ಕಂಠಿ ಸ್ನೇಹಾನಾ ದೂರ ಮಾಡಲು ಹೊರಟ ಬಂಗಾರಮ್ಮ.. ಮುಂದೇನು ಮಾಡುತ್ತಾನೆ ಕಂಠಿ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಸ್ನೇಹ ಲವ್‌ಸ್ಟೋರಿಯೇ ಹೈಲೈಟ್. ಪ್ರತಿ ಸಂಚಿಕೆಯಲ್ಲೂ ಏನಾದರೂ ಟ್ವಿಸ್ಟ್ ಇದ್ದೇ ಇರುತ್ತೆ. ಇದೀಗ ಬಂಗಾರಮ್ಮ ಕಂಠಿ ಹಾಗೂ ಸ್ನೇಹಾನಾ ದೂರ ಮಾಡಲು ಪುಟ್ಟಕ್ಕ ನ ಮೇಲೆ ಒತ್ತಡ ಹೇರುತ್ತಿದ್ದಾರೆ.
ಪುಟ್ಟಕ್ಕ ಸ್ನೇಹಾ ಬಳಿ ಕಠೋರವಾಗಿ ನಡೆದುಕೊಂಡು ಮನೆಯಿಂದ ಹೊರ ಬರುತ್ತಾರೆ. ಸ್ನೇಹಾ ಎಷ್ಟೇ ಹುಡುಕಿದರೂ ಪುಟ್ಟಕ್ಕ ಸಿಗುವುದೇ ಇಲ್ಲ. ಪುಟ್ಟಕ್ಕ ದೇವರ ದರ್ಶನ ಮಾಡಿ ನನ್ನ ಮಗಳು ಹೇಗಾದರೂ ಈ ಕಷ್ಟದಿಂದ ಪಾರಾಗಲಿ ಎಂದು ಯೋಚನೆ ಮಾಡುತ್ತಿರುತ್ತಾಳೆ.

ಮನೆ ಬಿಟ್ಟು ಹೋದ ಪುಟ್ಟಕ್ಕ
ಹೇಗಪ್ಪ ಕಂಠಿ ಹಾಗೂ ಸ್ನೇಹಾನಾ ದೂರ ಮಾಡುವುದು? ಕಂಠಿ ಬಂಗಾರಮ್ಮನ ಮಗ ಎಂದು ಹೇಳಲು ಆಗದೆ ಕಷ್ಟ ಪಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಚಂದ್ರು ಬರುತ್ತಾನೆ. ಚಂದ್ರು ಪುಟ್ಟಕ್ಕನ ಬಳಿ ಯಾಕೆ ಹೀಗೆ ಮನೆ ಬಿಟ್ಟು ಬಂದಿದ್ದೀರಿ. ಸ್ನೇಹಾ, ಸುಮಾ ಎಷ್ಟು ಗಾಬರಿ ಪಟ್ಟುಕೊಂಡು ಇದ್ದಾರೆ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕ ಮಾತ್ರ ಸ್ನೇಹಾ-ಕಂಠಿ ದೂರ ಆಗುವುದರ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಏನು ಮಾಡುವುದು ಎಂದು ತಿಳಿಯದೇ ಪೆಚ್ಚಾಗಿ , ಚಂದ್ರು ಬಳಿ ಪುಟ್ಟಕ್ಕ ಮೆತ್ತಗೆ ಹೇಳುತ್ತಾರೆ.
ಅವ್ವನನ್ನು ಕಾಣದೆ ಕಂಗಾಲಾದ ಮಕ್ಕಳು
"ಚಂದ್ರು ನಿನಗೆ ಗೊತ್ತಿತ್ತು ಬಂಗಾರಮ್ಮನ ಮಗ ಎಂದು. ಆದರೂ ನನ್ನ ಬಳಿ ಒಂದು ಮಾತು ಹೇಳಲಿಲ್ಲ ಅಲ್ವಾ" ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾರೆ. ಆಗ ಚಂದ್ರು "ಸ್ನೇಹಾಗೆ ಈ ಬಗ್ಗೆ ಹೇಳಬಾರದು ಎಂದು ವಸು ಮಾತು ತೆಗೆದುಕೊಂಡಿದ್ದಳು. ಆ ಕಾರಾಣದಿಂದಾಗಿ ನನಗೆ ಏನು ಹೇಳಲು ಆಗಲಿಲ್ಲ" ಎಂದು ಹೇಳುತ್ತಾರೆ.

ಇದನ್ನು ಕೇಳಿದ ಬಳಿಕ ಪುಟ್ಟಕ್ಕ ಹೇಳುತ್ತಾರೆ. "ಸ್ನೇಹಾ ಬಳಿ ಈ ವಿಚಾರ ಹೇಳಬೇಡ ಸರಿ. ಆದರೆ ನನ್ನ ಬಳಿ ಈ ವಿಚಾರ ಪ್ರಸ್ತಾಪ ಮಾಡಬೇಕಾಗಿತ್ತು. ಆಗ ಇಷ್ಟೆಲ್ಲ ಸಮಸ್ಯೆ ಆಗುತ್ತಾ ಇರಲಿಲ್ಲ" ಎಂದು ಹೇಳಿದಾಗ ಚಂದ್ರುಗೆ ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ. ಆದರೆ ಕೊನೆಗೆ ಪುಟ್ಟಕ್ಕ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾರೆ. ಇನ್ನು ಸ್ನೇಹಾಗೆ ಹಲವು ಸಲ ಕಂಠಿ ಕರೆ ಮಾಡುತ್ತಾನೆ.
ಚಂದ್ರು ಮಾತಿಗೆ ಬೇಸರಗೊಂಡ ಪುಟ್ಟಕ್ಕ
ಕಂಠಿ, ಸ್ನೇಹಾ ಕರೆ ಸ್ವೀಕರಿಸದೇ ಇರುವುದನ್ನು ನೋಡಿ ನೇರವಾಗಿ ಪುಟ್ಟಕ್ಕನ ಮೆಸ್ ಬಳಿ ಬರುತ್ತಾನೆ. ಕಂಠಿಯನ್ನು ನೋಡಿ ಸ್ನೇಹಾಗೆ ಇನ್ನೂ ಆತಂಕ ಹೆಚ್ಚು ಆಗುತ್ತದೆ. "ಯಾಕೆ ಬಂದ್ರಿ ನೀವು?" ಎಂದು ಕೇಳಿದಾಗ ಸುಮಾ ಕೂಡ ಅಲ್ಲಿಗೆ ಬಂದು "ಅಕ್ಕ ನನ್ನ ಬಳಿ ಏನೋ ವಿಚಾರ ಮುಚ್ಚಿ ಇಟ್ಟಿದ್ದಾಳೆ. ಅಮ್ಮ ಕೂಡ ಕಾಣಿಸುತ್ತಿಲ್ಲ" ಎಂದಾಗ ಕಂಠಿ "ಬನ್ನಿ ಸ್ನೇಹಾ ಅಮ್ಮ ಎಲ್ಲಿದ್ದಾರೆ ಎಂದು ಹುಡುಕೋಣ" ಎಂದು ಕರೆಯುತ್ತಾನೆ.
ಸ್ನೇಹಾ ಮಾತ್ರ ಸುಮ್ಮನೆ ಇರುತ್ತಾಳೆ. ಇನ್ನೂ ಬಂಗಾರಮ್ಮ, ಕಂಠಿ ಮನೆಯಲ್ಲಿ ಇಲ್ಲದೆ ಇರುವುದನ್ನು ಕಂಡು ಪುಟ್ಟಕ್ಕಗೆ ಕರೆ ಮಾಡುತ್ತಾರೆ. "ನನ್ನ ಮಗ ನಿಮ್ಮ ಮನೆಗೆ ಬಂದಿದ್ದಾನೆ. ಪುಟ್ಟಕ್ಕ ಆತನನ್ನು ವಾಪಸ್ ಇಲ್ಲಿಗೆ ಕಳುಹಿಸಿ" ಎಂದು ಹೇಳಿ ಫೋನ್ ಇಡುತ್ತಾಳೆ . ಪುಟ್ಟಕ್ಕ ಸ್ನೇಹಾಗೆ ಕರೆ ಮಾಡಿ, ಶ್ರೀಯನ್ನ ಅಲ್ಲಿಂದ ಕಳುಹಿಸಲು ಹೇಳುತ್ತಾರೆ. ಸ್ನೇಹಾ ಮಾತ್ರ ಶ್ರೀ ಬಳಿ ಕೊಂಚ ಕಠೋರವಾಗಿ ನಡೆದುಕೊಳ್ಳುತ್ತಾಳೆ.


Click it and Unblock the Notifications











