Puttakkana Makkalu: ತಾಯಿಗೆ ನಿಜ ಹೇಳಿದ ಕಂಠಿ.. ಇನ್ನು ಮೇಲೆ ಬಂಗಾರಮ್ಮನ ತೆರೆ ಮರೆಯ ಆಟ ಶುರು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರ ಮಾಡುತ್ತಿರುವ ಉಮಾಶ್ರೀ ಅವರ ಮಕ್ಕಳು ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಪ್ರತಿಬಾರಿ ಸಂಕಷ್ಟ ಎದುರಾದಾಗ, ಪುಟ್ಟಕ್ಕ ಹಾಗೂ ಅವರ ಮಕ್ಕಳು ಹೇಗೆ ನಿಭಾಯಿಸುತ್ತಾರೆ ಅನ್ನೋದು ಕುತೂಹಲ ಕೆರಳಿಸುತ್ತಲೇ ಇರುತ್ತೆ.

ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ತನ್ನ ತಾಯಿಯ ಯ ಬಳಿ ನಿಜ ವಿಚಾರವನ್ನು ಹೇಳಿಕೊಂಡು ಇದ್ದಾನೆ. ಕಂಠಿ ಸ್ನೇಹಾನ ಪ್ರೀತಿ ಮಾಡುತ್ತಾ ಇರುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾನೆ. ಆಗ ಬಂಗಾರಮ್ಮಗೆ ಸಿಟ್ಟು ನೆತ್ತಿಗೇರುತ್ತೆ.

Kannada serial Puttakkana Makkalu written update on May 9th

ಮಗನ ಮಾತಿಗೆ ಸುಮ್ಮನಾದ ಬಂಗಾರಮ್ಮ

ಆದರೆ ಬಂಗಾರಮ್ಮ ಮಾತ್ರ ತನ್ನ ಮಗನ ಮಾತಿಗೆ ಮಣಿದು ಸರಿ ಆಯಿತು ಎಂದು ಹೇಳುತ್ತಾರೆ. ಆದರೆ, ಒಳಗೊಳಗೇ ಬಂಗಾರಮ್ಮನ ಮನಸ್ಸು ಕೋಪದಿಂದ ಕುದಿಯುತ್ತಿದೆ. ಆದರೂ ಮಗನ ಮುಂದೆ ತೋರಿಸಿಕೊಳ್ಳದೆ ನಗು ನಗುತ್ತಾ ಇರುತ್ತಾರೆ. ಇದನ್ನು ನೋಡಿದ ಕಂಠಿ ಕೂಡ ಖುಷಿಯಾಗಿದ್ದಾನೆ.

"ಅಮ್ಮ ಇದನ್ನೆಲ್ಲ ಇಷ್ಟು ಸಲೀಸಾಗಿ ತೆಗೆದುಕೊಳ್ಳುತ್ತಿದ್ದರು ಅಂದರೆ, ಈ ಮುಂಚೆಯೇ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೆ" ಎಂದು ಹೇಳುತ್ತಾನೆ. ಆ ಬಳಿಕ ತನ್ನ ತಾಯಿಗೆ ಸ್ನೇಹಾ ಬಗ್ಗೆ ಅರ್ಥ ಮಾಡಿಸುತ್ತಾನೆ. ಸ್ನೇಹಾ ತುಂಬಾ ಒಳ್ಳೆಯವಳು. ಆಕೆ ಮಾತು ಬಹಳ ಕಠೋರ ಎಂದೆಲ್ಲ ಹೇಳುತ್ತಾನೆ. ಆದರೆ ಬಂಗಾರಮ್ಮಗೆ ಸ್ನೇಹಾ ಎಂಬ ಮಾತು ಕೇಳುತ್ತಿರುವಾಗಲೇ ಸಿಟ್ಟು ನೆತ್ತಿಗೆ ಏರುತ್ತದೆ.

ಬಂಗಾರಮ್ಮನ ನಾಟಕ ಶುರು

ಇಷ್ಟೆಲ್ಲ ಆದ ಬಳಿಕ ಬಂಗಾರಮ್ಮ ಸುಮ್ಮನೆ ಇರುತ್ತಾರೆ. ಬಂಗಾರಮ್ಮ ಕಂಠಿಗೆ "ಸರಿ ಹಾಗಾದರೆ ಪುಟ್ಟಕ್ಕನ ಬಳಿ ಮಾತುಕತೆಗೆ ಜತೆಗೆ ಹೋಗೋಣ "ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ " ನಾನು ಸ್ನೇಹಾಗೆ ನಿನ್ನ ಮಗ ಎಂಬ ಸರಿ ವಿಚಾರ ಹೇಳಿಲ್ಲ" ಎಂದು ಹೇಳುತ್ತಾನೆ.

Kannada serial Puttakkana Makkalu written update on May 9th

" ನಾನು ನಿಜ ವಿಚಾರವನ್ನು ಹೇಳಿ ಮದುವೆ ಆಗಲು ಒಪ್ಪಿಸಿ ಆ ಬಳಿಕ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ "ಸರಿ ಎಂದು ಹೇಳಿ" ಸುಮ್ಮನಾಗಿದ್ದಾರೆ. ಇನ್ನು ಕಂಠಿಗೆ ಅಮ್ಮನ ಬೆಂಬಲ ಸಿಕ್ಕಿತು ಎಂದು ಬಹಳ ಖುಷಿ ಪಡುತ್ತಾನೆ. ಹೇಗಾದರೂ ಮಾಡಿ ಸ್ನೇಹಾ ನನ್ನಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದಾನೆ.

ಪುಟ್ಟಕ್ಕನ ಬಳಿ ಮದುವೆ ಮಾತುಕತೆಗೆ ಮುಂದಾದ ಕಂಠಿ

ಇನ್ನು ಪುಟ್ಟಕ್ಕನ ಬಳಿ ಮದುವೆ ಮಾತುಕತೆ ಮಾಡಲು ಕಂಠಿ ಮುಂದಾಗುತ್ತಾನೆ. "ನಾನು ಯಾರು ಏನು ಎಂಬುವುದು ಪುಟ್ಟಕ್ಕಗೆ ತಿಳಿದರೆ ಸಾಕು. ಆ ಕಾರಣಕ್ಕೆ ನಾನು ಹೆಣ್ಣು ಕೇಳುವ ಶಾಸ್ತ್ರಕ್ಕೆ ಕೈ ಹಾಕಿರುವುದು" ಎಂದು ಹೇಳಿ ಪುಟ್ಟಕ್ಕನ ಮನೆ ಬಳಿಗೆ ಬರುತ್ತಾನೆ ಕಂಠಿ.

ಇತ್ತ ಸ್ನೇಹಾ ತಾಯಿಯ ಮಾತಿಗೆ ಕಟ್ಟು ಬಿದ್ದು ಕಂಠಿಯನ್ನು ಮರೆಯಲು ಆಗದೆ ಬಹಳ ಚಡಪಡಿಸುತ್ತಾ ಇರುತ್ತಾಳೆ. "ಅಮ್ಮ ನೀನು ಹೇಳಿದ ಮಾತಿಗೆ ನಾನು ಯಾವತ್ತೂ ಇಲ್ಲ ಎಂದು ಹೇಳಿಯೇ ಇಲ್ಲ. ನೀನು ನನಗೆ ಬಹಳ ಇಷ್ಟ. ನಿನಗಾಗಿ ಇನ್ನೂ ಮುಂದೆ ಶ್ರೀ ಜೊತೆ ಮಾತನಾಡಿಸುವುದು ಇಲ್ಲ. ಏನು ಇಲ್ಲ" ಎಂದು ಹೇಳುತ್ತಾಳೆ.

" ಶ್ರೀ ಸಿಕ್ಕರೆ ಅವರ ಬಳಿ ಮುಂಚಿನ ಹಾಗೆ ಮಾತನಾಡುವುದು ಇಲ್ಲ. ದಯಮಾಡಿ ನನ್ನ ಕ್ಷಮಿಸು. ಆದರೆ, ಶ್ರೀಯನ್ನ ಮರೆತು ಬಿಡು ಎಂದು ಹೇಳಿದರೆ ನನಗೆ ಆಗುತ್ತೋ ಇಲ್ಲವೋ ಎಂದು ಭಯ ಆಗುತ್ತದೆ. ಅದಕ್ಕಾಗಿ ನಾನು ಹೀಗೆ ಹೇಳಿದೆ" ಎಂದು ಅಳುತ್ತಾಳೆ. ಆ ಬಳಿಕ ಸರಿ ಹಾಗಾದರೆ ಬಾ ಮೆಸ್ ಕೆಲಸ ಆರಂಭಿಸು ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ನೋವು ಆದರೂ ,ಅದೆಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರುತ್ತಾರೆ.

More from Filmibeat

English summary
Kannada serial Puttakkana Makkalu written update on May 9th,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X