Don't Miss!
- News
Fake marks card: ನಕಲಿ ಅಂಕಪಟ್ಟಿ ಮಾರಾಟ ಜಾಲ; 15 ವಿಶ್ವವಿದ್ಯಾಲಯಗಳ ಸಾವಿರಾರು ಅಂಕಪಟ್ಟಿಗಳು!
- Sports
SA vs ENG 1s ODI: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ದುಬಾರಿ ಕಮ್ಬ್ಯಾಕ್!
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನಿಗೆ ಅವಮಾನ ಮಾಡಿದ ಮೇಷ್ಟ್ರ ತಂದೆ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡ್ತಾಳ ಸಹನಾ?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಇದೀಗ ಚೆನ್ನಾಗಿ ಮೂಡಿ ಬರುತ್ತಿದೆ. ಮದುವೆ ಮಾತುಕತೆಗೆ ಬಂದಿದ್ದ ಪುಟ್ಟಕ್ಕನನ್ನು ಮನೆಯ ಹೊರಗೆ ನಿಂತುಕೊಂಡೆ ಮಾತನಾಡಿಸುತ್ತಾ ಇದ್ದಾರೆ ಮುರಳಿ ಮೇಷ್ಟ್ರ ತಂದೆ ಹಾಗೂ ತಾಯಿ. ಪುಟ್ಟಕ್ಕ ನಡೆದು ಬಂದ ಹಾದಿ ಹಾಗೂ ಆಕೆ ಮಕ್ಕಳನ್ನು ಅವಮಾನ ಮಾಡುತ್ತಾರೆ. ತನ್ನ ಮಗಳ ನಡತೆಯ ಬಗ್ಗೆ ಮಾತನಾಡಿದಾಗ ಪುಟ್ಟಕ್ಕನಿಗೆ ಸಹಿಸಲು ಆಗದಷ್ಟು ನೋವು ಆಗುತ್ತದೆ. ತನ್ನ ಮಗಳು ಮೇಷ್ಟ್ರನ್ನು ಪ್ರೀತಿ ಮಾಡಿದ್ದಾಳೆ ಅನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಇರುತ್ತಾಳೆ.
ಅದೇ ಸಮಯಕ್ಕೆ ಮೇಷ್ಟ್ರ ಅಕ್ಕ ಚೈತ್ರಾ ಹೊರ ಬರುತ್ತಾಳೆ ಪುಟ್ಟಕ್ಕ ಅವರನ್ನು ಕಂಡು ನೀವ್ಯಾಕೆ ಇಲ್ಲಿ ನಿಂತಿದ್ದಾರೆ ಬನ್ನಿ ಒಳಗೆ ಎಂದಾಗ ಮೇಷ್ಟ್ರ ತಾಯಿ ಕೋಪದಿಂದ ಸ್ನಾನ ಮಾಡಿ ಆಯಿತಾ, ಹೋಗು ದೇವರಿಗೆ ದೀಪ ಹಚ್ಚು ನಾವು ದೊಡ್ಡವರು ಮಾತನಾಡುತ್ತಾ ಇರುವ ವೇಳೆ ನೀವು ಬರಬಾರದು ಇದರಿಂದ ಯಾರಿಗೂ ಒಳ್ಳೆಯದಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಇದನ್ನು ಕೇಳಿದ ಚೈತ್ರಾ ಮನೆಯ ಒಳಗೆ ಹೋಗುತ್ತಲೇ ಅವಳಿಗೂ ಆತಂಕ ಆಗುತ್ತದೆ ಏನಿದು ಪುಟ್ಟಕ್ಕ ಅವರನ್ನು ಈ ರೀತಿ ಅವಮಾನ ಮಾಡುತ್ತಾ ಇದ್ದಾರಲ್ಲ ಯಾಕೆ ಇವರಿಬ್ಬರೂ ಹೀಗೆ ಮಾಡುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ.
ಇತ್ತ ಮೇಷ್ಟ್ರ ತಾಯಿ ಪುಟ್ಟಕ್ಕನ ಬಳಿ ಹೇಳುತ್ತಾರೆ. ನೀವು ನಮ್ಮನ್ನು ಅಂದು ಕದ್ದು ನಿಮ್ಮ ಮನೆಗೆ ಕರೆದುಕೊಂಡು ಇದೀಗ ಪುನಃ ಉತ್ತರ ಕೇಳಲು ಬಂದಿದ್ದೀರಾ ಇದು ಸರಿಯಾ? ನನ್ನ ಮಗ ಮುಂಚೆ ಮದುವೆ ಬೇಡ ಎಂದು ಹೇಳುತ್ತಿದ್ದ ಆದರೆ ಇದೀಗ ನಿಮ್ಮ ಮಗಳನ್ನು ನೋಡಿ ಮದುವೆ ಮಾಡಿಕೊಳ್ಳಲು ರೆಡಿ ಆಗಿ ನಿಂತಿದ್ದಾನೆ ಏನು ಇದರ ಅರ್ಥ? ನಾನೊಂದು ಪ್ರಶ್ನೆ ಕೇಳುತ್ತೇನೆ ನಿಮ್ಮ ಮಗಳು ಇದೆ ಮೊದಲು ಹೀಗೆ ಪ್ರೀತಿ ಮಾಡಿದ್ದಾ ಅಥವಾ ಇದಕ್ಕಿಂತ ಮುಂಚೆ ಎಂದಾಗ ಕೋಪದಿಂದ ಮೇಷ್ಟ್ರ ತಾಯಿ ಆಡುತ್ತಿರುವ ಮಾತಿಗೆ ಬ್ರೇಕ್ ಹಾಕುತ್ತಾಳೆ.

ಹೀನಾ-ಮಾನ ಹೀಗಳೆದ ಮೇಷ್ಟ್ರ ತಂದೆ-ತಾಯಿ
ಬಳಿಕ ಪುಟ್ಟಕ್ಕನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಇಂತಹ ಅವಮಾನದ ಮಾತುಗಳನ್ನು ಇಷ್ಟು ದಿನ ಕೇಳದ ಪುಟ್ಟಕ್ಕನಿಗೆ ಈ ರೀತಿಯ ಮಾತುಗಳನ್ನು ಕೇಳುವುದು ಬಹಳ ಕಷ್ಟ ಆಗುತ್ತದೆ. ಮನಸ್ಸಿಗೆ ನೋವು ಆಗುತ್ತದೆ ಕೊನೆಗೆ ಮೇಷ್ಟ್ರ ತಾಯಿ, ನಿಮ್ಮ ಗಂಡನ ಜೊತೆ ಬಂದಿದ್ದರೆ ಮನೆಯ ಒಳಗೆ ಸೇರಿಸುತ್ತಾ ಇದ್ದೆ ಆದರೆ ನಿಮ್ಮನ್ನು ಸೇರಿಸಲು ಆಗುವುದಿಲ್ಲ. ನಮ್ಮ ಕಡೆ ಗಂಡ ಬಿಟ್ಟು ಹೋಗಿ ತಾಳಿ ಹಾಕಿಕೊಂಡು ಇರುವವರನ್ನು ಹತ್ತಿರ ಸೇರಿಸುವುದು ಇಲ್ಲ ಎಂದು ಹೇಳಿದಾಗ ಪುಟ್ಟಕ್ಕ ಅಳುತ್ತಾಳೆ. ಬಳಿಕ ಈ ಮದುವೆ ನಮಗೂ ನಿಮಗೂ ಸರಿ ಬರುವುದು ಇಲ್ಲ. ಈ ಮದುವೆ ನಡೆಯಲು ಸಾಧ್ಯ ಇಲ್ಲ ಎಂದು ಖಡಕ್ ಆಗಿ ಹೇಳುತ್ತಾರೆ.

ಅಳುತ್ತಾ ಮನೆಗೆ ಮರಳಿದ ಪುಟ್ಟಕ್ಕ
ಇದನ್ನು ಕೇಳಿದ ಪುಟ್ಟಕ್ಕ, ಇಬ್ಬರು ಮಕ್ಕಳು ಪ್ರೀತಿ ಮಾಡಿದ್ದಾರೆ ದಯಮಾಡಿ ಅವರಿಬ್ಬರನ್ನು ಒಂದು ಮಾಡೋಣ ಎಂದು ಕೇಳಿದರು ಅವರು ಅದನ್ನು ಗಣನೆಗೆ ತೆಗೆದುಕೊಳ್ಳದೇ ಮನೆಯ ಬಾಗಿಲು ಮುಚ್ಚಿ ಬಿಡುತ್ತಾರೆ. ಇದನ್ನು ನೋಡಿದ ಪುಟ್ಟಕ್ಕನಿಗೆ ಬಹಳ ಬೇಸರ ಆಗುತ್ತದೆ. ಇನ್ನು ರಾಜೀಗೆ ಮಂಜುಳಾ ಕರೆ ಮಾಡಿ ಪುಟ್ಟಕ್ಕ ಮೇಷ್ಟ್ರ ಮನೆಗೆ ಹೋದ ವಿಚಾರ ತಿಳಿಸುತ್ತಾಳೆ. ಕೊನೆಗೆ ಅಲ್ಲಿ ಏನು ನಡೆಯಿತು ಅದನ್ನೆಲ್ಲ ವಿವರವಾಗಿ ರಾಜಿ ತಲೆಗೆ ತುಂಬುತ್ತಾಳೆ. ಇದನ್ನು ಕೇಳಿದ ರಾಜಿ ಬಹಳ ಖುಷಿ ಪಡುತ್ತಾಳೆ.

ಪುಟ್ಟಕ್ಕನ ನೋವು ಕಂಡು ಖುಷಿ ಪಡುತ್ತುರುವ ರಾಜಿ
ಈ ಖುಷಿ ವಿಚಾರ ಹೇಳಲು ಗೋಪಾಲ ಹಾಗೂ ಕಾಳಿಯನ್ನು ಕರೆದು ಹೇಳುತ್ತಾಳೆ. ನಾವು ಮಾಡಿದ ಪ್ಲಾನ್ ಸಕ್ಸಸ್ ಆಗಿದೆ ಬಹಳ ಖುಷಿ ಆಯಿತು ನನಗೆ ಎಂದು ಹೇಳುತ್ತಾಳೆ. ನನ್ನನ್ನು ಆ ಪುಟ್ಟಕ್ಕ ಬಹಳ ಅವಮಾನ ಮಾಡಿದ್ದಾಳೆ ಹಾಗೆಯೇ ಅವಳಿಗೂ ನಾನು ಅವಮಾನ ಮಾಡದೇ ಬಿಡುವುದಿಲ್ಲ ಎಂದು ಹೇಳುತ್ತಾ ಇವತ್ತು ಪುಟ್ಟಕ್ಕ ಬಹಳ ಬೇಸರದಲ್ಲಿ ಇರುತ್ತಾಳೆ ಈಗಲೆ ಅವಳ ಮನೆಯ ಬಳಿ ಹೋಗಿ ಆದ ಗಾಯಕ್ಕೆ ಖಾರ ಅರೆದು ಬರುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಪುಟ್ಟಕ್ಕನ ಮನೆಗೆ ಹೋಗುತ್ತಾಳೆ ಇದನ್ನೆಲ್ಲ ನೋಡಿದ ಗೋಪಾಲನಿಗೆ ಕೊಂಚ ಬೇಸರ ಆಗುತ್ತದೆ.

ಗಾಯಗೊಂಡ ಚಂದ್ರುವನ್ನು ಮನೆಗೆ ಕರೆತಂದ ವಸು
ಇತ್ತ ವಸು, ಗಾಯಗೊಂಡ ಚಂದ್ರುವನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಚಂದ್ರುಗೆ ಅಪಘಾತ ಆಗಿ ಬಹಳ ರಕ್ತ ಹೋಗುತ್ತಿದ್ದ ಕಾರಣ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಎಂದು ನಿರ್ಧಾರ ಮಾಡುತ್ತಾಳೆ. ಇನ್ನು ಕಂಠಿ ಮಾತ್ರ ವಸು ಡೈವರ್ಸ್ ಕೇಸ್ ಏನು ಆಗುತ್ತೋ ಎಂಬ ಭಯದಲ್ಲಿ ಇದ್ದಾನೆ. ಇದನ್ನು ನೋಡಿದ ಸ್ನೇಹಾ ಮಾತ್ರ ಏನಾಯಿತು ಶ್ರೀ ಎಂದೆಲ್ಲ ಹೇಳಿ ದೊರೆಯ ಬಗ್ಗೆ ಹೆಚ್ಚಾಗಿ ವಿಚಾರಣೆ ಮಾಡುತ್ತಾ ಇರುತ್ತಾಳೆ ಇದನ್ನು ಕೇಳಿದ ಶ್ರೀಗೂ ಕೊಂಚ ಕಿರಿಕಿರಿ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.