Puttakkana Makkalu: ಸ್ನೇಹಾಗೆ ಪ್ರಪೋಸ್ ಮಾಡಿದ ಭುವನ್.. ಪ್ರೀತಿ ಒಪ್ಪುತ್ತಾಳಾ? ಕಂಠಿ ಕಥೆಯೇನು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲೀಗ ಕಂಠಿ, ಸ್ನೇಹಾ ಹಾಗೂ ಭುವನ್ ಎಪಿಸೋಡ್ ನಡೆಯುತ್ತಿದೆ. ಇದೀಗ ರಾಜೇಶ್ವರಿ ಪುಟ್ಟಕ್ಕನ ಮನೆಗೆ ಬಂದು "ಸ್ನೇಹಾ ಹಾಗೂ ಬಂಗಾರಮ್ಮನ ಮಗ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಅಲ್ವಾ ಪುಟ್ಟಕ್ಕ" ಎಂದಾಗ ಏನು ಹೇಳಬೇಕು ಎಂದು ತಿಳಿಯದೇ ಶಾಕ್ ಆಗುತ್ತಾಳೆ.

ಆಗ ರಾಜೀ ಜೋರಾಗಿ ಹೇಳುತ್ತಾಳೆ. "ನಿನ್ನ ಮಗಳಿಗೆ ಮದುವೆ ಮಾಡಿಸಲು ಬಂಗಾರಮ್ಮ ಬಳಿ ಹೇಳಿದ್ದೆ ನಾನು. ಅದೇನೋ ಹೇಳುತ್ತಿದ್ದೆ ಅಲ್ವಾ .. ಬಂಗಾರಮ್ಮ ನನ್ನ ಪರವಾಗಿ ಇದ್ದಾರೆ ಎಂದೆಲ್ಲ ಬೀಗುತ್ತಿದ್ದೆ ಅಲ್ವಾ .? ಇದೀಗ ಏನಾಯಿತು ಎಂದು ಹೇಳಿದಾಗ, ಏನು ಗೊತ್ತಿಲ್ಲದ ಹಾಗೆ ಗೋಪಾಲ ನೋಡುತ್ತಾ ನಿಂತಿರುತ್ತಾನೆ.

Kannada serial Puttakkana Makkalu written update on May 22nd

ರಾಜೀ ಮಾತು ಕೇಳಿ ಕೋಪಗೊಂಡ ಪುಟ್ಟಕ್ಕ

ಮಾತು ಮುಂದುವರೆಸಿದ ರಾಜೀ , "ಮೊದಲನೇ ಮಗಳ ಮದುವೆ ಮಾಡಲು ಲಕ್ಷ ಲಕ್ಷ ಹಣ ಕೊಟ್ಟು, ಇದೀಗ ಎರಡನೇ ಮಗಳು ಮದುವೆ ಮಾಡಲು ಹೋಗಿ ಬೀದಿಗೆ ಬೀಳುತ್ತಿಯಾ.. ಈ ಆಸ್ತಿ ಯಾವತ್ತಿದ್ದರೂ ನನ್ನದೇ" ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಮೌನ ವಾಗಿಯೇ ಇರುತ್ತಾಳೆ. ಬಳಿಕ ಅಲ್ಲಿಂದ ರಾಜೀ ಹೊರಟು ಹೋದ ಬಳಿಕ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಹಾಗೆ ಇರುತ್ತಾಳೆ ಪುಟ್ಟಕ್ಕ.

ಸ್ನೇಹಾನ ನೋಡಲು ಹೊರಟ ಕಂಠಿ

ಇನ್ನು ಕಂಠಿ, ಸ್ನೇಹಾ ಹೇಗಿದ್ದಾಳೆ ಆಕೆಯನ್ನು ನೋಡಬೇಕು ಎಂದು ಪುಟ್ಟಕ್ಕನ ಮನೆಯ ಬಳಿ ಹೋಗಬೇಕು ಎನ್ನುವ ವೇಳೆ ಅಲ್ಲಿಗೆ ಮುಂಗುಸಿ ಹಾಗೂ ಆತನ ಗೆಳೆಯ ಬರುತ್ತಾರೆ . ಅವರಿಬ್ಬರೂ ಕಂಠಿಯನ್ನೂ ಪುಟ್ಟಕ್ಕನ ಮನೆಗೆ ಹೋಗುವುದು ಬೇಡ ಎಂದು ಎಷ್ಟೇ ತಡೆದರೂ, ಹಠ ಬಿಡದ ಕಂಠಿ, ಸ್ನೇಹಾನ ನೋಡಲು ಹೋಗಬೇಕು ಎಂದು ನಿರ್ಧಾರ ಮಾಡುತ್ತಾನೆ.

Kannada serial Puttakkana Makkalu written update on May 22nd

ಇನ್ನು ಕಂಠಿ ಗೆಳೆಯರು ಅಲ್ಲಿ ನಡೆದ ವಿಚಾರವನ್ನು ಹೇಳುತ್ತಾರೆ. ಅದಕ್ಕೆ ಕಂಠಿ " ಅದೆಲ್ಲ ಸಹಜ. ಆಕೆಗೆ ನನ್ನ ಮೇಲೆ ಬಹಳ ಕೋಪ ಇದೆ. ಅದಕ್ಕೆ ಹೀಗೆಲ್ಲ ಆಡುತ್ತಿದ್ದಾಳೆ" ಎಂದು ಎದ್ದು ಹೊರಡಲು ಸಿದ್ದ ಆದಾಗ, ವಸು ಕೂಡ ಅಣ್ಣನನ್ನು ತಡೆಯುತ್ತಾರೆ. ಆ ಬಳಿಕ ಮುಂಗುಸಿ ಮೆತ್ತಗೆ ಹೇಳುತ್ತಾನೆ .

ಸ್ನೇಹಾ ಪಾರ್ಟಿಗೆ ಹೋಗುತ್ತಿರುವ ವಿಚಾರ ಕಂಠಿಗೆ ಗೊತ್ತು

ಅತ್ತಿಗೆ ಇವತ್ತು ಚಂದ್ರು ಅಣ್ಣನ ಜೊತೆ ಪಾರ್ಟಿಗೆ ಹೋಗಿದ್ದಾರೆ. ಅದಕ್ಕೆ ಹೋಗಬೇಡಿ ಎಂದು ಹೇಳಿದಾಗ ಕಂಠಿ, ಸುಮಾಗೆ ಮೆಸೇಜ್ ಮಾಡುತ್ತಾನೆ. ಸುಮಾ ಲೊಕೇಶನ್ ಶೇರ್ ಮಾಡುತ್ತಾಳೆ. ಇನ್ನು ಭುವನ್ ಮನೆಗೆ ಸ್ನೇಹಾ ಹಾಗೂ ಮನೆಯವರು ಎಲ್ಲರೂ ಆಗಮಿಸಿದಾಗ ಪುಟ್ಟಕ್ಕನ ಮನೆಯವರಿಗೆ ಭವ್ಯ ಸ್ವಾಗತ ಸಿಗುತ್ತೆ.

ಇನ್ನೂ ಪುಟ್ಟಕ್ಕ ಹಾಗೂ ಸ್ನೇಹಾ ಬಳಿ ಮಾತನಾಡುತ್ತಾ ಇರುವಾಗ ಭುವನ್ ಸ್ನೇಹಾ ಬಳಿ ಮಾತನಾಡಬೇಕು ಎಂದು ಕರೆದುಕೊಂಡು ಹೋಗುತ್ತಾನೆ. ಮನೆಯನ್ನು ಸ್ನೇಹಾಗೆ ತೋರಿಸುವಾಗ ಆಕೆಗೆ ಭುವನ್ ಮನೆ ಬಹಳ ಇಷ್ಟ ಆಗುತ್ತದೆ . ಭುವನ್ ಬಹಳ ಖುಷಿ ಪಡುತ್ತಾನೆ. ಹಾಗೆಯೇ ಆತನ ರೂಮ್‌ಗೆ ಕರೆದುಕೊಂಡು ಬರುತ್ತಾನೆ.

ಸ್ನೇಹಾ ಬಳಿ ಪ್ರೀತಿ ಹೇಳಿಕೊಂಡ ಭುವನ್

ಭುವನ್, ಸ್ನೇಹಾ ಬಳಿ ಮೆತ್ತಗೆ ಹೇಳುತ್ತಾನೆ. "ನಾನು ನಿಮ್ಮನ್ನು ಬಹಳ ಇಷ್ಟ ಪಡುತ್ತಿದ್ದೇನೆ. ನೀವೆಂದರೆ, ನನಗೆ ಬಹಳ ಇಷ್ಟ. ಆ ಕಾರಣದಿಂದಾಗಿ ನಾನು ನಿಮ್ಮ ಬಳಿ ಹೇಳುತ್ತಿದ್ದೇನೆ. ನನ್ನ ತಂದೆ ತಾಯಿ ನಿಮ್ಮ ಬಳಿ ಯಾವಾಗ ಬೇಕಾದರೂ ಮಾತನಾಡಬಹುದು" ಎಂದು ಹೇಳುತ್ತಾನೆ. ಆದರೆ, ಸ್ನೇಹಾಗೆ ಮಾತ್ರ ಏನು ಹೇಳಬೇಕು ಎಂದು ತೋಚದೇ ಸುಮ್ಮನಾಗಿ ಬಿಡುತ್ತಾಳೆ. ಇನ್ನು ಕಂಠಿ ಪಾರ್ಟಿ ನಡೆಯುತ್ತಾ ಇರುವಲ್ಲಿಗೆ ಸರ್ವೆಂಟ್ ಆಗಿ ಕೆಲಸ ಮಾಡುತ್ತಾನೆ. ಆ ವೇಳೆ ಭುವನ್ ಹಾಗೂ ಸ್ನೇಹಾ ಇಬ್ಬರೂ ನಡೆದುಕೊಂಡು ಬರುವಾಗ ಸ್ನೇಹಾ ಕೊಂಚ ಸ್ಲಿಪ್ ಆದಾಗ, ಭುವನ್ ಸ್ನೇಹಾನ ಹಿಡಿದುಕೊಂಡಾಗ ಕಂಠಿಗೆ ಶಾಕ್ ಆಗುತ್ತೆ.

More from Filmibeat

English summary
Kannada serial Puttakkana Makkalu written update on May 22nd, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X