ಕಂಠಿ ಬಳಿ ನೋವು ತೋಡಿಕೊಂಡು ಕಣ್ಣೀರಾದ ಸ್ನೇಹಾ

By ಪೂರ್ವ

ಪುಟ್ಟಕ್ಕನಿಗೆ ಮಗಳು ಸಹನಾಳದ್ದೆ ಚಿಂತೆ. ಸಹನಾಗೆ ಆಕೆಯ ಪ್ರೀತಿಯ ಹುಡುಗನನ್ನು ಹೇಗಾದರೂ ಮಾಡಿ ಮದುವೆ ಮಾಡಬೇಕು ಎನ್ನುವ ಮಹಾದಾಸೆ ಪುಟ್ಟಕ್ಕನಲ್ಲಿ ಮೂಡಿದೆ. ಪುಟ್ಟಕ್ಕ ಅದೆಷ್ಟೋ ಕಷ್ಟ ಪಟ್ಟು ಮೆಸ್ ಮಾಡುತ್ತಾಳೆ ಮೆಸ್ ಮಾಡಲು ಮೊದಲಿಗೆ ಸಾಥ್ ಕೊಟ್ಟಿದೆ ಸಹನಾ. ಪುಟ್ಟಕ್ಕ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿದರೆ ಮತ್ತೊಬ್ಬಳನ್ನೂ ಅಷ್ಟಾಗಿ ಓದಿಸಿಲ್ಲ. ಆಕೆ ಮೆಸ್‌ ಅನ್ನು ನೋಡಿಕೊಳ್ಳುತ್ತಾ ಪುಟ್ಟಕ್ಕನಿಗೆ ಸಹಾಯ ಮಾಡುತ್ತಾ ಇರುತ್ತಾಳೆ. ಇನ್ನು ಸಹನಾ ಮದುವೆ ವಿಚಾರವಾಗಿ ಮೇಷ್ಟ್ರ ಅಕ್ಕ ಮನೆಗೆ ಬಂದು ರಾಜಿ ಮಾಡಿದ ಕುತಂತ್ರ ಬುದ್ದಿಯನ್ನು ಎಲ್ಲಾ ಹೇಳಿ. ಪುಟ್ಟಕ್ಕನಿಗೆ ಧೈರ್ಯ ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.

ಆದರೆ ಹೋಗುವ ಮುನ್ನ ಹೇಳುತ್ತಾಳೆ. ಮದುವೆ ಖರ್ಚು ಮಾತ್ರ ನೀವೇ ನೋಡಿಕೊಳ್ಳಬೇಕು ಇದು ನಾನು ಮೊದಲೇ ಹೇಳುತ್ತೇನೆ ಯಾಕೆ ಎಂದರೆ ನನ್ನ ಅಪ್ಪ ಆ ವಿಚಾರದಲ್ಲಿ ಸ್ವಲ್ಪ ಮಾತನಾಡಬಹುದು ಆ ಕಾರಣಕ್ಕೆ ಮದುವೆ ನೀವು ತೆಗೆಯಬೇಕು ಎಂದು ಒಮ್ಮಿಂದೊಮ್ಮೆಲೇ ಹೇಳಿದರೆ ಬಹಳ ಕಷ್ಟ ಇದರಿಂದ ನಾನೇ ನಿಮ್ಮ ಬಳಿ ಹೇಳುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ ಇದನ್ನೆಲ್ಲ ಕೇಳಿದ ಮಂಜಮ್ಮ, ರಾಜೇಶ್ವರಿಗೆ ಕರೆ ಮಾಡಿ ಹೇಳುತ್ತಾಳೆ. ಮೇಷ್ಟ್ರ ಅಕ್ಕ ಬಂದು ನೀವು ಮೇಷ್ಟ್ರ ಮನೆಯಲ್ಲಿ ಏನೆಲ್ಲ ತಕಾರಾರು ಮಾಡಿದಿರಿ ಅದನ್ನೆಲ್ಲ ಹೇಳಿದ್ದಾಳೆ.

ಪುಟ್ಟಕ್ಕನ ಮನೆಗೆ ಬಂದ ಮೇಷ್ಟ್ರ ಅಕ್ಕ

ಪುಟ್ಟಕ್ಕನ ಮನೆಗೆ ಬಂದ ಮೇಷ್ಟ್ರ ಅಕ್ಕ

ನೀವು ಬಹಳ ಹುಷಾರಾಗಿ ಇರಬೇಕು. ಪುಟ್ಟಕ್ಕ ಇದನ್ನೆಲ್ಲ ಕೇಳಿ ಶಾಕ್ ಆದಾಗ ಮೇಷ್ಟ್ರ ಅಕ್ಕ ನಾನೇ ಮುಂದೆ ನಿಂತು ಮದುವೆ ಮಾಡುತ್ತೇನೆ ನೀವು ನೆಮ್ಮದಿ ಆಗಿ ಇರಿ ಎಂದು ಹೇಳಿದ್ದಾಳೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಜೇಶ್ವರಿ ಅಷ್ಟೆಲ್ಲ ಮಾತನಾಡಿದಳಾ ಆಕೆ ಎಂದು ಹೇಳುತ್ತಾಳೆ. ಬಳಿಕ ಫೋನ್ ಇಟ್ಟು ಕಾಳಿ ಬಳಿ ಹೇಳಿದಾಗ ಕಾಳಿ, ಸಿಟ್ಟಿನಿಂದ, ನನಗೆ ಏನೂ ಸಂಬಂಧ ಇಲ್ಲ ಎನ್ನುವ ಹಾಗೆ ಆಕೆ ಒಂದು ಮೂಲೆಯಲ್ಲಿ ಇದ್ದಳು ಈಗ ದರ್ಪ ತೋರಿಸುತ್ತಾಳೆ. ಅದರಲ್ಲೂ ಮಾತು ಬೇರೆ ಕೊಡುತ್ತಾಳೆ ಎಂದು ಹೇಳುತ್ತಾನೆ.

ಮದುವೆ ತಪ್ಪಿಸಲು ರಾಜಿ-ಕಾಳಿ ಹೊಸ ಪ್ಲ್ಯಾನ್

ಮದುವೆ ತಪ್ಪಿಸಲು ರಾಜಿ-ಕಾಳಿ ಹೊಸ ಪ್ಲ್ಯಾನ್

ಬಳಿಕ ಅಕ್ಕನ ಬಳಿ ಹೇಳುತ್ತಾನೆ ಇನ್ನೂ ಉಳಿದದ್ದು ಒಂದೇ ಸಹಾನಾಳನ್ನೂ ಒತ್ತಾಯ ಪೂರ್ವಕವಾಗಿ ಮದುವೆ ಆಗುವುದು ಎಂದು ಹೇಳಿದಾಗ ಆಕೆಯ ತಂದೆ ಗೋಪಾಲ, ಹಾಗೆ ಏನಾದರು ಮಾಡಿದರೆ ಜೈಲಲ್ಲಿ ಮುದ್ದೆ ರುಬ್ಬುತ್ತಿರುತ್ತಿಯ ಎಂದು ಹೇಳುತ್ತಾನೆ. ಆಗ ರಾಜಿ, ಕಾಳಿಗೆ ಮೆತ್ತಗೆ ಸನ್ನೆ ಮಾಡುತ್ತಾಳೆ. ಅದನ್ನು ನೋಡಿದ ಕಾಳಿ ಸುಮ್ಮನಾಗುತ್ತಾನೆ. ಇನ್ನು ಪುಟ್ಟಕ್ಕ ಮಾತ್ರ ಸಹನಾ ಬಗ್ಗೆ ಮದುವೆ ಚಿಂತೆ ಮಾಡುತ್ತಾ ಇದ್ದಾಳೆ. ಇದನ್ನು ನೋಡಿದ ಸಹನಾ, ಅಮ್ಮನ ಬಳಿ ಕೇಳುತ್ತಾಳೆ, ನನ್ನಿಂದ ನಿನಗೆ ಬೇಸರ ಆಯಿತಮ್ಮ ಎಂದಾಗ ಪುಟ್ಟಕ್ಕ ಮಾತ್ರ ಇಲ್ಲ ಕಣಮ್ಮ. ಇದು ಹೆಣ್ಣು ಹೆತ್ತವರ ಧರ್ಮ ಎಂದು ಹೇಳುತ್ತಾಳೆ.

ಸ್ನೇಹಾಗೆ ಬೈದು ಕಳಿಸುವ ಚಂದ್ರು

ಸ್ನೇಹಾಗೆ ಬೈದು ಕಳಿಸುವ ಚಂದ್ರು

ಬಳಿಕ ಹಣವನ್ನು ಹೇಗೆ ಕೂಡಿ ಇಟ್ಟುಕೊಳ್ಳುವುದು ಎಂದೆಲ್ಲ ಯೋಚನೆ ಮಾಡಿದಾಗ ಯಾವುದೇ ವಿಚಾರವೂ ಅವಳಿಗೆ ಗೊತ್ತಾಗುವುದಿಲ್ಲ. ಬಳಿಕ ಮಗಳ ಬಳಿ ಯಾವುದಕ್ಕೂ ನಾನು ಸ್ವಲ್ಪ ತಯಾರಾಗಿ ಇರಬೇಕು. ಎಂದಾಗ ಸಹನಾ ಅಮ್ಮನ ಬಳಿ ಹೇಳುತ್ತಾಳೆ ಇದಕ್ಕೆಲ್ಲ ಖರ್ಚು ಮಾಡಿಲ್ಲಾ ಅಂದರೆ ಹೇಗೆ ಎಂದಾಗ ಸಹನಾ ಹೇಳುತ್ತಾಳೆ, ಅಮ್ಮ ಏನೇ ಆಗಲಿ ನಿನಗೆ ಕಷ್ಟ ಆಗಬಾರದು ಎಂದು ಹೇಳುತ್ತಾಳೆ. ಬಳಿಕ ಮದುವೆ ತಯಾರಿ ನಡೆಸುತ್ತಾಳೆ ಪುಟ್ಟಕ್ಕ. ಇನ್ನು ಚಂದ್ರು ಹಾಗೂ ಸ್ನೇಹಾ ಒಟ್ಟಿಗೆ ಮಾತನಾಡುತ್ತಿರುತ್ತಾರೆ. ಆಗ ಚಂದ್ರು, ಸ್ನೇಹಾ ಬಳಿ ಕೇಳುತ್ತಾನೆ, 'ಎಷ್ಟೊತ್ತಿಗೂ ಶ್ರೀ ನಿನ್ನ ಒಟ್ಟಿಗೆ ಇರಬೇಕಾ?. ನೀನು ಎಷ್ಟು ಬದಲಾಗಿದ್ದಿ ಅಲ್ವಾ. ನಿನ್ನಿಂದ ನನಗೆ ಬುದ್ದಿ ಮಾತು ಬೇಕಾಗಿ ಇಲ್ಲ. ನನಗೆ ತಿಳಿದಿದೆ ನಾನು ಏನು ಮಾಡಬೇಕು ಎಂದು. ನೀನು ಮಾಡುತ್ತಿರುವುದು ಏನು? ನಿನ್ನ ಕೆಲಸ ಏನು? ನೀನು ಮುಂಚಿನ ಸ್ನೇಹಾ ಅಲ್ಲ. ಹಿಂದೆ ಇದ್ದ ಸ್ನೇಹಾ ಗೆ ಗಂಡು ಮಕ್ಕಳನ್ನು ಕಂಡರೆ ಆಗುತ್ತಾ ಇರಲಿಲ್ಲ. ಆದರೆ ಈಗಿರುವ ಸ್ನೇಹಾಗೆ ಮಾತ್ರ ಗಂಡು ಮಕ್ಕಳನ್ನು ಹತ್ತಿರ ಸೇರಿಸುತ್ತಿರುವುದು ನನಗೆ ಆಗುತ್ತಿಲ್ಲ. ಎಂದು ಹೇಳಿ ಬಾಯಿಗೆ ಬಂದ ಹಾಗೆ ಬೈದು ಅಲ್ಲಿಂದ ಕಳುಹಿಸಿ ಬಿಡುತ್ತಾನೆ.

ಕಂಠಿ ಬಳಿ ದುಃಖ ತೋಡಿಕೊಳ್ಳುವ ಸ್ನೇಹಾ

ಕಂಠಿ ಬಳಿ ದುಃಖ ತೋಡಿಕೊಳ್ಳುವ ಸ್ನೇಹಾ

ಸ್ನೇಹಾ ಬಾವಿ ಕಟ್ಟೆಯ ಬಳಿ ಅಳುತ್ತಾ ಕಂಠಿ ಬಳಿ ಹೇಳುತ್ತಾಳೆ ಶ್ರೀ ಯಾರಾದರೂ ಹುಡುಗಿ ಅಳುತ್ತಾ ಇದ್ದರೆ ಅದನ್ನು ಅನೇಕ ಜನ ಉಪಯೋಗಿಸಿಕೊಳ್ಳುತ್ತಾರೆ. ಆದರೆ ನೀನು ಹಾಗೆ ಅಲ್ಲ. ಸಮಾಧಾನ ಮಾಡುತ್ತೀಯಾ. ತನ್ನ ನೋವನ್ನು ನಿಮ್ಮ ನೋವು ಎಂದುಕೊಂಡು ಮರುಗುತ್ತಿರಾ ಎಂದು ಹೇಳುತ್ತಾಳೆ. ಇನ್ನು ತಂಗಿ ಸಂಸಾರವನ್ನು ಸರಿಪಡಿಸಲು ಕಂಠಿ ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 7th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X