Puttakkana Makkalu: ಪುಟ್ಟಕ್ಕನಿಗೆ ಕಷ್ಟಗಳ ಮೇಲೆ ಕಷ್ಟ.. ಸಹನಾ ಪ್ರಶ್ನೆಗೆ ಉತ್ತರಿಸುತ್ತಾಳಾ ಪುಟ್ಟಕ್ಕ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡದ ನಂಬರ್ 1 ಧಾರಾವಾಹಿ. ಸೆಂಟಿಮೆಂಟ್, ಟ್ವಿಸ್ಟ್ ಹಾಗೂ ಲವ್‌ಸ್ಟೋರಿಗಳಿಂದ ವೀಕ್ಷಕರನ್ನು ಹಿಡಿದಿಟ್ಟಿದೆ. ಸದ್ಯ ಈ ಧಾರಾವಾಹಿಯಲ್ಲಿ ಸ್ನೇಹಾ ಹಾಗೂ ಕಂಠಿ ಎಪಿಸೋಡ್ ನಡೆಯುತ್ತಿದೆ.
ಇದೀಗ ಕಂಠಿಗೆ ಸ್ನೇಹಳದ್ದೇ ಜ್ಞಾನ. ಸ್ನೇಹಾ ಯಾಕೆ ಹೀಗೆ ಆಡುತ್ತಾ ಇದ್ದಾಳೆ. ನನ್ನ ಜೊತೆ ಮಾತನಾಡದೆ ಇರಲು ಕಾರಣ ಆದರೂ ಏನು ಎಂದು ಮನದಲ್ಲೇ ಪ್ರಶ್ನೆ ಮಾಡುತ್ತಿದ್ದಾನೆ. ಅದೇ ವೇಳೆ ಮುರಳಿ ಹಾಗೂ ಸುಮಾ ಕಂಠಿ ಬಳಿ ಬರುತ್ತಾರೆ. "ಇತ್ತೀಚಿಗೆ ಅಕ್ಕ ಹಾಗೂ ನಿಮ್ಮ ನಡುವೆ ಏನೋ ನಡೆಯುತ್ತಾ ಇದೆ. ಅದೇನು ಬಗೆ ಹರಿಸಿಕೊಳ್ಳಿ. ಯಾಕೆಂದರೆ, ಮುಂದೊಂದು ದಿನ ದೊಡ್ಡ ಪ್ರಾಬ್ಲಂ ಆಗಬಾರದು ಅಲ್ವಾ. ಅವತ್ತು ಸಹನಾ ಅಕ್ಕ ಹಾಗೂ ಮೇಷ್ಟ್ರು ಜಗಳ ಆಡಿದ್ದಾಗ ಯಾವ ರೀತಿಯಲ್ಲಿ ಸಹಾಯ ಮಾಡಿದೆವು. ಅದೇ ರೀತಿ ನಾನು ಸಹಾಯ ಮಾಡುತ್ತೇನೆ. ಭಾವ ನಿಮಗೆ ಲೊಕೇಶನ್ ಕಳಿಸುತ್ತೇನೆ. ಅಲ್ಲಿಗೆ ಬಂದರೆ ಸಾಕು" ಎಂದು ಹೇಳುತ್ತಾಳೆ.

ಕಂಠಿ ದುಃಖಕ್ಕೆ ಸುಮನಾ ಸಾಂತ್ವನ
ಮುರಳಿ ಕೂಡ ಸುಮಾ ಹೇಳುತ್ತಿರುವುದು ಸರಿ ಎನ್ನುವ ಹಾಗೆ ಮಾತನಾಡಿ ಅಲ್ಲಿಂದ ಹೊರಟು ಹೋಗುತ್ತಾನೆ ಇನ್ನೂ ಕಂಠಿ ಮಾತ್ರ ಏನಾದರೂ ಆಗಲಿ ನನ್ನ ಹುಡುಗಿ ಮಾತ್ರ ನನ್ನ ಜೊತೆ ಇಂದಿನಂತೆ ಇರಬೇಕು. ಎಂದೆಲ್ಲ ಯೋಚನೆ ಮಾಡಿ ಸುಮಾ ಎಲ್ಲಿಗೆ ಬರಲು ಹೇಳುತ್ತಾಳೋ ಅಲ್ಲಿಗೆ ಹೋಗುತ್ತಾನೆ. ಆಗ ಸ್ನೇಹಾ, ಸುಮನಾ ಕೈ ಹಿಡಿದುಕೊಂಡು ಹಿಂದೆಯಿಂದ ಬರುತ್ತಾಳೆ.
ನಮ್ಮ ಹುಡುಗಿ ಬಂದಾಯಿತು. ಆದರೆ, ಆಕೆಯ ಜೊತೆ ಮಾತನಾಡಿ ಎಲ್ಲಾ ವಿಚಾರ ಬಗೆ ಹರಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾನೆ. ಇನ್ನೂ ಸುಮಾ ಅಕ್ಕನ ಬಳಿ ಏನೇನೋ ಸಬೂಬು ಹೇಳಿ ಅಲ್ಲಿಂದ ಹೋಗುತ್ತಾಳೆ. ಸ್ನೇಹಾ ಮಾತ್ರ ಪೆಚ್ಚು ಮುಖ ಹಾಕಿಕೊಂಡು ಒಬ್ಬಳೇ ಕುಳಿತು ಇರಬೇಕಾದರೆ ಅಲ್ಲಿಗೆ ಕಂಠಿ ಬರುತ್ತಾನೆ.
ಕಂಠಿ ನೋಡಿ ಶಾಕ್ ಆದ ಸ್ನೇಹಾ
ಕಂಠಿಯನ್ನು ನೋಡಿದ ಸ್ನೇಹಾಗೆ ಮಾತ್ರ ಕೊಂಚ ಶಾಕ್ ಆಗಿ ಎದ್ದು ನಿಲ್ಲುತ್ತಾಳೆ. "ಇದಾ ವಿಚಾರ ಆ ಸುಮಾ ಇಲ್ಲಿಂದ ಹೋದಾಗಲೇ ಅಂದುಕೊಂಡೆ, ಏನೋ ಒಂದು ಗಿಮಿಕ್ ಮಾಡುತ್ತಿದ್ದಾಳೆ ಎಂದು. ಅದು ಇರಲಿ ನಿಮ್ಮ ಬಳಿ ನಾನು ಪದೇ ಪದೇ ಹೇಳುತ್ತಿದ್ದೇನೆ. ನನಗೆ ನೀವು ಇಷ್ಟ ಇಲ್ಲ. ಆದರೂ, ನನ್ನ ಬಳಿಗೆ ಬಂದು ಮಾತನಾಡುತ್ತಿದ್ದೀರ.. ಯಾಕೆ ಹೀಗೆ ಮಾಡುತ್ತಿದ್ದೀರಾ? ನೀವು ನನಗೆ ಇಷ್ಟ ಇಲ್ಲ. ಶ್ರೀ ದಯವಿಟ್ಟು ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ. ನೀವು ರೈತರು.. ರೈತರನ್ನು ನಾನು ಮದುವೆ ಆಗುವುದು ಇಲ್ಲ. ನನಗೆ ನಿಮಗೂ ಸೆಟ್ ಆಗುವುದು ಇಲ್ಲ. ಆದ ಕಾರಣ ನನಗೆ ನೀವು ಇಷ್ಟ ಇಲ್ಲ. ದಯಮಾಡಿ ನನ್ನ ಮರೆತು ಬಿಡಿ. ನನ್ನ ಹಿಂದೆ ಬರಬೇಡಿ" ಎಂದು ಸ್ನೇಹಾ ಹೇಳುತ್ತಾಳೆ.

ಇದನ್ನು ಕೇಳಿದ ಕಂಠಿಗೆ ಬಹಳ ಆಘಾತ ಆಗುತ್ತದೆ. ಸ್ನೇಹಾ ಬಾಯಿಯಿಂದ ಇಂತಹ ಮಾತು ಬರುತ್ತದೆ ಎಂದು ಅಂದುಕೊಂಡಿರುವುದಿಲ್ಲ. ಇದರಿಂದ ಬೇಸರಗೊಂಡ ಕಂಠಿ ಮಾತ್ರ ಸುಮ್ಮನೆ ಇರುತ್ತಾಳೆ. ಬಾಯಿಗೆ ಬಂದ ಹಾಗೆ ಮಾತನಾಡಿದ ಸ್ನೇಹಾ ಅಲ್ಲಿಂದ ಸೀದಾ ಹೋಗುತ್ತಾಳೆ. ಕಲ್ಯಾಣಿಯ ಪಕ್ಕದಲ್ಲಿ ಅಳುತ್ತಾ ಕಂಠಿ ಕುಳಿತು ಇರಬೇಕಾದರೆ ಅಲ್ಲಿಗೆ ಬಂಗಾರಮ್ಮ ಬರುತ್ತಾರೆ. ಕಂಠಿಯನ್ನು ಸಮಾಧಾನ ಮಾಡುತ್ತಾರೆ. ಆದರೆ, ಕಂಠಿ ಮಾತ್ರ ಜೋರಾಗಿ ಅತ್ತು ಬಿಡುತ್ತಾನೆ. ಆ ಬಳಿಕ ನಾನು ಯಾಕೆ ಅಳಬೇಕು ಎಂದೆಲ್ಲಾ ಮಾತನಾಡುತ್ತಾನೆ.
ಮಗನನ್ನು ಸಂತೈಸಿದ ಬಂಗಾರಮ್ಮ
ಇನ್ನು ಬಂಗಾರಮ್ಮ ಮಗನ ಮುಂದೆ ಬಹಳ ನಾಟಕೀಯವಾಗಿ ಮಾತನಾಡುತ್ತಾಳೆ. ಆದರೆ, ಅಮ್ಮ ಮಾಡಿದ ಕಿತಾಪತಿಯಿಂದ ಸ್ನೇಹಾ ದೂರ ಆಗುತ್ತಿದ್ದಾಳೆ ಎಂಬುವುದು ಕಂಠಿ ಅರಿವಿಗೆ ಬರುವುದು ಇಲ್ಲ. ಇನ್ನು ಸಹನಾಗೆ ತನ್ನ ತಾಯಿ ವರದಕ್ಷಿಣೆ ಕೊಟ್ಟಿರುವ ವಿಚಾರ ಶಾಂತಕ್ಕಾನಿಂದ ತಿಳಿದು ಹೋಗಿದೆ. ಪುಟ್ಟಕ್ಕನ ಬದುಕಲ್ಲಿ ಮುಂದೇನಾಗುತ್ತೆ? ಅನ್ನೋದೇ ಮುಂದಿನ ಸಂಚಿಕೆಯ ಕುತೂಹಲ.


Click it and Unblock the Notifications











