ಬಂಗಾರಮ್ಮನ ಮೇಲೆ ಮತ್ತೊಮ್ಮೆ ಸ್ನೇಹಾ ಕಿಡಿ: ಜಠಿಲವಾಗುತ್ತಲೇ ಸಾಗುತ್ತಿದೆ ಕಂಠಿಯ ಪ್ರೀತಿ!

By ಪೂರ್ವ

ಪುಟ್ಟಕ್ಕ ಹಾಗೂ ಆಕೆಯ ಮಕ್ಕಳೆಲ್ಲರೂ ದೇವಾಲಯಕ್ಕೆ ಹೋಗುತ್ತಾ ಇರುತ್ತಾರೆ ಈ ವೇಳೆ ಅಮ್ಮನ ಬಗ್ಗೆ ಸ್ನೇಹಾಗೆ ಹಲವಾರು ಪ್ರಶ್ನೆಗಳು ಮೂಡುತ್ತದೆ. ಅದನ್ನು ಅಮ್ಮನ ಬಳಿ ಕೇಳಲು ಪುಟ್ಟಕ್ಕ ಮಾತ್ರ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದೆ ಏನಿಲ್ಲ ಬಾರಮ್ಮ ಎಂದು ಹೇಳುತ್ತಾಳೆ. ಈ ವೇಳೆ ಪುಟ್ಟಕ್ಕ ಮಗಳ ಬಳಿ ಹೇಳುತ್ತಾರೆ, ಸಹನಾ ಮದುವೆಗೆ ಸ್ವಲ್ಪನಾದರು ಸಹಾಯ ಆಗುತ್ತದೆ ಎಂದು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದೇನೆ ಐನೂರು ಜನ ಎಂದು ಹೇಳುತ್ತಾರೆ. ಆದರೆ ಅಡುಗೆಯಲ್ಲಿ ಏನೂ ತಪ್ಪಾಗಬಾರದಲ್ಲ. ಇದು ನನ್ನ ಕಾಳಜಿ ಅಷ್ಟೇ ಎಂದು ಹೇಳಿದಾಗ ಸ್ನೇಹಾ ಅಮ್ಮನಿಗೆ ಸಮಾಧಾನ ಮಾಡುತ್ತಾಳೆ.

'ಅಮ್ಮ, ಇಡೀ ಊರಿಗೆ ನಿನ್ನ ಅಡಿಗೆ ಜನಪ್ರಿಯವಾಗಿದ್ದು ಯಾಕೆ ಹೇಳು? ಪ್ರತಿ ದಿನ ಅಷ್ಟೇ ನಿಷ್ಠೆಯಿಂದ ಶ್ರದ್ದೆಯಿಂದ ಕೆಲಸ ಮಾಡುವ ಕಾರಣ ನಿನ್ನ ಅಡುಗೆ ಎಲ್ಲರಿಗೂ ಬಹಳ ಪ್ರಿಯವಾಗುತ್ತದೆ. ಏನಾದರು ಎಡವಟ್ಟಾದರೆ ಜನ ಏನು ಅಂತಾರೆ ಎನ್ನುವ ಭಯ ನಿನಗೆ ಇದೆ. ಭಯಾನೆ ಗೆಲುವಿಗೆ ಮಾರ್ಗದರ್ಶನ ಎಂದು ಅಮ್ಮನನ್ನು ಸಮಾಧಾನ ಮಾಡುತ್ತಾ ದಾರಿಯುದ್ದಕ್ಕೂ ಅಮ್ಮ ಮಗಳು ತನ್ನ ಕಷ್ಟ ಸುಖವನ್ನು ಮಾತನಾಡುತ್ತಾ ಬರುತ್ತಾರೆ. ಇತ್ತ ಬಂಗಾರಮ್ಮ ಮಗನ ಜೀವನಕ್ಕೆ ಸೊಸೆ ಎಂಟ್ರಿಯಾದರೆ ನಮ್ಮ ಸಮಸ್ಯೆಗೆ ಮುಕ್ತಿ ಎಂದುಕೊಂಡು ದೇವರ ದರ್ಶನ ಮಾಡಿದರೆ ಒಳಿತು ಎಂದುಕೊಂಡು ವಸು ಹಾಗೂ ಬಂಗಾರಮ್ಮ ದೇವಾಲಯಕ್ಕೆ ಬರುತ್ತಾರೆ.

ಅಲ್ಲಿ ಪುಟ್ಟಕ್ಕ ಹಾಗೂ ಆಕೆಯ ಮಗಳನ್ನು ನೋಡಿ ಖುಷಿ ಆದರೆ ಇನ್ನೊಂದು ಕಡೆ ಸ್ನೇಹಾಳನ್ನು ನೋಡಿ ಬಂಗಾರಮ್ಮಗೆ ಸಿಟ್ಟು ನೆಟ್ಟಿಗೆರುತ್ತದೆ. ಇವಳು ಇಲ್ಲಿ ಇದ್ದಾಳೆ ಎಂದರೆ ನಂಜವ್ವ ಕೂಡ ಇಲ್ಲಿ ಇರಬೇಕು ಎಂದು ವಸು ಬಳಿ ಹೇಳುತ್ತಾಳೆ. ಇತ್ತ ಕಂಠಿ ಮನಸನ್ನು ಅರಿತ ಅವರ ತಂದೆ ಮಗನ ಬಳಿ ಪ್ರೀತಿ ವಿಚಾರವನ್ನು ಕೇಳುತ್ತಾರೆ. ನಿನ್ನ ಅವ್ವನಿಗೆ ಸರಿ ಸಮಾನದವಳು ಇದ್ದಾಳೆ ಎನ್ನುತ್ತಿಯಾ ಕಂಠಿ ಎಂದಾಗ ಕಂಠಿ ಬಹಳ ಖುಷಿಯಿಂದ ಹೂ ಅಪ್ಪ ಇದ್ದಾಳೆ ಎಂದಾಗ ಕಂಠಿ ತಂದೆಗೆ ಆಶ್ಚರ್ಯ ಆಗುತ್ತದೆ. ಬಳಿಕ ಮಾತು ಮರೆಸಲು ಏನೇನೋ ಸಬೂಬು ಹೇಳುತ್ತಾನೆ. ಆದರೆ ಅಷ್ಟರಲ್ಲಿ ಆಗಲೇ ಕಂಠಿ ತಂದೆಗೆ ಅನುಮಾನ ಬಂದಿರುತ್ತದೆ.

ಮಗನ ಬಳಿ ಪ್ರೀತಿ ಬಗ್ಗೆ ವಿಚಾರಿಸಿದ ಕಂಠಿ

ಮಗನ ಬಳಿ ಪ್ರೀತಿ ಬಗ್ಗೆ ವಿಚಾರಿಸಿದ ಕಂಠಿ

ಕಂಠಿ ತಂದೆ ಕಂಠಿ ಬಳಿ ಡೈರೆಕ್ಟ್ ಆಗಿ ಯಾರೋ ಅದು ಹುಡುಗಿ ಎಂದಾಗ ಕಂಠಿಗೆ ಶಾಕ್ ಆಗುತ್ತದೆ. ಆಗ ಅವರ ತಂದೆ ಹೇಳುತ್ತಾರೆ. ಕಂಠಿ ಅಲ್ಲಿಯೇ ನೀರು ಇದೆ ಕುಡಿ ಆಮೇಲೆ ಮಾತನಾಡೋಣ ಹೋಗು ಎಂದು ಹೇಳುತ್ತಾರೆ. ಬಳಿಕ ಕಂಠಿ ತಂದೆ ಹೇಳುತ್ತಾರೆ ನನ್ನ ಕೈ ಕಾಲು ಬಿದ್ದು ಹೋಗಿದೆ ಅಷ್ಟೇ ಆದರೆ ನನ್ನ ಬುದ್ಧಿ ಬಹಳ ಚುರುಕಾಗಿದೆ. ಯಾರದು ಹೇಳು ಎಂದು ಹೇಳುತ್ತಾರೆ ಅದಕ್ಕೆ ಕಂಠಿ ಮಾತು ಮರೆಸುತ್ತ ಏನು ಅಪ್ಪಯ್ಯ ಯಾರ ಬಗ್ಗೆ ಕೇಳುತ್ತಾ ಇದ್ದೀಯಾ ಅವಳೇನೂ ಹೇಳಿದಳು ಅಂದರೆ ನೀನು ಕೂಡ ಎಂದಾಗ ಪಟ್ಟು ಬಿಡದೆ ಯಾರು ಹೇಳು ಎಂದರು ಕಂಠಿ ಮಾತ್ರ ತಂದೆಯ ಕೈ ಯಿಂದ ಹೇಗೋ ತಪ್ಪಿಸಿಕೊಳ್ಳುತ್ತಾನೆ.

ಪಂದ್ಯ ಗೆದ್ದ ಸುಮಾ ಆದರೂ ಬೇಸರ

ಪಂದ್ಯ ಗೆದ್ದ ಸುಮಾ ಆದರೂ ಬೇಸರ

ಇನ್ನು ಸುಮಾ ಹಾಗೂ ಆಕೆಯ ತಂಡ ಆಟದಲ್ಲಿ ಗೆಲ್ಲುತ್ತಾರೆ. ಈ ಗೆಲುವು ಕಂಡ ಪಿಟಿ ಸರ್ ಸುಮಾ ನೀವು ಈಗ ಪಂದ್ಯ ಗೆದ್ದಿದ್ದು ಖುಷಿಪಡಿ, ನಿಮಗೆ ಮುಂದೆ ಸಿಗುವುದು ಬೆಂಗಳೂರು ತಂಡ, ಈ ತಂಡ ಬಹಳ ಸ್ಟ್ರಾಂಗ್ ಆಗಿ ಇದೆ. ಅವರ ಎದುರು ನೀವು ಒಂದು ಅಂಕಾನೂ ಜಾಸ್ತಿ ಆಟ ಆಡಲು ಆಗಲ್ಲ ಎಂದಾಗ ಅಲ್ಲಿದ್ದ ಎಲ್ಲಾ ಮಕ್ಕಳ ಮುಖ ಬಾಡಿ ಹೋಗುತ್ತದೆ. ಪಿಟಿ ಮಾಸ್ಟರ್ ಹೋದ ಬಳಿಕ ಮುರಳಿ ಮೇಷ್ಟ್ರು ಧೈರ್ಯ ಹೇಳಿ ಉತ್ತಮವಾಗಿ ಆಟ ಆಡುವಂತೆ ಪ್ರೋತ್ಸಾಹ ನೀಡುತ್ತಾರೆ.

ಬಂಗಾರಮ್ಮಗೆ ಸ್ನೇಹಾ ನಡೆವೆ ಮತ್ತೆ ವಾಗ್ವಾದ

ಬಂಗಾರಮ್ಮಗೆ ಸ್ನೇಹಾ ನಡೆವೆ ಮತ್ತೆ ವಾಗ್ವಾದ

ಇತ್ತ ಬಂಗಾರಮ್ಮನಿಗೆ ಸ್ನೇಹಾ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಾಳೆ. ಬಂಗಾರಮ್ಮ ಅವರೆ ನಿಮಗೆ ನನ್ನ ಮೇಲೆ ಅಷ್ಟಾಗಿ ಒಳ್ಳೆ ಅಭಿಪ್ರಾಯ ಇಲ್ಲ. ನೀವು ನನಗೆ ಒಂದು ಬೆರಳು ತೋರಿಸಿದರೆ ಉಳಿದ ಮೂರು ಬೆರಳು ನಿಮ್ಮನ್ನು ತೋರಿಸುತ್ತಾ ಇರುತ್ತದೆ ಎಂದು ಹೇಳಿದಾಗ ಬಂಗಾರಮ್ಮನ ಕೋಪ ನೆತ್ತಿಗೇರಿತ್ತದೆ. ಬಳಿಕ ಸ್ನೇಹಾ ಹೇಳುತ್ತಾಳೆ ನಾನು ಯಾರ ಮಗಳು ಗೊತ್ತಾ ನಿಮಗೆ ಎಂದು ಹೇಳಿದಾಗ ಬಂಗಾರಮ್ಮ ಕೋಪದಿಂದ ಯಾರ ಮಗಳೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕಗೆ ಇನ್ನೂ ಶಾಕ್ ಆಗುತ್ತದೆ. ಆ ವೇಳೆ ಯಾರೋ ಬಂದು ಅಕ್ಕ ಎಂದು ಕರೆಯುತ್ತಾರೆ.

ಕಳ್ಳನ ಚಳಿ ಬಿಡಿಸುವ ಬಂಗಾರಮ್ಮ

ಕಳ್ಳನ ಚಳಿ ಬಿಡಿಸುವ ಬಂಗಾರಮ್ಮ

ಆಗ ಬಂಗಾರಮ್ಮ ಧ್ವನಿ ಬಂದ ಕಡೆ ಹೋಗುತ್ತಾರೆ. ಆಗ ಜನರೆಲ್ಲರೂ ಒಬ್ಬ ಕಳ್ಳನನ್ನು ಹಿಡಿದು ಸರಿಯಾಗಿ ಜಾಡಿಸುತ್ತ ಇರುತ್ತಾರೆ. ಆಗ ಯಾರೋ ಒಬ್ಬರು ಹೇಳುತ್ತಾರೆ ಬಂಗಾರಮ್ಮ ಬರುತ್ತಿದ್ದಾರೆ. ಆಗ ಅಲ್ಲಿಗೆ ಬಂದ ಬಂಗಾರಮ್ಮ ಏನಾಗುತ್ತಿದೆ ಇಲ್ಲಿ ಎಂದು ಜೋರಾಗಿ ಕೇಳುತ್ತಾರೆ. ಆಗ ನಡೆದ ವಿಚಾರ ಹೇಳಿದಾಗ ಕೋಪ ತಡೆಯಲು ಆಗದೆ ಕಳ್ಳ ನ ಮೇಲೆ ಕೈ ಮಾಡಲು ಮುಂದಾಗುತ್ತಾರೆ. ಆದರೆ ಸ್ನೇಹಾ ಬಂಗಾರಮ್ಮನನ್ನು ತಡೆಯುತ್ತಾರೆ. ಮುಂದೆ ಏನಾಗುತ್ತೆ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 10th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X