Puttakkana Makkalu: "ಎಂದೆಂದಿಗೂ ಸ್ನೇಹಾನೇ ಈ ಮನೆ ಸೊಸೆ" ಎಂದ ಕಂಠಿ.. ಬಂಗಾರಮ್ಮನ ರಿಯಾಕ್ಷನ್ ಏನು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನೋಡುಗರಿಗೆ ಇನ್ನಷ್ಟು ಮುದ ನೀಡುತ್ತಿದೆ. ಇದೀಗ ಕಂಠಿ ಬಳಿ ಬಂಗಾರಮ್ಮ ಮದುವೆ ಮಾತುಕತೆ ಪ್ರಸ್ತಾಪ ಮಾಡುತ್ತಾ ಇದ್ದಾರೆ . ಕಂಠಿ ಮಾತ್ರ ಅಮ್ಮನ ಮಾತು ಕೇಳಿ ಮಾತ್ರ ಕೊಂಚ ಶಾಕ್ ಆಗುತ್ತಾನೆ. ಇಲ್ಲ ಅಮ್ಮ ಸ್ನೇಹಾ ನನ್ನ ಮೇಲೆ ಕೊಂಚ ಕೋಪ ಮಾಡಿಕೊಂಡು ಇದ್ದಾಳೆ ಅಷ್ಟೇ. ಯಾವತ್ತಿದ್ದರೂ ಅವಳೇ ನಿನ್ನ ಸೊಸೆ. ಬೇರೆಯವರನ್ನು ನಾನು ಎಂದಿಗೂ ಮದುವೆ ಆಗುವುದು ಇಲ್ಲ ಎಂದು ಹೇಳುತ್ತಾನೆ .

ಇದನ್ನು ಕೇಳಿದ ಬಂಗಾರಮ್ಮ "ಸರಿ ಹಾಗಾದರೆ ಪುಟ್ಟಕ್ಕನ ಬಳಿ ಮಾತನಾಡುತ್ತೇನೆ" ಎಂದಾಗ ಕಂಠಿ ಅದಕ್ಕೂ ಬೇಡ ಎಂದು ಹೇಳಿ ಅಮ್ಮನನ್ನು ತಡೆದಿದ್ದಾನೆ. ಆದರೆ, ಬಂಗಾರಮ್ಮಗೆ ಮಗನ ಸ್ಥಿತಿ ನೋಡಲು ಸಾಧ್ಯ ಆಗುತ್ತಿಲ್ಲ. ಬಹಳ ಬೇಸರ ಮಾಡಿಕೊಂಡಿದ್ದಾಳೆ. ಬಂಗಾರಮ್ಮ ನೇರವಾಗಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿ, ತನ್ನ ಮಗ ಪ್ರೀತಿಯನ್ನು ಮರೆಯಲು ಅದೆಷ್ಟು ಕಷ್ಟ ಪಡುತ್ತಾ ಇದ್ದಾನೆ ಮರುಗುತ್ತಾರೆ.

Kannada serial Puttakkana Makkalu written update on May 17th

ದೇವರ ಮೊರೆ ಹೋದ ಬಂಗಾರಮ್ಮ

"ನನ್ನ ಮಗ ಈ ಕಷ್ಟದಿಂದ ಹೇಗಾದರೂ ಹೊರ ಬಂದು, ಬೇರೆ ಮದುವೆ ಆಗಲಿ. ಆ ನಂಜಮ್ಮ ನನ್ನ ಮನೆಯನ್ನು ಒಡೆದು ಹಾಕಬೇಕು ಎಂದು ಸಂಚು ಬೇರೆ ಮಾಡುತ್ತಾ ಇದ್ದಾಳೆ. ಅದಕ್ಕಾಗಿ ಈ ಹುಡುಗಿಯನ್ನು ಚೂ.. ಬಿಟ್ಟಿದ್ದಾಳೆ" ಎಂದೆಲ್ಲ ದೇವರ ಬಳಿ ಹೇಳಿ ಕೊನೆಗೆ ಇದಕ್ಕೊಂದು ಪರಿಹಾರ ಕೊಡು ಎಂದು ಹೇಳುತ್ತಾಳೆ. ಅದಾಗಲೇ ಅಲ್ಲಿಗೆ ಪುಟ್ಟಕ್ಕ ಹಾಗೂ ಸಹನಾ ಬರುತ್ತಾರೆ.

ಪುಟ್ಟಕ್ಕ, ಬಂಗಾರಮ್ಮನನ್ನು ನೋಡಿ ಸಹನಾ ಬಳಿ ಹೇಳುತ್ತಾಳೆ. "ಸಹನಾ ನೀನು ದೇವರ ದರ್ಶನ ಮಾಡಿಕೊಂಡು ಬಾ, ನಾನು ಬಂಗಾರಮ್ಮ ಬಳಿ ಮಾತನಾಡಿ ಬರುತ್ತೇನೆ" ಎಂದು ಹೇಳಿ ಬಂಗಾರಮ್ಮ ಬಳಿ ಮಾತನಾಡಲು ಹೋಗುತ್ತಾಳೆ. ಪುಟ್ಟಕ್ಕನನ್ನೂ ಕಂಡ ಬಂಗಾರಮ್ಮ ಆಶ್ಚರ್ಯ ಆಗುತ್ತದೆ. ಆ ಬಳಿಕ ಪುಟ್ಟಕ್ಕ, ಬಂಗಾರಮ್ಮನ ಬಳಿ "ಎಲ್ಲಾ ಸರಿ ಆಗಿದೆ ಅಲ್ವಾ" ಎಂದು ಬಂಗಾರಮ್ಮನ ಬಳಿ ಕೇಳುತ್ತಾರೆ.

Kannada serial Puttakkana Makkalu written update on May 17th

ಪುಟ್ಟಕ್ಕನ ಮಾತಿನಿಂದ ಬಂಗಾರಮ್ಮನಿಗೆ ಸಮಾಧಾನ

"ಅದೇ ವಿಚಾರಕ್ಕೆ ನಾನು ದೇವಾಲಯಕ್ಕೆ ಬಂದಿದ್ದು. ನಾವೇನೋ ನಮ್ಮ ಮಕ್ಕಳನ್ನು ದೂರ ದೂರ ಇಟ್ಟೆವು. ಆದರೆ ಅವರು ಬಹಳ ಕೊರಗುತ್ತಾ ಇದ್ದಾರೆ. ಪುಟ್ಟಕ್ಕ ನನ್ನ ಮಗನಿಗೆ ಅಥವಾ ನಿನ್ನ ಮಗಳಿಗೆ ಮದುವೆ ಆಗಬೇಕು" ಎಂದು ಹೇಳಿದಾಗ ಪುಟ್ಟಕ್ಕ ಹೇಳುತ್ತಾರೆ. "ನನ್ನ ಮಗಳಿಗೆ ನಾನು ಮದುವೆ ಮಾಡುತ್ತೇನೆ" ಎಂದು ಹೇಳಿದಾಗ ಬಂಗಾರಮ್ಮ ಆನಂದ ಬಾಷ್ಪ ಸುರಿಸುತ್ತಾರೆ. ಬಹಳ ಖುಷಿ ಪಡುತ್ತಾರೆ.

ಭುವನ್‌ನನ್ನು ನೇರವಾಗಿ ಪುಟ್ಟಕ್ಕನ ಮನೆಗೆ ಕರೆದುಕೊಂಡು ಬರುತ್ತಾನೆ. ಭುವನ್ ಬಳಿ ಚಂದ್ರು ಹೇಳುತ್ತಾನೆ. "ಇವತ್ತು ಪುಟ್ಟಕ್ಕನ ಬಳಿ ಎಲ್ಲಾ ವಿಚಾರವನ್ನು ಮಾತನಾಡಿ ಬಿಡೋಣ ಎಂದು ಹೇಳಿದಾಗ, ಭುವನ್‌ಗೆ ಕೊಂಚ ಭಯ ಆಗುತ್ತದೆ. ಪುಟ್ಟಕ್ಕನ ಮನೆ ಒಳಗೆ ಬಂದ ಚಂದ್ರು ಹಾಗೂ ಭುವನ್‌ನನ್ನು ಸ್ವಾಗತ ಮಾಡಿದ್ದು ಸಹನಾ. ಆ ಬಳಿಕ ಪುಟ್ಟಕ್ಕ ಬರುತ್ತಾರೆ. ಪುಟ್ಟಕ್ಕ ಬಳಿ ಚಂದ್ರು ಸನ್ನೆಯ ಮೂಲಕ ಇವನೇ ಭುವನ್ ಎಂದು ಹೇಳುತ್ತಾನೆ. ಪುಟ್ಟಕ್ಕಗೆ ಸ್ನೇಹಾನದ್ದೆ ಭಯ. ಇನ್ನು ಸ್ನೇಹಾ ಸುಮಾ ಇಬ್ಬರೂ ಬರುತ್ತಾರೆ ಭುವನ್‌ನನ್ನು ನೋಡಿದ ಸ್ನೇಹಗೆ ಕೊಂಚ ಶಾಕ್ ಆಗುತ್ತದೆ

More from Filmibeat

English summary
Kannada serial Puttakkana Makkalu written update on May 17th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X