ಕಂಠಿಗೆ ಟಾಂಗ್ ಕೊಟ್ಟ ಚಂದ್ರು: ಸ್ನೇಹಾಳಿಗೆ ನಿಜ ತಿಳಿದರೆ ಕಂಠಿ ಗತಿ?

By ಪೂರ್ವ

ಪುಟ್ಟಕ್ಕ, ತನ್ನ ಮಗಳು ಸಹನಾಗೆ ಉತ್ತಮ ಗಂಡು ಸಿಗಲಿ. ಈ ಬಾರಿ ಸಹನಾಳ ಮದುವೆ ಸುಸೂತ್ರವಾಗಿ ಆಗಲಿ ಎಂದು ದೇವಾಲಯಕ್ಕೆ ಕಾಲು ನಡಿಗೆಯಲ್ಲಿ ತೆರಳಿದ್ದಾರೆ. ಇನ್ನು ಪುಟ್ಟಕ್ಕ ಇಲ್ಲದೆ ಮನೆ ಮೆಸ್ ಬಿಕೋ ಎನ್ನುತ್ತಿದೆ. ಆದರೆ ದಸರಾ ಹಬ್ಬವನ್ನು ಆಚರಿಸಲು ಮನೆ ಮಂದಿ ನಿರ್ಧಾರ ಮಾಡಿದ್ದಾರೆ. ಇದೀಗ ಸಹನಾ, ಸ್ನೇಹಾ ಗೊಂಬೆ ಕೂರಿಸಲು ನಿರ್ಧರಿಸುತ್ತಾಳೆ. ಈ ವೇಳೆ ಕಂಠಿ, ಸ್ನೇಹಾಗೆ ಸಹಾಯ ಮಾಡುವ ನೆಪದಲ್ಲಿ ಅಲ್ಲಿಯೇ ಇರುತ್ತಾನೆ. ಬಳಿಕ ತನ್ನ ಮನದ ಮಾತನ್ನು ಕಂಠಿ ಬಳಿ ಹೇಳುತ್ತಾಳೆ ಸ್ನೇಹಾ.

''ಶ್ರೀ, ನನಗೆ ಲವ್ ಮಾಡುವವರನ್ನು ಕಂಡ್ರೆ ಆಗಲ್ಲ. ಮೇಷ್ಟ್ರು ಸಹನಾಳನ್ನು ಲವ್ ಮಾಡುತ್ತಿದ್ದಾರಂತೆ ಹಾಗಂತ ಹೇಳಿದರು. ಸದ್ಯ ಈ ವಿಚಾರ ಸಹನಾ ಅಕ್ಕಾಗೆ ಇನ್ನೂ ತಿಳಿದಿಲ್ಲ. ಎಲ್ಲಾದರೂ ಈ ವಿಚಾರ ತಿಳಿದರೆ ಆಕೆ ಬಹಳ ಬೇಸರ ಹಾಗೂ ಭಯ ಪಡುತ್ತಾಳೆ ಎನ್ನುತ್ತಾಳೆ. ಇದನ್ನು ಕೇಳಿದ ಕಂಠಿ ಗೆ ಕೊಂಚ ನಿರಾಸೆಯಾಗುತ್ತದೆ. ''ಅವ್ವ, ಮುರಳಿ ಮೇಷ್ಟ್ರನ್ನು ನಂಬಿ ದಿನ ಮೇಷ್ಟ್ರನ್ನೂ ಊಟಕ್ಕೆ ಕರೆಯುತ್ತಾ ಇದ್ದಳು. ಅಮ್ಮನ ನಂಬಿಕೆಗೆ ಇದೀಗ ಮೋಸ ಮಾಡಿದ ಹಾಗೆ ಆಗಲಿಲ್ವ ಎಂದು ಹೇಳುತ್ತಾಳೆ. ಬಳಿಕ, ಅದಕ್ಕೆ ಹೇಳುವುದು ಜಾಸ್ತಿ ಯಾರನ್ನು ಹಚ್ಚಿಕೊಳ್ಳಬಾರದು ಎನ್ನುತ್ತಾಳೆ, ಆಗ ಕಂಠಿ ಹೇಳುತ್ತಾನೆ ಪ್ರೀತಿ ಮಾಡುವವರನ್ನು ತಪ್ಪು ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾನೆ.

ಪ್ರೀತಿ-ಗೀತಿ ಹಿಡಿಸಲ್ಲ ಎಂದ ಸ್ನೇಹಾ

ಪ್ರೀತಿ-ಗೀತಿ ಹಿಡಿಸಲ್ಲ ಎಂದ ಸ್ನೇಹಾ

ಅದಕ್ಕೆ ಸ್ನೇಹಾ, ನೀವೇನು ಶ್ರೀ ಪ್ರೀತಿಗೆ ಸಪೋರ್ಟ್ ಕೊಡುತ್ತಿದ್ದೀರ ಎಂದಾಗ, 'ಇಲ್ಲ, ನಾನು ಸುಮ್ಮನೆ ಹೇಳಿದೆ ಎಂದು ಮೆತ್ತಗೆ ಕಂಠಿ ಜಾರಿಕೊಳ್ಳುತ್ತಾನೆ. ಬಳಿಕ ಹೇಳುತ್ತಾಳೆ, 'ಒಬ್ಬರನ್ನು ಫ್ರೆಂಡ್ ಆಗಿ ನೋಡುವ ವೇಳೆ ಹಾಗೂ ಒಬ್ಬರನ್ನು ಗುರು ಸ್ಥಾನದಲ್ಲಿ ನೋಡುವಾಗ ಈ ರೀತಿ ಪ್ರೀತಿ ಎಲ್ಲಾ ಮಾಡಿಕೊಂಡು ಅದಕ್ಕೆ ಅವಮಾನ ಆಗುವಂತೆ ನಡೆದುಕೊಳ್ಳುತ್ತಾರೆ. ಅವೆಲ್ಲ ನನಗೆ ಇಷ್ಟ ಆಗಲ್ಲ ಎಂದು ಹೇಳುತ್ತಾಳೆ.

ಸ್ನೇಹಾ ಮಾತಿಗೆ ಮರು ಮಾತನಾಡದ ಕಂಠಿ

ಸ್ನೇಹಾ ಮಾತಿಗೆ ಮರು ಮಾತನಾಡದ ಕಂಠಿ

ಸ್ನೇಹಾ ಮಾತಿಗೆ ಮರು ಮಾತನಾಡದೆ ಸುಮ್ಮನಾಗುತ್ತಾನೆ ಕಂಠಿ. ಬಳಿಕ ಅಲ್ಲಿಗೆ ಚಂದ್ರು ಬರುತ್ತಾನೆ. ಸ್ನೇಹಾಳನ್ನು ನೋಡಿ ಮಾತನಾಡಿಸುತ್ತಾನೆ. ಸ್ನೇಹಾ, ಒಟ್ಟಿಗೆ ಕಂಠಿಯನ್ನು ನೋಡಿ ಸಿಟ್ಟಾಗಿ, 'ಮುಂಚೆ ನನ್ನ ಅಮ್ಮ ನನ್ನ ಮಾತು ಕೇಳುತ್ತಾ ಇರಲಿಲ್ಲ. ಈಗ ವಸು ಹೇಳಿದ ಮಾತು ಕೇಳುತ್ತಿಲ್ಲ. ಅವಳ ಅಣ್ಣನ ಬಗ್ಗೆ ಅಮ್ಮನ ಬಗ್ಗೆ ಹೇಳಿದರೆ ಆಕೆಗೆ ಬಹಳ ಕೋಪ ಬರುತ್ತದೆ ಇದೀಗ ನನ್ನ ಬಳಿ ಮಾತನಾಡುವುದನ್ನು ಬಿಟ್ಟು ಬಿಟ್ಟಿದ್ದಾಳೆ ಎಂದು ಹೇಳಿದಾಗ ಸ್ನೇಹಾ ಯಾಕೆ ಅಣ್ಣ ಏನಾಯ್ತು ಎಂದು ಕೇಳುತ್ತಾಳೆ.

ಸ್ನೇಹಾ ಮನೆಗೆ ಬಂದ ಚಂದ್ರು

ಸ್ನೇಹಾ ಮನೆಗೆ ಬಂದ ಚಂದ್ರು

ಆಕೆಯ ಅಣ್ಣ ಮಾಡುತ್ತಿರುವುದು ತಪ್ಪು ಎಂದು ಹೇಳಿದೆ ಅದಕ್ಕೆ ಕೋಪ ಮಾಡಿಕೊಂಡಿದ್ದಾಳೆ ಎಂದಾಗ ಆತನಿಗೆ ಒಂದು ಕರೆ ಬರುತ್ತದೆ. ಆ ವೇಳೆ ಚಂದ್ರು ಹೊರಡಲು ಅನುವಾಗುತ್ತಾನೆ. ಇನ್ನು ಕಂಠಿ ಕೂಡ ಹೊರಡುತ್ತಾನೆ. ಸ್ನೇಹಾ ಮೆಸ್ ಬಳಿ ಹೋಗುತ್ತಾಳೆ. ಈ ವೇಳೆ ಚಂದ್ರು ಕಂಠಿಗೆ ಬುದ್ಧಿ ಮಾತು ಹೇಳುತ್ತಾನೆ ಆದರೆ ಕಂಠಿ ಮಾತ್ರ ಆ ಮಾತನ್ನು ಕೇಳದೇ ತಾನು ಮಾಡುತ್ತಿರುವುದು ಸರಿ ಎಂಬಂತೆ ಇರುತ್ತಾನೆ. ಇದನ್ನು ಕಂಡ ಚಂದ್ರು ಕೋಪದಿಂದ ಅಲ್ಲಿಂದ ಹೋಗುತ್ತಾನೆ. ಇನ್ನು ರಾಜೇಶ್ವರಿ ಹಾಗೂ ಕಾಳಿ ಮಾತನಾಡುತ್ತಾ ಇರುವಾಗ ಮಂಜಮ್ಮ ಬರುತ್ತಾಳೆ. ಮಂಜಮ್ಮ ಬಂದು ಯಾಕೆ ಅಕ್ಕ ನನ್ನನ್ನು ಕರೆದೆ ಏನು ವಿಚಾರ ಎಂದಾಗ ಸಿಟ್ಟಿನಿಂದ ಬಂದ ರಾಜೀ ಏನೇ ನನ್ನ ತಮ್ಮನಿಂದ ಹಣ ಪಡೆಯುತ್ತಿಯಾ ನೀನು ಒಂಥರಾ ನಯವಂಚಕಿ ಎಂದು ಹೇಳುತ್ತಾಳೆ.

ಮಂಜಮ್ಮನನ್ನು ತರಾಟೆಗೆ ತೆಗೆದುಕೊಂಡ ರಾಜಿ

ಮಂಜಮ್ಮನನ್ನು ತರಾಟೆಗೆ ತೆಗೆದುಕೊಂಡ ರಾಜಿ

ಬಳಿಕ ಹೇಳುತ್ತಾಳೆ ಇನ್ನೂ ಮೇಲೆ ನೀನು ನನಗೆ ಏನು ಹೇಳುವುದು ಬೇಡ ನಿನ್ನನ್ನು ಹೇಗೆ ನಂಬುವುದು ಹೇಳು. ಈ ರೀತಿ ಮಾಡಿದರೆ ಎಂದು ಹೇಳಿದಾಗ ಮಂಜಮ್ಮ ರಾಜೇಶ್ವರಿ ಬಳಿ ಬೇಡಿಕೊಳ್ಳುತ್ತಾಳೆ. ಬಳಿಕ ಮೇಷ್ಟ್ರು ಪ್ರೀತಿ ವಿಚಾರ ಹೇಳಿರುವುದು ಇದೆಲ್ಲ ಸ್ನೇಹಾಗೆ ಗೊತ್ತಾಗಿ ಸರಿಯಾಗಿ ಬೆಂಡೆತ್ತಿರುವ ವಿಚಾರವನ್ನು ರಾಜಿ ಮುಂದೆ ಹೇಳುತ್ತಾಳೆ ಇದನ್ನು ಕೇಳಿದ ಕಾಳಿ ನಮ್ಮ ಹುಡುಗಿ ಯಾರ ಮುಖವನ್ನು ನೋಡುವುದಿಲ್ಲ ಅಂತಹದರಲ್ಲಿ ಮೇಷ್ಟ್ರನ್ನು ನೋಡುತ್ತಾಳೆಯೇ ಎಂದು ಹೇಳಿದಾಗ ಮಂಜಮ್ಮ ಹೇಳುತ್ತಾಳೆ ಈ ವಿಚಾರ ಸಹನಾಗೆ ತಿಳಿದಿಲ್ಲ ಎಂದು ಹೇಳುತ್ತಾಳೆ. ಈ ವೇಳೆ ರಾಜೀ ಮಗ ಬರುತ್ತಾನೆ ಮಗನ ಅವಸ್ಥೆ ಕಂಡು ರಾಜೀ ದಂಗಾಗುತ್ತಾಳೆ. ಮುಂದೇನು? ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 10th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X