ಎಸ್‌ಐ ತಾಂಡವ್ ಅನ್ನು ಹೇಗೆ ತಡೆಯುತ್ತಾನೆ ಕಂಠಿ!?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಪೊಲೀಸ್, ನಿಜವಾದ ಕಂಠಿ ಯಾರು ಎಂಬ ಹುಡುಕಾಟದಲ್ಲಿದ್ದಾನೆ. ಬಂಗಾರಮ್ಮ ಗೆ ಚೆನ್ನಾಗಿ ಬೈದರೆ ನಿಜವಾದ ಕಂಠಿ ಗೆ ಕೋಪ ಬರುತ್ತೆ ಆಗ ತಿಳಿದುಕೊಳ್ಳಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇತ್ತ ಪೊಲೀಸ್ ಪೇದೆಗಳನ್ನು ವಿಚಾರಿಸುತ್ತಾ ಇರುತ್ತಾನೆ ಪೊಲೀಸ್. ಬೆಂಕಿ ಸಿಗರೇಟ್ ನ ಸುಡುತ್ತೆ. ಸುಳ್ಳು ನಂಬಿಕೆನ ಸುಡುತ್ತೇ. ದ್ರೋಹ ಮನುಷ್ಯನೇ ಸೂಡುತ್ತೆ ಈ ಮಾತನ್ನು ಯಾರೂ ಹೇಳಿದ್ದು ಗೊತ್ತಾ ಎಂದಾಗ ಒಬ್ಬ ಪೇದೆ ಹೇಳುತ್ತಾನೆ ಸರ್ ನಮ್ಮನ್ನು ಯಾಕೆ ಇಲ್ಲಿಗೆ ಕರೆ ತಂದಿದ್ದಿರಾ ಎಂದಾಗ ಕೋಪಗೊಂಡ ಎಸ್‌ಐ ಏಯ್ ಹೇಳಿದ್ದಕ್ಕೆ ಉತ್ತರ ಕೊಡಿ ಅನ್ನುತ್ತಾನೆ.

ಅದಕ್ಕೆ ಪೇದೆ ಹೇಳುತ್ತಾನೆ ನಮಗೆ ಗೊತ್ತಿಲ್ಲ ಎಂದು. ಅದಕ್ಕೆ ರುದ್ರ ತಾಂಡವ ಜೋರಾಗಿ ನಗುತ್ತಾನೆ. ಬಳಿಕ ಹೇಳುತ್ತಾನೆ ನಾನೇ ಕಣ್ರೊ, ನಾನೇ ಹೇಳಿದ್ದು. ಸ್ಟೇಷನ್ ನಲ್ಲಿ ನಾನು ಬಂದಾಗಿನಿಂದ ಏನೋ ಕಿತಾಪತಿ ನಡೆಯುತ್ತಿದೆ ಎಂಬುವುದು ನನಗೆ ಚೆನ್ನಾಗಿ ಗೊತ್ತಾಗುತ್ತಿದೆ. ಆದರೆ ನನಗೆ ಹಿಂದೆಯಿಂದ ಹೊಡೀತಿರ ಎಂದು ಗೊತ್ತಿರಲಿಲ್ಲ. ಅವನ್ಯಾರನ್ನೋ ಕರೆತಂದು ಬಂಗಾರಮ್ಮನ ಮಗ ಅಂತ ನನ್ನೆ ನಂಬಿಸಿ ಬಿಟ್ರಿ ಅಲ್ವಾ ಎಂದು ಹೇಳಿ ತನ್ನ ಜೇಬಲ್ಲಿದ್ದ ರಿವಾಲ್ವರ್ ಹೊರ ತೆಗೆಯುತ್ತಾನೆ.

ಪೇದೆಗಳನ್ನು ಹೆದರಿಸಿದ ಎಸ್‌ಐ ತಾಂಡವ್

ಪೇದೆಗಳನ್ನು ಹೆದರಿಸಿದ ಎಸ್‌ಐ ತಾಂಡವ್

ಇದನ್ನು ನೋಡಿದ ಪೇದೆಗೆ ಇನ್ನೂ ನಡುಕ ಶುರುವಾಗುತ್ತದೆ. ಬಳಿಕ ತಾಂಡವ ಹೇಳುತ್ತಾನೆ ಅಬ್ಬಾಬಾ ನನ್ನ ಕಂಡ್ರೆ ಭಯನೆ ಇಲ್ವಾ ನಿಮಗೆ ರಿವಾಲ್ವರ್ ನೋಡಿದ ಕೂಡಲೇ ಕಾಲು ಎರಡು ಹೆಜ್ಜೆ ಹಿಂದೆ ಹೋಗಿಬಿಟ್ಟಿತು ದೊಡ್ಡವರು ಹೇಳಿದ್ದಾರೆ ಅಲ್ವಾ ದಂಡಂ ದಶಗುಣಂ ಅಂತ ಸರಿಯಾಗಿ ಹೇಳಿದ್ದಾರೆ ಎನ್ನುತ್ತಾನೆ.

ಮುಸುಕು ಹಾಕಿಕೊಂಡು ಬರುವ ಕಂಠಿ

ಮುಸುಕು ಹಾಕಿಕೊಂಡು ಬರುವ ಕಂಠಿ

ನಾನು ಈಗ ಇದಕ್ಕೆ ಕೆಲಸ ಕೊಡಬಾರದು ಅಂದ್ರೆ ಆ ಬಂಗಾರಮ್ಮನ ಮಗ ಯಾರು ಎಂದು ಹೇಳಬೇಕು. ಅವನ ಮೇಲೆ ನೀವಿಬ್ಬರೂ ಕಂಪ್ಲೇಂಟ್ ಕೊಡಿ ಅವನನ್ನು ಸೀದಾ ಎತ್ತಿ ಹಾಕಿಕೊಂಡು ಸ್ಟೇಷನ್‌ಗೆ ಹೋಗೋಣ ಎನ್ನುತ್ತಿರುವಾಗಲೆ ಇತ್ತ ಹಾಗೂ ಹೀಗೂ ಕಂಠಿ ಮುಸುಕು ಹಾಕಿಕೊಂಡು ಸ್ಟೈಲ್ ಆಗಿ ಬರುತ್ತಾನೆ. ಬಳಿಕ ಬಂದು ತಾಂಡವ ಗೆ ವಾರ್ನಿಂಗ್ ಕೊಡುತ್ತಾನೆ.

ಕಂಠಿಗೆ ಗನ್ ತೋರಿಸುವ ತಾಂಡವ್

ಕಂಠಿಗೆ ಗನ್ ತೋರಿಸುವ ತಾಂಡವ್

ನಿನ್ನನ್ನು ಮುಗಿಸಿಬಿಡುತ್ತೇನೆ ಎನ್ನುತ್ತಾ ತಾಂಡವ್, ಕಂಠಿಗೆ ಬಂದೂಕು ತೋರಿಸುತ್ತಾನೆ. ಆದರೆ ಹೆದರದ ಕಂಠಿ, ನನ್ನ ಜೈಲಿಗೆ ಹಾಕಿದರೂ ಹತ್ತು ನಿಮಿಷದಲ್ಲಿ ಹೊರಗೆ ಬರ್ತೀನಿ, ನಿನ್ನ ಕೈಗೆ ಸಿಗದೆ ಓಡಾಡುತ್ತಿದ್ದಿದ್ದು ನಿನಗೆ ಹೆದರಿ ಅಲ್ಲ. ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮಾರ್ಕೆಟ್‌ನಲ್ಲಿ ಹೊಡೆದಿದ್ದೀನಿ. ಅದನ್ನು ಊರ ಜನರ ಮುಂದೆ ಮಾಡೋಕೆ ಹೆಚ್ಚು ಕಾಲ ಬೇಕಾಗಲ್ಲ ಎಂದು ಎಚ್ಚರಿಕೆ ಕೊಡುತ್ತಾನೆ ಕಂಠಿ.

ಕಂಠಿಯ ಬಲಹೀನತೆ ಮೇಲೆ ಹೊಡೆಯುವ ಎಸ್‌ಐ

ಕಂಠಿಯ ಬಲಹೀನತೆ ಮೇಲೆ ಹೊಡೆಯುವ ಎಸ್‌ಐ

ಆದರೆ ಎಸ್‌ಐ ತಾಂಡವ್, ಕಂಠಿಯ ಬಲಹೀನತೆಯ ಮೇಲೆ ಹೊಡೆಯಲು ನೋಡುತ್ತಾನೆ. ಆ ಹುಡುಗಿ ಸ್ನೇಹಾಗೂ ನೀನು ಯಾರೆಂಬುದು ಗೊತ್ತಿಲ್ಲ. ಆಕೆಯ ಜೊತೆಯೇ ಬಂದು ನಿನ್ನ ಮೇಲೆಯೇ ಆಕೆ ದೂರು ಕೊಟ್ಟಾಗಲೂ ಸುಮ್ಮನಿದ್ದೆ ಅಂದರೆ ಏನೋ ಇದೆ. ಆ ಹುಡುಗಿಗೆ ಸತ್ಯ ಹೇಳ್ತೀನಿ. ಆ ಹುಡುಗಿ ಹತ್ರ ಇನ್ನೊಮ್ಮೆ ದೂರು ಕೊಡಿಸಿಕೊಂಡು ಆ ಮೇಲೆ ನಿನ್ನನ್ನು ಒಳಗೆ ಹಾಕ್ತೀನಿ ಎನ್ನುತ್ತಾನೆ. ಈಗ ಎಸ್‌ಐ ತಾಂಡವ್ ನಿಜವಾಗಿಯೂ ಸ್ನೇಹಾ ಬಳಿ ಸತ್ಯ ಹೇಳುತ್ತಾನಾ ಅಥವಾ ಅದರ ಒಳಗಾಗಿ ಕಂಠಿ ಏನಾದರೂ ಮಾಡುತ್ತಾನಾ ನೋಡಬೇಕಿದೆ.

English summary
Kannada serial Puttakkana Makkalu written updated on 10th August. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X