ಪುಟ್ಟಕ್ಕನ ಮಕ್ಕಳ ಸಹಾಯಕ್ಕೆ ಧಾವಿಸಿದ ಬಂಗಾರಮ್ಮ!

By ಪೂರ್ವ

ಪುಟ್ಟಕ್ಕ ಕಾಲ್ನಡಿಗೆಯಲ್ಲಿ ದೇವರ ದರ್ಶನ ಮಾಡಲು ಬೆಟ್ಟಕ್ಕೆ ತೆರಳಿದ್ದಾಳೆ. ಇತ್ತ ಪುರುಷೋತ್ತಮನಿಗೆ ಗಾಯ ಆಗಿರೋದಕ್ಕೆ ಸುಮಾನೆ ಕಾರಣ ಎಂದು ಕೋಪಗೊಂಡ ರಾಜಿ, ಪುಟ್ಟಕ್ಕನ ಮನೆಯ ಬಳಿ ಬಂದಿದ್ದಾಳೆ. ಆದರೆ ಪುಟ್ಟಕ್ಕನ ಮನೆಯಲ್ಲಿ ದಸರಾ ಸಂಭ್ರಮ ನಡೆಯುತ್ತಿದೆ. ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಲು ರೆಡಿಯಾಗಿದ್ದಾರೆ. ಹಳ್ಳಿಗಳಿಂದ ಅನೇಕರು ಪುಟ್ಟಕ್ಕನ ಮನೆಗೆ ಹಬ್ಬಕ್ಕೆ ಬಂದಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ರಾಜಿ ಜೋರಾಗಿ ಕೂಗುತ್ತಾ, ಗೊಂಬೆಗಳನ್ನು ಕೂರಿಸಿದ್ದೂ ಸಾಕು ನನ್ನ ಮಗನಿಗೆ ಹೊಡೆಸುವಷ್ಟರ ಮಟ್ಟಿಗೆ ನಿಮಗೆ ಕೊಬ್ಬ ಎಂದು ಕೇಳುತ್ತಾಳೆ.

ರಾಜಿ ಮಾತು ಕೇಳಿ ಹೊರ ಬಂದ ಸ್ನೇಹಾ, ಸುಮಾ ಹಾಗೂ ಸಹನಾಳನ್ನು ನೋಡಿದ ರಾಜಿ ಬಂದ್ರವ್ವ ನನ್ನ ಮಗನ ತಲೆಗೆ ಪೆಟ್ಟು ಮಾಡಿ ನೀವು ಗೊಂಬೆಗಳನ್ನು ಕೂರಿಸಿ ಸಂತಸ ಪಡುತ್ತಿದ್ದಿರಾ ಎಂದೆಲ್ಲ ಜೋರಾಗಿ ಬೈಯುತ್ತಾಳೆ. ಇದನ್ನು ಕಂಡ ಊರಿನವರು ಯಾಕಮ್ಮಾ ರಾಜಿ, ಪುಟ್ಟಕ್ಕ ಇಲ್ಲದ ವೇಳೆ ಮನೆಗೆ ಬಂದು ಈ ರೀತಿ ರಾದ್ದಾಂತ ಮಾಡುತ್ತಿದ್ದೀಯಾ ಎಂದು ಕೇಳಿದರೆ ಅವರನ್ನೇ ಬೆದರಿಸಿ ಸುಮ್ಮನಿರುವಂತೆ ಸೂಚನೆ ನೀಡುತ್ತಾಳೆ. ಬಳಿಕ ಸ್ನೇಹಾ, ಪುರುಷೋತ್ತಮನ ಬಳಿ ಕೇಳುತ್ತಾಳೆ ಪುರುಷೋತ್ತಮ ನನ್ನ ತಂಗಿ ನಿನಗೆ ಹೊಡೆಸಿದ್ಲಾ ನಿಜ ಹೇಳು ಎನ್ನುತ್ತಾಳೆ.

ಇದನ್ನು ಕೇಳಿದ ಪುರುಷೋತ್ತಮ ಇಲ್ಲ ಅಕ್ಕ ಏನು ಮಾಡಿಲ್ಲ ಎಂದು ಹೇಳಿದಾಗ ರಾಜಿ ಪುರುಷೋತ್ತಮನನ್ನು ಹಿಂದಕ್ಕೆ ತಳ್ಳಿ ಏನೇ ನಿನಗೆ ಅವನ ಬಳಿ ಮಾತು ಎಂದೆಲ್ಲ ಹೇಳುತ್ತಿರುವ ವೇಳೆ ಅಲ್ಲಿಗೆ ಬಂಗರಮ್ಮಾ ಬರುತ್ತಾಳೆ. ಬಂಗಾರಮ್ಮ ಬರುತ್ತಿರುವುದನ್ನು ನೋಡಿದ ಸಹನಾ ಸ್ನೇಹಾ ಬಳಿ, ''ಸ್ನೇಹಾ ನೀನು ಒಳಗೆ ಹೋಗು ಬಂಗಾರಮ್ಮ ಬಂದಿದ್ದಾರೆ. ಈಗ ಬೇರೆ ಅವ್ವ ಮನೆಯಲ್ಲಿ ಇಲ್ಲ ಎಂದು ಒತ್ತಾಯ ಮಾಡಿ ಮನೆಯ ಒಳಗೆ ಕಳುಹಿಸುತ್ತಾಳೆ. ಇನ್ನು ಅಲ್ಲಿಗೆ ಬಂದ ಬಂಗಾರಮ್ಮ ರಾಜೇಶ್ವರಿಯನ್ನು ನೋಡಿ ಏನು ನಡೆಯುತ್ತಿದೆ ಇಲ್ಲಿ ಎಂದು ಜೋರಾಗಿ ಕೇಳುತ್ತಾಳೆ.

ಪುಟ್ಟಕ್ಕನ ಮಕ್ಕಳ ಪರ ನಿಲ್ಲುವ ಬಂಗಾರಮ್ಮ

ಪುಟ್ಟಕ್ಕನ ಮಕ್ಕಳ ಪರ ನಿಲ್ಲುವ ಬಂಗಾರಮ್ಮ

ಇದನ್ನು ಕೇಳಿದ ರಾಜಿ, ನನ್ನ ಮಗನಿಗೆ ಸುಮಾ ಹೊಡೆಸಿದ್ದಾಳೆ ಎಂದು ಹೇಳುತ್ತಾಳೆ. ಆ ವೇಳೆ ಇದನ್ನು ನಂಬದ ಬಂಗಾರಮ್ಮ, 'ಪುಟ್ಟಕ್ಕ ನನ್ನ ಗೆಳತಿ, ಆಕೆ ಕೆಟ್ಟ ಬುದ್ದಿಯನ್ನು ಅವರ ಮಕ್ಕಳಿಗೆ ಕಲಿಸಲು ಸಾಧ್ಯ ಇಲ್ಲ. ಆಕೆ ಬಹಳ ಒಳ್ಳೆಯವಳು' ಎಂದು ಹೇಳುತ್ತಾಳೆ. ಅದನ್ನು ಕಂಡ ಸುಮಾ, ಸಹನಾ ಖುಷಿ ಪಡುತ್ತಾರೆ. ಬಂಗಾರಮ್ಮ ಪುರುಷೋತ್ತಮನ ಬಳಿ, 'ಇದರಲ್ಲಿ ಸುಮನಾ ತಪ್ಪುದೆಯ ಎಂದು ಕೇಳುತ್ತಾಳೆ? ಅದನ್ನು ಕೇಳಿದ ಪುರುಷೋತ್ತಮ, ಇದರಲ್ಲಿ ಸುಮಾನ ತಪ್ಪು ಏನೂ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ಪುರುಷೋತ್ತಮನಿಗೆ ಶಭಾಷ್ ಎನ್ನುತ್ತಾಳೆ. ಇದನ್ನೆಲ್ಲ ಕಂಡ ರಾಜಿ ಅಲ್ಲಿಂದ ಹೋಗುತ್ತಾಳೆ. ಬಳಿಕ ಬಂಗಾರಮ್ಮ ದಸರಾ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಈ ವೇಳೆ ಸಹನಾಗೆ ಒಂದು ಹೊಸ ಸೀರೆಯನ್ನು ಕೊಡುತ್ತಾರೆ.

ಸಹನಾ ಮೇಲೆ ಉರಿದು ಬೀಳುವ ಮೇಷ್ಟ್ರ ಪೋಷಕರು

ಸಹನಾ ಮೇಲೆ ಉರಿದು ಬೀಳುವ ಮೇಷ್ಟ್ರ ಪೋಷಕರು

ಆ ವೇಳೆ ಅಲ್ಲಿಗೆ ಬಂದ ಮುರಳಿ ಮೇಷ್ಟ್ರ ತಂದೆ ತಾಯಿ ಪುಟ್ಟಕ್ಕನ ಮಕ್ಕಳಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ. ಮೇಷ್ಟ್ರು ಕಾಣಿಸುತ್ತಿಲ್ಲ ಎನ್ನುವ ಭಯಕ್ಕೆ ಆ ರೀತಿ ಮಾತನಾಡುತ್ತಿರುವ ವೇಳೆ ಅಲ್ಲಿಗೆ ಬಂದ ಬಂಗಾರಮ್ಮ ಬೈದು ಅಲ್ಲಿಂದ ಅವರನ್ನು ಕಳುಹಿಸಿ ಬಿಡುತ್ತಾರೆ. ಬಳಿಕ ಅಲ್ಲಿಂದ ಬಂಗಾರಮ್ಮ ತೆರಳುತ್ತಾಳೆ. ಇನ್ನು ಇಷ್ಟೆಲ್ಲ ಆದ ಮೇಲೆ ಸಹನಾ ಮಾತ್ರ ಬಹಳ ಬೇಸರ ಮಾಡಿಕೊಳ್ಳುತ್ತಾಳೆ.

ಮುರಳಿ ಮೇಷ್ಟ್ರನ್ನೂ ನೆನೆದು ಅತ್ತ ಸಹನಾ

ಮುರಳಿ ಮೇಷ್ಟ್ರನ್ನೂ ನೆನೆದು ಅತ್ತ ಸಹನಾ

ಮುರಳಿ ಮೇಷ್ಟ್ರು ಹೇಳುತ್ತಿದ್ದರು ನಾನು ಅಂದರೆ ಅವರ ಅಪ್ಪ ಅಮ್ಮನಿಗೆ ಇಷ್ಟ ಇಲ್ಲ ಅಂತೆ ಎಂದು ಅವರು ಹೇಳುತ್ತಿದ್ದರು ಎಲ್ಲಿ ಹೋಗಿರಬಹುದು ಎಂದೆಲ್ಲ ಯೋಚನೆ ಮಾಡುತ್ತಾ ಕೆರೆ ಬಳಿ ಹೋಗಿರಬಹುದು ಎಂದುಕೊಳ್ಳುತ್ತಾ ಸಹನಾ ಹೋಗುತ್ತಾಳೆ. ಆ ವೇಳೆ ಅಲ್ಲಿರುವವರು ಯಾರೋ ಕೆರೆಗೆ ಯಾರೋ ಬಿದ್ದಿದ್ದಾರೆ ಎಂದು ಗುಮಾನಿ ಹಬ್ಬಿಸಿಬಿಡುತ್ತಾರೆ. ಇದನ್ನು ಕೇಳಿ ಸಹನಾಗೆ ಗಾಬರಿ ಆಗುತ್ತದೆ. ಅದನ್ನೆಲ್ಲ ಕೇಳಿ, ಮೇಷ್ಟ್ರ ತಂದೆ ತಾಯಿ ಕೂಡ ಬರುತ್ತಾರೆ. ಜೊತೆಗೆ ಸಹನಾಗೆ ಸಿಕ್ಕಾ ಪಟ್ಟೆ ಬೈಯ್ಯುತ್ತಾರೆ. ಇತ್ತ ಸುಮಾ ಬಂಗಾರಮ್ಮನ ಬಳಿ ಕಂಠಿ ಮಾತನಾಡುವುದನ್ನು ನೋಡುತ್ತಾಳೆ.

ಸುಮಾಗೆ ಮೂಡಿದೆ ಕಂಠಿ ಮೇಲೆ ಅನುಮಾನ

ಸುಮಾಗೆ ಮೂಡಿದೆ ಕಂಠಿ ಮೇಲೆ ಅನುಮಾನ

ಶ್ರೀ ಅಣ್ಣಗೆ ಬಂಗಾರಮ್ಮ ಹೇಗೆ ನಂಟು ಎಂದೆಲ್ಲ ಯೋಚನೆ ಮಾಡುತ್ತಾಳೆ. ಇನ್ನು ದಾರಿಯಲ್ಲಿ ಕಂಠಿ ಅಮ್ಮ ನನ್ನು ಕಂಡು ಎತ್ತ ಹೋಗಿದ್ದೆ ಅಮ್ಮ ಎಂದೆಲ್ಲ ಕೇಳುತ್ತಾನೆ. ಬಳಿಕ ಮುಖ ಒಂಥರಾ ಆಗಿದೆ ಎತ್ತ ಹೋಗಿದ್ದೆ ಎಂದಾಗ ಪುಟ್ಟಕ್ಕನ ಮನೆಗೆ ಹೋಗಿದ್ದೆ ಅಲ್ಲಿ ನೋಡಬಾರದ ಮುಖವನ್ನು ನೋಡಿದೆ ಎಂದಾಗ ಕಂಠಿ ಹೇಳುತ್ತಾನೆ ಆಕೆ ತುಂಬಾ ಪಾಪ ಅಮ್ಮ ಎಂದಾಗ ಬಂಗಾರಮ್ಮ ಹೇಳುತ್ತಾರೆ ಏನು ಆ ರಾಜಿ ಪಾಪನ ನೀನೇ ಹೇಳಿದ್ದು ಪಾಪ ಎಂದು ಹೇಳಿದಾಗ ಯಾರು ರಾಜಿನಾ ನಾನು ಆಕೆಯನ್ನು ಹೇಳಿಲ್ಲ ಎಂದಾಗ ಬಂಗಾರಮ್ಮ ಕೇಳುತ್ತಾರೆ ಮತ್ತೆ ಯಾರನ್ನು ಪಾಪ ಎಂದಾಗ ತೊದಲುತ್ತಾ ಏನೇನೋ ಸಬೂಬು ಹೇಳುತ್ತಾನೆ ಇದನ್ನೆಲ್ಲ ಸುಮಾ ಬೆಟ್ಟದ ಮೇಲೆ ನಿಂತು ನೋಡುತ್ತಾ ಇರುತ್ತಾಳೆ.

More from Filmibeat

English summary
Kannada serial Puttakkana Makkalu written updated on 12th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X