ಪುಟ್ಟಕ್ಕ ಮಾಡಿದ ಎಡವಟ್ಟಿನಿಂದ ಚಂದ್ರು ಬಾಳಲ್ಲಿ ಬರಲಿದೆಯಾ ಬಿರುಗಾಳಿ?

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಚಂದ್ರು ನಡೆ ನಂಜವ್ವಗೆ ಅನುಮಾನ ಹುಟ್ಟಿಸಿದೆ. ಊರಾಚೆಯ ಗದ್ದೆಯಲ್ಲಿ ಚಂದ್ರು ಏನು ಮಾಡುತ್ತಿದ್ದಾನೆ. ನನ್ನ ಬಳಿ ಸುಳ್ಳು ಹೇಳುತ್ತಿದ್ದಾನೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ ಚಂದ್ರು ತಾಯಿ ನಂಜವ್ವ. ಬಳಿಕ ಪುಟ್ಟಕ್ಕಾಗೆ ಕರೆ ಮಾಡಿದರೆ ಈ ಬಗ್ಗೆ ಏನಾದರೂ ಗೊತ್ತಾಗಬಹುದು ಎಂದು ಹೇಳಿ ನಂಜವ್ವ ಪುಟ್ಟಕ್ಕನಿಗೆ ಕರೆ ಮಾಡುತ್ತಾಳೆ. ನಂಜವ್ವನ ಕರೆ ಬಂದಿದ್ದು ನೋಡಿ ಪುಟ್ಟಕ್ಕ ಅರೆ ನಂಜವ್ವ ಯಾಕೆ ಕರೆ ಮಾಡುತ್ತಿದ್ದಾಳೆ ಎಂದು ಫೋನ್ ಕರೆ ಸ್ವೀಕರಿಸುತ್ತಾಳೆ.

ಏನು ಪುಟ್ಟಕ್ಕ ಕೆಲಸದ ಮೇಲೆ ಇದ್ದೀಯಾ ನಾನು ಫೋನ್ ಮಾಡಿ ನಿನಗೆ ತೊಂದರೆ ಕೊಟ್ಟಿಲ್ಲ ತಾನೇ ಎಂದು ಕೇಳುತ್ತಾಳೆ ನಂಜವ್ವ. ಅದಕ್ಕೆ ಪುಟ್ಟಕ್ಕ ಎನಿಲ್ಲವ್ವಿ ಹೇಳು ಎಂದು ಹೇಳಿದಾಗ ನಂಜವ್ವ, ಏನಿಲ್ಲ ಪುಟ್ಟಕ್ಕ ಸುಮ್ಮನೆ ಹಾಗೆ ಮಾತನಾಡುವ ಎಂದು ಫೋನ್ ಮಾಡಿದೆ, ಇವತ್ತು ಸಹನಾನ ನೋಡೋಕೆ ಗಂಡಿನ ಕಡೆಯವರು ಬರುತ್ತಾರೆ ಎಂದು ಹೇಳಿದ್ದೆ ಅಲ್ವಾ ಏನಾಯಿತು ಬಂದು ಹೋದ್ರಾ ಎಂದು ಕೇಳುವಾಗ ಪುಟ್ಟಕ್ಕನಿಗೆ ಬೇಸರವಾಗುತ್ತದೆ.

ಪುಟ್ಟಕ್ಕ ಹೇಳುತ್ತಾಳೆ ಬಂದಿದ್ರು ಕಣೆ ಆದರೆ ಯಾವುದೇ ಮಾತು ಕತೆ ಆಗಿಲ್ಲ ಎಂದಾಗ. ನಂಜವ್ವ ಕೇಳುತ್ತಾಳೆ ಯಾಕೆ ಪುಟ್ಟಕ್ಕ ಏನಾಯ್ತು ಅಂದಾಗ ಪುಟ್ಟಕ್ಕ ಎಲ್ಲಾ ಆಗಿದ್ದನ್ನು ವಿವರವಾಗಿ ನಂಜವ್ವಗೆ ಹೇಳುತ್ತಾಳೆ. ಅದಕ್ಕೆ ನಂಜವ್ವ ಹೇಳುತ್ತಾಳೆ ಇಷ್ಟೆಲ್ಲ ಆಯ್ತಾ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ ಹೀಗೆ ಆಗಿರುವುದು ಕ್ಷಮಿಸಿ ಬಿಡು ಪುಟ್ಟಕ್ಕ ಇಷ್ಟೆಲ್ಲ ಆಗೊಯ್ತಾ, ನೀನೇನೋ ಈ ಸಂಬಂಧ ಕುದುರುತ್ತೆ ಅಂದುಕೊಂಡಿದ್ದೆ ಅಲ್ವಾ ಆದರೆ ಹೀಗೆ ಆಗೋಯ್ತು ಮಗಳು ಬೇಸರದಾಗೆ ಇದ್ದಾಳ ಎಂದು ಕೇಳಿದಾಗ ಪುಟ್ಟಕ್ಕ ಹೇಳುತ್ತಾಳೆ ಇಲ್ಲ ಅವಳೇ ನನಗೆ ಸಮಾಧಾನ ಮಾಡುತ್ತಿದ್ದಾಳೆ. ಅವಳಿಗೆ ಎಷ್ಟೇ ನೋವಾದರೂ ಮನಸಲ್ಲೇ ಅಳುತ್ತಾಳೆ ಆದರೆ ಅದನ್ನು ತೋರ್ಪಡಿಸಿ ಕೊಳ್ಳುವುದಿಲ್ಲ ಎಂದು ಹೇಳುತ್ತಾಳೆ ಅದಕ್ಕೆ ನಂಜವ್ವ ಹೇಳುತ್ತಾಳೆ ಹಾ... ಪುಟ್ಟಕ್ಕ ಇದೀಗ ನನ್ನ ಮಗ ಚಂದ್ರುದ್ದು ಹಾಗೆಯೇ ಆಗಿದೆ ಎಂದು ವಿಷಯ ಪಲ್ಲಟ ಮಾಡುತ್ತಾಳೆ.

ಬಾಯ್ತಪ್ಪಿ ಸತ್ಯ ಹೇಳಿಬಿಡುವ ಪುಟ್ಟಕ್ಕ

ಬಾಯ್ತಪ್ಪಿ ಸತ್ಯ ಹೇಳಿಬಿಡುವ ಪುಟ್ಟಕ್ಕ

ಆದರೆ ಏನು ಮಾಡುವುದು ಈ ವಿಚಾರ ಕೇಳೋಣ ಅಂತ ನಿನಗೆ ಕಾಲ್ ಮಾಡಿದೆ ಪುಟ್ಟಕ್ಕ ಎಂದು ಹೇಳುತ್ತಾಳೆ. ಬಳಿಕ ಕೇಳುತ್ತಾಳೆ ಚಂದ್ರು ಏನಾದ್ರು ಅಲ್ಲಿಗೆ ಬಂದು ಬಿಟ್ಟಿದ್ದಾನಾ, ಇಲ್ಲ ಸ್ನೇಹಾ ಏನಾದ್ರು ಚಂದ್ರು ನ ಭೇಟಿಯಾಗಲು ಹೋಗಿದ್ದಾಳ ಎಂದು ಕೇಳಿದಾಗ ಪುಟ್ಟಕ್ಕ ಬಾಯಿ ತಪ್ಪಿ ಹೇಳುತ್ತಾಳೆ ಸ್ನೇಹಾ, ಚಂದ್ರು ಅಣ್ಣಯ್ಯಗೆ ವಸು ಅತ್ತಿಗೆನ ಭೇಟಿ ಮಾಡಿಸುತ್ತೇನೆ ಎಂದು ಹೋಗಿದ್ದಾಳೆ ಎಂದು. ಈ ಮಾತು ಕೇಳಿ ನಂಜವ್ವಗೆ ಪಿತ್ತ ನೆತ್ತಿ ಗೇರುತ್ತದೆ. ಏನು, ವಸು ಭೇಟಿ ಮಾಡಕ್ಕೆ ಕರೆದುಕೊಂಡು ಹೋಗಿದ್ದಾಳಾ ಎಂದು ಕುಳಿತಲ್ಲಿಂದ ಎದ್ದು ನಿಲ್ಲುತ್ತಾಳೆ ನಂಜವ್ವ.

ನಂಜವ್ವನಿಗೆ ಬುದ್ಧಿಮಾತು ಹೇಳುವ ಪುಟ್ಟಕ್ಕ

ನಂಜವ್ವನಿಗೆ ಬುದ್ಧಿಮಾತು ಹೇಳುವ ಪುಟ್ಟಕ್ಕ

ಬಳಿಕ ಪುಟ್ಟಕ್ಕ ನಂಜವ್ವಗೆ ಬುದ್ದಿ ಮಾತು ಹೇಳುತ್ತಾಳೆ. ನಂಜವ್ವ ಯಾಕೆ ಹೀಗೆ ಆಡುತ್ತಿದ್ದಿಯಾ ನಿನಗೆ ತಾಳ್ಮೆ ಜಾಸ್ತಿ ಎಂದು ನಾನು ಅರಿತಿದ್ದೇನೆ ಆದರೆ ನೀನೇ ಹೀಗೆ ಆಡುತ್ತಿದ್ದಿಯಾ ಎಂದು ಬೇಸರದಿಂದ ಹೇಳುತ್ತಾಳೆ. ನಿನ್ನ ಮಗ ಸೊಸೆ ಚೆನ್ನಾಗಿ ಇರಲಿ ನಂಜವ್ವ. ನಿಮ್ಮಿಬ್ಬರ ಹಗೆತನದಿಂದ ಆ ಮಕ್ಕಳು ಪರದಾಡುವ ಹಾಗೆ ಆಗುತ್ತಿದೆ ಎಂದು ಹೇಳಿ ಪುಟ್ಟಕ್ಕ ಫೋನ್ ಕಟ್ ಮಾಡುತ್ತಾಳೆ. ಇತ್ತ ಸ್ನೇಹಾ ಧಿಡೀರ್ ಆಗಿ ಮನೆಗೆ ಬರುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ, ಸಹನಾ, ಸ್ನೇಹಾ ಬಳಿಗೆ ಬರುತ್ತಾರೆ. ಪುಟ್ಟಕ್ಕ ಸಹನಾನ ಬಳಿ ಹೇಳುತ್ತಾರೆ ಹೋಗುವಾಗ ಖುಷಿಯಲ್ಲಿ ಹೋದಳು ಬರುವಾಗ ಸಪ್ಪೆ ಮುಖ ಹಾಕಿ ಬರುತ್ತಿದ್ದಾಳೆ. ನಾನು ನಂಜಮ್ಮ ಗೆ ಫೋನಲ್ಲಿ ಹೇಳಿದ ವಿಷಯ ಇವನಿಗೆ ಏನಾದ್ರು ಗೊತ್ತಾಯ್ತಾ ಎಂದು ಹೇಳುತ್ತಾಳೆ. ಇನ್ನೂ ಅಲ್ಲಿಂದ ತೆರಳುವಾಗ ಸುಮಾ ಬರುತ್ತಾಳೆ.

ಮನೆಗೆ ಬಂದು ಬಾಗಿಲು ಹಾಕಿಕೊಳ್ಳುವ ಸುಮಾ

ಮನೆಗೆ ಬಂದು ಬಾಗಿಲು ಹಾಕಿಕೊಳ್ಳುವ ಸುಮಾ

ಅವಳ ಬಳಿ ಸಹನಾ ಕೇಳುತ್ತಾಳೆ ಏನಾಯ್ತು ಸುಮಾ ಪಂದ್ಯ ಗೆದ್ರಾ ಎಂದು ಕೇಳಿದಾಗ ಅಲ್ಲಿಂದ ಏನು ಹೇಳದೆ ಹೋಗುತ್ತಾಳೆ ಸುಮಾ. ಇದನ್ನು ನೋಡಿದ ಸಹನಾ, ಸುಮಾ ಎಂದು ಕರೆದುಕೊಂಡು ಹೋಗುತ್ತಾಳೆ. ತುಂಬಾ ಸುಸ್ತಾಯ್ತಾ ಎಂದು ಕೇಳಿದಾಗ ಸುಮಾ ಬಾಗಿಲು ಹಾಕುತ್ತಾಳೆ ಇದನ್ನು ನೋಡಿದ ಸಹನಾಗೆ ಗಾಬರಿ ಆಗುತ್ತದೆ. ಸುಮಾ ಎಂದು ಕರೆಯುತ್ತಾಳೆ.

ಅಕ್ಕನ ಮದುವೆ ತಪ್ಪಿದ್ದಕ್ಕೆ ಸುಮಾಗೆ ಖುಷಿ

ಅಕ್ಕನ ಮದುವೆ ತಪ್ಪಿದ್ದಕ್ಕೆ ಸುಮಾಗೆ ಖುಷಿ

ಆಗ ಪುಟ್ಟಕ್ಕ ಹೇಳುತ್ತಾಳೆ ಏನಿವಳು ಕೈ ಕಾಲು ತೊಳೆದುಕೊಳ್ಳಬೇಕು ಎನ್ನುವ ಜ್ಞಾನ ಇಲ್ವಾ, ಬಾಗಿಲು ತೆಗಿ ಎಂದು ಹೇಳುತ್ತಾಳೆ ಪುಟ್ಟಕ್ಕ. ಬಳಿಕ ಪುಟ್ಟಕ್ಕ ತೆರಳುತ್ತಾಳೆ. ಸುಮಾ ಳನ್ನು ಸಹನಾ ಕರೆಯುತ್ತಿರುವಾಗ ಸುಮಾ ಬಾಗಿಲು ಏನಕ್ಕ ನಿಂದು ಬಂದಿದ್ ತಕ್ಷಣ ಎಲ್ಲಾ ನಿನ್ನ ಬಳಿ ಹೇಳಿ ಬಿಡಬೇಕಾ ಸ್ವಲ್ಪ ಹೊತ್ತು ನನ್ನ ಪಾಡಿಗೆ ಬಿಟ್ಟು ಬಿಡು ಎಂದಾಗ ಸಹನಾ ಹೇಳುತ್ತಾಳೆ ಏನವ್ವಿ ಕಣ್ಣೆಲ್ಲ ಹಿಂಗಾಗಿದೆ. ಎಂದಾಗ ಸುಮಾ ಸುಮ್ನಿರಕ್ಕ ನೀನು ನಾನು ಮ್ಯಾಚ್ ಸೋತಿರುವ ಟೆನ್ಶನ್ ನಲ್ಲಿ ಇದ್ದೀನಿ ತಲೆ ತಿನ್ನಬೇಡ ಹೋಗಿ ಸುಮ್ನೆ ಎಂದಾಗ ಸ್ನೇಹಾ ಬರುತ್ತಾಳೆ. ಏಯ್ ಏನೇ ನಿಂದು ಏನೋ ಪಾಪ ಸುಸ್ತಾಗಿದ್ದಾರೆ ಎಂದು ವಿಚಾರಿಸಿದರೆ ಅಕ್ಕನ ಮೇಲೆ ಕೂಗಾಡುತ್ತಿದ್ದಿಯಾ ಅಲ್ವಾ ನೀನು ಸೋತಿರುವ ಟೆನ್ಶನ್ ನ ಹೀಗೆ ಕೂಗಾಡಿ ತೀರಿಸಿಕೊಳ್ಳುತ್ತಿದ್ದಿಯಾ ಇವತ್ತು ಅಕ್ಕನ ನೋಡಕೆ ಗಂಡಿನ ಕಡೆಯವರು ಬಂದಿದ್ರು ಅದರ ಬಗ್ಗೆ ಚೂರಾದ್ರು ಕೆಳಿದ್ಯಾ ನೀನು. ಸಹನಾ ಅಕ್ಕ ಅವಳಿಗೆ ಆಗಿರುವ ದುಃಖ ಮುಚ್ಚಿಟ್ಟು ಇವಳನ್ನ ವಿಚಾರಿಸಿದರೆ ಕೊಬ್ಬು ಇವಳಿಗೆ ಅಂದಾಗ ಸುಮಾ ಏನು ಹುಡುಗರ ಕಡೆಯವರು ಹೊರಟು ಹೋದರ, ಸಂಬಂಧ ಬೇಡ ಅಂತ ಹೊರಟು ಹೋದ್ರಾ ಅಕ್ಕ ನೋಡವ್ವ ಅದನ್ನು ಜೋಷಿಂದ ಕೇಳುತ್ತಿದ್ದಾಳೆ ಇವಳು ಎಂದು ಹೇಳುತ್ತಾಳೆ ಸ್ನೇಹಾ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 12th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X