ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಸ್ನೇಹಾ ಮತ್ತು ಶ್ರೀ ಮೈಸೂರಿನಲ್ಲಿ ಇದ್ದಾರೆ. ಇತ್ತ ಸ್ನೇಹಾ, ಶ್ರೀ ನೀನು ದೊರೆನ ಯಾವತ್ತೂ ನೋಡೆ ಇಲ್ವಾ ಎಂದು ಕೇಳುತ್ತಾಳೆ ಅದಕ್ಕೆ ಶ್ರೀ ಅಲಿಯಾಸ್ ಕಂಠಿ ಇಲ್ಲ ಎನ್ನುತ್ತಾನೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ಅವನ ಬಗ್ಗೆ ಚೂರಾದ್ರು ಹಿಂಟ್ ಸಿಕ್ಕಿದ್ರೆ ಕಂಡು ಹಿಡಿಯಲು ಟ್ರೈ ಮಾಡಬಹುದು ಎಂದು.

''ಬರಿ ಹಚ್ಚೆ ಇಟ್ಟುಕೊಂಡು ಹೇಗೆ ನಾನು ಕಂಡು ಹಿಡಿಯೋದು'' ಎಂದು ಕೇಳುತ್ತಾಳೆ. ಅದಕ್ಕೆ ಕಂಠಿ ಹೇಳುತ್ತಾನೆ ನಿಮಗೆ ಯಾವಾಗ ಭೇಟಿ ಮಾಡಬೇಕು ಅನ್ನುತ್ತೆ ಆಗಲೇ ಅವನು ನಿಮ್ಮನ್ನು ಭೇಟಿ ಮಾಡುತ್ತಾನೆ ಎಂದು ಹೇಳುತ್ತಾನೆ.

ಬಳಿಕ ಕಂಠಿ ಅಲ್ಲಿ ಬಂದಿರುವ ರೌಡಿಗಳನ್ನೂ ನೋಡುತ್ತಾನೆ. ಬಳಿಕ ಎಳೆನೀರು ಕುಡಿದು ಅದರ ಚಿಪ್ಪು ಬಿಸಾಡುತ್ತಾರೆ. ಬಳಿಕ ಸ್ನೇಹಾ ಹೇಳುತ್ತಾಳೆ ನಾನೇ ದುಡ್ಡು ಕೊಡುತ್ತೇನೆ ಎಂದು ಅದಕ್ಕೆ ಕಂಠಿ, ಇಲ್ಲ ನಾನೇ ಕೊಡುತ್ತೇನೆ. ಎಂದು ಹೇಳಿದಾಗ ಇಲ್ಲಾ ನಾನೇ ಕೊಡುತ್ತೇನೆ. ನನಗೆ ದಾಹ ಆಯ್ತು ಅಂತ ನಾವು ಬಂದಿದ್ದು ಹಾಗಾಗಿ ನಾನೇ ಕೊಡ್ತೀನಿ ಅಂದಾಗ ಕಂಠಿ ಅಲ್ಲಾ ಎಂದು ರಾಗ ಎಳೆಯುತ್ತಾನೆ.

Kannada serial Puttakkana Makkalu written updated on 11th August

ಆಗ ಅಲ್ಲೇ ಇಲ್ಲ ಇದ್ದ ಪಡ್ಡೆ ಹುಡುಗರು ಬಂದು ಎಳನೀರು ಮಾರುವಾತನನ್ನು 'ಮುದುಕಪ್ಪ ಬರ್ಲ' ಎಂದು ಹೇಳುತ್ತಾನೆ ಅದಕ್ಕೆ ಎಳನೀರು ಮಾರುವಾತ 'ಕಾಸು' ಎಂದು ಕೇಳಿದಾಗ ಪಡ್ಡೆ ಹುಡುಗರು, 'ಮರದಲ್ಲಿ ಬಿಡುವ ಕಾಯಿಗೆ ನಿನಗೆ ಯಾಕೆ ಹಣ ಕೊಡಬೇಕು' ಎನ್ನುತ್ತಾರೆ. ನೀನೇನು ಎಳೆನೀರು ತಯಾರಿ ಮಾಡಿದ್ಯಾ ನಾವು ಎಣ್ಣೆ ಹೊಡೆದರೆ ಕಾಸು ಕೊಡಲ್ಲ ಇನ್ನೂ ಎಳೆನೀರು ಕುಡಿಯೋಕೆ ಕಾಸ ಕೊಡಬೇಕಾ. ನಡಿ ಮಾಮ್ ಎಂದಾಗ ಸ್ನೇಹಾ ಹೇಳುತ್ತಾಳೆ ಏಯ್ ನಿಂತುಕೊಳ್ರೋ ಎನ್ನುತ್ತಾಳೆ. ಆಗ ಕಂಠಿ 'ಅಣ್ಣ ಅಣ್ಣ ಹಣ ಕೊಡದೇ ಹೋದರೆ ತಪ್ಪಾಗುತ್ತದೆ ಎಂದು ಪಡ್ಡೆ ಹುಡುಗರ ಬಳಿ ಮನವಿ ಮಾಡುತ್ತಾರೆ.

'ನನಗೆ ದುಡ್ಡು ಕೊಡು ಅನ್ನೋಕೆ ನೀನು ಯಾರೋ ಎಂದಾಗ ಸ್ನೇಹಾ ಹೇಳುತ್ತಾಳೆ ಕುಡಿದು ಕಾಸು ಬೇರೆ ಕೊಡದೇ ಕೊಬ್ಬು ಬೇರೆ ತೋರಿಸುತ್ತಿರಾ' ಎಂದಾಗ ಕಂಠಿ ಹೇಳುತ್ತಾನೆ ಮಿಸ್ ನೀವು ಸುಮ್ಮನಿರಿ ನಾನು ಮಾತನಾಡುತ್ತೇನೆ ಎಂದು ಹೇಳುತ್ತಾನೆ 'ಅಣ್ಣ ತಪ್ಪು ಕಣೋ ಅಣ್ಣ ಅವರು ಇದನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಆ ಎಳ ನೀರನ್ನು ಇಲ್ಲಿ ತನಕ ತೇಗೆದುಕೊಂಡು ಬಂದು ಏಷ್ಟು ಕಷ್ಟ ಪಟ್ಟಿರುತ್ತಾರೆ. ಅದು ಅವರಿಗೆ ಮಾತ್ರ ಗೊತ್ತು ನೀವು ಮಾಡುತ್ತಿರುವುದು ತಪ್ಪು' ಎಂದಾಗ, ಪಡ್ಡೆ ಹುಡುಗರು ರಗಡ್ಡಾಗಿ ಏನ್ಲಾ ಫಿಗರ್ ಜೊತೆಗೆ ಇದ್ದಾಳೆ ಅಂತ ಕೊಬ್ಬು ತೋರಿಸ್ತಿಯಾ ಎಂದು ಹೇಳುತ್ತಾನೆ. ಏಯ್ ಹೋಗೋ ಎಂದು ಹೋಗಲು ಮುಂದಾದಾಗ ಅವರಿಬ್ಬರನ್ನು ತಡೆಯುತ್ತಾನೆ ಕಂಠಿ. ದುಡ್ಡು ಕೊಡದೆ ನಿಮ್ಮಿಬ್ಬರನ್ನು ಹೋಗೋಕೆ ಬಿಡಲ್ಲ ಅಣ್ಣ ಎಂದು ಹೇಳುತ್ತಾನೆ. ಆಗ ಕಂಠಿ ಯ ಕೊರಳ ಪಟ್ಟಿ ಹಿಡಿಯುತ್ತಾನೆ ಇದನ್ನು ನೋಡಿದ ಕಂಠಿ ಕೆಂಡಾಮಂಡಲ ಆಗುತ್ತಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

English summary
Kannada serial Puttakkana Makkalu written updated on 11th August. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X