ಗಣೇಶ ಹಬ್ಬ ಆಚರಿಸಲು ಪುಟ್ಟಕ್ಕನ ಮನೆಗೆ ಬಂದ ಕಂಠಿ!

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಇದೀಗ ಪುಟ್ಟಕ್ಕನ ಸಣ್ಣ ಮಗಳು ಸುಮಾ ಮುನಿಸು ಮರೆತು ಇದೀಗ ಅಕ್ಕನನ್ನು ತಬ್ಬಿಕೊಂಡು ಅತ್ತು ತನ್ನ ತಪ್ಪಿನ ಅರಿವು ಮಾಡಿಕೊಂಡಿದ್ದಾಳೆ.

ಎಷ್ಟೇ ಹೇಳಿದರೂ ಹಠ ಬಿಡದೆ ನಮಗೆ ಉತ್ತಮ ಕೋಚ್ ಬೇಕು ಅಮ್ಮಾ ಬೇಡ ಎಂದೆಲ್ಲ ಪಟ್ಟು ಹಿಡಿದಿದ್ದಳು ಸುಮಾ. ಇದನ್ನೆಲ್ಲ ಕ್ಯಾರೇ ಎನ್ನದ ಪುಟ್ಟಕ್ಕನ ಎರಡನೇ ಮಗಳು, ಅಮ್ಮನೇ ಕೋಚ್ ಆಗಬೇಕು ಆ ರಾಜೇಶ್ವರಿಯ ಬಾಯಿ ಮುಚ್ಚಿಸಬೇಕು ಎನ್ನುತ್ತಾಳೆ. ಅದಕ್ಕೆ ಸುಮಾ, ಕೋಚ್ ಅಂದರೆ ಹೇಗೆಲ್ಲಾ ಇರುತ್ತಾರೆ. ಜಿಮ್ ಮಾಡಿ ಮೈ ಬೆವರೆಲ್ಲ ಇಳಿಸುತ್ತಾರೆ ಹೇಗಿರುತ್ತಾರೆ ಗೊತ್ತಾ ಕೋಚ್ ಗಳೆಲ್ಲ ಎಂದಾಗ ಸ್ನೇಹಾ ಸಹನಾ ಬಳಿ ಕೇಳುತ್ತಾಳೆ ಅಮ್ಮ ದಿನ ಏನು ಮಾಡುತ್ತಾಳೆ ಹೇಳು ಎಂದು ಕೇಳುತ್ತಾಳೆ.

ಅದಕ್ಕೆ ಅಮ್ಮ ದಿನ ಬಾವಿಯಿಂದ ನೀರು ಸೇದುತ್ತಾಳೆ ಎನ್ನುತ್ತಾಳೆ ಸ್ನೇಹಾ. ಇದನ್ನು ಕೇಳಿದ ಸುಮಾ ಇನ್ನಷ್ಟು ಕೋಪ ಮಾಡಿಕೊಳ್ಳುತ್ತಾಳೆ. ಬಳಿಕ ಕೊಂಚ ಕೋಪ ಕಮ್ಮಿ ಮಾಡಿಕೊಂಡು ಕೋಪವನ್ನು ಬಿಡುತ್ತಾಳೆ. ಗಣೇಶನ ಹಬ್ಬವನ್ನು ಪ್ರತಿ ವರ್ಷ ತುಂಬಾ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಈ ವರ್ಷವೂ ಕೂಡ ಗಣೇಶ ಹಬ್ಬಕ್ಕೆ ಅದ್ದೂರಿಯಾಗಿ ತಯಾರಿ ನಡೆಯುತ್ತಿದ್ದು ನೋಡುಗರಿಗೆ ಮುದ ನೀಡಿದೆ. ಇದೀಗ ಪ್ರತಿ ವರ್ಷದಂತೆ ಈ ವರ್ಷವೂ ಮೂವರು ಹೆಣ್ಣು ಮಕ್ಕಳು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದರು ಈ ವೇಳೆ ಒಬ್ಬಾತ ಬಂದು ಏನಮ್ಮ ಗಂಡು ಮಕ್ಕಳು ಯಾರು ಸಹಾಯಕ್ಕೆ ಬರಲಿಲ್ವಾ ಎಂದು ಕೇಳುತ್ತಾನೆ.

ಗಣೇಶ ಹಬ್ಬಕ್ಕೆ ಭರದ ಸಿದ್ಧತೆ

ಗಣೇಶ ಹಬ್ಬಕ್ಕೆ ಭರದ ಸಿದ್ಧತೆ

ಇದನ್ನು ಕೇಳಿದ ಸ್ನೇಹಾಗೆ ಸಿಟ್ಟು ಬಂದು ಏನಯ್ಯ ನಿಮಗೆ ನಾನು ಗಂಡು ಮಗನ ಹಾಗೆ ಕಾಣಿಸುತ್ತಿಲ್ವಾ ಎಂದು ಹೇಳುತ್ತಾರೆ. ಇದಕ್ಕೆ ಸುಮ್ಮನಾಗಿ ಹೋಗುತ್ತಾನೆ. ಬಳಿಕ ಸುಮಾ, ಸಹನಾ ಅಕ್ಕ ರಂಗೋಲಿ ಹಾಕುವುದನ್ನು ನೋಡುತ್ತಾಳೆ ಬಳಿಕ ಸ್ನೇಹಾನ ಬಳಿ ಬಂದು, ನಾವಿಬ್ಬರೂ ಗಂಡು ಮಕ್ಕಳ ಹಾಗೆ ಸಹನಾ ಅಕ್ಕ ಮಾತ್ರ ಹೆಣ್ಣು ಮಗು ಇದ್ದಂತೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಸ್ನೇಹಾ ಹೇಳುತ್ತಾಳೆ ಆದರೆ ಅಪ್ಪ ಎನ್ನುವವನು ಗಂಡು ಮಗು ಇಲ್ಲ ಅಂತ ಬಿಟ್ಟು ಹೋದ ಅಲ್ವಾ ಎಂದೆಲ್ಲ ಹೇಳುತ್ತಾಳೆ.

ಚಪ್ಪರ ಹಾಕಲು ಸಹಾಯ ಮಾಡಿದ ಕಂಠಿ

ಚಪ್ಪರ ಹಾಕಲು ಸಹಾಯ ಮಾಡಿದ ಕಂಠಿ

ಇದನ್ನು ಕೇಳಿ ಸಹನಾ ಮೆಲ್ಲ ಹೇಳಿ ಅಮ್ಮನಿಗೆ ಗೊತ್ತಾದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದೆಲ್ಲ ಹೇಳಿ ಸಹನಾಳನ್ನು ಸಮಾಧಾನ ಪಡಿಸುತ್ತಾರೆ. ಬಳಿಕ ಚಪ್ಪರ ಹಾಕಲು ಹೋದ ಸ್ನೇಹಾ ಎಡವುತ್ತಾಳೆ. ಸ್ನೇಹಾ ಬೀಳದಂತೆ ಕಂಠಿ ನೋಡಿಕೊಳ್ಳುತ್ತಾನೆ. ಈ ವೇಳೆ ಚಪ್ಪರ ಹಾಕಲು ಕಂಠಿಯು ಸೇರಿಕೊಳ್ಳುತ್ತಾನೆ. ಇದನ್ನು ನೋಡಿದ ಸ್ನೇಹಾ ಖುಷಿ ಪಡುತ್ತಾಳೆ. ಈ ವೇಳೆ ಸುಮಾ, ಸ್ನೇಹಾಳ ಕಾಲು ಎಳೆಯುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಕೋಪ ಉಕ್ಕಿ ಬರುತ್ತದೆ ಬಳಿಕ ಸುಮಾ ಮೆತ್ತಗೆ ಜೋಕ್ ಮಾಡಿ ನಗುತ್ತಾಳೆ.

ಬಂಗಾರಮ್ಮನಿಗೆ ವಿಡಿಯೋ ಕಾಲ್ ಮಾಡಿದ ಪೂರ್ವಿ

ಬಂಗಾರಮ್ಮನಿಗೆ ವಿಡಿಯೋ ಕಾಲ್ ಮಾಡಿದ ಪೂರ್ವಿ

ಇದೀಗ ಗಣೇಶ ವಿಗ್ರಹ ತರಲು ಪುಟ್ಟಕ್ಕ ಹುಂಡಿಯನ್ನು ಕೊಡುತ್ತಾರೆ. ಮೆಸ್ ಗೆ ಬರುವವರು ಎಲ್ಲಾ ಇದಕ್ಕೆ ಕೊಂಚ ಪ್ರಮಾಣ ಆದರೂ ಹಾಕಿರುತ್ತಾರೆ ಈ ಹಣದಲ್ಲಿ ಗಣೇಶ ಹಬ್ಬ ಮಾಡೋಣ ಎಂಬುವುದು ಆವರ ಆಶಯ. ಇದಕ್ಕೆ ಕಂಠಿ ಯು ಹಣ ಹಾಕುತ್ತಾನೆ. ಇದನ್ನು ಕಂಡ ಪುಟ್ಟಕ್ಕ ಹಾಗೂ ಅವರ ಮಕ್ಕಳು ಇನ್ನೂ ಖುಷಿ ಪಡುತ್ತಾರೆ. ಇನ್ನೂ ಅಲ್ಲಿಗೆ ಬಂದ ಪೂರ್ವಿಯನ್ನು ನೋಡಿ ಕಂಠಿ ಕೊಂಚ ಶಾಕ್ ಆಗುತ್ತಾನೆ ಬಳಿಕ ಪೂರ್ವಿ, ಬಂಗಾರಮ್ಮಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಕಂಠಿಯನ್ನು ಮಾತನಾಡುತ್ತಾನೆ.

ಕಂಠಿಯನ್ನು ಕಂಡು ಪೂರ್ವಿ ಸಿಡಿಮಿಡಿ

ಕಂಠಿಯನ್ನು ಕಂಡು ಪೂರ್ವಿ ಸಿಡಿಮಿಡಿ

ಈ ವೇಳೆ ಬಂಗಾರಮ್ಮ ಕಂಠಿ ಬಳಿ ಕೇಳುತ್ತಾರೆ ಪುಟ್ಟಕ್ಕ ನ ಮೆಸ್ ಬಳಿ ಯಾಕೆ ಬಂದು ನಿಂತಿದ್ದಿಯಾ ಎಂದು ಕೇಳಿದ ವೇಳೆ ಪುಟ್ಟಕ್ಕಗೆ ಕೊಂಚ ಸಹಾಯ ಆಗುತ್ತದಲ್ವಾ ಎಂದು ಬಂದೆ ಎಂದು ಹೇಳುತ್ತಾರೆ. ಬಳಿಕ ಕರೆಯನ್ನು ಕಟ್ ಮಾಡುತ್ತಾನೆ. ಬಂಗಾರಮ್ಮಗೆ ಮುಂದೆ ಮಾತನಾಡಲು ಅವಕಾಶವೇ ಕೊಡುವುದಿಲ್ಲ. ಬಂಗಾರಮ್ಮ ಕೂಡ ಪುಟ್ಟಕ್ಕನ ಮನೆಗೆ ಹೊರಟು ನಿಂತಿದ್ದಾಳೆ. ಇದನ್ನು ಕಂಠಿ ಗೆ ಹೇಳಲು ವಸು ಕೂಡ ಒದ್ದಾಡುತ್ತಿದ್ದಾಳೆ. ಇತ್ತ ಕಂಠಿ ಪೂರ್ವಿ ಬಳಿ ಆದಷ್ಟು ಬೇಗ ಮದುವೆ ಇಷ್ಟ ಇಲ್ಲ ಎಂದು ಹೇಳು ಅಮ್ಮನ ಬಳಿ ಎಂದು ಹೇಳುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 12th September. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X