ಬಂಗಾರಮ್ಮ ಅರೆಸ್ಟ್.. ಕಂಠಿ ಭಾವುಕ: ಅಮ್ಮನ ಪರ ನಿಲ್ಲಲು ಮುಂದಾದ ಕಂಠಿಗೆ ಸ್ನೇಹಾ ಅಡ್ಡಿ!?
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಂಗಾರಮ್ಮ ತನ್ನ ತಾಯಿ ಜೊತೆ ಪುಟ್ಟಕ್ಕನ ಮನೆಗೆ ಆಗಮಿಸಿದ್ದಾರೆ.. ಇನ್ನೂ ಬಂಗಾರಮ್ಮನ ತಾಯಿ ಪುಟ್ಟಕ್ಕನ ಮನೆಗೆ ಹೋಗಿ ಆಗಿರುತ್ತದೆ. ಆದರೆ ಬಂಗಾರಮ್ಮ ಮಾತ್ರ ಪುಟ್ಟಕ್ಕನ ಮನೆಗೆ ಹೋಗಲೋ ಬೇಡವೋ ಎಂಬುವುದನ್ನು ತಿಳಿಯದೇ ಮಂಕಾಗಿ ಕಾರಿನಲ್ಲೇ ಕುಳಿತುಕೊಂಡಿದ್ದಾಳೆ.
ಆ ವೇಳೆ ಆ ಕಡೆಯಿಂದ ಕಂಠಿ ಬರುತ್ತಾನೆ. ಕಂಠಿ ಬರುತ್ತಾ ಇರುವುದನ್ನು ಕಂಡ ಬಂಗಾರಮ್ಮ ಕಾರಿನಲ್ಲಿ ಕುಳಿತಲ್ಲಿಂದಲೇ ಜೋರಾಗಿ ಮಗನನ್ನು ಕರೆಯುತ್ತಾರೆ. ಆಗ ಕಂಠಿ ತನ್ನ ಅಮ್ಮನ ಮುಖ ನೋಡಿ ಖುಷಿ ಪಡಬೇಕ ಅಥವಾ ಬೇಸರ ಪಡಬೇಕಾ ಅಥವಾ ತಾನೇ ಅಮ್ಮನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದೀನಿ ಎಂದು ತನ್ನ ತಪ್ಪನ್ನು ಅಮ್ಮನ ಬಳಿ ಹೇಳಿಕೊಳ್ಳಬೇಕಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.

ಬಂಗಾರಮ್ಮ ತನ್ನ ಮಗನ ಬಳಿ 'ಏನು ನಾನು ಮಾತನಾಡಿದರೆ ಮಾತ್ರ ನೀನು ಮಾತನಾಡಬೇಕು ಎಂದು ಡಿಸೈಡ್ ಮಾಡಿದ್ದೀಯಾ' ಎಂದು ಕೇಳುತ್ತಾರೆ. ಇದನ್ನು ಕೇಳಿದ ಕಂಠಿ ಮೆತ್ತಗೆ, 'ಹಾಗೇನಿಲ್ಲ... ನಾನು ಹಾಗೇನೂ ಅಂದುಕೊಂಡು ಇಲ್ಲ' ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ಯಾರು ಎನು ಹೇಳಿದರು ನನ್ನ ನಗ ನನ್ನ ಜೊತೆಗೇ ಇರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾಳೆ.
ಅಮ್ಮನ ಮಾತಿಗೆ ಸ್ತಬ್ಧನಾದ ಕಂಠಿ
ನಾನು ಮಾಡಿಲ್ಲದ ತಪ್ಪನ್ನು ನಾನೇ ಮಾಡಿದ್ದೇನೆ ಎಂದು ಈ ಊರಿನಲ್ಲಿ ಇರುವವರು ಎಲ್ಲಾ ಹೇಳಿದರೂ ನಾನು ಮಾತ್ರ ಯಾರೇ ಏನೇ ಅಂದರೂ ನನ್ನ ಮಗ ನನ್ನ ಜೊತೆ ಇರುತ್ತಾನೆ. ನನ್ನನ್ನು ಆತ ನಂಬುತ್ತಾನೆ ಎಂದೆಲ್ಲ ಅಂದುಕೊಂಡು ಇದ್ದೆ. ಆದರೆ ಇದೀಗ ನನ್ನ ಮಗನೇ ನನ್ನ ವಿರುದ್ದ ಇದ್ದಾನೆ ಎಂದು ಬಹಳ ಬೇಸರ ವ್ಯಕ್ತಪಡಿಸುತ್ತಾ ಇರುತ್ತಾರೆ ಬಂಗಾರಮ್ಮ. ತನ್ನ ತಾಯಿಯನ್ನು ಕಂಡ ಕಂಠಿಗೆ ಹೇಗೆ ಸಮಾಧಾನ ಮಾಡಬೇಕು ಎಂದು ತಿಳಿಯದ ಹಾಗಾಗುತ್ತದೆ.
ಪುಟ್ಟಕ್ಕನ ಮನೆಗೆ ಬಂದ ಬಂಗಾರಮ್ಮನ ತಾಯಿ
ಇನ್ನೂ ಬಂಗಾರಮ್ಮ ತನ್ನ ಮಗನ ಬಳಿ, ಸರಿ ಅಮ್ಮ ಪುಟ್ಟಕ್ಕನ ಮನೆಗೆ ಬಂದಿದ್ದಾರೆ ಅದಕ್ಕೆ ನಾನು ಬಂದಿದ್ದೀನಿ.. ನಮಗೆ ಇಷ್ಟ ಇಲ್ಲದೆ ಇದ್ದರೂ ನಾನು ಬರಬೇಕಾಯಿತು ಎಂದು ಹೇಳಿದ್ದಾರೆ. ಇನ್ನೂ ಬಂಗಾರಮ್ಮ ಮೆತ್ತಗೆ ಕಂಠಿಯನ್ನು ಕರೆದುಕೊಂಡು ಪುಟ್ಟಕ್ಕನ ಮನೆಗೆ ಹೋಗುತ್ತಾರೆ. ಅಲ್ಲಿ ಅವರೆಲ್ಲರೂ ಪುಟ್ಟಕ್ಕನ ಕ್ಷೇಮ ಸಮಾಚಾರ ವಿಚಾರಿಸುತ್ತಿರುತ್ತಾರೆ. ಪುಟ್ಟಕ್ಕ ಕೂಡ ಎಲ್ಲರ ಜೊತೆ ಖುಷಿಯಲ್ಲಿ ಮಾತನಾಡುತ್ತಾರೆ. ಆ ವೇಳೆ ಅಲ್ಲಿಗೆ ಬಂದ ಇನ್‌ಸ್ಪೆಕ್ಟರ್ ತಾಂಡವನನ್ನು ನೋಡಿ ಬಂಗಾರಮ್ಮಗೆ ಶಾಕ್ ಆಗುತ್ತದೆ.

ಮಗನ ಹೆಸರು ಕೇಳಿ ಬಂಗಾರಮ್ಮ ಶಾಕ್
ತಾಂಡವ್ ತನ್ನನ್ನೇ ಅರೆಸ್ಟ್ ಮಾಡಲು ಬಂದಿದ್ದಾರೆ ಎಂದು ತಿಳಿದು ಬಂಗಾರಮ್ಮನಿಗೆ ಶಾಕ್ ಆಗುತ್ತದೆ. ಕಂಪ್ಲೇಂಟ್ ಯಾರು ಕೊಟ್ಟಿದ್ದು ಎಂದಾಗ ನಿಮ್ಮ ಮಗ ಕಂಠಿ ಎಂದು ಪೊಲಿಸರು ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮ ಅಘಾತಕ್ಕೆ ಒಳಗಾಗಿದ್ದಾರೆ. ಆದರೆ, ಎನು ಮಾತನಾಡದೆ ಸುಮ್ಮನೆ ಪೊಲೀಸರ ಜೊತೆ ಹೋಗುತ್ತಾರೆ.. ಪುಟ್ಟಕ್ಕ ಹಾಗೂ ಅಜ್ಜಿಗೆ ಕಂಠಿ ನಡೆ ಬಹಳ ಬೇಸರ ತರಿಸುತ್ತದೆ.
ಕಂಠಿ ಮಾತಿಗೆ ಸಮ್ಮತಿ ನೀಡುತ್ತಾರಾ ಅಜ್ಜಿ?
ಕಂಠಿಗೆ ಅಮ್ಮನನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಇನ್ನೂ ಬಹಳ ಬೇಸರ ಆಗುತ್ತದೆ. ಕಂಠಿ ಅಜ್ಜಿ ಬಹಳ ಬೇಸರದಿಂದ ಏನೋ ಇದೆಲ್ಲ ಯಾಕೋ ಹೀಗೆಲ್ಲ ಮಾಡುತ್ತಾ ಇದ್ದೀಯಾ ಎಂದು ಕೇಳುತ್ತಾರೆ. ಆಗ ಕಂಠಿ ಅಮ್ಮ ನಿರಪರಾಧಿ ಎಂದು ನನಗೆ ನಿನಗೂ ತಿಳಿದಿದೆ. ಆದರೆ ಇಡೀ ಊರಿನವರಿಗೆಲ್ಲ ತಿಳಿಯಬೇಕು ಎಂದಾದರೆ ನಾನು ಈ ಕೆಲಸ ಮಾಡಲೇಬೇಕು ಅಜ್ಜಿ ಎಂದು ಹೇಳುತ್ತಾನೆ.


Click it and Unblock the Notifications











