ಸ್ನೇಹಾ ಪ್ರೀತಿ ಗೆ ಅಡ್ಡಿಯಾದ ಪುಟ್ಟಕ್ಕ.. ಅಮ್ಮನ ಮಾತಿಗೆ ಬೆಲೆ ಕೊಡುತ್ತಾಳ ಸ್ನೇಹಾ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ವೀಕ್ಷಕರನ್ನು ಬಿಟ್ಟುಕೊಟ್ಟಿಲ್ಲ . ಪ್ರತಿದಿನ ಏನಾದರೂ ಒಂದು ಟ್ವಿಸ್ಟ್ ಕಿಕ್ ಕೊಡುತ್ತಲೇ ಇದೆ. ಇದೀಗ ಸ್ನೇಹಾ ಹಾಗೂ ಕಂಠಿ ಮಧ್ಯೆ ಭುವನ್ ಎಂಬಾತ ಎಂಟ್ರಿ ಆಗಿದ್ದಾನೆ. ಭುವನ್ ಕೂಡ ಐಎಎಸ್ ಮಾಡಬೇಕು ಎಂಬ ಕನಸನ್ನು ಹೊತ್ತುಕೊಂಡಿದ್ದಾನೆ.
ಅಂದ್ಹಾಗೆ ಭುವನ್ ಇಲ್ಲಿ ಚಂದ್ರು ಕ್ಲಾಸ್‌ಮೇಟ್ ಕೂಡ ಹೌದು. ಸ್ನೇಹಾಗಿಂತ ಕೊಂಚ ಸೀನಿಯರ್. ಇನ್ನು ಅವರಿಬ್ಬರೂ ಪರೀಕ್ಷೆ ಬರೆಯುವ ವೇಳೆ ಮುಖಾಮುಖಿ ಆಗುತ್ತಾರೆ. ಭುವನ್ ಪರೀಕ್ಷೆ ಬರೆಯುವ ವೇಳೆ ಕೂಡ ಸ್ನೇಹಾ ಮುಖವನ್ನು ಆಗಾಗ ನೋಡುತ್ತಲೇ ಇರುತ್ತಾನೆ.

ಕಂಠಿಗೆ ಭುವನ್ ಪರಿಚಯ ಮಾಡಿದ ಸ್ನೇಹಾ
ಇನ್ನು ಸ್ನೇಹಾಗೆ ಮಾತ್ರ ಕಂಠಿಯದ್ದೆ ಧ್ಯಾನ. ಪರೀಕ್ಷೆ ಬರೆದು ಆದ ಬಳಿಕ ಟೈಮ್‌ಗೆ ಬಂದು ಕಂಠಿ ಜೊತೆ ಹೇಳುತ್ತಾಳೆ. ಶ್ರೀ ನಾವು ಹೊರಡೋನವೇ ಎಂದು ಕೇಳುತ್ತಾನೆ. ಇದನ್ನು ಕೇಳಿದ ಕಂಠಿ ಮಾತ್ರ ನಮಗೆ ಟ್ರೈನ್ ಎಷ್ಟು ಗಂಟೆಗೆ ಸ್ನೇಹಾ ಎಂದು ಕೇಳುತ್ತಾಳೆ.
ಶ್ರೀ ನನ್ನ ಗೆಳೆಯ ಒಬ್ಬರು ಸಿಕ್ಕಿದ್ದಾರೆ ನಾವು ಅವರ ಕಾರಿನಲ್ಲಿ ಹೋಗೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಸರಿ ಎಂದು ಹೋಗುತ್ತಾನೆ. ಆದರೆ ಕಂಠಿಗೆ ಮಾತ್ರ ಭುವನ್ ಕಾರಲ್ಲಿ ಕುಳಿತುಕೊಳ್ಳಲು ಬಹಳ ಕಿರಿ ಕಿರಿ ಆಗುತ್ತಿತ್ತು. ಸ್ನೇಹಾ ಭುವನ್ ಜೊತೆ ಹೆಚ್ಚು ಕ್ಲೋಸ್ ಆಗಿ ಇರುವುದನ್ನು ಕಂಡು ಇನ್ನೂ ಕಿರಿ ಕಿರಿ ಹೆಚ್ಚಾಗಿ ಆಗುತ್ತದೆ. ಆದರೂ ಸಹಿಸಿಕೊಂಡು ಇರುತ್ತಾನೆ.

ರೊಮ್ಯಾಂಟಿಕ್ ಮೂಡ್ ನಲ್ಲಿ ಇರುವ ಮುರಳಿ
ಇನ್ನು ಸಹನಾ ಹಾಗೂ ಮುರಳಿ ಕುಳಿತು ಮಾತನಾಡುತ್ತಾ ಇರುತ್ತಾರೆ. ಮುರಳಿ ಬಹಳ ರೊಮ್ಯಾಂಟಿಕ್ ಮೂಡ್‌ನಲ್ಲಿ ಇದ್ದಾರೆ, ಸಹನಾ ಮಾತ್ರ ಅತ್ತೆ ಬಯ್ಯುತ್ತಾರೆ ಎಂದು ಸಬೂಬು ಹೇಳುತ್ತಾರೆ. ಇನ್ನು ಮುರಳಿ ಮೆತ್ತಗೆ ಸಹನಾ ಬಳಿ ಬಂದು ಹೇಳುತ್ತಾನೆ. ಸಹನಾ ಬೇಗ ಕೆಲಸ ಮುಗಿಸಿ ಬಾ.. ನಾನು ಕಾಯುತ್ತಾ ಇರುತ್ತೇನೆ ಎಂದು ಹೇಳುತ್ತಾನೆ. ಆ ವೇಳೆ ಸಹನಾಳನ್ನು ಚಿತ್ರ ನೋಡುತ್ತಾಳೆ. ಬಳಿಕ ಎನು ಆಗದೆ ಇರುವವರ ಹಾಗೆ ಆಕ್ಟ್ ಮಾಡುತ್ತಾಳೆ.
ಸಹನಾ ಮಾತ್ರ ಅವರಿಗೆ ಚಹಾ ಕೊಟ್ಟು ಮಾವ ಹಾಗೂ ಅಣ್ಣನಿಗೆ ಚಹಾ ಕೊಡಲು ಹೋದಾಗ ಮಾವ ಅಳಿಯ ಇಬ್ಬರು 15 ಲಕ್ಷದ ಬಗ್ಗೆ ಮಾತನಾಡುತ್ತ ಇರುತ್ತಾರೆ. ಇದನ್ನು ಕೇಳಿದ ಸಹನಾ ನಲುಗಿ ಹೋಗುತ್ತಾಳೆ.ವರದಕ್ಷಿಣೆ ತೆಗೆದುಕೊಂಡು ಇರುವುದು ಸಹನಾಗೆ ನಂಬಲು ಅಸಾಧ್ಯ ಆಗುತ್ತದೆ. ಆಕೆ ಮೆತ್ತಗೆ ರೂಮ್‌ನತ್ತ ಹೋಗುತ್ತಾಳೆ. ಮುರಳಿ ಬಳಿ ವರದಕ್ಷಿಣೆ ಬಗ್ಗೆ ಅಭಿಪ್ರಾಯ ಕೂಡ ಕೇಳುತ್ತಾಳೆ.
ಸ್ನೇಹಾ ಮಾತಿಗೆ ಸೊಪ್ಪು ಹಾಕದ ಪುಟ್ಟಕ್ಕ
ಇನ್ನು ಮುರಳಿ ಮಾತ್ರ ವರದಕ್ಷಿಣೆ ಬಗ್ಗೆ ಭಾರಿ ವಿರೋಧ ವ್ಯಕ್ತ ಪಡಿಸುತ್ತಾರೆ. ಸ್ನೇಹಾ ಮನೆಗೆ ಬರುತ್ತಾಳೆ. ಮನೆಗೆ ಬಂದ ಕೂಡಲೇ ತನ್ನ ತಾಯಿಯ ಬಳಿ ಮಾತನಾಡುತ್ತಾಳೆ. ಆಗಲೇ ಪುಟ್ಟಕ್ಕ ಕೆಲವು ವಿಷಯಗಳನ್ನು ಹೇಳುತ್ತಾರೆ.
ಸ್ನೇಹಾ ನೀನು ಹೋಗಿ ಕೈ ಕಾಲು ತೊಳೆದುಕೊಂಡು ಬಾ ಆಮೇಲೆ ಮಾತಾಡೋಣ ಎಂದು ಹೇಳಿದರು. ಅಂತ ಅಮ್ಮನ ಮಾತು ಕೇಳದೆ ಮಾತು ಮುಂದುವರಿಸುತ್ತಾರೆ. ಬಳಿಕ ಕಂಠಿಯನ್ನು ಪ್ರೀತಿ ಮಾಡುವುದಾಗಿ ಹೇಳಿದಾಗ ಪುಟ್ಟಕ್ಕ ಹೇಳುತ್ತಾರೆ. ನಿನ್ನ ಮದುವೆಯ ವಿಚಾರ ನನಗೆ ಬಿಟ್ಟದ್ದು. ನೀನು ನಿರ್ಧಾರ ತೆಗೆದುಕೊಳ್ಳಬೇಡ. ಎಂದೆಲ್ಲ ಖಡಕ್ ಆಗಿ ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾಗೆ ಶಾಕ್ ಆಗುತ್ತದೆ. ಮುಂದೇನಾಗುತ್ತೆ ಅನ್ನೋದು ಕುತೂಹಲ.


Click it and Unblock the Notifications











