇಳಿದರೂ ಅದನ್ನು ಯಾವುದನ್ನು ಕೇಳದೆ ಜೋರಾಗಿ ಅಳುತ್ತಾಳೆ. ಇತ್ತ ಕಡೆ ಗೋಪಾಲನ ಮೇಲೆ ಮುನಿಸಿಕೊಂಡ ಸ್ನೇಹಾ ಮಾತ್ರ ಎನು ಮಾಡಬೇಕು ಎಂದು ತಿಳಿಯದೇ ಅಮ್ಮ ಈತ ಈ ಮನೆಯಲ್ಲಿ ಇದ್ದರೆ ನಾನು ಈ ಮನೆ ಹೊಸಿಲು ಯಾವತ್ತೂ ತುಳಿಯುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ನೇರವಾಗಿ ಅತ್ತೆ ಮನೆಗೆ ಬರುತ್ತಾಳೆ.

kannada serial Puttakkana Makkalu Written Update on january 5th episode

ರಾಧಾ ಸ್ಥಿತಿ ಕಂಡು ಮರುಗಿದ ಸ್ನೇಹಾ

ಬಂಗಾರಮ್ಮನ ಮನೆಗೆ ಬಂದಾಗ ರಾಧಾ ಕಥೆ ಸ್ನೇಹಾಗೆ ತಿಳಿಯುತ್ತದೆ . ಆಕೆಗೆ ಎನು ಮಾಡುವುದು ಎಂದು ತಿಳಿಯದೇ ವಸು ಬಳಿ ಹೋಗುತ್ತಾಳೆ. ರಾಧಾ ಹಾಗೂ ಆಕೆಯ ತಾಯಿ ಶಶಿಕಲಾ ಚೆನ್ನಾಗಿಯೇ ಡ್ರಾಮ ಮಾಡುತ್ತಾ ಇರುತ್ತಾರೆ. ವಸು ಬಳಿಗೆ ಹೋದ ಸ್ನೇಹಾ ಮನದ ವೇದನೆಯನ್ನು ಹೊರ ಹಾಕುತ್ತಾಳೆ.

ವಸು ಗರ್ಭಿಣಿ ? ಮುಂದೇನು ಮಾಡುತ್ತಾಳೆ ಸ್ನೇಹಾ ?

ಇನ್ನೇನು ವಸು ರೂಮ್‌ನಿಂದಾ ಹೊರ ಹೋಗಬೇಕು ಎಂದಾಗ ಅಲ್ಲೇ ಇದ್ದ ಪ್ರಗ್ನೆಂಟ್ ಕಿಟ್ ನೋಡಿ ಸ್ನೇಹಾಗೆ ಎಲ್ಲಾ ತಿಳಿಯುತ್ತದೆ. ಆದರೆ ಅದನ್ನೆಲ್ಲ ನೋಡಿದ ವಸು ಜೋರಾಗಿ ಅಳುತ್ತಾಳೆ. ಇನ್ನು ಸ್ನೇಹಾ ಚಂದ್ರು ಅಣ್ಣನನ್ನು ಮೀಟ್ ಮಾಡಿ ಎಲ್ಲಾ ವಿಚಾರ ಹೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ನಂಜಮ್ಮ ಬರುತ್ತಾರೆ.

More from Filmibeat

English summary
Puttakkana Makkalu serial Written Update on january 5th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X