Puttakkana Makkalu:ಕಂಠಿಯನ್ನು ನೆನೆದು ಕಣ್ಣೀರು ಹಾಕಿತ್ತೀರೋ ಸ್ನೇಹಾ.. ಭುವನ್‌ನನ್ನು ಒಪ್ಪಿಕೊಳ್ಳುತ್ತಾಳಾ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಭಾವನಾತ್ಮಕ ಸನ್ನಿವೇಶಗಳಿಂದ ಮುನ್ನುಗ್ಗುತ್ತಿದೆ. ಇದೀಗ ಸುಮಾ ಅಕ್ಕನ ಬಳಿ ಒಂದು ಫೋಟೋ ತೋರಿಸುತ್ತಾಳೆ. ಬಳಿಕ ಅಕ್ಕನ ಬಳಿ ಹೇಳುತ್ತಾಳೆ "ದೇವರು ನೂರಾರು ದಾರಿ ತೋರಿಸುತ್ತಾರೆ. ಆದರೆ ಮನುಷ್ಯ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಇಲ್ಲ ಎಂದು ಇದು ಕೂಡ ಹಾಗೆ ಆಗಿದೆ" ಎಂದು ಹೇಳುತ್ತಾಳೆ.

ಆ ಫೋಟೋ ನೋಡಿ ಸ್ನೇಹಾಗೆ ಬಹಳ ಬೇಸರ ಆಗುತ್ತದೆ. ಅದು ಬೇರೆ ಯಾವ ಫೋಟೋ ಅಲ್ಲ ಬ್ಯಾನರ್‌ನಲ್ಲಿ ಅಳವಡಿಸಲಾಗಿದ್ದ ಫೋಟೋವನ್ನು ನೋಡಿದ ಸ್ನೇಹಾಗೆ ಮಾತ್ರ ಅಳುವೇ ಬರುತ್ತದೆ. "ಏನು ಮಾಡುವುದು? ಇದೀಗ ನಾನು ಮಾಡಿದ್ದೆ ಸರಿಯಾ? ಎಂದೆಲ್ಲ ಹೇಳುತ್ತಿರುತ್ತಾಳೆ. ಕಂಠಿ ಕೂಡ ಬಹಳ ನೋವಿನಲ್ಲಿ ಇರುತ್ತಾನೆ. ಸ್ನೇಹಾಳನ್ನು ನೋಡಿದ ಕಂಠಿಗೆ ಮಾತ್ರ ಬಹಳ ನೋವಾಗುತ್ತೆ.ಇನ್ನೆಂದೂ ಸ್ನೇಹಾ ನನ್ನ ಜೀವನದಲ್ಲಿ ಬರುವುದು ಇಲ್ಲ ಎಂದು ನೆನಪಿಸಿಕೊಂಡ ಕಂಠಿಗೆ ಕೂಡ ನೋವಾಗುತ್ತದೆ.

Kannada serial Puttakkana Makkalu written update on June 13th

ನಾನು ಅಂದುಕೊಂಡಿದ್ದೆ ಬೇರೆ ಆಗುತ್ತಿರುವುದು ಬೇರೆ ಯಾಕೆ ಹೀಗೆ ಆಗುತ್ತಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.ಮನೆಯವರೆಲ್ಲ ಸಂತೋಷವಾಗಿ ಇರುವ ಸಮಯದಲ್ಲಿ ತಂದೆ ತಾಯಿಯ ಮನಸಿಗೆ ಯಾಕೆ ನೋವು ಕೊಡುವುದು ಎಂದು ಯೋಚನೆ ಮಾಡುತ್ತಿರುತ್ತಾರೆ. ಇನ್ನೂ ಸ್ನೇಹಾ ರೂಮಿನಲ್ಲಿ ಒಂಟಿಯಾಗಿ ಇರುತ್ತಾಳೆ. ಇದನ್ನು ಗಮನಿಸಿದ ಭುವನ್ ಆಕೆಯ ಬಳಿ ಮಾತನಾಡಲು ಬರುತ್ತಾನೆ. ಜೊತೆಗೆ ಉಡುಗೊರೆಗಳನ್ನು ತೆಗೆದುಕೊಂಡು ಬರುತ್ತಾನೆ.

ಬೇಸರ ಪಟ್ಟುಕೊಂಡ ಸ್ನೇಹಾ

ಸ್ನೇಹಾ ಬಳಿ ಮಾತನಾಡಿದಾಗ ಆಕೆಗೆ ಕೊಂಚ ಕಿರಿ ಕಿರು ಆಗುತ್ತಾ ಇರುತ್ತದೆ. ಭುವನ್ ಮೆತ್ತಗೆ "ಸ್ನೇಹಾ ನಿನ್ನ ಬಳಿ ನಾನು ಮಾತನಾಡಬೇಕು" ಎಂದು ಹೇಳಿದಾಗ ಸ್ನೇಹಾ ಕನ್ನಡಿಯ ಕಡೆ ಮುಖ ತೋರಿಸಿ ನಿಲ್ಲುತ್ತಾಳೆ. ಮಾತು ಮುಂದುವರೆಸಿದ ಭುವನ್ "ನಾನು ಬಂದಿದ್ದು ನಿಮಗೆ ರಿಂಗ್ ತೋರಿಸಲು..ಹೇಗಿದೆ ರಿಂಗ್ ಎಂದು ಹೇಳಿ.." ಎಂದಾಗ ಸ್ನೇಹಾಗೆ ಏನು ಹೇಳಬೇಕು ಎಂದು ತಿಳಿಯದೇ ಕೈಯಲ್ಲಿ ಇದ್ದ ಬೆಲೆಯನ್ನು ತೆಗೆಯುತ್ತಾ ಇರುತ್ತಾಳೆ.

ಸ್ನೇಹಾ ಬಳಿ ಮನದ ಮಾತು ಹೇಳಿಕೊಂಡ ಭುವನ್

ಭುವನ್ ತನ್ನ ಮನದ ಮಾತುಗಳನ್ನು ಸ್ನೇಹಾ ಬಳಿ ಹೇಳುತ್ತಿರುವಾಗ ಸ್ನೇಹಾ ಕಣ್ಣಾಲಿಗಳು ತುಂಬಿ ಬರುತ್ತಿತ್ತು. ಭುವನ್ ಬಹಳ ಖುಷಿಯಿಂದ ನಾನು ಏನನ್ನೂ ಮಿಸ್ ಮಾಡಿಕೊಂಡು ಇದ್ದೇನೆ ಎಂದು ಅನ್ನಿಸುತ್ತಿತ್ತು. ಆದರೆ, ಈಗ ನನಗೆ ಗೊತ್ತಾಗುತ್ತಿದೆ. ನಾನೇನು ಮಿಸ್ ಮಾಡಿಕೊಂಡಿದ್ದೆ ಅದು ನಿನ್ನನ್ನೇ ಎಂದು ಹೇಳಿ ಪ್ರಪೋಸ್ ಮಾಡುತ್ತಾನೆ.

ಭುವನ್ ಪ್ರಪೋಸ್.. ಸ್ನೇಹಾಗೆ ಆಘಾತ

ಆಗ ಸ್ನೇಹಾಗೆ ಬಳೆ ತುಂಡಾಗಿ ಕೈ ಗೆ ತಾಕಿ ನೋವು ಆಗುತ್ತದೆ. ಹಾಗೆಯೇ ಭುವನ್ ಪ್ರಪೋಸ್ ಮಾಡಿದ್ದು ನೋಡಿ ಇನ್ನೂ ಆಘಾತ ಆಗುತ್ತದೆ. ಸ್ನೇಹಾ ಅಳುತ್ತಿರುತ್ತಾಳೆ. ಮನದಲ್ಲಿ ಕಂಠಿಯನ್ನು ಇಟ್ಟುಕೊಂಡು ಹೇಗೆ ನಾನು ಬೇರೆ ಹುಡುಗನನ್ನು ನೋಡಲಿ ಎಂದು ಅಳುತ್ತಾ ಇರುತ್ತಾಳೆ. ಇನ್ನು ಭುವನ್ ಸ್ನೇಹಾ ಹತ್ತಿರ ಬಂದು ಹೇಳುತ್ತಾನೆ.

ಕಂಠಿ ನೆನಪಲ್ಲಿ ಇರುವ ಸ್ನೇಹ

ಒಂದು ಸಲ ಈ ರಿಂಗ್ ನೋಡಿ ಬಿಡು ಇಷ್ಟ ಆಯಿತಾ ಎಂದು ರಿಂಗ್ ತೋರಿಸಿ ಕೇಳಿದಾಗ ಹೂ ಚೆನ್ನಾಗಿದೆ ಎಂದು ಹೇಳುತ್ತಾರೆ. ಬಳಿಕ ಅಲ್ಲಿಂದ ಭುವನ್ ಹೋಗುತ್ತಾನೆ. ಇನ್ನು ಸ್ನೇಹಾ ಕಂಠಿ ನೆನಪಲಿ ಅಳುತ್ತಿರುತ್ತಾಳೆ. ಏನು ಮಾಡುವುದು ಎಂದು ದಿಕ್ಕು ತೋಚದೆ ತನ್ನನ್ನು ತಾನು ಸಂತೈಸಿಕೊಳ್ಳಲು ಆಗದೆ ಪರದಾಡುತ್ತಿರುತ್ತಾಳೆ.

More from Filmibeat

English summary
Kannada serial Puttakkana Makkalu written update on June 13th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X