Don't Miss!
- News
ಪಿಎಸ್ಐ ಹಗರಣ; ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ತಾಕೀತು
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಸ್ಟಾರ್ ವೇಗಿ
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಮಿತಿ ಮೀರಿದ ರಾಜೀ ಆಟ; ಪುಟ್ಟಕ್ಕನ ಮೇಲೆ ಕುಪಿತಗೊಂಡ ನಂಜಮ್ಮ?
ಮುರಳಿ ಮನೆಯ ಎದುರು ನಿಂತಿರುವುದನ್ನು ಕಂಡ ಸಹನಾ ದಯವಿಟ್ಟು ಇಲ್ಲಿಂದ ಹೋಗಿ ಎಂದು ಹೇಳುತ್ತಾಳೆ. ಬಳಿಕ ಬೇಸರದಿಂದ ಮೇಷ್ಟ್ರು ಅಲ್ಲಿಂದ ಹೋಗುತ್ತಾರೆ. ನಿಶ್ಚಿತಾರ್ಥ ಮುಗಿದ ಬಳಿಕ ಸ್ನೇಹಾ ಪಾತ್ರೆ ತೊಳೆಯುತ್ತಾ ಇರುತ್ತಾಳೆ. ಇದನ್ನು ನೋಡಿದ ಕಂಠಿ ಅಲ್ಲಿಗೆ ಬಂದು ನಾನು ಸಹಾಯ ಮಾಡುತ್ತೇನೆ ಎನ್ನುತ್ತಾನೆ. ಸ್ನೇಹಾ ಮಾತ್ರ ಅದಕ್ಕೆ ಯಾವುದಕ್ಕೂ ಕಿವಿ ಕೊಡದೇ ಇದ್ದರೂ ಕಂಠಿ ಮಾತ್ರ ನಮ್ಮನೆ ವಿಶೇಷ ನಾವೇ ಸಹಾಯ ಮಾಡದೇ ಹೋದರೆ ಹೇಗೆ? ಹಳೆ ಡೈಲಾಗ್ ಆದರೆ ಅದನ್ನು ಬಿಟ್ಟು ಇನ್ನೂ ಬೇರೆ ಇನ್ನೇನು ಹೇಳಲು ಸಾಧ್ಯ ಎಂದು ಹೇಳುತ್ತ ಇರುತ್ತಾನೆ.
ಆದರೆ ಸ್ನೇಹಾಗೆ ಶ್ರೀ ಜೊತೆ ಹೆಚ್ಚು ಸಲಿಗೆ ತೆಗೆದುಕೊಳ್ಳಬಾರದು ಅದು ಸರಿ ಕೂಡ ಅಲ್ಲ ಎಂದು ಯೋಚನೆ ಬರುತ್ತದೆ. ಎಂದಾಗ ಕಂಠಿ ಮನದಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ ಏನು ಫೀಲಿಂಗ್ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ನಗುತ್ತಾಳೆ. ಬಳಿಕ ಮೇಷ್ಟ್ರು ಬೇಸರ ಮಾಡಿಕೊಂಡು ಹೋಗಿದ್ದ ಕಾರಣ ಏನೆಂದು ಕಂಠಿ ಕೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ನಡೆದ ಎಲ್ಲಾ ವಿಚಾರವನ್ನು ಕಂಠಿ ಬಳಿ ಹೇಳುತ್ತಾಳೆ. ಅಕ್ಕ ಮೇಷ್ಟ್ರ ಮೇಲೆ ಬಹಳ ಕೋಪ ಕೂಡ ಮಾಡಿಕೊಂಡಿದ್ದಾಳೆ ಎಂದಾಗ ಕಂಠಿ ಸ್ನೇಹಾ ಬಳಿ ನೀವು ಸಮಾಧಾನ ಮಾಡಬೇಕಾಗಿತ್ತು ಎಂದು ಹೇಳುತ್ತಾನೆ.
ಬಾಲಯ್ಯಗೂ
ಮುನ್ನ
Jr.
Ntr
ಜೊತೆ
ನಟಿಸ್ಬೇಕಿತ್ತು:
ಇಷ್ಟು
ದೊಡ್ಡ
ಆಫರ್
ಬಿಟ್ಟಿದ್ದೇಕೆ
ದುನಿಯಾ
ವಿಜಯ್?
ಇದನ್ನು ಕೇಳಿದ ಸ್ನೇಹಾ ಉರಿದು ಬಿದ್ದು ಏನು ಒಂದೇ ಒಂದು ಸುಳ್ಳಾ ಎಂದು ಕೋಪಗೊಂಡ ಸ್ನೇಹಾ ಕಿಡಿಕಾರುತ್ತಾಳೆ. ದೊಡ್ಡ ಪಾತ್ರೆಯಲ್ಲಿ ಒಂದು ತೊಟ್ಟು ವಿಷ ಬಿದ್ದರು ಅಷ್ಟೇನೆ ಸುಳ್ಳು ಹೇಳಲು ಅಳತೆ ಲೆಕ್ಕ ಇರುವುದು ಇಲ್ಲ. ಅದರಿಂದಾಗುವ ಪರಿಣಾಮ ದೊಡ್ಡದಿರುತ್ತದೆ. ಆ ರೀತಿ ಸುಳ್ಳು ಹೇಳಿ ಆ ರಾಜೇಶ್ವರಿ ನಿಜವಾಗಿಯೂ ಗೋಪಾಲನ ಕರೆದುಕೊಂಡು ಬರುದೇ ಇದ್ದರೆ ಏನು ಆಗುತ್ತಿತ್ತು, ನನ್ನ ಅಮ್ಮ ಅವರ ಬಳಿ ಹೋಗಬೇಕಿತ್ತು. ಅವರು ಕಾಲಿಗೆ ಬೀಳು ಎಂದಾಗ ಕಾಲಿಗೆ ಬೀಳಬೇಕಿತ್ತು. ನೀವೇ ಹೇಳಿ ಎಂದಾಗ ಕಂಠಿ ಮಾತನಾಡದೆ ಮೌನ ವಹಿಸುತ್ತಾನೆ. ಹೇಳುವವರ ದೃಷ್ಟಿಯಲ್ಲಿ ಸುಳ್ಳು ಚಿಕ್ಕದಾಗಿಯೆ ಇರುತ್ತದೆ.. ಆದರೆ ಅದರಿಂದ ಎಷ್ಟೆಲ್ಲ ಅನಾಹುತ ಆಗುತ್ತದೆ ಎಂಬುವುದನ್ನು ಯೋಚನೆ ಮಾಡಬೇಕಾಗುತ್ತದೆ ಎಂದಾಗ ಕಂಠಿ ಸುಮ್ಮನೆ ಆಗುತ್ತಾನೆ. ಬಳಿಕ ನೀವು ಯಾಕೆ ಸುಮ್ಮನೆ ಇದ್ದೀರಾ ನೀವು ಏನಾದರೂ ನಮ್ಮ ಬಳಿ ಸುಳ್ಳು ಹೇಳಿದ್ದೀರ ಎಂದು ಸ್ನೇಹಾ ಕೇಳಿದಾಗ ದಿಗಿಲುಗೊಂಡ ಕಂಠಿ ಇಲ್ಲ ಎಂದು ಹೇಳುತ್ತಾನೆ..

ಮನದಲ್ಲಿ ನಕ್ಕ ಸ್ನೇಹಾ
ಅದನ್ನು ನೋಡಿದ ಸ್ನೇಹಾ ಮನದಲ್ಲಿ ನಗುತ್ತಾಳೆ. ಬಳಿಕ ಹಾಗೆ ಏನಾದರು ನೀವು ನನ್ನ ಬಳಿ ಸುಳ್ಳು ಹೇಳಿದರೆ ನಾನು ಮಾತ್ರ ಸುಮ್ಮನೆ ಬಿಡುವುದು ಇಲ್ಲ ಎಂದು ಪಾತ್ರೆಗಳನ್ನು ಒಳಗೆ ತೆಗೆದುಕೊಂಡು ಹೋಗುವ ವೇಳೆ ಹೇಳಿ ಕಂಠಿ ಮುಖ ನೋಡುತ್ತಾ ಇರುತ್ತಾಳೆ. ಬಳಿಕ ಮನದಲ್ಲಿ ಇಷ್ಟೆಲ್ಲ ಹೇಳಿದ ಮೇಲೂ ನೀವೇ ನನ್ನ ಬಳಿ ಬಂದು ನೀವು ದೊರೆ ಎಂದು ಒಪ್ಪಿಕೊಂಡರೆ ನಾನು ಕ್ಷಮಿಸುತ್ತೇನೆ ಎಂದುಕೊಳ್ಳುತ್ತಾಳೆ. ಆದರೆ ಕಂಠಿ ಮಾತ್ರ ಹೆದರಿ ಹೋಗಿರುತ್ತಾನೆ. ಇನ್ನು ಪುಟ್ಟಕ್ಕನ ಮೆಸ್‌ಗೆ ನಂಜಮ್ಮ, ಚಂದ್ರು ಬರುತ್ತಾರೆ .

ನಂಜಮ್ಮನನ್ನು ಪ್ರಶ್ನೆ ಮಾಡಿದ ಪುಟ್ಟಕ್ಕ
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ ಎಂದು ಪುಟ್ಟಕ್ಕ ಪ್ರಶ್ನೆ ಮಾಡಿದಾಗ ಬಂಗಾರಮ್ಮ ಇರುತ್ತಾಳೆ ಎಂದು ಬರಲಿಲ್ಲ ಎಂದು ನಂಜಮ್ಮ ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಬಂಗಾರಮ್ಮ ಬರಲಿಲ್ಲ ಎಂದು ಹೇಳುತ್ತಾಳೆ. ಬಳಿಕ ವಸು ಬಂದಿರಲಿಲ್ವಾ ಎಂದಾಗ ಬಂದಿದ್ದಳು ಎಂದು ಹೇಳುತ್ತಾರೆ. ಅದಕ್ಕೆ ನಂಜಮ್ಮ ಅದಕ್ಕೆ ನಾವು ಬರಲಿಲ್ಲ, ನೀವು ಬಂಗಾರಮ್ಮನ ಸವಹಾಸ ಎಲ್ಲಿ ತನಕ ಇಟ್ಟುಕೊಂಡು ಇರುತ್ತಿರೋ ಅಲ್ಲಿಯವರೆಗೂ ಈ ತಾಪತ್ರಯ ಇದ್ದಿದ್ದೇ, ನಾವು ಕೂಡ ನಿಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಬರುವುದಿಲ್ಲ ಎಂದು ಹೇಳುತ್ತಾಳೆ.

ನಂಜಮ್ಮನನ್ನು ಸಮಾಧಾನ ಮಾಡಿದ ಪುಟ್ಟಕ್ಕ
ಬಳಿಕ ನಂಜಮ್ಮ ನಿನಗೆ ನಾನು ಬೇಕೋ ಅಥವಾ ಆ ಬಂಗಾರಮ್ಮ ಬೇಕೋ ಎಂದಾಗ ಪುಟ್ಟಕ್ಕಗೆ ಎನು ಹೇಳಬೇಕು ತಿಳಿಯದೇ ಸುಮ್ಮನಾಗುತ್ತಾಳೆ. ಆ ಕೂಡಲೇ ಮುನಿಸಿಕೊಂಡ ನಂಜಮ್ಮ ಹೋಗುತ್ತಾಳೆ. ಈ ವೇಳೆ ಚಂದ್ರುವನ್ನು ತಡೆದ ಸ್ನೇಹಾ ವಸು ಅತ್ತಿಗೆ ಏನು ಅಂತ ನಿನಗೆ ತಿಳಿದಿದೆ, ಆದರೆ ನಿಮ್ಮ ಅಮ್ಮನಿಗೆ ನೀವೇ ತಿಳಿಸಿ ಎಂದಾಗ ಕೋಪಗೊಂಡ ನಂಜಮ್ಮ ಸ್ನೇಹಾ ಬಳಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ..