Don't Miss!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Lifestyle
ಮಾಘ ಪೂರ್ಣಿಮೆ: ಮಾಘ ಸ್ನಾನ ಯಾವಾಗ? ಈ ಸ್ನಾನದ ಮಹತ್ವವೇನು ಗೊತ್ತಾ?
- News
ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಬಾಂಡ್ ಪಡೆಯದ ಬ್ಯಾಂಕರ್ಗಳು, ಕುಸಿದ ಷೇರುಗಳು-ಮಂದೇನು ಕಾದಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ನಿಶ್ಚಿತಾರ್ಥ ಆದ್ರೂ ಮುರಳಿ ಮೇಷ್ಟ್ರ ಮೇಲೆ ಸಹನಾಗೆ ಮುನಿಸು
ಮುರಳಿ ಹಾಗೂ ಸಹನಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯಿತು. ಈ ವೇಳೆ ಇಬ್ಬರು ಹಾರ ಹಾಗೂ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಇದನ್ನು ನೋಡಿದ ಕೌಸಲ್ಯಗೆ ಬಹಳ ಸಿಟ್ಟು ಬರುತ್ತದೆ. ಇನ್ನು ಸಹನಗೂ ಮೇಷ್ಟ್ರ ಮೇಲೆ ಬಹಳ ಕೋಪ ಬರುತ್ತದೆ. ತನ್ನ ತಂದೆ ನಿಶ್ಚಿತಾರ್ಥಕ್ಕೆ ಬರುವುದಿಲ್ಲ ಎಂದಾಗ ತನ್ನ ಅಮ್ಮನ ಬಳಿ ಮಾತನಾಡಿ ಸರಿಪಡಿಸುತ್ತೇನೆ ಎಂದು ಸುಳ್ಳು ಹೇಳಿದ್ದ ದೊಡ್ಡ ವಿಚಾರವನ್ನು ತನ್ನ ಬಳಿ ಹೇಳದೇ ಮುಚ್ಚಿಟ್ಟು ಸುಳ್ಳು ಹೇಳದ್ದಕ್ಕೆ ಕೋಪದಲ್ಲಿ ಇರುತ್ತಾಳೆ.
ಇನ್ನು ರಾಜೀ ಹೇಗೋ ನಾವು ಬಂದಿದ್ದಕ್ಕೆ ಸರಾಗವಾಗಿ ನಿಶ್ಚಿತಾರ್ಥ ಆಯಿತು, ಇಲ್ಲವಾದರೆ ನಿಶ್ಚಿತಾರ್ಥ ಮುರಿದು ಬೀಳುತ್ತಿತ್ತು ಎಂದು ಹೇಳುತ್ತಾಳೆ. ನಾನು ಪುಟ್ಟಕ್ಕ ನನಗೆ ಕೈ ಮುಗಿದು ಧನ್ಯವಾದ ಹೇಳಬೇಕು ಎಂದು ಹೇಳುತ್ತಿಲ್ಲ, ಎಲ್ಲಾ ಚೆನ್ನಾಗಿ ಆಗಲಿ ಎನ್ನುವುದು ನನ್ನ ಉದ್ದೇಶ ಎಂದು ರಾಜಿ ಹೇಳಿದಾಗ ಸ್ನೇಹಾಗೆ ಬಹಳ ಕೋಪ ಬರುತ್ತದೆ. ಈ ವೇಳೆ ಊರಿನ ಜನ ರಾಜೀ ಮೇಲಿನ ಕೋಪ ಮರೆತು ಖುಷಿಯಿಂದ ರಾಜೀ ಮಾಡಿದ ಕೆಲಸವನ್ನು ಪ್ರೋತ್ಸಾಹಿಸುತ್ತಾರೆ.. ಇದನ್ನು ನೋಡಿದ ಕೌಸಲ್ಯಗೆ ರಾಜೀ ಮೇಲೆ ಅಸಹ್ಯ ಬರುತ್ತದೆ. ಪುಟ್ಟಕ್ಕ ಕೂಡ ರಾಜೀಗೆ ಧನ್ಯವಾದ ಹೇಳುತ್ತಾಳೆ..
ರಾಜ್ಯ
ಗೆದ್ದ
ರಾಜ
ಯಾರಾದ್ರೂ
ಇದ್ರೆ
ಅದು
ಪುನೀತ್
ಮಾತ್ರ;
ಸ್ಪಷ್ಟ
ಕನ್ನಡದಲ್ಲೇ
ಅಪ್ಪು
ಗುಣಗಾನ
ಮಾಡಿದ
ಎನ್‌ಟಿಆರ್
ಈ ವೇಳೆ ರಾಜೀ ಜೋರಾಗಿ ಪುಟ್ಟಕ್ಕ ನೀನು ನನ್ನ ಋಣದಲ್ಲಿ ಇದ್ದೀಯಾ ನೆನಪಿರಲಿ ಎಂದು ಹೇಳುತ್ತಾಳೆ. ಸುಮಾ ಅಕ್ಕ ಬಾವನ ಫೋಟೋ ತೆಗೆಯುತ್ತಾಳೆ. ಈ ವೇಳೆ ಮುರಳಿ ಮೇಷ್ಟ್ರು ಸಹನಾ ಬಳಿ ನನ್ನ ಮೇಲೆ ನಿನಗೆ ಕೋಪಾನಾ, ನನ್ನದು ತಪ್ಪಾಯಿತು ಎಂದು ಮೆಲುದನಿಯಲ್ಲಿ ಹೇಳುತ್ತಾನೆ. ಇದನ್ನು ಕೇಳಿದ ಸಹನಾಗೆ ಕಿರಿ ಕಿರಿ ಎನಿಸುತ್ತದೆ. ಬಳಿಕ ರಾಜೇಶ್ವರಿ ಎಲ್ಲರೂ ಊಟ ಮಾಡಿಕೊಂಡೇ ಹೋಗಬೇಕು, ಪುಟ್ಟಕ್ಕನ ಮನೆಗೆ ವಿಶೇಷಕ್ಕೆ ಬಂದು ಯಾರು ಹಾಗೆ ಹೋಗಬಾರದು ಅಲ್ವಾ ಪುಟ್ಟಕ್ಕ ಎಂದು ಹೇಳಿದಾಗ ಪುಟ್ಟಕ್ಕ ನಗುತ್ತಾ ಹೌದು ಎನ್ನುತ್ತಾಳೆ..

ರಾಜಿ ನಾಟಕ ನೋಡಿ ಕೌಸಲ್ಯ ತಬ್ಬಿಬ್ಬು
ಮಾತು ಮುಂದುವರಿಸಿದ ರಾಜಿ ಎಲ್ಲರೆದುರು ಆವತ್ತು ಪುಟ್ಟಕ್ಕ ಹಾಗೂ ಅವರ ಮಕ್ಕಳು ಕಾಲಿಗೆ ಬಿದ್ದು ಕೇಳಿಕೊಂಡರು ಅದಕ್ಕೆ ಬಂದೆ, ಅದೂ ಅಲ್ಲದೇ ಒಂದು ಹೆಣ್ಣಿನ ಜೀವನದ ಪ್ರಶ್ನೆ ಕೂಡ ಎಂದು ಹೇಳಿದಾಗ ಜನರು ರಾಜೀಯನ್ನು ಹೊಗಳುತ್ತಾರೆ. ಇನ್ನು ಪುಟ್ಟಕ್ಕನ ಮನೆಯಿಂದ ಎಲ್ಲರೂ ಹೋದ ಬಳಿಕ ಬಂಗಾರಮ್ಮ ಕಂಠಿಗೆ ಕರೆ ಮಾಡಿ ನಾನು ಬರುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಅಮ್ಮನಿಗೆ ಏನೇನೋ ಸಬೂಬು ಹೇಳಿ ಅಮ್ಮನನ್ನು ಬರದಂತೆ ಮಾಡುತ್ತಾನೆ. ಬಂಗಾರಮ್ಮ ತನ್ನ ಗಂಡನ ಬಳಿ ಮನದ ಮಾತನ್ನು ಹೇಳುತ್ತ ಇರುತ್ತಾಳೆ.

ಬಂಗಾರಮ್ಮನನ್ನು ತಡೆದ ಕಂಠಿ
ಪುಟ್ಟಕ್ಕನ ಮನೆಗೆ ಹೋಗುತ್ತಿದ್ದೆ ಆದರೆ ಕಂಠಿ ಬೇಡ ಎಂದ ಎಂದು ಹೇಳುತ್ತಿದ್ದಾನೆ. ಕಂಠಿಗೆ ಕೂಡ ಒಳ್ಳೆಯ ಹುಡುಗಿ ಸಿಕ್ಕಿ ಈ ಮನೆ ಬೆಳಗುತ್ತಾಳೆ, ಆದರೆ ಈ ಕೆಲಸ ಆದಷ್ಟು ಬೇಗ ಆದರೆ ಸಾಕು ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ನಂಜಮ್ಮ ಕೂಡ ಚಂದ್ರುವನ್ನು ಎಲ್ಲೂ ಹೋಗದ ಹಾಗೆ ತಡೆಯುತ್ತಾ ಇರುತ್ತಾಳೆ. ಮುರಳಿ ಮೇಷ್ಟ್ರ ಮೇಲೆ ಮುನಿಸಿಕೊಂಡು ಸಹನಾ ಮಾತೇ ಬಿಟ್ಟಿದ್ದಾಳೆ. ಆದರೆ ಮೇಷ್ಟ್ರು ಮಾತ್ರ ಬಹಳ ಬೇಸರ ಮಾಡಿಕೊಂಡು ಪುಟ್ಟಕ್ಕನ ಮನೆಯ ಗೇಟ್ ಬಳಿ ನಿಂತಿರುತ್ತಾನೆ.

ಮೇಷ್ಟ್ರುಗೆ ಕಿವಿ ಮಾತು ಹೇಳಿದ ಸ್ನೇಹಾ
ಈ ಸಮಯದಲ್ಲಿ ಮುರಳಿ ಮೇಷ್ಟ್ರ ಬಳಿ ಮಾತನಾಡಿದ ಸ್ನೇಹ ಮೇಷ್ಟ್ರೇ ನಿಮ್ಮ ಕಡೆಯವರು ಎಲ್ಲಾ ಹೋದರು ನೀವೇನು ಮಾಡುತ್ತಾ ಇದ್ದೀರಾ, ನೀವು ಒಬ್ಬರೆ ನಿಂತಿದ್ದೀರಿ ಅಕ್ಕನ ಬಳಿ ಮಾತನಾಡಬೇಕಾಗಿತ್ತಾ ಎಂದು ಕೇಳುತ್ತಾಳೆ. ಈ ವೇಳೆ ಕಂಠಿ ಇವರಿಬ್ಬರ ಮಾತನ್ನು ಮರೆಯಲ್ಲಿ ಕೇಳಿಸಿಕೊಳ್ಳುತ್ತಿರುತ್ತಾನೆ. ಸ್ನೇಹಾ ಅವಳೀಗ ನಿಮ್ಮ ಬಳಿ ಮಾತನಾಡಲು ಇಷ್ಟ ಪಡಲ್ಲ ಸರ್ ನೀವು ಹೋಗಿ ಎಂದು ಹೇಳುತ್ತಾಳೆ. ಆಕೆ ಮನದ ನೋವನ್ನು ತಾನೇ ನುಂಗಿಕೊಂಡು ಇರುತ್ತಾಳೆ. ಆದರೆ ನಾನು ಉತ್ತರವನ್ನು ನೇರವಾಗಿ ಹೇಳಿ ಬಿಡುತ್ತೇನೆ. ನೀವು ಸುಳ್ಳು ಹೇಳಬಾರದಾಗಿತ್ತು ಎಂದು ಹೇಳಿದಾಗ ಮುರಳಿ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಕೊನೆಗೆ ಸಹನಾ ಮುರಳಿಯನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸುತ್ತಾಳೆ. ಇನ್ನು ಸಹನಾ ಮುನಿಸು ಮರೆತು ಮೇಷ್ಟ್ರ ಬಳಿ.ಮಾತನಾಡಿದರೆ ಮೇಷ್ಟ್ರುಗೆ ಕೊಂಚ ನಿರಾಳವಾಗುತ್ತೆ. ಮುಂದೇನು ಕಾದು ನೋಡಬೇಕಿದೆ.