ಸಹನಾ ಹಾಗೂ ಮುರಳಿ ಮೇಷ್ಟ್ರ ನ್ನೂ ಒಂದು ಮಾಡುತ್ತಾನ ಕಂಠಿ?
ಪುರುಷೋತ್ತಮ ಏಟು ತಿಂದಿದ್ದಕ್ಕೆ ಸುಮಾನೆ ಕಾರಣ ಅನ್ನೋ ರೀತಿಯಲ್ಲಿ ಇದೀಗ ರಾಜಿ ಸಿಟ್ಟಿಗೆದ್ದಿದ್ದಾಳೆ. ರಾಜಿ ಸಿಟ್ಟಿಗೆದ್ದಿರುವುದನ್ನು ಕಂಡ ಕಾಳಿ ಮಾತ್ರ ಅಕ್ಕ ಸಿಟ್ಟು ಮಾಡಿಕೊಳ್ಳಬೇಡ ಇದನ್ನೆ ಧಾಳವಾಗಿ ಮಾಡಿಕೊಳ್ಳುವ ಎಂದೆಲ್ಲ ಹೇಳಿ ರಾಜಿ ಮನವೊಲಿಸಿದರು ರಾಜಿ ಮಾತ್ರ ಇದಕ್ಕೆಲ್ಲ ಕ್ಯಾರೆ ಎನ್ನುತ್ತಿಲ್ಲ. ರಾಜಿ ಹೇಳುತ್ತಿರುವುದು ಒಂದೇ ನನ್ನ ಮಗನಿಗೆ ಇಷ್ಟು ಪೆಟ್ಟು ಆಗಿದೆ ನಾನು ಮಾತ್ರ ಸುಮ್ಮನೆ ಇರಬೇಕಾ ಮಾಡ್ತೀನಿ ಸುಮಾಳಿಗೆ ಎಂದು ಹೇಳುತ್ತಾಳೆ. ಇನ್ನು ರಾಜಿಯನ್ನು ಬದಿಗೆ ಕರೆದ ಕಾಳಿ ಅಕ್ಕನ ಬಳಿ ಮಾತನಾಡಲು ಶುರು ಮಾಡುತ್ತಾನೆ. ಅಕ್ಕ, ಪುಟ್ಟಕ್ಕ ಬೇರೆ ಊರಲ್ಲಿ ಇಲ್ಲ. ನೀನು ಹೋಗಿ ಗಲಾಟೆ ಮಾಡಿದರೆ ಆ ಮನೆ ಮಂದಿ ಬಿಡುವುದಿಲ್ಲ. ಸುಮಾಳಿಗೆ ನೀನು ಕೊಂಚ ಧೈರ್ಯ ಹೇಳಿ ಬಾ ಎಂದು ಹೇಳುತ್ತಾನೆ.
ನಾವು ತಲೆತಗ್ಗಿಸಿದರೇನೆ ಅವರು ನಮ್ಮ ದಾರಿಗೆ ಬರುವುದಾ ಇಲ್ಲಾಂದ್ರೆ ಬರಲ್ವಾ? ಎಂದು ರಾಜಿ ಪ್ರಶ್ನೆ ಮಾಡುತ್ತಾಳೆ. ಆದರೂ ಕಾಳಿ ಮಾತು ರಾಜಿಗೆ ಸಮಾಧಾನ ತರಲಿಲ್ಲ. ಇನ್ನು ದೂರದಲ್ಲಿ ನಿಂತುಕೊಂಡಿದ್ದ ಪುರುಷೋತ್ತಮ ಇವರಿಬ್ಬರೂ ಏನೋ ಪ್ಲಾನ್ ಮಾಡುತ್ತಿದ್ದಾರೆ ಅಲ್ವಾ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಮಾವ ಏನೋ ಗುಸು ಗುಸು ಎಂದು ಮಾತನಾಡುತ್ತಿದ್ದಾನೆ ಎಂದು ಯೋಚನೆ ಮಾಡುತ್ತಾನೆ.
ಕಾಳಿ, ಅಕ್ಕ ರಾಜಿ ಬಳಿ ''ಕಾಲೇಜು ಅಂದ ಮೇಲೆ ಹಾಗೇನೇ ಅಕ್ಕ, ಇದನ್ನೆಲ್ಲ ಬಿಟ್ಟಾಕು ಎಂದು ಹೇಳುತ್ತಾನೆ. ಬಳಿಕ ಕಾಳಿ ಮಾತು ಕೇಳಿದರೆ ಆಗದು ಎಂದು ಹೇಳಿ ಪುರುಷೋತ್ತಮನನ್ನು ಕರೆದುಕೊಂಡು ಮೆಸ್ ಬಳಿ ಹೋಗುತ್ತಾಳೆ. ಇತ್ತ ಕಡೆ ಸಹನಾ ಮಾತ್ರ ಇನ್ನೂ ಮುರಳಿ ಮೇಷ್ಟ್ರ ಗುಂಗಲ್ಲೇ ಮನೆಯಲ್ಲಿ ದಸರಾ ಗೊಂಬೆ ಜೋಡಿಸುತ್ತಿರುತ್ತಾಳೆ. ಆದರೆ ಗಂಡು ಹಾಗೂ ಹೆಣ್ಣು ಬೊಂಬೆಯನ್ನು ಬೇರ್ಪಡಿಸಿ ಇಡಲಾಗಿತ್ತು. ಇದನ್ನು ನೋಡಿದ ಸಹನಾ ಗಂಡು ಬೊಂಬೆಯನ್ನು ಹಿಡಿದುಕೊಳ್ಳುತ್ತಾಳೆ. ಬಳಿಕ ಹೆಣ್ಣು ಬೊಂಬೆಯನ್ನು ಹಿಡಿದುಕೊಳ್ಳುತ್ತಾ ಮನದಲ್ಲೇ ಇನಿಯನನ್ನು ನೆನಪಿಸಿಕೊಳ್ಳುತ್ತಾಳೆ.

ಮುರಳಿ ಮೇಷ್ಟ್ರ ನೆನಪಲ್ಲಿ ಸಹನಾ
ಆ ವೇಳೆ ಅಲ್ಲಿಗೆ ಬಂದ ಸ್ನೇಹಾ ಏನಾಯ್ತು ಅಕ್ಕ ಎಲ್ಲಾ ಸರಿಯಾಗಿ ಇದೆಯಲ್ಲ ಎಂದು ಕೇಳುತ್ತಾಳೆ ಇದನ್ನು ಕೇಳಿದ ಸಹನಾ ಹೇಳುತ್ತಾಳೆ ಎಲ್ಲಾ ಸರಿಯಾಗಿದೆ. ಆದರೆ ಈ ಗಂಡು ಬೊಂಬೆ ಹಾಗೂ ಹೆಣ್ಣು ಬೊಂಬೇನ ಒಟ್ಟಿಗೆ ಇಡುತ್ತಿದ್ದೆ ಎಂದು ಹೇಳುತ್ತಾಳೆ. ಇನ್ನು ಈ ವೇಳೆ ಅಮ್ಮನ ಫೋನ್ ಬರುತ್ತದೆ. ದೇವಸ್ಥಾನಕ್ಕೆ ತಲುಪಿದ್ರಾ ಎಂದೆಲ್ಲ ಕೂಷಲೋಪರಿ ಮಾತನಾಡುತ್ತಾಳೆ. ಬಳಿಕ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಇದ್ದಾರೆ. ಎಲ್ಲಾ ಮುಗಿಸಿ ನಿಧಾನಕ್ಕೆ ಬನ್ನಿ ಎಂದು ಹೇಳಿ ಫೋನ್ ಇಡುತ್ತಾಳೆ. ಬಳಿಕ ಅಲ್ಲಿಗೆ ಬಂದ ಸುಮಾಳನ್ನು ನೋಡಿ ಯಾಕೆ ಇಷ್ಟು ಸುಸ್ತಾಗಿದ್ದಿ ಏನಾಯಿತು ಎಂದು ಕೇಳುತ್ತಾಳೆ. ಅದಕ್ಕೆ ಸುಮಾ ನಡೆದ ಘಟನೆಯನ್ನು ವಿವರಿಸುತ್ತಾಳೆ.

ಮೇಷ್ಟ್ರ ಬಗ್ಗೆ ಪ್ರಶ್ನೆ ಮಾಡಿದ ಸ್ನೇಹಾ
ಪುರುಷೋತ್ತಮ ಈಗ ಹುಷರಾಗಿದ್ದಾನೆ ಎಂದಾಗ ಇಲ್ಲ ಅಕ್ಕ ನಾನು ಸುಮ್ಮನೆ ನಿನ್ನನ್ನು ಕರೆಯಿಸಲಿಲ್ಲ ಎಂದು ಹೇಳುತ್ತ ಸಹನಾ ಬಳಿ. ಹೇಳುತ್ತಾಳೆ ಹೊಟ್ಟೆ ಬಹಳ ಹಸಿವಾಗುತ್ತಿದೇ ಏನಾದರು ತಾ ಅಕ್ಕ ತಿನ್ನಲು ಎಂದಾಗ ಸಹನಾ ಸುಮಳನ್ನೂ ಫ್ರೆಶ್ ಆಗಿ ಬರಲು ಹೇಳಿ ಅಲ್ಲಿಂದ ತೆರಳುತ್ತಾಳೆ. ಈ ವೇಳೆ ಸುಮನಾ ಬಳಿ ಮುರಳಿ ಮೇಷ್ಟ್ರು ಬಗ್ಗೆ ವಿಚಾರ ಮಾಡುತ್ತಾಳೆ ಸ್ನೇಹಾ. ನಿಮ್ಮ ಮೇಷ್ಟ್ರು ಹೇಗೆ ಆತನ ನಡವಳಿಕೆ ಹೇಗೆ ನಿಮ್ಮ ಬಳಿ ಹೇಗೆ ಇರುತ್ತಾರೆ ಎಂದೆಲ್ಲ ಹೇಳಿದಾಗ ಸುಮಾನೀಗೆ ಅಕ್ಕನಿಗೆ ಅನುಮಾನ ಬಂದಿರುವ ವಿಚಾರ ತಿಳಿಯುತ್ತದೆ. ಆ ವೇಳೆ ಅಕ್ಕನ ಬಳಿ ಮೇಷ್ಟ್ರು ಬಗ್ಗೆ ಪಾಸಿಟಿವ್ ಆಗಿಯೇ ಮಾತನಾಡುತ್ತಾಳೆ ಸುಮಾ.

ಮೇಷ್ಟ್ರು-ಸಹನಾಳನ್ನು ಒಂದು ಮಾಡಲು ನಿಶ್ಚಯ
ಇದನ್ನು ಕಂಡ ಸ್ನೇಹಾ ಹೇಳುತ್ತಾಳೆ ಏನೇ ಇರಲಿ ಅವರ ಬಳಿ ಮಾತನಾಡುವ ವೇಳೆ ಡಿಸ್ಟೆನ್ಸ್ ಮೈಂಟೈನ್ ಮಾಡು ಎಂದೆಲ್ಲ ಹೇಳಿ ಬಳಿಕ ಅಲ್ಲಿಂದ ತೆರಳುತ್ತಾಳೆ ಇದನ್ನೆಲ್ಲ ಕಂಡ ಸಹನಾ ಗೆಳತಿಗೆ ಇನ್ನಷ್ಟು ಅನುಮಾನ ಕಾಡುತ್ತದೆ. ಇನ್ನು ಕಂಠಿ ಯೋಚನೆ ಮಾಡುತ್ತಾ ಟೀ ಕುಡಿಯುತ್ತಾ ಇರುತ್ತಾನೆ. ಆ ವೇಳೆ ತನ್ನ ಗೆಳೆಯರ ಬಳಿ ಮೇಷ್ಟು ವಿಚಾರ ಹೇಳುತ್ತಾನೆ. ಮೇಷ್ಟ್ರು ಹಾಗೂ ಸಹನಾ ಇವರಿಬ್ಬರನ್ನು ಒಂದು ಮಾಡಿದರೆ ನನ್ನ ರೂಟ್ ಕ್ಲಿಯರ್ ಆಗುತ್ತದೆ. ಸ್ನೇಹಾಗೆ ಲವ್ ಮೇಲೆ ನಂಬಿಕೆ ಬರುತ್ತದೆ ಎಂದು ಹೇಳುತ್ತಾ ಮೇಷ್ಟ್ರನ್ನು ಹುಡುಕಲು ಹೋಗುತ್ತಾರೆ ಆದರೆ ಮೇಷ್ಟ್ರು ಎಲ್ಲೂ ಸಿಗಲಿಲ್ಲ. ಅತ್ತ ಕಡೆಯಿಂದ ಮೇಷ್ಟ್ರು ತಂದೆ ತಾಯಿ ಕೂಡ ಮೇಷ್ಟ್ರನ್ನು ಹುಡುಕುತ್ತಾ ಬರುತ್ತಿರುವುದನ್ನು ಕಂಡು ಕಂಠಿಗೆ ಆಶ್ಚರ್ಯ ಆಗುತ್ತದೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











