ಮದುವೆ ನಡೆಯೋದಿಲ್ಲ ಎಂದ ಪುಟ್ಟಕ್ಕ! ಮುಂದೆ ಸಹನಾ ಗತಿ?
ಟೈಲರಿಂಗ್ ಕ್ಲಾಸ್‌ಗೆ ಹೋಗಿದ್ದ ಸಹನಾ, ಅಮ್ಮನ ಬಳಿ, ಮುರಳಿ ಮೇಷ್ಟ್ರು ಹೇಳಿರುವ ವಿಚಾರ ಪ್ರಸ್ತಾಪ ಮಾಡಬೇಕು ಎಂದು ಯೋಚನೆ ಮಾಡುತ್ತಾ ಮನೆಗೆ ಬರುತ್ತಾಳೆ. ಈ ವೇಳೆ ಮನೆಯಲ್ಲಿ ಅಮ್ಮ ಇರದ್ದನ್ನು ಕಂಡು ಸಹನಾ ಶಾಂತವ್ವನ ಬಳಿ ಅಮ್ಮ ಎಲ್ಲಿ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಶಾಂತವ್ವ ಮೆತ್ತಗೆ ಆ ಕಡೆ ಈ ಕಡೆ ನೋಡಿ ಸಹನಾಳನ್ನು ಮೆಸ್ ನಿಂದಾ ಹೊರಗೆ ಕರೆದುಕೊಂಡು ಹೋಗಿ ಹೇಳುತ್ತಾಳೆ ಪುಟ್ಟಕ್ಕ ಮುರಳಿ ಮೇಷ್ಟ್ರ ಮನೆಗೆ ಹೋಗಿದ್ದಾರೆ ಮಾತುಕತೆಗೆ ಎಷ್ಟು ದಿನ ಹಾಗೆಯೇ ಇರುವುದು ಮದುವೆ ಮಾತುಕತೆ ಮಾಡಿಯೇ ಬಿಡೋಣ ಎಂದು ಹೋಗಿದ್ದಾರೆ ಎಂದು ಹೇಳಿದಾಗ ಸಹನಾಗೆ ಬಹಳ ಖುಷಿ ಆಗುತ್ತದೆ.
ಅವ್ವನಿಗೆ ನಾನೇನು ಹೇಳಲೇ ಇಲ್ಲ. ಆದರೂ ಕೂಡ ಅವ್ವ ನನಗೋಸ್ಕರ ಮೇಷ್ಟ್ರ ಮನೆಗೆ ಹೋಗಿದ್ದಾರೆ ಎಂದು ಖುಷಿ ಪಡುತ್ತಾರೆ. ಇನ್ನು ಮುರಳಿಯ ಅಕ್ಕ ಚೈತ್ರ ಆಕೆಯ ಗಂಡನ ಬಳಿ ಪುಟ್ಟಕ್ಕ ಗೆ ನಿಂದಿಸಿರುವುದರ ಬಗ್ಗೆ ಕೇಳಲು ಹೇಳುತ್ತಾಳೆ. ಇದನ್ನು ಮೆತ್ತಗೆ ಪ್ರಶ್ನಿಸಿದ ಅಳಿಯನ ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ ಮೇಷ್ಟ್ರ ತಂದೆ. ಇದನ್ನು ನೋಡಿದ ಚೈತ್ರಾ, ಅಮ್ಮ ನೀನು ಮಾಡಿದ್ದು ಮಾತ್ರ ಚೂರು ಸರಿ ಇರಲಿಲ್ಲ. ಶತ್ರುಗಳು ಬಂದರು ಅವರನ್ನು ಒಳಗೆ ಕರೆದು ಮಾತನಾಡಿಸಬೇಕು. ಆದರೆ ನೀವು ಸಂಸ್ಕಾರ ಇಲ್ಲದವರ ಹಾಗೆ ನಡೆದುಕೊಂಡು ಇದ್ದೀರಾ ಎನ್ನುತ್ತಾಳೆ.

ಮುರಳಿ ಮೇಷ್ಟ್ರ ಕಾಲೆಳೆದ ಸುಮಾ
ಇದನ್ನು ಕೇಳಿದ ಮೇಷ್ಟ್ರ ತಾಯಿ, ನೀನು ಸುಮ್ಮನೆ ಇರು ನನಗೆ ಎಲ್ಲಾ ತಿಳಿದಿದೆ ಎಂದು ಹೇಳುತ್ತಾರೆ. ಬಳಿಕ ಚೈತ್ರಾ, ಮುರಳಿ ಬಳಿ ಏನು ಹೇಳುತ್ತೀರಿ ಎಂದು ಕೇಳಿದಾಗ ಮೇಷ್ಟ್ರ ತಾಯಿ ಕೊಂಚ ಜೋರಾಗಿಯೇ ಆತನನ್ನು ನಮ್ಮ ದಾರಿಗೆ ಹೇಗೆ ಕರೆತರಬೇಕು ಎಂಬುವುದು ನನಗೆ ತಿಳಿದಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಚೈತ್ರಾ ಸುಮ್ಮನಾಗುತ್ತಾಳೆ. ಇನ್ನು ಸುಮಾ ಹಾಗೂ ಮೇಷ್ಟ್ರು ಮಾತನಾಡುತ್ತಾ ಇರುವ ಸಂದರ್ಭ ಸುಮಾ ಮೇಷ್ಟ್ರ ಕಾಲು ಎಳೆಯುತ್ತಾಳೆ. ಬಳಿಕ ಅಕ್ಕನಿಗೆ ಕರೆ ಮಾಡಿ ಅಕ್ಕ ಮೇಷ್ಟ್ರು ಇದೀಗ ಅವ್ವ ಹೇಳಿದ ಮಾತುಗಳಿಂದ ದಿಗ್ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎಂದೆಲ್ಲ ಹೇಳಿದಾಗ ಸುಮನಾ ಕೈಯಿಂದ ಮೊಬೈಲ್ ತೆಗೆದುಕೊಂಡ ಮೇಷ್ಟ್ರು, ಸಹನಾ ಬಳಿ ಮಾತನಾಡುತ್ತಾರೆ.

ಮೇಷ್ಟ್ರಿಗೆ ವಿಷಯ ತಿಳಿಸಿದ ಸಹನಾ
ಇದನ್ನು ಕೇಳಿದ ಸಹನಾ ನಾಚಿ ನೀರಾಗುತ್ತಾಳೆ. ಬಳಿಕ ಮೇಷ್ಟ್ರ ಬಳಿ ಅವ್ವ ನಿಮ್ಮ ಮನೆಗೆ ಮದುವೆ ಮಾತುಕತೆಗೆ ಹೋಗಿದ್ದಾರೆ ಎಂಬ ಮಾಹಿತಿ ತಿಳಿಸುತ್ತಾಳೆ ಸಹನಾ. ಈ ವಿಚಾರ ಸುಮಾಗು ತಿಳಿದು ಹೋಗುತ್ತದೆ. ಮೇಷ್ಟ್ರು ಈ ವೇಳೆ ಮೇಷ್ಟ್ರ ವಿದ್ಯಾರ್ಥಿಗಳು ತಮಾಷೆ ಮಾಡುತ್ತಾರೆ. ಸುಮಾ ಹೇಳುತ್ತಾಳೆ ಅಮ್ಮ ಹೋದಳು ಎಂದಾದರೆ ಖಂಡಿತವಾಗಲೂ ಈ ಮದುವೆ ನಡೆದೇ ನಡೆಯುತ್ತದೆ ಎಂದು ಹೇಳುತ್ತಾಳೆ. ಇನ್ನು ಕಂಠಿಗೆ ಕರೆ ಮಾಡಿದ ಮುಂಗುಸಿ ವಸು ಹಾಗೂ ಚಂದ್ರು ಕೋರ್ಟ್‌ಗೆ ಬಾರದೆ ಇರುವುದನ್ನು ಹೇಳುತ್ತಾರೆ. ಏನಾದರು ಆಗಲಿ ಡೈವರ್ಸ್ ಆಗದೆ ಇದ್ದರೆ ಮಾತ್ರ ಸಾಕು ಎಂದು ಹೇಳುತ್ತಾರೆ. ಇದನ್ನು ಕೇಳಿದ ಮುಂಗುಸಿ ಸುಮ್ಮನಾಗುತ್ತಾನೆ.

ಕೋರ್ಟ್ ಗೆ ಹೋಗದ ಚಂದ್ರು
ಇನ್ನು ನಂಜಮ್ಮನಿಗೆ ಕೂಡ ವಕೀಲರು ಕರೆ ಮಾಡಿ ಹೇಳುತ್ತಾರೆ ನಿಮ್ಮ ಮಗ ಇನ್ನೂ ಬಂದಿಲ್ಲ ಎಂದು ಇದನ್ನು ಕೇಳಿದ ನಂಜಮ್ಮಗೆ ಸಿಡಿಲು ಬಂದು ಎರಗಿದ ಹಾಗೆ ಆಗುತ್ತದೆ. ಯಾಕೆ ಇನ್ನೂ ಚಂದ್ರು ಕೋರ್ಟ್‌ಗೆ ಹೋಗಿಲ್ಲ ಎಂದು ಕರೆ ಮಾಡುತ್ತಾರೆ. ಆದರೆ ಚಂದ್ರು ಕರೆಗೆ ಉತ್ತರಿಸದ ಕಾರಣ ನಂಜಮ್ಮಗೆ ತುಂಬಾ ಭಯ ಆಗುತ್ತದೆ.

ಮದುವೆ ಆಗಲ್ಲ ಎಂದ ಪುಟ್ಟಕ್ಕ
ಇನ್ನು ಪುಟ್ಟಕ್ಕ ಮಾತ್ರ ಬಹಳ ಸಪ್ಪೆ ಮುಖ ಹಾಕಿಕೊಂಡು ಬರುತ್ತಾರೆ. ಸಹನಾ ಅದೆಷ್ಟು ಬಾರಿ ಅಮ್ಮನ ಬಳಿ ಕೇಳಿದರು ಆಕೆ ಮಾತ್ರ ಏನೂ ಉತ್ತರಿಸದೆ ಇರುತ್ತಾಳೆ. ಇದನ್ನು ಕೇಳಿದ ಸಹನಾ ಅಮ್ಮ ಮೇಷ್ಟ್ರ ಮನೆಗೆ ಹೋಗಿದ್ಯಾ ಏನಾಯಿತು ಎಂದಾಗ ಪುಟ್ಟಕ್ಕ ಅಳುತ್ತಾ ನಮಗೂ ಅವರಿಗೂ ಸರಿ ಬರುವುದಿಲ್ಲ ಎಂದು ಅಳುತ್ತಾ ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ಒಂದು ಮೂಲೆಯಲ್ಲಿ ಕುಳಿತು ಅಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ?


Click it and Unblock the Notifications











