ಬಂಗಾರಮ್ಮನ ಕೋಪಕ್ಕೆ ಕ್ಯಾರೇ ಎನ್ನದ ಸ್ನೇಹಾ! ಹಿಡಿದ ಹಠ ಬಿಡಲ್ಲ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಸ್ನೇಹಾ, ಬಂಗಾರಮ್ಮನನ್ನು ಪುನಃ ಎದುರು ಹಾಕಿಕೊಂಡಿದ್ದಾಳೆ. ಬಂಗಾರಮ್ಮಗೆ ಸ್ನೇಹಾ ಪುಟ್ಟಕ್ಕನ ಮಗಳು ಎಂದು ಇನ್ನೂ ಗೊತ್ತಿಲ್ಲ. ಹೇಳಬೇಕು ಎಂದುಕೊಂಡಾಗಲೆಲ್ಲ ಏನಾದರು ಒಂದು ಜಗಳ ಬಂದು ಅದೆಲ್ಲ ಮರೆತು ಹೋಗುತ್ತಿತ್ತು ಪುಟ್ಟಕ್ಕನಿಗೆ.

ದೇವಸ್ಥಾನದಲ್ಲಿ ಸಿಕ್ಕ ಕಳ್ಳನನ್ನು ಹೊಡೆಯಲು ಹೋದ ಬಂಗಾರಮ್ಮನನ್ನು ತಡೆದ ಸ್ನೇಹಾ ಕಿಡಿ ಕಾರುತ್ತಾಳೆ. ಸ್ನೇಹಾ, ಬಂಗಾರಮ್ಮನನ್ನು ಕುರಿತು, ಆತನಿಗೆ ಹೊಡೆಯುವ ಯಾವ ಅಧಿಕಾರ ನಿಮಗೆ ಇಲ್ಲ. ಆತ ತಪ್ಪು ಮಾಡಿದ್ದಾನೆ. ಆತನನ್ನು ಪೊಲೀಸರಿಗೆ ಹಿಡಿದು ಕೊಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಕೋಪದಿಂದ ಹೇಳುತ್ತಾರೆ. ಈ ವಿಚಾರಕ್ಕೆ ನೀನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾರೆ.

ಅದಕ್ಕೆ ಸ್ನೇಹಾ ಹೇಳುತ್ತಾಳೆ. ಆತ ತಪ್ಪು ಮಾಡಿದ್ದಾನೆ ಎಂದರೆ ಪೊಲೀಸರಿಗೆ ಹಿಡಿದು ಕೊಡಿ ಅದು ಬಿಟ್ಟು ನಿಮಗೆ ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿ ಅಲ್ಲ ಎಂದು ಹೇಳುತ್ತಾಳೆ. ಆಗ ಬಂಗಾರಮ್ಮ ಕೋಪದಿಂದ ಹೇಳುತ್ತಾರೆ ನಿನ್ನಂತವಳು ಇವನ ಪರ ಮಾತನಾಡುವುದರಲ್ಲಿ ಏನು ಆಶ್ಚರ್ಯ ಇಲ್ಲ ಬಿಡಿ ಎನ್ನುತ್ತಾಳೆ ಇದನ್ನು ಕೇಳಿದ ಸ್ನೇಹಾ, ನಾನು ಅವನು ಮಾಡಿದ್ದು ಸರಿ ಎಂದು ಹೇಳಿಲ್ಲ. ನೀವು ಮಾಡುತ್ತಾ ಇರುವುದು ತಪ್ಪು ಎಂದು ಹೇಳುತ್ತಾ ಇದ್ದೇನೆ ಎಂದಾಗ ಬಂಗಾರಮ್ಮ ಜೋರಾಗಿ ಹೇಳುತ್ತಾಳೆ.

ಸ್ನೇಹಾಗೆ ಎದುರಾಡಿದ ಬಂಗಾರಮ್ಮ

ಸ್ನೇಹಾಗೆ ಎದುರಾಡಿದ ಬಂಗಾರಮ್ಮ

ನಾನು ತಪ್ಪು ಮಾಡಿದ್ದೇನೆ ಎಂದು ಹೇಳಲು ನೀನು ಯಾರು, ಇಲ್ಲಿ ಇರುವವರಲ್ಲಿ ಒಬ್ಬರು ನಾನು ಮಾಡುತ್ತಾ ಇರುವುದು ತಪ್ಪು ಎಂದು ಹೇಳಲಿ ಎಂದು ಜೋರಾಗಿ ಹೇಳುತ್ತಾಳೆ. ಆಗ ಸ್ನೇಹಾ ಜನರ ಬಳಿ ಹೇಳುತ್ತಾಳೆ, ಹೇಳಿ ನೀವೇ ಹೀಗೆಲ್ಲ ಶಿಕ್ಷೆ ನೀಡುವುದು ಸರಿ ಅಲ್ಲ ಎಂದು ಹೇಳಿ, ಇವನು ಕದ್ದಿದ್ದ ಒಡವೆ ಸಿಕ್ಕಿತು ಅಲ್ವಾ ಇವನನ್ನು ಪೊಲೀಸರಿಗೆ ಒಪ್ಪಿಸೋದೆ ಸರಿ ಎಂದು ಹೇಳುತ್ತಾಳೆ. ಆದರೆ ಜನಗಳು ಮಾತ್ರ ಬಂಗಾರಮ್ಮ ಮಾಡುತ್ತಾ ಇರುವುದು ಸರಿ ಎಂದು ಜೋರಾಗಿ ಹೇಳುತ್ತಾರೆ.

ಜನ ಬೆಂಬಲ ಕಂಡು ಸ್ನೇಹಾ ಶಾಕ್

ಜನ ಬೆಂಬಲ ಕಂಡು ಸ್ನೇಹಾ ಶಾಕ್

ಇದನ್ನು ನೋಡಿದ ಸ್ನೇಹಾ ಬೆರಗಾಗಿ ಹೋಗುತ್ತಾಳೆ. ಬಂಗಾರಮ್ಮ ಹೇಳುತ್ತಾರೆ, ಪೊಲೀಸರು ತಪ್ಪು ಮಾಡಿದ ಬಳಿಕ ಬರುತ್ತಾರೆ. ಆದರೆ ಬಂಗಾರಮ್ಮನ ತೀರ್ಪು ಇನ್ಯಾವತ್ತೂ ತಪ್ಪು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ. ನೀನು ಹೇಳಿದೆ ಅಂತ ಪೊಲೀಸ್‌ಗೆ ಕೊಟ್ಟರೆ ಜೈಲಿನಿಂದ ಬಂದ ಮೇಲೆ ಇನ್ನೊಬ್ಬರಿಗೂ ಹೀಗೆ ಮಾಡುತ್ತಾನೆ. ಬಳಿಕ ಶಿಕ್ಷೆ ಕೊಡಲು ಮುಂದಾಗುತ್ತಾಳೆ ಬಂಗಾರಮ್ಮ ಕಳ್ಳನನ್ನು ಕಟ್ಟಿ ಹಾಕುತ್ತಾರೆ. ಇದನ್ನೆಲ್ಲ ನೋಡಿದ ಸ್ನೇಹಾ, ಈ ವಿಚಾರವಾಗಿ ನಾನು ನಿಮ್ಮ ಮೇಲೆ ಕಂಪ್ಲೇಂಟ್ ಕೊಡಬಹುದು ಎಂದಾಗ ಅದನ್ನು ಪರಿಗಣನೆಗೆ ತೆಗೆದುಕೊಳ್ಳದ ಬಂಗಾರಮ್ಮ ಏನು ಬೇಕಾದರೂ ಮಾಡಿಕೋ ಎಂದು ಹೇಳುತ್ತಾರೆ.

ಪುಟ್ಟಕ್ಕನಿಗೆ ತಿಳಿ ಹೇಳಿ ಹೊರಟ ಬಂಗಾರಮ್ಮ

ಪುಟ್ಟಕ್ಕನಿಗೆ ತಿಳಿ ಹೇಳಿ ಹೊರಟ ಬಂಗಾರಮ್ಮ

ಬಳಿಕ ಪುಟ್ಟಕ್ಕನಿಗೆ ಹೇಳಿ ಅಲ್ಲಿಂದ ತೆರಳುತ್ತಾಳೆ. ಬಳಿಕ ಬಂಗಾರಮ್ಮ ಪುಟ್ಟಕ್ಕನನ್ನೂ ಕರೆದು ಈ ಹುಡುಗಿ ಜೊತೆ ಸ್ವಲ್ಪ ಜಾಗುರುಕತೆಯಿಂದ ಇರಿ. ಯಾವುದೇ ಕಾರಣಕ್ಕು ಈ ಹುಡುಗಿನ ನಿನ್ನ ಬಳಿ ನಿನ್ನ ವ್ಯವಹಾರ ಇಟ್ಟುಕೊಳ್ಳಬೇಡ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಬೇಸರ ಆಗುತ್ತದೆ. ಇನ್ನು ಕಂಠಿ ವಸು ಇಬ್ಬರು ಮಾತನಾಡಿಕೊಳ್ಳುತ್ತಾ ಇರುತ್ತಾರೆ, ವಸು ಹೇಳುತ್ತಾಳೆ ಅಮ್ಮನ ಬಳಿ ಎಲ್ಲಾ ವಿಚಾರ ಹೇಳಬೇಕು. ಎಲ್ಲಾ ವಿಚಾರ ಆಕೆಗೆ ಗೊತ್ತಾದರೆ ಬಹಳ ಕಷ್ಟ ಎಂದು ಹೇಳುತ್ತಾಳೆ.

ಸ್ನೇಹಾ ಬಗ್ಗೆ ಮಾತನಾಡುತ್ತಿರುವ ಕಂಠಿ

ಸ್ನೇಹಾ ಬಗ್ಗೆ ಮಾತನಾಡುತ್ತಿರುವ ಕಂಠಿ

ಇದನ್ನು ಕೇಳಿದ ಕಂಠಿ ಎಲ್ಲಾ ಒಂದೊಂದು ಅಮ್ಮನಿಗೆ ತಿಳಿದರೆ ಬಹಳ ಒಳ್ಳೇದು, ಸಮಸ್ಯೆಗಳು ಬಂದರೆ ಅದನ್ನು ನಿಭಾಯಿಸುವ ಮನುಷ್ಯನಿಗೆ ಅಷ್ಟೆ ಕಷ್ಟ ಬರೋದು ಏನೇ ಕಷ್ಟ ಬಂದರು ಎದುರಿಸಿ ನಿಲ್ಲಬೇಕು ಎಂದು ಹೇಳುತ್ತಾನೆ. ಇನ್ನು ಪುಟ್ಟಕ್ಕ 500 ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದೆಲ್ಲ ಭಯ ಪಡುತ್ತಾ ಇರುತ್ತಾಳೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 11th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X